Hidden Camera: ಹೋಟೆಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇದ್ದರೆ ಸುಲಭದಲ್ಲಿ ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Hidden Camera: ಹೋಟೆಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇದ್ದರೆ ಸುಲಭದಲ್ಲಿ ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್

Hidden Camera: ಹೋಟೆಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇದ್ದರೆ ಸುಲಭದಲ್ಲಿ ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್

ಪ್ರವಾಸ, ಕಾರ್ಯಕ್ರಮ, ಮೀಟಿಂಗ್ ಮುಂತಾದ ಉದ್ದೇಶಕ್ಕೆ ಬೇರೆ ನಗರಗಳಿಗೆ ಪ್ರಯಾಣ ಮಾಡುವಾಗ ಹೋಟೆಲ್‌ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಆಗ ಹೋಟೆಲ್‌ನಲ್ಲಿ ರಹಸ್ಯ ಕ್ಯಾಮೆರಾ ಇದ್ದರೆ ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಸುಲಭದ ಟಿಪ್ಸ್.

ಹೋಟೆಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇದ್ದರೆ ಸುಲಭದಲ್ಲಿ ಪತ್ತೆಹಚ್ಚುವುದು ಹೇಗೆ
ಹೋಟೆಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇದ್ದರೆ ಸುಲಭದಲ್ಲಿ ಪತ್ತೆಹಚ್ಚುವುದು ಹೇಗೆ (PC: Canva)

ಬಹಳಷ್ಟು ಜನರು ಬೇರೆ ಬೇರೆ ನಗರಗಳಿಗೆ ವಿವಿಧ ಉದ್ದೇಶಕ್ಕೆ ಪ್ರಯಾಣ ಮಾಡುತ್ತಾರೆ. ಪ್ರವಾಸ, ಮೀಟಿಂಗ್, ಕಾರ್ಯಕ್ರಮ, ಮಧುಚಂದ್ರ, ವಾರ್ಷಿಕೋತ್ಸವ, ಬರ್ತ್‌ಡೇ ಆಚರಣೆ ಹೀಗೆ ವಿವಿಧ ಸಂದರ್ಭದಲ್ಲಿ ಹೊಸ ಹೊಸ ತಾಣಗಳಿಗೆ ಪ್ರಯಾಣ ಮಾಡುವುದು ಸಾಮಾನ್ಯ. ಆದರೆ ಅಂತಹ ಸಂದರ್ಭದಲ್ಲಿ ನಾವು ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಅಂದರೆ, ಕೆಲವೊಂದು ಹೋಮ್‌ಸ್ಟೇ, ಹೋಟೆಲ್ ರೂಮ್‌, ಪ್ರವಾಸಿ ತಾಣಗಳಲ್ಲಿ ಉಳಿದುಕೊಳ್ಳುವಾಗ, ಅಲ್ಲಿನ ರೂಮ್‌ಗಳಲ್ಲಿ ಹಿಡನ್ ಕ್ಯಾಮೆರಾ ಇರಿಸಿದ್ದರೆ, ಅದರಿಂದ ನಮಗೆ ಮುಂದೆ ತೊಂದರೆಯಾಗಬಹುದು. ಖಾಸಗಿತನಕ್ಕೆ ಒಂದು ಕಡೆ ಧಕ್ಕೆಯಾದರೆ, ಮತ್ತೊಂದೆಡೆ ನಮ್ಮ ಭದ್ರತೆ, ಹಣಕಾಸು ಅಥವಾ ಬೆಲೆಬಾಳುವ ಸೊತ್ತುಗಳ ಕಳವು, ದರೋಡೆಗೆ ದಾರಿಮಾಡಿಕೊಡಬಹುದು. ಅಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.

ಖಾಸಗಿ ದೃಶ್ಯ ಸೆರೆ ಮಾತ್ರವಲ್ಲ..

ಅಲ್ಲದೆ, ಹಿಡನ್ ಕ್ಯಾಮೆರಾ ಮೂಲಕ ನಿಮ್ಮ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯುತ್ತಾರೆ ಎನ್ನುವುದು ಒಂದೇ ಅಪಾಯವಲ್ಲ. ಅದರ ಜತೆಗೆ, ನೀವು ಯಾವುದಾದರೂ ಬ್ಯುಸಿನೆಸ್ ಮಾತುಕತೆಗೆ ತೆರಳಿದ್ದರೆ, ಅದರ ವಿವರ ಕದಿಯಬಹುದು. ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ನಿಮ್ಮ ಹಣದ ಮೇಲೆ ಕಣ್ಣು ಹಾಕಬಹುದು. ಅದರ ಜತೆಗೆ ಬೆಲೆಬಾಳುವ ಒಡವೆ, ದುಬಾರಿ ಗ್ಯಾಜೆಟ್, ವಸ್ತುಗಳನ್ನು ಕೂಡ ಗಮನಿಸಿ, ದರೋಡೆಗೆ ಸಂಚು ರೂಪಿಸುವ ಅಪಾಯವಿದೆ. ಹೀಗಾಗಿ ಹೋಟೆಲ್‌ ರೂಮ್‌ಗೆ ತೆರಳುವ ಜೋಡಿಗಳು ಮಾತ್ರವಲ್ಲದೆ, ಇತರರೂ ರಹಸ್ಯ ಕ್ಯಾಮೆರಾ ಕುರಿತು ಗಮನಿಸುವುದು ಅಗತ್ಯವಾಗಿದೆ. ನಮ್ಮ ಖಾಸಗಿತನ ಮತ್ತೊಂದೆಡೆ ಮೂರಾಬಟ್ಟೆಯಾಗುವ ಮತ್ತು ಮಾರಾಟವಾಗುವ ಮೊದಲು, ಅಂತಹ ಸಂದರ್ಭ ಇದ್ದರೆ, ಅಲ್ಲಿ ನಾವು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.

ಹಿಡನ್ ಕ್ಯಾಮೆರಾ ಪತ್ತೆ ಹೇಗೆ?

ಮಾರುಕಟ್ಟೆಯಲ್ಲಿ ಇಂದು ನಾನಾ ವಿಧದ ಗ್ಯಾಜೆಟ್‌ಗಳು ರಹಸ್ಯ ಕ್ಯಾಮೆರಾ ಪತ್ತೆಹಚ್ಚಲು ನೆರವಾಗುತ್ತವೆ. ನಿರಂತರ ಪ್ರವಾಸ, ಮೀಟಿಂಗ್, ಬ್ಯುಸಿನೆಸ್, ಶೂಟಿಂಗ್ ಎಂದೆಲ್ಲಾ ಪ್ರಯಾಣದಲ್ಲಿ ಇರುವವರು ಈ ಬಗ್ಗೆ ಗಮನಿಸಬೇಕಾಗುತ್ತದೆ. ಆದರೆ, ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಕೂಡ ನೀವು ಹಿಡನ್ ಕ್ಯಾಮೆರಾ ನಿಮ್ಮ ರೂಮ್‌ನಲ್ಲಿ ಇರಿಸಿದ್ದರೆ ಸುಲಭದಲ್ಲಿ ಪತ್ತೆಹಚ್ಚಬಹುದು. ಇಲ್ಲಿ ಹೇಳಿರುವ ಸರಳ ವಿಧಾನ ಅನುಸರಿಸಿ, ಹಿಡನ್ ಕ್ಯಾಮೆರಾ ಇದ್ದರೆ ಪತ್ತೆಹಚ್ಚಿ. ನಿಮ್ಮ ಖಾಸಗಿತನದ ರಕ್ಷಣೆ ಮಾಡಿಕೊಳ್ಳಿ.

ಫೋನ್‌ನ ಫ್ಲ್ಯಾಶ್‌ಲೈಟ್ ಆನ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನ ಫ್ಲ್ಯಾಶ್‌ಲೈಟ್ ಅಥವಾ ಟಾರ್ಚ್ ಲೈಟ್ ಇದ್ದರೂ ಆಗಬಹುದು, ಅದನ್ನು ರೂಮ್‌ನಲ್ಲಿ ಇರುವ ನಿಮಗೆ ಅನುಮಾನಾಸ್ಪದ ಎನ್ನಿಸುವ ಯಾವುದೇ ವಸ್ತುವಿನ ಮೇಲೆ ಬಿಟ್ಟು, ಕೂಲಂಕಶವಾಗಿ ಗಮನಿಸಿ. ಅದರಲ್ಲಿ ಕ್ಯಾಮೆರಾ ಇರಿಸಿದ್ದರೆ, ಕ್ಯಾಮೆರಾ ಲೆನ್ಸ್‌ಗೆ ಲೈಟ್ ಬೆಳಕು ಬಿದ್ದಾಗ, ಅದು ಪ್ರತಿಫಲನಗೊಳ್ಳುತ್ತದೆ. ಇದರಿಂದ ಕ್ಯಾಮೆರಾ ಇರುವಿಕೆಯನ್ನು ಸುಲಭದಲ್ಲಿ ಪತ್ತೆಹಚ್ಚಬಹುದು.

ಇದನ್ನೂ ಓದಿ: ಒತ್ತಡ ತೊಡೆದುಹಾಕಿ ಒಳ್ಳೆಯ ನಿದ್ದೆ ಬರಲು ಈ ಪಾನೀಯಗಳನ್ನು ಸೇವಿಸಿ

ಇನ್‌ಫ್ರಾರೆಡ್ ಕಿರಣಗಳನ್ನು ಹುಡುಕಿ

ಮೊಬೈಲ್ ಕ್ಯಾಮೆರಾ ಮೂಲಕ ರಹಸ್ಯ ಕ್ಯಾಮೆರಾದಲ್ಲಿನ ಇನ್‌ಫ್ರಾರೆಡ್ ಕಿರಣಗಳನ್ನು ಪತ್ತೆಹಚ್ಚಬಹುದು. ಬರಿಗಣ್ಣಿಗೆ ಅವು ನೇರವಾಗಿ ಕಾಣಿಸದಿದ್ದರೂ, ಮೊಬೈಲ್ ಕ್ಯಾಮೆರಾಗೆ ಗೋಚರವಾಗುತ್ತದೆ. ಹೋಟೆಲ್ ಕೊಠಡಿಯೊಳಗೆ, ವಾಷ್‌ರೂಮ್‌ನಲ್ಲಿ ಕ್ಯಾಮೆರಾ ವಿಡಿಯೊ ರೆಕಾರ್ಡಿಂಗ್ ಮಾಡಿ, ಆಗ ರಹಸ್ಯ ಕ್ಯಾಮೆರಾ ಅಳವಡಿಸಿದ್ದರೆ, ಅದರ ಇನ್‌ಫ್ರಾರೆಡ್ ಕಿರಣ ನಿಮ್ಮ ಮೊಬೈಲ್‌ನಲ್ಲಿ ಸೆರೆಯಾಗುತ್ತದೆ.

ಕ್ಯಾಮೆರಾ ಡಿಟೆಕ್ಟರ್ ಅಪ್ಲಿಕೇಶನ್

ಗೂಗಲ್ ಪ್ಲೇ ಸ್ಟೋರ್‌ ಮತ್ತು ಐಫೋನ್ ಆಪ್ ಸ್ಟೋರ್‌ನಲ್ಲಿ ಹಲವು ಅಪ್ಲಿಕೇಶನ್‌ಗಳು ಲಭ್ಯವಾಗುತ್ತವೆ. ಅದರ ಮೂಲಕ ನೀವು ರಹಸ್ಯ ಕ್ಯಾಮೆರಾ ಇದ್ದರೆ ಸುಲಭದಲ್ಲಿ ಪತ್ತೆಹಚ್ಚಬಹುದು. ಡಿಟೆಕ್ಟಿಫೈ, ಹಿಡನ್ ಐಆರ್ ಕ್ಯಾಮೆರಾ ಡಿಟೆಕ್ಟರ್, ಹಿಡನ್ ಸ್ಪೈ ಕ್ಯಾಮೆರಾ ಫೈಂಡರ್ ಪ್ರೊ ಇತ್ಯಾದಿ ಅಪ್ಲಿಕೇಶನ್‌ಗಳು ದೊರೆಯುತ್ತವೆ, ಅದನ್ನು ಇನ್‌ಸ್ಟಾಲ್ ಮಾಡಿ, ಗುಪ್ತ ಕ್ಯಾಮೆರಾ ಇದ್ದಲ್ಲಿ ಪತ್ತೆಹಚ್ಚಿ.

ಇದನ್ನೂ ಓದಿ: ಮದ್ಯಪಾನ ತ್ಯಜಿಸಿದರೆ ನಿಮ್ಮ ದೇಹದಲ್ಲಿ ಎಷ್ಟೊಂದು ಬದಲಾವಣೆಗಳಾಗುತ್ತವೆ; ಇಲ್ಲಿದೆ ವೈದ್ಯರ ಸಲಹೆ

ವೈಫೈ ನೆಟ್‌ವರ್ಕ್ ಗಮನಿಸಿ

ರೂಮ್‌ನಲ್ಲಿ ಫೋನ್‌ನಲ್ಲಿ ಯಾವೆಲ್ಲಾ ವೈಫೈ ನೆಟ್‌ವರ್ಕ್ ಕಾಣಿಸುತ್ತದೆ ಎಂದು ಗಮನಿಸಿ, ಕೆಲವೊಂದು ರಹಸ್ಯ ಕ್ಯಾಮೆರಾಗಳು ವೈಫೈ, ಬ್ಲೂಟೂತ್ ಬಳಸಿ ಕಾರ್ಯನಿರ್ವಹಿಸುತ್ತವೆ. ಆಗ ಅನುಮಾನಾಸ್ಪದ ವೈಫೈ, ಬ್ಲೂಟೂತ್ ಡಿವೈಸ್ ಕಾಣಿಸಿಕೊಂಡರೆ, ಅದನ್ನು ಗಮನಿಸಿ.

Whats_app_banner