Numerology: ಮನೆ ನಂಬರ್‌ 1ರ ಶುಭ- ಅಶುಭ ಫಲಗಳೇನು? ಮನೆ ನಂಬರ್‌ ಚೆಕ್‌ ಮಾಡಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Numerology: ಮನೆ ನಂಬರ್‌ 1ರ ಶುಭ- ಅಶುಭ ಫಲಗಳೇನು? ಮನೆ ನಂಬರ್‌ ಚೆಕ್‌ ಮಾಡಿಕೊಳ್ಳಿ

Numerology: ಮನೆ ನಂಬರ್‌ 1ರ ಶುಭ- ಅಶುಭ ಫಲಗಳೇನು? ಮನೆ ನಂಬರ್‌ ಚೆಕ್‌ ಮಾಡಿಕೊಳ್ಳಿ

ಸಂಖ್ಯೆ ಒಂದಕ್ಕೆ ಅಧಿಪತಿಯಾಗಿರುವುದು ಸೂರ್ಯ. ಸ್ವತಂತ್ರ ಮನಸ್ಥಿತಿಯವರು, ನಾಯಕತ್ವ ಬಯಸುವವರು ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಿಂಹರಾಶಿಯವರಿಗೆ ಈ ಸಂಖ್ಯೆ ಸೂಕ್ತ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ.

<p>ಸಂಖ್ಯಾಶಾಸ್ತ್ರದ ಪ್ರಕಾರ ಮನೆ ನಂಬರ್‌ 1ರ ಶುಭ- ಅಶುಭ ಫಲಗಳೇನು? ಮನೆ ನಂಬರ್‌ ಚೆಕ್‌ ಮಾಡಿಕೊಳ್ಳಿ</p>
ಸಂಖ್ಯಾಶಾಸ್ತ್ರದ ಪ್ರಕಾರ ಮನೆ ನಂಬರ್‌ 1ರ ಶುಭ- ಅಶುಭ ಫಲಗಳೇನು? ಮನೆ ನಂಬರ್‌ ಚೆಕ್‌ ಮಾಡಿಕೊಳ್ಳಿ

ಸಂಖ್ಯಾಶಾಸ್ತ್ರ ಅಥವಾ Numerologyಯು ಸಂಖ್ಯೆಗಳ ಆಧಾರದಲ್ಲಿ ಹೇಳುವ ಭವಿಷ್ಯ. ಜ್ಯೋತಿಷ, ಹಸ್ತರೇಖೆ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಇತ್ಯಾದಿಗಳ ಮೂಲಕ ಭವಿಷ್ಯ ತಿಳಿದುಕೊಳ್ಳಲು ಬಹುತೇಕರು ಬಯಸುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳಿಗೆ ವಿಶೇಷ ಮಹತ್ವವಿದೆ. ಮನೆ ನಂಬರ್‌, ಕಾರು ನಂಬರ್‌, ಮನೆಯಲ್ಲಿರುವ ಕೊಠಡಿಗಳ ಸಂಖ್ಯೆ, ಹುಟ್ಟಿದ ದಿನಾಂಕ, ಶುಭ ಕಾರ್ಯ ನಡೆಸುವ ದಿನಾಂಕ, ಫೋನ್‌ ಸಂಖ್ಯೆ ಎಲ್ಲದಕ್ಕೂ ಸಂಖ್ಯಾ ಶಾಸ್ತ್ರದ ಮೊರೆ ಹೋಗುವವರು ಹೆಚ್ಚಿದ್ದಾರೆ. ಈ ಲೇಖನದಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರ ಮನೆ ನಂಬರ್‌ನಲ್ಲಿ 1 ಇದ್ದರೆ ಏನು ಶುಭಫಲಗಳಿವೆ? ಏನು ಅಶುಭ ಫಲಗಳಿವೆ ಎನ್ನುವುದನ್ನು ತಿಳಿದುಕೊಳ್ಳೋಣ. ಅದಕ್ಕೂ ಮೊದಲು ಮನೆಯ ನಂಬರ್‌ನಲ್ಲಿ ಒಂದು ಬರುವುದು ಹೇಗೆ? ಇದನ್ನು ಲೆಕ್ಕಹಾಕುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಮನೆ ನಂಬರ್‌ ಪತ್ತೆ ಹೇಗೆ?

ನಿಮ್ಮ ಮನೆ ಸಂಖ್ಯೆ ೨೦೧ ಇದ್ದರೆ ಅದರಲ್ಲಿ ಒಂದು ಇದೆ ಎಂದುಕೊಳ್ಳಬೇಡಿ. ನಿಮ್ಮ ಮನೆ ೧೦ ಇದ್ದರೆ ೧+೦ ಎಂದು ಲೆಕ್ಕಹಾಕಿ ನಿಮ್ಮ ಮನೆ ನಂಬರ್‌ ಒಂದು ಎಂದು ಲೆಕ್ಕಹಾಕಬೇಕು. ನಿಮ್ಮ ಮನೆ ನಂಬರ್‌ ೨೫೦ ಇದ್ದರೆ ೨+೫+೧ = ೮ ಎಂದು ಲೆಕ್ಕಹಾಕಿಕೊಳ್ಳಬೇಕು. ಇದೇ ರೀತಿ ಕೂಡಿಸುವಾಗ ಕೊನೆಗೆ ಒಂದು ನಂಬರ್‌ ಬಂದರೆ ಅದು ನಿಮ್ಮ ಮನೆಯ ನಂಬರ್‌ ಆಗಿರುತ್ತದೆ.

ಸಂಖ್ಯಾ ಶಾಸ್ತ್ರದ ಪ್ರಕಾರ ಯಾರಿಗೆ ನಂಬರ್‌ ೧ ಸೂಕ್ತವಲ್ಲ?

ಸಂಖ್ಯೆ ಒಂದಕ್ಕೆ ಅಧಿಪತಿಯಾಗಿರುವುದು ಸೂರ್ಯ. ಸ್ವತಂತ್ರ ಮನಸ್ಥಿತಿಯವರು, ನಾಯಕತ್ವ ಬಯಸುವವರು ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಿಂಹರಾಶಿಯವರಿಗೆ ಈ ಸಂಖ್ಯೆ ಸೂಕ್ತ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ. ಸ್ವಂತ ಅಭಿವೃದ್ಧಿ, ಕನಸಿನ ಗುರಿ ಸಾಧನೆ ಬಯಸುವವರಿಗೆ ಒಂದು ನಂಬರ್‌ನ ವಸತಿ ಸೂಕ್ತವಾಗಿದೆ. ಆದರೆ, ನಿಮ್ಮ ಹಣಕಾಸು ಸ್ಥಿತಗತಿ ಉತ್ತಮವಾಗಿಲ್ಲದಿದ್ದರೆ ನಂಬರ್‌ 1ನ ಮನೆ ಸೂಕ್ತವಲ್ಲ. ಏಕೆಂದರೆ, ನಂಬರ್‌ 1 ಮನೆಯು ಹೆಚ್ಚು ನಿರ್ವಹಣೆ ಬಯಸುತ್ತದೆ. ಇದು ನಿಮ್ಮ ಖರ್ಚು ಹೆಚ್ಚಿಸಬಹುದು.

ನಂಬರ್‌ 1 ಮನೆಯಲ್ಲಿದ್ದರೆ ಏನು ಪರಿಣಾಮವಾಗುತ್ತದೆ?

ಸಂಖ್ಯಾಶಾಸ್ತ್ರವು ನಿರ್ದಿಷ್ಟ ಸಂಖ್ಯೆಗಳ ಶುಭ-ಅಶುಭ ಫಲಗಳ ಬಗ್ಗೆ ತಿಳಿಸಿತ್ತದೆ. ನಿಮ್ಮ ಮನೆಯ ಸಂಖ್ಯೆ ನಂಬರ್‌ 1 ಆಗಿದ್ದರೆ ಅಲ್ಲಿ ವಾಸಿಸುವ ನಿಮಗೆ ಅಥವಾ ನಿಮ್ಮ ಕುಟುಂಬದರಲ್ಲಿ ಕೋಪತಾಪ ಹೆಚ್ಚಿರಬಹುದು. ಈ ಮನೆಯಲ್ಲರುವವರಿಗೆ ಒಂಟಿತನ ಹೆಚ್ಚಬಹುದು. ಈ ರೀತಿ ಸಂಖ್ಯೆ ಇದ್ದರೆ ಮನೆಯ ಹಿಂಬದಿ ಬಾಗಿಲಿನಲ್ಲಿ ಸಮ ಸಂಖ್ಯೆ ಇಟ್ಟು ಈ ಸಂಖ್ಯೆಯ ಕೆಟ್ಟ ಪರಿಣಾಮ ತಗ್ಗಿಸಬಹುದು ಎಂದು ಸಂಖ್ಯಾಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ. ಈ ಸಮ ಸಂಖ್ಯೆ ಇಡುವುದರಿಂದ ಸ್ನೇಹಿತರು ಅಥವಾ ಸಂಗಾತಿ ದೊರಕಿ ನಿಮ್ಮ ಒಂಟಿತನ ದೂರವಾಗಬಹುದು. ಸಮಾಜದ ಜತೆ ಹೆಚ್ಚು ಬೆರೆದರೆ ಕೋಪತಾಪ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ನಂಬರ್‌ 1 ಮನೆಯ ಡೆಕೊರೇಷನ್‌ ಹೇಗಿರಬೇಕು?

ಹೋಮ್‌ ಡೆಕೋರ್‌ ಮಾಡುವಾಗಲೂ ನಂಬರ್‌ 1 ಸಂಖ್ಯೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಂಬರ್‌ 1 ಸಂಖ್ಯೆಯು ಸ್ವಾತಂತ್ರ ಮತ್ತು ಮುಕ್ತತೆಯ ಭಾವನೆಯ ಸಂಕೇತ. ಇಂತಹ ಮನೆಗಳಲ್ಲಿ ಮನೆಯ ಕಿಟಕಿಗಳು ದೊಡ್ಡದಾಗಿರಲಿ. ಮನೆಯೊಳಗೆ ಅಡೆತಡೆಗಳು ಇಲ್ಲದೆ ಇರಲಿ. ಇಂತಹ ಮನೆಗಳಿಗೆ ಬಣ್ಣ ಬಳಿಯುವಾಗ ಬಿಳಿ, ಕಿತ್ತಲೆ ಅಥವಾ ಗೋಲ್ಡನ್‌ ಶೇಡ್‌ನ ಬಣ್ಣಗಳನ್ನು ಆಯ್ಕೆ ಮಾಡಿ ಎಂದು ಸಂಖ್ಯಾತಜ್ಞರು ಸಲಹೆ ನೀಡಿದ್ದಾರೆ.

ಇಂತಹ ಮನೆಗಳೊಳಗೆ ಸೂರ್ಯನ ಸಹಜ ಬೆಳಕು ಸಾಕಷ್ಟು ಬರಲಿ. ಇದರಿಂದ ಮನೆಯೊಳಗೆ ಪಾಸಿಟೀವ್‌ ಎನರ್ಜಿ ಹೆಚ್ಚುತ್ತದೆ. ನಗರಗಳಲ್ಲಿ ಸೂರ್ಯನ ಬೆಳಕು ಮನೆಯೊಳಗೆ ಬರುವುದು ಕಷ್ಟ ಎನ್ನುವವರು ಲೈಟ್‌ ಫಿಕ್ಷರ್‌ ಇಲ್ಯುಮಿನೇಟ್‌ ಎಂಬ ಮಿಣುಗುವ ಲೈಟ್‌ಗಳನ್ನು ಹಾಕಿ ಬೆಳಕು ಹೆಚ್ಚಿಸಬಹುದು. ಇಂತಹ ಮನೆಗಳಲ್ಲಿ ದೊಡ್ಡ ದೊಡ್ಡ ಫರ್ನಿಚರ್‌ಗಳು ಬೇಡ. ಮನೆಯೊಳಗೆ ಪಾಸಿಟೀವ್‌ ಎನರ್ಜಿ ಹೆಚ್ಚಿಸುವಂತಹ ವಾಸ್ತುಗಿಡಗಳಿಗೆ ಆದ್ಯತೆಯಿರಲಿ.

ನಂಬರ್‌ 1 ಮನೆಯಲ್ಲಿ ವಾಸಿಸುವವರು ವಹಿಸಬೇಕಾದ ಎಚ್ಚರಿಕೆಗಳೇನು?

ನಿಮ್ಮ ಮನೆಯ ಸಂಖ್ಯೆಯು ಸಂಖ್ಯಾಶಾಸ್ತ್ರದ ಲೆಕ್ಕಚಾರದಲ್ಲಿ ಒಂದಾಗಿದ್ದರೆ ಅಥವಾ ನಂಬರ್‌ ಒನ್‌ ಆಗಿದ್ದರೆ ಹಲವು ಆರೋಗ್ಯ ತೊಂದರೆಗಳೂ ಆಗಾಗ ಕಾಡಬಹುದು. ಮನೆ ಮಾಲೀಕರ ದೃಷ್ಟಿ ಮಂದ ಇರಬಹುದು. ಹೃದಯ ಮತ್ತು ರಕ್ತದ ಹರಿವಿನ ಸಮಸ್ಯೆ ಕಾಡಬಹುದು. ಇಂತಹ ಮನೆಗಳಲ್ಲಿ ವಾಸಿಸುವವರು ಆಗಾಗ ರಕ್ತದ ಒತ್ತಡ ಪರೀಕ್ಷಿಸಿಕೊಳ್ಳುವುದು ಉತ್ತಮ ಎನ್ನಲಾಗಿದೆ.

ಇಂತಹ ಮನೆಗಳಲ್ಲಿ ಅಗ್ನಿ ಆಕಸ್ಮಿಕ ಹೆಚ್ಚಬಹುದು. ಮನೆಯಲ್ಲಿ ಫೈರ್‌ ಅಲರಾಂ ಅಳವಡಿಸಿ. ಇಂತಹ ಮನೆಯಲ್ಲಿ ವಾಸಿಸುವವರು ತಮ್ಮಲ್ಲಿರುವ ಕೋಪತಾಪಗಳನ್ನು, ಆಹಂಕಾರವನ್ನು ತಗ್ಗಿಸಲು ಪ್ರಯತ್ನಿಸಬೇಕು. ಇಲ್ಲವಾದರೆ ಕೋಪದ ಕೈಗೆ ಬುದ್ದಿ ಕೊಟ್ಟು ಕೆಟ್ಟ ಪರಿಣಾಮ ಉಂಟಾಗಬಹುದು. ನಂಬರ್‌ ಒನ್‌ ಮನೆಯಲ್ಲಿ ವಾಸಿಸುವವರು ಧ್ಯಾನ, ಯೋಗ ಮಾಡುತ್ತ ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಒಳಿತೆಂದು ಸಂಖ್ಯಾಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ.

Whats_app_banner