ಕಾರನ್ನು ಎಷ್ಟು ದಿನಗಳಿಗೊಮ್ಮೆ ವಾಷ್ ಮಾಡಬೇಕು; ಕಾರು ತೊಳೆಯುವ ಸರಿಯಾದ ಕ್ರಮ ಯಾವುದು?
ಕನ್ನಡ ಸುದ್ದಿ  /  ಜೀವನಶೈಲಿ  /  ಕಾರನ್ನು ಎಷ್ಟು ದಿನಗಳಿಗೊಮ್ಮೆ ವಾಷ್ ಮಾಡಬೇಕು; ಕಾರು ತೊಳೆಯುವ ಸರಿಯಾದ ಕ್ರಮ ಯಾವುದು?

ಕಾರನ್ನು ಎಷ್ಟು ದಿನಗಳಿಗೊಮ್ಮೆ ವಾಷ್ ಮಾಡಬೇಕು; ಕಾರು ತೊಳೆಯುವ ಸರಿಯಾದ ಕ್ರಮ ಯಾವುದು?

ಹೆಚ್ಚಿನ ಜನರು ಕಾರು ತೊಳೆಯಲು ಹಣ ಖರ್ಚು ಮಾಡುವುದನ್ನು ತಪ್ಪಿಸಲು ಮನೆಯಲ್ಲೇ ವಾಷ್ ಮಾಡುತ್ತಾರೆ. ಸಮಯ ಸಿಕ್ಕಾಗ ಅಥವಾ ವೀಕೆಂಡ್‌​ನಲ್ಲಿ ಸ್ವಚ್ಚಗೊಳಿಸುತ್ತಾರೆ. ಕೆಲವರಿಗೆ ಪ್ರತಿವಾರ ಕಾರನ್ನು ತೊಳೆದರೆ ಸಮಾಧಾನ. ಆದರೆ, ಹೀಗೆ ಮಾಡುವುದು ತಪ್ಪು. ಹಾಗಿದ್ದರೆ ಎಷ್ಟು ದಿನಕ್ಕೊಮ್ಮೆ ಮಾಡಬೇಕು?, ಈ ಕುರಿತ ಮಾಹಿತಿ ಇಲ್ಲಿದೆ.

ಕಾರನ್ನು ಎಷ್ಟು ದಿನಗಳಿಗೊಮ್ಮೆ ವಾಷ್ ಮಾಡಬೇಕು; ಕಾರು ತೊಳೆಯುವ ಸರಿಯಾದ ಕ್ರಮ ಯಾವುದು?
ಕಾರನ್ನು ಎಷ್ಟು ದಿನಗಳಿಗೊಮ್ಮೆ ವಾಷ್ ಮಾಡಬೇಕು; ಕಾರು ತೊಳೆಯುವ ಸರಿಯಾದ ಕ್ರಮ ಯಾವುದು? (Pixabay)

ಕಾರು ಹೊಂದಿರುವ ಅನೇಕ ಜನರು ಸಮಯ ಸಿಕ್ಕಾಗೆಲ್ಲ ಅಥವಾ ಪ್ರತಿ ವೀಕೆಂಡ್​ನಲ್ಲಿ ತಮ್ಮ ಕಾರನ್ನು ವಾಷ್ ಮಾಡುತ್ತಾರೆ. ಕಾರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಳ್ಳೆಯದು. ಆದರೆ ಅದನ್ನು ಅತಿಯಾಗಿ ಸ್ವಚ್ಛಗೊಳಿಸುವುದು ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ನಿಮ್ಮ ಕಾರನ್ನು ಪ್ರತಿ ವಾರ ಅಥವಾ ಎರಡು ವಾರಕ್ಕೊಮ್ಮೆ ತೊಳೆಯುವ ಅಭ್ಯಾಸವಿದ್ದರೆ, ತಕ್ಷಣ ಅದನ್ನು ಬದಲಾಯಿಸಿ. ಇಲ್ಲದಿದ್ದರೆ ನಿಮ್ಮ ಕಾರು ಜಂಕ್ ಆಗುವ ಸಾಧ್ಯತೆಯಿದೆ. ಸೋಪು ನೀರುವ ಅಥವಾ ಬಾರ್ ಮೂಲಕ ಕಾರನ್ನು ಅಗತ್ಯಕ್ಕಿಂತ ಹೆಚ್ಚು ತೊಳೆದಾಗ ಅದು ಕಾರಿಗೆ ಹಾನಿಯನ್ನುಂಟುಮಾಡುತ್ತದೆ.

ಕಾರನ್ನು ಹೆಚ್ಚು ತೊಳೆಯುವ ಅನಾನುಕೂಲಗಳು

  • ತುಕ್ಕು ಹಿಡಿಯುವ ಅಪಾಯ: ಕಾರನ್ನು ಆಗಾಗ್ಗೆ ತೊಳೆಯುವುದರಿಂದ ಅದರ ಪೇಂಟಿಂಗ್‌ನಲ್ಲಿ ಬಿರುಕುಗಳು ಉಂಟಾಗಬಹುದು, ಇದರಿಂದಾಗಿ ನೀರು ಮತ್ತು ತೇವಾಂಶವು ಒಳಗೆ ಪ್ರವೇಶಿಸಿ ತುಕ್ಕು ಹಿಡಿಯಲು ಕಾರಣವಾಗುತ್ತದೆ.
  • ಬಣ್ಣ ಮಾಸಬಹುದು: ಸಾಬೂನು ಮತ್ತು ನೀರು ಪದೇ ಪದೇ ಕಾರಿಗೆ ತಾಗಿದಾಗ ಬಣ್ಣವು ಕ್ರಮೇಣ ಕಡಿಮೆ ಆಗುತ್ತದೆ. ಮುಂದಿನ ದಿನಗಳಲ್ಲಿ ಕಾರಿನ ಪೇಂಟ್​ನ ಸಿಪ್ಪೆ ಏಳಲು ಆರಂಭವಾಗಬಹುದು.
  • ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿ: ನೀರಿನೊಂದಿಗೆ ಪದೇ ಪದೇ ಕಾರು ತೊಳೆಯುವುದರಿಂದ ಕಾರಿನ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗುತ್ತದೆ.
  • ನೀರು ವ್ಯರ್ಥ: ಕಾರನ್ನು ಪದೇ ಪದೇ ತೊಳೆಯುವುದರಿಂದ ಕಾರಿಗೆ ಹಾನಿ ಸಹಜ. ಇದರೊಂದಿಗೆ ನೀರು ಮತ್ತು ಶಕ್ತಿಯ ವ್ಯರ್ಥವೂ ಹೌದು. ನೀರು ಒಂದು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಅದನ್ನು ವ್ಯರ್ಥ ಮಾಡಬಾರದು.

ಕಾರು ತೊಳೆಯುವ ಸರಿಯಾದ ವಿಧಾನ

  • ಕಾರನ್ನು ನಿಜವಾಗಿ ಕೊಳಕು ಇದ್ದಾಗ ಅಥವಾ ಅಗತ್ಯವಿರುವಾಗ ಮಾತ್ರ ತೊಳೆಯಿರಿ.
  • ಕಾರು ತೊಳೆಯುವಾಗ ಮೃದುವಾದ ಸ್ಪಾಂಜ್ ಮತ್ತು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ. ಗಟ್ಟಿಯಾದ ಸ್ಪಂಜುಗಳು ಮತ್ತು ಬಟ್ಟೆಗಳು ಕಾರಿನ ಬಣ್ಣವನ್ನು ಸ್ಕ್ರಾಚ್ ಮಾಡಬಹುದು.
  • ಚಳಿಯ ವಾತಾವರಣದಲ್ಲಿ ಕಾರನ್ನು ತೊಳೆಯುವುದು ಒಳ್ಳೆಯದಲ್ಲ. ಇದು ನೀರನ್ನು ಫ್ರೀಜ್ ಮಾಡುತ್ತದೆ ಮತ್ತು ತೇವಾಂಶವು ತುಕ್ಕು ಹಿಡಿಯಲು ಕಾರಣವಾಗಬಹುದು.

ಇದನ್ನೂ ಓದಿ | Mileage Tips: ನಿಮ್ಮ ಕಾರಿನ ಮೈಲೇಜ್ ಹೆಚ್ಚಾಗಬೇಕೇ? ಕ್ಲಚ್‌ ಒತ್ತುವಾಗ ಈ ತಪ್ಪು ಮಾಡಬೇಡಿ: ನೀವು ತಿಳಿದಿರಲೇಬೇಕಾದ ಟಿಪ್ಸ್ ಇವು

  • ಹಾಗೆಯೆ ನೇರ ಸೂರ್ಯನ ಬೆಳಕಿನಲ್ಲಿ ಕಾರನ್ನು ತೊಳೆಯುವುದು ಬಣ್ಣಕ್ಕೆ ಹಾನಿ ಮಾಡುತ್ತದೆ.
  • ಕಾರನ್ನು ತೊಳೆದ ನಂತರ ಒಣ ಬಟ್ಟೆಯಲ್ಲಿ ಚೆನ್ನಾಗಿ ಉಚ್ಚಿ ಒಣಗಿಸಿ. ನೀರಿನ ಹನಿಗಳು ಉಳಿದಿದ್ದರೆ ಕಾರಿನ ಮೇಲೆ ಕಲೆಗಳು ಕಾಣಿಸಿಕೊಳ್ಳುತ್ತದೆ.

ಇತರೆ ಆಯ್ಕೆ ಏನಿದೆ?

ಕಾರನ್ನು ನೀರಿನಿಂದ ತೊಳೆಯುವ ಬದಲು ಡ್ರೈ ಕ್ಲೀನ್ ಮಾಡಬಹುದು. ಡ್ರೈ ವಾಷ್ ಮೂಲಕ ಕಾರ್ ಸೀಟುಗಳು ಮತ್ತು ಕಾರಿನ ಒಳ ಭಾಗವನ್ನು ಸ್ವಚ್ಛಗೊಳಿಸಬಹುದು. ಇದು ನೀರನ್ನು ಉಳಿಸುತ್ತದೆ ಮತ್ತು ನಿಮ್ಮ ಕಾರು ಕೂಡ ಸ್ವಚ್ಛವಾಗಿರುತ್ತದೆ. ಇದಲ್ಲದೆ, ವ್ಯಾಕ್ಯೂಮ್ ಕ್ಲೀನರ್ ಅನ್ನು ಸಹ ಬಳಸಬಹುದು. ನೀರಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ತುಕ್ಕು ಹಿಡಿಯುವ ಅಪಾಯವಿದೆ.

ವರದಿ: ವಿನಯ್‌ ಭಟ್

ಅಟೊಮೊಬೈಲ್‌ ಸಂಬಂಧಿತ ಸುದ್ದಿಗಳಿಗೆ ಕ್ಲಿಕ್‌ ಮಾಡಿ

ಇದನ್ನೂ ಓದಿ | ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ತಪ್ಪದೆ ಈ ಸ್ಟೋರಿ ಓದಿ

Whats_app_banner