Housewife Jobs: ಬೆಂಗಳೂರಿನಲ್ಲಿ ಸುಶಿಕ್ಷಿತ ಗೃಹಿಣಿಯರಿಗೆ ಅತ್ಯುತ್ತಮ ವರ್ಕ್ ಫ್ರಮ್ ಹೋಮ್ ಜಾಬ್ ಐಡಿಯಾ; ಉಳಿದ ನಗರದವರೂ ಪ್ರಯತ್ನಿಸಿ
Housewife Work From Home Jobs: ಸುಶಿಕ್ಷಿತ ಮಹಿಳೆಯರು ಮನೆಯಲ್ಲಿಯೇ ಕುಳಿತು ಬಿಡುವಿನ ವೇಳೆಯಲ್ಲಿ ವಿವಿಧ ಉದ್ಯೋಗ ಮಾಡಬಹುದು, ಬಿಸ್ನೆಸ್ ಮಾಡಬಹುದು. ಕರ್ನಾಟಕದ ವಿವಿಧ ನಗರಗಳಲ್ಲಿ ಅಥವಾ ಭಾರತದ ಯಾವುದೇ ನಗರಗಳಲ್ಲಿ ವರ್ಕ್ ಫ್ರಮ್ ಉದ್ಯೋಗ ಹುಡುಕಾಟ ನಡೆಸುವ ಗೃಹಿಣಿಯರಿಗೆ ಒಂದಿಷ್ಟು ಉದ್ಯೋಗ ಮತ್ತು ಬಿಸ್ನೆಸ್ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.

Housewife work ideas: ಶೈಕ್ಷಣಿಕ ಅರ್ಹತೆ ಪಡೆದಿದ್ದರೂ ಸಾಕಷ್ಟು ಗೃಹಿಣಿಯರು ಕೌಟುಂಬಿಕ ಮತ್ತು ಇತರೆ ಕಾರಣಗಳಿಂದ ಮನೆಯಲ್ಲಿಯೇ ಇರಬೇಕಾಗುತ್ತದೆ. ಗೃಹಿಣಿಯರು ಬಿಡುವಿನ ವೇಳೆಯಲ್ಲಿ ವರ್ಕ್ ಫ್ರಮ್ ಹೋಮ್ ಮಾಡಲು ಬಯಸಿದರೆ ಸಾಕಷ್ಟು ಅವಕಾಶಗಳು ಇವೆ. ವಿಶೇಷವಾಗಿ, ತಮ್ಮ ಬಿಡುವಿನ ವೇಳೆಯಲ್ಲಿ ಯಾವುದಾದರೂ ವರ್ಕ್ ಫ್ರಮ್ ಹೋಮ್ ಅಥವಾ ಬಿಸ್ನೆಸ್ ಐಡಿಯಾಗಳನ್ನು ಮಾಡಿ ಯಶಸ್ಸನ್ನು ಪಡೆಯಲು ಪ್ರಯತ್ನಿಸಬಹುದು. ಬೆಂಗಳೂರಿನಂತಹ ನಗರಗಳಲ್ಲಿ ಕಷ್ಟಪಟ್ಟು ದುಡಿಯುವವರಿಗೆ ಹಲವು ಆಯ್ಕೆಗಳು ಇವೆ. ಜನರ ಅವಶ್ಯಕತೆಯನ್ನು ಮನಗಂಡು ಅದಕ್ಕೆ ತಕ್ಕಂತೆ ಬಿಸ್ನೆಸ್ ಐಡಿಯಾಗಳನ್ನು ಮಾಡಿದರೆ ಯಶಸ್ಸು ಪಡೆಯಬಹುದು. ಗೃಹಿಣಿಯರು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಅಥವಾ ಆಫ್ ಲೈನ್ ಉದ್ಯೋಗಗಳನ್ನು ಮಾಡಬಹುದು.
ಸುಶಿಕ್ಷಿತ ಗೃಹಿಣಿಯರಿಗೆ ಉದ್ಯೋಗ
ಆನ್‌ಲೈನ್ ಡೇಟಾ ಎಂಟ್ರಿ ಸೇರಿದಂತೆ ಹಲವು ಉದ್ಯೋಗಗಳು ನಿಮ್ಮನ್ನು ಸೆಳೆಯಬಹುದು. ಇವುಗಳಲ್ಲಿ ನಂಬಿಕಸ್ಥ ಸಂಸ್ಥೆ ದೊರಕಿದರೆ ಉತ್ತಮ. ಇಲ್ಲವಾದರೆ ಕಡಿಮೆ ಹಣಕ್ಕೆ ಕತ್ತೆಯಂತೆ ದುಡಿಯಬೇಕಾಗಬಹುದು. ಕೆಲವೊಂದು ಕಾಸ್ಮೆಟಿಕ್ ಕಂಪನಿಗಳು ತಮ್ಮ ಪ್ರಾಡಕ್ಟ್‌ಗಳ ಮಾರ್ಕೆಟಿಂಗ್‌ಗೆ ಜನರನ್ನು ಹುಡುಕುತ್ತ ಇರುತ್ತವೆ. ಇವುಗಳಿಗೆ ಸಂಬಂಧಪಟ್ಟ ಆನ್‌ಲೈನ್ ಉದ್ಯೋಗ ಮಾಡಬಹುದು. ಮೆಡಿಕಲ್ ಟ್ರಾನ್ಸ್‌ಕ್ರಿಪ್ಷನ್, ಸೋಷಿಯಲ್ ಮೀಡಿಯಾ ಸ್ಪೆಷಲಿಸ್ಟ್, ವೆಬ್‌ಸೈಟ್ ಟೆಸ್ಟರ್‌ನಂತಹ ಉದ್ಯೋಗ ಮಾಡಬಹುದು. ಎಚ್‌ಆರ್ ಕನ್ಸಲ್ಟಿಂಗ್, ಟ್ಯಾಕ್ಸ್ ಕನ್ಸಲ್ಟಿಂಗ್, ಡಿಸೈನ್ ಕನ್ಸಲ್ಟಿಂಗ್ ಇತ್ಯಾದಿ ಉದ್ಯೋಗ ಮಾಡಬಹುದು ಎಂದು ಕೋರಾದಲ್ಲಿ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.
- ಡೇಟಾ ಎಂಟ್ರಿ ಜಾಬ್ಸ್
- ಕಾಸ್ಮೆಟಿಕ್ ಪ್ರಾಡಕ್ಟ್ ಮಾರ್ಕೆಟಿಂಗ್
- ಮೆಡಿಕಲ್ ಟ್ರಾನ್ಸ್‌ಕ್ರಿಪ್ಷನ್
- ಸೋಷಿಯಲ್ ಮೀಡಿಯಾ ಸ್ಪೆಷಲಿಸ್ಟ್
- ವೆಬ್‌ಸೈಟ್ ಟೆಸ್ಟರ್
- ಎಚ್‌ಆರ್ ಕನ್ಸಲ್ಟಿಂಗ್
- ಟ್ಯಾಕ್ಸ್ ಕನ್ಸಲ್ಟಿಂಗ್
- ಡಿಸೈನ್ ಕನ್ಸಲ್ಟಿಂಗ್
ಟೀಚಿಂಗ್ ಬೆಸ್ಟ್
ಸುಶಿಕ್ಷಿತ ಗೃಹಿಣಿಯರಿಗೆ ಟೀಚಿಂಗ್ ಉದ್ಯೋಗ ಉತ್ತಮ. ಮಹಿಳೆಯರು ಒಳ್ಳೆಯ ಶಿಕ್ಷಕಿಯರು. ಇದೇ ಸಮಯದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಬಹುತೇಕ ಕರ್ನಾಟಕದ ಎಲ್ಲಾ ನಗರಗಳಲ್ಲಿಯೂ ಮಕ್ಕಳನ್ನು ಟ್ಯೂಷನ್ ಕ್ಲಾಸ್‌ಗೆ ಹೆತ್ತವರು ಕಳುಹಿಸುವುದು ಸಾಮಾನ್ಯ. ಒಬ್ಬೊಬ್ಬ ವಿದ್ಯಾರ್ಥಿಯಿಂದ 1 ಸಾವಿರ ರೂಪಾಯಿಯಂತೆ ತಿಂಗಳಿಗೆ ಕಲೆಕ್ಟ್ ಮಾಡಿದರೂ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ತಿಂಗಳಿಗೆ ಕೈತುಂಬಾ ಹಣ ಸಂಪಾದನೆ ಮಾಡಬಹುದು.
- -ಆನ್‌ಲೈನ್ ಟೀಚಿಂಗ್
- ಆಫ್‌ಲೈನ್ ಟೀಚಿಂಗ್
- ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್
- ನಿರ್ದಿಷ್ಟ ವಿಷಯಗಳ ಕೋಚಿಂಗ್- ಮ್ಯಾಥ್ ಎಕ್ಸ್‌ಪರ್ಟ್ ಆಗಿದ್ದರೆ ಗಣಿತ, ಇಂಗ್ಲಿಷ್ ಎಕ್ಸ್‌ಪರ್ಟ್ ಆಗಿದ್ದರೆ ಇಂಗ್ಲಿಷ್ ಕೋಚಿಂಗ್ ನೀಡಬಹುದು.
ಇದನ್ನೂ ಓದಿ: Business Ideas: 10 ಸಾವಿರ ರೂಗಿಂತ ಕಡಿಮೆ ಹೂಡಿಕೆಯ ಬಿಸ್ನೆಸ್ ಐಡಿಯಾಗಳು; ಸಣ್ಣದಾಗಿ ಆರಂಭಿಸಿ, ದೊಡ್ಡದಾಗಿ ಬೆಳೆಯಿರಿ
ಬ್ಲಾಗಿಂಗ್/ಕಂಟೆಂಟ್ ರೈಟಿಂಗ್
ಇಂಗ್ಲಿಷ್ ಕಂಟೆಂಟ್ ಬರವಣಿಗೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. ಬ್ಲಾಗಿಂಗ್ ಅಭ್ಯಾಸವಿದ್ದರೆ ಕುಕ್ಕಿಂಗ್, ಟ್ರಾವೆಲ್ ಅಥವಾ ಇತರೆ ವಿಷಯಗಳ ಬ್ಲಾಗಿಂಗ್ ಆರಂಭಿಸಬಹುದು. ನೀವು ಕಲಿತ ವಿಷಯಕ್ಕೆ ಸಂಬಂಧಪಟ್ಟಂತೆ, ಆ ಕ್ಷೇತ್ರದ ವಿಷಯಗಳ ಬ್ಲಾಗಿಂಗ್ ಆರಂಭಿಸಬಹುದು.
ಯೂಟ್ಯೂಬರ್
ಸಾಕಷ್ಟು ಜನರು ಯೂಟ್ಯೂಬ್ ಮೂಲಕ ಯಶಸ್ಸು ಪಡೆದಿದ್ದಾರೆ. ಆದರೆ, ಈ ವಿಭಾಗದಲ್ಲಿ ಎಲ್ಲರಿಗೂ ಯಶಸ್ಸು ಸಿಗುವುದು ಕಷ್ಟ. ಸತತ ಪ್ರಯತ್ನ ಪಟ್ಟರೆ ಯೂಟ್ಯೂಬ್ ಮೂಲಕ ಹಣ ಸಂಪಾದನೆ ಮಾಡಬಹುದು.
ಫ್ರೀಲ್ಯಾನ್ಸರ್
ನೀವು ಪಡೆದ ಶಿಕ್ಷಣಕ್ಕೆ ಸಂಬಂಧಪಟ್ಟ ಫ್ರೀಲ್ಯಾನ್ಸಿಂಗ್ ಉದ್ಯೋಗ ಹುಡುಕಬಹುದು. ಫ್ರೀಲ್ಯಾನ್ಸರ್, ಅಪ್‌ವರ್ಕ್ ಮುಂತಾದ ತಾಣಗಳಲ್ಲಿ ಫ್ರೀಲ್ಯಾನ್ಸಿಂಗ್ ಉದ್ಯೋಗ ಹುಡುಕಾಟ ನಡೆಸಬಹುದು.
ವೆಬ್ ಡೆವಲಪರ್
ಎಚ್‌ಟಿಎಂಎಲ್, ಸಿಎಸ್‌ಎಸ್, ಜಾವಾ ಸ್ಕ್ರಿಪ್ಟ್ ಇತ್ಯಾದಿ ವೆಬ್‌ಡಿಸೈನ್ ಕೌಶಲ ನಿಮ್ಮಲ್ಲಿ ಇದ್ದರೆ ಮನೆಯಲ್ಲಿಯೇ ಕುಳಿತು ವೆಬ್ ವಿನ್ಯಾಸ ಕೆಲಸ ಮಾಡಬಹುದು.
ಅಫಿಲಿಯೇಟ್ ಮಾರ್ಕೆಟಿಂಗ್
ಉತ್ಪನ್ನಗಳ ಮಾರಾಟ ಹೆಚ್ಚಿಸಲು ನೆರವಾಗುವಂತ ಅಫಿಲಿಯೇಟ್ ಮಾರ್ಕೆಟಿಂಗ್ ಮೂಲಕವೂ ಹಣ ಸಂಪಾದನೆ ಮಾಡಲು ಪ್ರಯತ್ನಿಸಬಹುದು.
ಬೇಕಿಂಗ್/ ಕುಕ್ಕಿಂಗ್
ಬೆಂಗಳೂರಿನಂತಹ ನಗರಗಳಲ್ಲಿ ಬೇಕಿಂಗ್, ಕುಕ್ಕಿಂಗ್ ಮೂಲಕವೂ ಆದಾಯ ಸಂಪಾದನೆ ಮಾಡಬಹುದು. ಜೊಮೆಟೊ, ಸ್ವಿಗ್ಗಿ ಮುಂತಾದ ತಾಣಗಳಿಗೆ ಫುಡ್ ಡೆಲಿವರಿ ಮಾಡಬಹುದು. ಮನೆಯಲ್ಲಿಯೇ ಫುಡ್ ಸೆಟಪ್ ಮಾಡಿ ಇಂತಹ ಅಪ್ಲಿಕೇಷನ್‌ಗಳ ಮೂಲಕ ಡೆಲಿವರಿ ಮಾಡಬಹುದು.
ಯೋಗ ಕ್ಲಾಸ್
ನೀವು ಯೋಗ ತರಬೇತಿ ಪಡೆದಿದ್ದರೆ ಬಿಡುವಿನ ವೇಳೆಯಲ್ಲಿ ಯೋಗ ಕ್ಲಾಸ್ ಮಾಡಬಹುದು. ಇದನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮಾಡಬಹುದು.
ಡ್ರಾಪ್‌ಶಿಪ್ಪಿಂಗ್
ಯಾವುದೇ ಇನ್‌ವೆಂಟರಿ ಅಥವಾ ದಾಸ್ತಾನು ಹೊಂದದೆ ಬೇಡಿಕೆಯಲ್ಲಿರುವ ಪ್ರಾಡಕ್ಟ್‌ಗಳನ್ನು ಡ್ರಾಪ್‌ಶಿಪ್ಪಿಂಗ್ ಮಾದರಿ ಮೂಲಕ ಮಾರಾಟ ಮಾಡಬಹುದು. ಇದಕ್ಕಾಗಿ ಸಂಬಂಧಪಟ್ಟ ಪ್ರಾಡಕ್ಟ್ ಮಾರಾಟಗಾರರ ಜತೆ ಪಾಲುದಾರಿಕೆ ಮಾಡಿಕೊಳ್ಳಬೇಕು.
ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ
ಮನೆಯಲ್ಲಿಯೇ ಕುಳಿತು ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನೂ ನೀಡಬಹುದು.
ಇವೆಲ್ಲವು ಉದಾಹರಣೆಗಳಷ್ಟೇ. ಬೆಂಗಳೂರಿನಲ್ಲಿ ಸುಶಿಕ್ಷಿತ ಮಹಿಳೆಯರು ಮನೆಯಲ್ಲಿಯೇ ಕುಳಿತು ವಿವಿಧ ಬಗೆಯ ಉದ್ಯೋಗಗಳನ್ನು ಮಾಡಬಹುದು. ಎಷ್ಟೇ ಹುಡುಕಿದರೂ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಮಾಡುವ ಉದ್ಯೋಗ ದೊರಕುತ್ತಿಲ್ಲ ಎಂದು ಕೊರಗುವ ಬದಲು ನೀವೇ ಯಾವುದಾದರೂ ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ.
