Jio Sim: ನಿಮ್ಮ ಜಿಯೋ ಸಿಮ್ ಕಳ್ಳತನವಾದರೆ ಏನು ಮಾಡಬೇಕು? ಬ್ಲಾಕ್ ಮಾಡಲು ಈ ವಿಧಾನ ಅನುಸರಿಸಿ
ಜಿಯೋ ಸಿಮ್ ಕಳ್ಳತನವಾದರೆ ಅಥವಾ ಮಿಸ್ ಆದರೆ ಏನು ಮಾಡಬೇಕು? ಸಿಮ್ ಬ್ಲಾಕ್ ಮಾಡುವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿ ನೀಡಲಾಗಿದೆ. ನಿಮ್ಮ ಸಿಮ್ ನಂಬರ್ ಅನ್ಯರಿಗೆ ಸಿಕ್ಕರೆ ದುರುಪಯೋಗವಾಗಬಹುದು. ಹೀಗಾಗಿ, ಸಿಮ್ ಬ್ಲಾಕ್ ಮಾಡುವುದು ಉತ್ತಮ.

ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಕ್ರಾಂತಿಯ ಪರಿಣಾಮ ಇಂದು ಬಹುತೇಕ ಎಲ್ಲ ವರ್ಗದ ಜನರಲ್ಲಿ ನಾವು ಸ್ಮಾರ್ಟ್‌ಫೋನ್ ಕಾಣುತ್ತೇವೆ. ಅದರಲ್ಲೂ ಕಡಿಮೆ ದರಕ್ಕೆ ಮೊದಲು ಇಂಟರ್ನೆಟ್ ಸೇವೆ ಒದಗಿಸಿದ ಜಿಯೋ ಕಂಪನಿಯ ಸಿಮ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಫೋನ್ ಕಳೆದುಹೋಗುವಾಗ, ಅದರಲ್ಲಿನ ಸಿಮ್ ಕೂಡ ಕಳವಾಗುತ್ತದೆ. ಸಿಮ್ ಕಳೆದುಹೋದರೆ ಅದರಿಂದ ಉಂಟಾಗುವ ತೊಂದರೆಗಳು ಒಂದೆರಡಲ್ಲ. ಫೋನ್‌ನಲ್ಲಿರುವ ಸಿಮ್‌ನ ನಂಬರ್‌ಗೆ ಬ್ಯಾಂಕಿಂಗ್, ಯುಪಿಐ ಎಂದು ಎಲ್ಲವೂ ಲಿಂಕ್ ಆಗಿರುವಾಗ, ನಂಬರ್ ದುರುಪಯೋಗವಾದರೆ ಎಂದು ಆತಂಕವಾಗುವುದು ಸಹಜ. ಅಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು ಮತ್ತು ಸಿಮ್ ಬ್ಲಾಕ್ ಮಾಡಿಸುವುದು ಹೇಗೆ ಎಂಬ ವಿವರ ಇಲ್ಲಿದೆ.
ಕಸ್ಟಮರ್ ಕೇರ್‌ಗೆ ಕಾಲ್ ಮಾಡಿ
- ಸಿಮ್, ಅಂದರೆ ಫೋನ್ ಕಳೆದುಹೋದಾಗ, ಮೊದಲಿಗೆ ನೀವು ಇನ್ನೊಂದು ಜಿಯೋ ನಂಬರ್‌ನಿಂದ, ಅಥವಾ ಬೇರೆ ಯಾರದ್ದಾದರೂ ಜಿಯೋ ನಂಬರ್‌ನಿಂದ ಕಸ್ಟಮರ್ ಕೇರ್‌ಗೆ ಕರೆ ಮಾಡಬೇಕು.
- ಜಿಯೋ ಕಸ್ಟಮರ್ ಕೇರ್ ನಂಬರ್ 199
- ಜಿಯೋ ಹೊರತುಪಡಿಸಿ, ಬೇರೆ ನೆಟ್‌ವರ್ಕ್ ಆಗಿದ್ದರೆ, 1800-889-9999 ನಂಬರ್‌ಗೆ ಕರೆ ಮಾಡಬಹುದು.
- ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಜತೆ ಮಾತನಾಡಿ, ನಿಮ್ಮ ಸಿಮ್ ಕಳವಾದ ಬಗ್ಗೆ ಮಾಹಿತಿ ನೀಡಿ. ಅವರು ಕೇಳುವ ನಿಮ್ಮ ಸಿಮ್, ವಿಳಾಸ, ಅಧಾರ್ ವಿವರ ನೀಡಿ, ಸಿಮ್ ಬ್ಲಾಕ್ ಮಾಡಿಸಿ.
ಮೈಜಿಯೋ ಆಪ್ ಮೂಲಕ ಸಿಮ್ ಬ್ಲಾಕ್
- ನಿಮ್ಮ ಗೆಳೆಯರಲ್ಲಿ ಅಥವಾ ಮನೆಯವರಲ್ಲಿ ಮೈಜಿಯೋ ಆಪ್ ಇದ್ದರೆ, ಅದರ ಮೂಲಕವೂ ಸಿಮ್ ಬ್ಲಾಕ್ ಮಾಡಬಹುದು.
- ಮೈಜಿಯೋ ಆಪ್ ಓಪನ್ ಮಾಡಿ
- ಮೆನುವಿನಲ್ಲಿ ಜಿಯೋಕೇರ್: ಹೆಲ್ಪ್ & ಸಪೋರ್ಟ್ ಆಯ್ಕೆ ಮಾಡಿ.
- ನಂತರ ಬ್ಲಾಕ್ ಸಿಮ್ ಸೆಲೆಕ್ಟ್ ಮಾಡಿ, ಯಾವ ನಂಬರ್ ಬ್ಲಾಕ್ ಮಾಡಬೇಕಿದೆ ಎನ್ನುವುದನ್ನು ಎಂಟರ್ ಮಾಡಿ, ಮುಂದುವರಿಯಿರಿ. ನಂತರ ಅಲ್ಲಿ ಕೇಳಲಾದ ವೆರಿಫಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ನಂಬರ್ ಬ್ಲಾಕ್ ಆಗುತ್ತದೆ.
ಆನ್‌ಲೈನ್ ಮತ್ತು ವೆಬ್‌ಸೈಟ್ ಮೂಲಕ ಬ್ಲಾಕ್
- ಜಿಯೋ ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ. www.jio.com
- ಅದರಲ್ಲಿ ಸಪೋರ್ಟ್ ಎಂದಿರುವಲ್ಲಿ, ಲಾಸ್ಟ್ ಸಿಮ್ ಆಯ್ಕೆ ಮಾಡಿ.
- ಯಾವ ನಂಬರ್ ಸಿಮ್ ಕಳವಾಗಿದೆ, ಅದನ್ನು ಎಂಟರ್ ಮಾಡಿ.
- ನಂತರ, ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ, ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ.
- ಅದಾದ ಬಳಿಕ ಸಿಮ್ ಬ್ಲಾಕ್ ಪೂರ್ಣವಾಗುತ್ತದೆ.
ಇದನ್ನೂ ಓದಿ: ಎಐ ಆ್ಯಪ್ ಅಭಿವೃದ್ಧಿಪಡಿಸಲು ಬಯಸುವಿರಾ? ಜಗತ್ತಿನ ಈ ಅಗ್ರ 10 ವೆಬ್‌ತಾಣಗಳಿಗೆ ಭೇಟಿ ನೀಡಿ
ಇಮೇಲ್ ಮೂಲಕ ಜಿಯೋ ನಂಬರ್ ಬ್ಲಾಕ್ ಮಾಡಿ
ಜಿಯೋ ಸಿಮ್ ಇರುವ ಫೋನ್ ಕಳೆದುಹೋದಾಗ, ಸಿಮ್ ಬ್ಲಾಕ್ ಮಾಡಿಸುವುದು ಅಗತ್ಯ. ಅದಕ್ಕಾಗಿ, ವಿವಿಧ ಆಯ್ಕೆಗಳಿವೆ, ಅದರಲ್ಲಿ care@jio.com ಇಮೇಲ್ ಐಡಿಗೆ ಇಮೇಲ್ ಕಳುಹಿಸಬಹುದು.
ಇಮೇಲ್‌ನಲ್ಲಿ ಪೂರ್ಣ ವಿವರಗಳನ್ನು ನೀಡಲು ಮರೆಯಬೇಡಿ, ಅಂದರೆ ನಿಮ್ಮ ಪೂರ್ತಿ ಹೆಸರು, ನಿಮ್ಮ ಜಿಯೋ ನಂಬರ್, ಸಿಮ್ ಕಳೆದುಹೋದ ಮಾಹಿತಿ, ಜತೆಗೆ ನಿಮ್ಮ ವಿಳಾಸ, ರಿಜಿಸ್ಟರ್ ಆಗಿರುವ ಆಧಾರ್ ನಂಬರ್ ವಿವರ ಒದಗಿಸಿ. ನಿಮ್ಮ ಅರ್ಜಿ ಸ್ವೀಕರಿಸಿದ ಬಳಿಕ, ಕಸ್ಟಮರ್ ಕೇರ್‌ನವರು ಕೋರಿಕೆಯನ್ನು ಪರಿಶೀಲಿಸಿ, ಸಿಮ್ ಬ್ಲಾಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ.
ಜಿಯೋ ಸ್ಟೋರ್ ಮೂಲಕ ಸಿಮ್ ಬ್ಲಾಕ್
ಸಿಮ್ ಕಳವಾದಾಗ, ತಕ್ಷಣವೇ ನಿಮ್ಮ ಸಮೀಪದ ಜಿಯೋ ಸ್ಟೋರ್‌ಗೆ ತೆರಳಿ, ಅಲ್ಲಿ ಕೂಡ ಸಿಮ್ ಬ್ಲಾಕ್ ಮಾಡಿಸಬಹುದು. ಸ್ಟೋರ್‌ಗೆ ತೆರಳುವಾಗ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿ ಜತೆಗೆ ಒಯ್ಯಲು ಮರೆಯದಿರಿ. ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ.. ಹೀಗೆ ಯಾವುದಾದರೊಂದು ಆಗುತ್ತದೆ.
ಸ್ಟೋರ್‌ನಲ್ಲಿರುವ ಸಿಬ್ಬಂದಿಗೆ ವಿವರ ನೀಡಿ, ಸಿಮ್ ಬ್ಲಾಕ್ ಮಾಡಲು ಹೇಳಿ. ಅಲ್ಲಿ ನೀಡುವ ಫಾರಂ ಭರ್ತಿ ಮಾಡಿ, ವಿವರ ಧೃಡೀಕರಿಸಿ.
ಈ ಪ್ರಕ್ರಿಯೆ ಮುಗಿದ ಬಳಿಕ, ಪರಿಶೀಲಿಸಿ ನಿಮ್ಮ ಸಿಮ್ ಬ್ಲಾಕ್ ಮಾಡಲಾಗುತ್ತದೆ. ಫೋನ್ ಕಳೆದುಹೋದಾಗ, ನಿಮಗೆ ಬೇರೇ ಯಾವುದೇ ಆಯ್ಕೆಗಳು ಇಲ್ಲದೇ ಹೋದಾಗ, ಸುಲಭದಲ್ಲಿ ಈ ಪ್ರಕ್ರಿಯೆಯನ್ನು ಮಾಡಬಹುದು.
