ಕ್ರೆಡಿಟ್ ಸ್ಕೋರ್ ಇಲ್ಲವೆಂಬ ಚಿಂತೆ ಬೇಡ; ಉನ್ನತ ಶಿಕ್ಷಣಕ್ಕೆ ನಿಮಗೂ ಸಿಗುತ್ತೆ ಎಜುಕೇಶನ್‌ ಲೋನ್, ಈ ಸಲಹೆ ನಿಮಗಾಗಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ರೆಡಿಟ್ ಸ್ಕೋರ್ ಇಲ್ಲವೆಂಬ ಚಿಂತೆ ಬೇಡ; ಉನ್ನತ ಶಿಕ್ಷಣಕ್ಕೆ ನಿಮಗೂ ಸಿಗುತ್ತೆ ಎಜುಕೇಶನ್‌ ಲೋನ್, ಈ ಸಲಹೆ ನಿಮಗಾಗಿ

ಕ್ರೆಡಿಟ್ ಸ್ಕೋರ್ ಇಲ್ಲವೆಂಬ ಚಿಂತೆ ಬೇಡ; ಉನ್ನತ ಶಿಕ್ಷಣಕ್ಕೆ ನಿಮಗೂ ಸಿಗುತ್ತೆ ಎಜುಕೇಶನ್‌ ಲೋನ್, ಈ ಸಲಹೆ ನಿಮಗಾಗಿ

ವಿದ್ಯಾರ್ಥಿಗಳಿಗಾಗಿ ಇರುವ ಕೆಲವು ಸರ್ಕಾರಿ ಯೋಜನೆಗಳು, ಸಹ ಅರ್ಜಿದಾರರ ನೆರವು ಹಾಗೂ ಮೇಲಾಧಾರ ಆಧಾರಿತ ಆಯ್ಕೆಗಳ ಮೂಲಕ ಏಜುಕೇಶನ್‌ ಲೋನ್‌ ಪಡೆಯಬಹುದು. ಇಂಥಾ ಸಮಯದಲ್ಲಿ ಕ್ರೆಡಿಟ್ ಸ್ಕೋರ್ ಇಲ್ಲ ಎಂಬ ಚಿಂತೆ ಇರುವುದಿಲ್ಲ.

ಕ್ರೆಡಿಟ್ ಸ್ಕೋರ್ ಇಲ್ಲವೆಂಬ ಚಿಂತೆ ಬೇಡ; ನಿಮಗೂ ಸಿಗುತ್ತೆ ಎಜುಕೇಶನ್‌ ಲೋನ್
ಕ್ರೆಡಿಟ್ ಸ್ಕೋರ್ ಇಲ್ಲವೆಂಬ ಚಿಂತೆ ಬೇಡ; ನಿಮಗೂ ಸಿಗುತ್ತೆ ಎಜುಕೇಶನ್‌ ಲೋನ್

ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಅಥವಾ ಎಜುಕೇಶನ್‌ ಲೋನ್‌ ಪಡೆಯುತ್ತಾರೆ. ಹಲವಾರು ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಸಾಲ ಪಡೆಯುವುದು ಅವರ ಶೈಕ್ಷಣಿಕ ಯಶಸ್ಸಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಆದರೆ, ಕೆಲವೊಮ್ಮೆ ಸರಿಯಾದ ಕ್ರೆಡಿಟ್ ಸ್ಕೋರ್ ಇಲ್ಲದೆ ಮತ್ತು ಕ್ರೆಡಿಟ್ ಇತಿಹಾಸದ ಕೊರತೆಯಿಂದ ಶಿಕ್ಷಣ ಸಾಲವನ್ನು ಸುಲಭವಾಗಿ ಪಡೆಯಲು ಅಡ್ಡಿಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಏನು ಮಾಡುವುದು ಎಂಬ ಚಿಂತೆ ಹಲವರದ್ದು. ಅಂತಹ ಸಂದರ್ಭಗಳಲ್ಲಿಯೂ, ಎಜುಕೇಶನ್‌ ಲೋನ್‌ ಪಡೆಯಬಹುದು. ಇದಕ್ಕೆ ಕೆಲವು ಮಾರ್ಗಗಳು ಲಭ್ಯವಿದೆ. ಹೀಗಾಗಿ ಕ್ರೆಡಿಟ್ ಸ್ಕೋರ್ ಇಲ್ಲದೆ ಶಿಕ್ಷಣ ಸಾಲ ಪಡೆಯಲು ವಿದ್ಯಾರ್ಥಿಗಳಿಗೆ ಲಭ್ಯವಿರುವ ಆಯ್ಕೆಗಳನ್ನು ನೋಡೋಣ.

ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಹಣ ಸಂಪಾದಿಸಲು ಸಾಧ್ಯವಿಲ್ಲ. ಹೀಗಾಗಿ ಸಾಲ ಪಡೆಯುವ ಮೂಲಕ, ಶಿಕ್ಷಣ ಪೂರ್ಣಗೊಳಿಸಿದ ನಂತರ ಅದನ್ನು ಮರುಪಾವತಿಸಲು ಅವರಿಗೆ ಸೂಕ್ತ ಸಮಯವಕಾಶ ನೀಡಲಾಗುತ್ತದೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವಾಗುವ ಸಲುವಾಗಿ ಭಾರತ ಸರ್ಕಾರ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆ (CSIS) ವೃತ್ತಿಪರ ಅಥವಾ ತಾಂತ್ರಿಕ ಕೋರ್ಸ್‌ಗಳ ಅಧ್ಯಯನ ಮಾಡುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮೊರಟೋರಿಯಂ ಅವಧಿಯಲ್ಲಿ ಬಡ್ಡಿ ಸಬ್ಸಿಡಿಗಳನ್ನು ಒದಗಿಸುತ್ತದೆ. ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ, ಪೋಷಕರ ವಾರ್ಷಿಕ ಆದಾಯ 4.5 ಲಕ್ಷ ರೂ.ಗಳನ್ನು ಮೀರಬಾರದು.

ಇದೇ ರೀತಿ, ಶೈಕ್ಷಣಿಕ ಸಾಲಗಳಿಗಾಗಿ ಕ್ರೆಡಿಟ್ ಗ್ಯಾರಂಟಿ ಫಂಡ್ ಸ್ಕೀಮ್ (CGFSEL) ಕ್ರೆಡಿಟ್ ಗ್ಯಾರಂಟಿ ಒದಗಿಸುತ್ತದೆ. ಮೇಲಾಧಾರದ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಕ್ರೆಡಿಟ್ ಇತಿಹಾಸವಿಲ್ಲದ ವಿದ್ಯಾರ್ಥಿಗಳಿಗೆ ಸಾಲಗಳ ಲಭ್ಯತೆ ಸುಲಭವಾಗುತ್ತದೆ. ಮಾದರಿ ಶಿಕ್ಷಣ ಸಾಲ ಯೋಜನೆಗಳ ಅಡಿಯಲ್ಲಿ ಸಾಲಗಳಿಗೆ ಸಿಜಿಎಫ್ಎಸ್ಇಎಲ್ ಅನ್ವಯಿಸುತ್ತದೆ ಎಂಬುದು ನೆನಪಿರಲಿ. ಈ ಯೋಜನೆಗಳ ಬಗ್ಗೆ ಸಂಪೂರ್ಣ ವಿವರಗಳಿಗಾಗಿ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಅನ್ನು ನೋಡಿ.

ಸಹ-ಅರ್ಜಿದಾರರು ಮತ್ತು ಮೇಲಾಧಾರ

ಈ ಹಿಂದೆ ಸಾಲ ಪಡೆಯದ ವ್ಯಕ್ತಿಗಳಿಗೆ ಸಾಲ ನೀಡುವುದಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡಲು, ಪ್ರಮುಖ ಬ್ಯಾಂಕುಗಳು ಸಾಮಾನ್ಯವಾಗಿ ಬಲವಾದ ಕ್ರೆಡಿಟ್ ಪ್ರೊಫೈಲ್ ಹೊಂದಿರುವ ಸಹ-ಅರ್ಜಿದಾರರು ಮತ್ತು ಮೇಲಾಧಾರಗಳನ್ನು ಪರಿಗಣಿಸುತ್ತವೆ. ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮುಂತಾದ ಬ್ಯಾಂಕುಗಳು ಸೆಕ್ಯುರಿಟಿಗಳು ಮತ್ತು ಮೇಲಾಧಾರಗಳ ಮೇಲೆ ಸಾಲವನ್ನು ಒದಗಿಸುತ್ತವೆ. ಬ್ಯಾಂಕುಗಳ ನಿರ್ದೇಶನಗಳ ಪ್ರಕಾರ, ಆಸ್ತಿ, ಸ್ಥಿರ ಠೇವಣಿಗಳಂತಹ ಸ್ವತ್ತುಗಳನ್ನು ಅಡವಿಡುವುದರಿಂದ ಸಾಲ ಅನುಮೋದನೆಯಾಗುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.

ಉತ್ತಮ ಕ್ರೆಡಿಟ್ ಪ್ರೊಫೈಲ್ ಮತ್ತು 750 ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯಲ್ಲಿ ಕ್ರೆಡಿಟ್ ಸ್ಕೋರ್ ಹೊಂದಿರುವ ಪೋಷಕರು ಅಥವಾ ಪೋಷಕರಂತಹ ಸಹ ಅರ್ಜಿದಾರರಿದ್ದರೆ, ಶಿಕ್ಷಣ ಸಾಲ ಪಡೆಯಲು ಸುಲಭವಾಗುತ್ತದೆ.

ಎನ್‌ಬಿಎಫ್‌ಸಿಗಳು, ಬ್ಯಾಂಕುಗಳು ಮತ್ತು ಪರ್ಯಾಯ ಸಾಲದಾತರು

ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸಾಲ ಕೊಡಲು ಪ್ರಮುಖ ಬ್ಯಾಂಕೇತರ ಹಣಕಾಸು ಕಂಪನಿಗಳು (NBFC’s) ಮತ್ತು ಬ್ಯಾಂಕುಗಳು ಪ್ರಮುಖ ಆಯ್ಕೆಗಳಾಗಿವೆ. ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಇವು ಶಿಕ್ಷಣ ಸಾಲ ನೀಡುತ್ತವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಶಿಕ್ಷಣ ಸಾಲಗಳು ವರ್ಷಕ್ಕೆ 9.55 ಶೇ. ಬಡ್ಡಿದರದಲ್ಲಿ ಆರಂಭವಾಗುತ್ತವೆ. ಅತ್ತ ಬಜಾಜ್ ಫೈನಾನ್ಸ್ ಬಡ್ಡಿದರ 10.25 ಪ್ರತಿಶತದಿಂದ ಆರಂಭವಾಗುತ್ತದೆ.

ಈ ಬಡ್ಡಿದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಹೀಗಾಗಿ ನಿಖರ ಮಾಹಿತಿಗಾಗಿ ಮಹತ್ವಾಕಾಂಕ್ಷೆಯ ಅರ್ಜಿದಾರರು ಆಯಾ ಹಣಕಾಸು ಸಂಸ್ಥೆಗೆ ಭೇಟಿ ನೀಡಿದರೆ ಉತ್ತಮ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.