ಥಟ್‌ ಅಂತ ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಬ್ಯಾಲೆನ್ಸ್‌ ಪರಿಶೀಲನೆ ನಡೆಸುವುದು ಹೇಗೆ? ಇಲ್ಲಿದೆ 5 ವಿಧಾನಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಥಟ್‌ ಅಂತ ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಬ್ಯಾಲೆನ್ಸ್‌ ಪರಿಶೀಲನೆ ನಡೆಸುವುದು ಹೇಗೆ? ಇಲ್ಲಿದೆ 5 ವಿಧಾನಗಳು

ಥಟ್‌ ಅಂತ ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಬ್ಯಾಲೆನ್ಸ್‌ ಪರಿಶೀಲನೆ ನಡೆಸುವುದು ಹೇಗೆ? ಇಲ್ಲಿದೆ 5 ವಿಧಾನಗಳು

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಆಗಾಗ ರಿವಾರ್ಡ್‌ ಪಾಯಿಂಟ್‌ಗಳು ದೊರಕುವುದುಂಟು. ನಿಮ್ಮ ಕ್ರೆಡಿಟ್‌ ಕಾರ್ಡ್‌ನಲ್ಲಿ ಎಷ್ಟು ಬ್ಯಾಲೆನ್ಸ್‌ ಇದೆ ಎಂದು ಪರಿಶೀಲಿಸಲು ಬಯಸಬಹುದು. ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಬ್ಯಾಲೆನ್ಸ್‌ ಪರಿಶೀಲನೆಗೆ ಇರುವ ಐದು ವಿಧಾನಗಳ ವಿವರ ಇಲ್ಲಿ ನೀಡಲಾಗಿದೆ.

ಥಟ್‌ ಅಂತ ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಬ್ಯಾಲೆನ್ಸ್‌ ಪರಿಶೀಲನೆ ನಡೆಸುವುದು ಹೇಗೆ?
ಥಟ್‌ ಅಂತ ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಬ್ಯಾಲೆನ್ಸ್‌ ಪರಿಶೀಲನೆ ನಡೆಸುವುದು ಹೇಗೆ?

ಸಾಕಷ್ಟು ಜನರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಹೊಂದಿರಬಹುದು. ವಿವಿಧ ಡೀಲ್‌ಗಳು, ರಿವಾರ್ಡ್‌ ಪಾಯಿಂಟ್‌ಗಳು ನಿಮಗೆ ದೊರಕಿರಬಹುದು. ಈ ರೀತಿಯ ಪಾಯಿಂಟ್‌ಗಳನ್ನು ಬಳಸಿ ಖುಷಿಪಡಬಹುದು. ಹೆಚ್ಚು ಜನರು ಕ್ರೆಡಿಟ್‌ ಕಾರ್ಡ್‌ ಬಳಸುತ್ತಾರೆ. ಈ ರೀತಿ ಕ್ರೆಡಿಟ್‌ ಕಾರ್ಡ್‌ ಬಳಸುವಾಗ ಎಚ್ಚರಿಕೆಯೂ ಅಗತ್ಯವಾಗಿದೆ.

ಪ್ರಯಾಣ, ಮನರಂಜನೆ, ಶಾಪಿಂಗ್‌ ಇತ್ಯಾದಿಗಳಿಗೆ ಕ್ರೆಡಿಟ್‌ ಕಾರ್ಡ್‌ ಬಳಸಿದಾಗ ಡೀಲ್‌ಗಳು ಮತ್ತು ರಿವಾರ್ಡ್‌ ಪಾಯಿಂಟ್‌ಗಳು ದೊರಕುತ್ತದೆ. ನಿಮ್ಮ ಕ್ರೆಡಿಟ್‌ ಕಾರ್ಡ್‌ನಲ್ಲಿ ಎಷ್ಟು ಬ್ಯಾಲೆನ್ಸ್‌ ಇದೆ ಎಂದು ಪರಿಶೀಲಿಸಲು ಈ ಮುಂದಿನ ವಿಧಾನಗಳನ್ನು ಅನುಸರಿಸಿ.

ನೆಟ್ ಬ್ಯಾಂಕಿಂಗ್ ಮೂಲಕ

  • ಎಚ್‌ಡಿಎಫ್‌ಸಿ ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.
  • ಮೆನುವಿನಿಂದ ಕಾರ್ಡ್‌ಗಳ ವಿಭಾಗವನ್ನು ಆಯ್ಕೆಮಾಡಿ.
  • ಡ್ಯಾಶ್‌ಬೋರ್ಡ್‌ನಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.

ಎಚ್‌ಡಿಎಫ್‌ಸಿ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಮೂಲಕ

  • ನಿಮ್ಮ ಸಾಧನದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ
  • ನಿಮ್ಮ ಲಾಗಿನ್ ವಿವರ ನೀಡಿ ಅಪ್ಲಿಕೇಷನ್‌ ಪ್ರವೇಶಿಸಿ.
  • ಮುಖ್ಯ ಮೆನುವಿನಲ್ಲಿರುವ 'ಕ್ರೆಡಿಟ್ ಕಾರ್ಡ್‌ಗಳು' ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಇಲ್ಲಿ ನಿಮ್ಮ ಕಾರ್ಡ್ ಬ್ಯಾಲೆನ್ಸ್, ಬಿಲ್ ಮಾಡದ ವಹಿವಾಟುಗಳು ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಇತರ ವಿವರಗಳನ್ನು ನೋಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Aadhaar card loan: ಆಧಾರ್‌ ಕಾರ್ಡ್‌ ಬಳಸಿ 2 ಲಕ್ಷ ರೂ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

ಗ್ರಾಹಕ ಸೇವಾ ಸಹಾಯವಾಣಿಯ ಮೂಲಕ

  • ಕಸ್ಟಮರ್‌ ಕೇರ್‌ ಮೂಲಕವೂ ಬ್ಯಾಲೆನ್ಸ್‌ ತಿಳಿಯಬಹುದು.
  • ಎಚ್‌ಡಿಎಫ್‌ಸಿ ಗ್ರಾಹಕ ಸೇವಾ ಸಂಖ್ಯೆ 6160 6161ಗೆ ಕಾಲ್‌ ಮಾಡಿ.
  • ಅಲ್ಲಿ ತಿಳಿಸುವ ಸೂಚನೆಯನ್ನು ಅನಸರಿಸಿ.
  • ಕೇಳುವ ವಿವರವನ್ನು ನಮೂದಿಸಿ
  • ಫೋನ್ ಕರೆಯ ಸಮಯದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಮಾಹಿತಿಯನ್ನು ನಿಮಗೆ ದೊರಕುತ್ತದೆ.

ಎಟಿಎಂ ಮೂಲಕ

  • ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಮೂಲಕವೂ
  • ಎಟಿಎಂಗೆ ಕ್ರೆಡಿಟ್‌ ಕಾರ್ಡ್‌ ಇನ್‌ಸರ್ಟ್‌ ಮಾಡಿ
  • ಮೆನುವಿನಲ್ಲಿವ್ಯೂ ಸ್ಟೇಟ್‌ಮೆಂಟ್‌ ಆಯ್ಕೆ ಮಾಡಿಕೊಳ್ಳಿ
  • ಎಟಿಎಂ ಪರದೆಯಲ್ಲಿ ಬ್ಯಾಲೆನ್ಸ್‌ ಕಾಣಿಸುತ್ತದೆ.

SMS ಮೂಲಕ

  • ಎಸ್‌ಎಂಎಸ್‌ ಮೂಲಕ ಬ್ಯಾಲೆನ್ಸ್‌ ಮಾಹಿತಿ ಪಡೆಯಬಹುದು. ಇದಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ.
  • CCBAL <space> XXXX (ಇಲ್ಲಿ "XXXX" ನಿಮ್ಮ ಕ್ರೆಡಿಟ್ ಕಾರ್ಡ್‌ನ ಕೊನೆಯ 4 ಅಂಕೆಗಳು) ಎಂದು ಟೈಪ್ ಮಾಡಿ.
  • 5676712 ಗೆ SMS ಕಳುಹಿಸಿ.
  • ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವಿವರಗಳೊಂದಿಗೆ ಪ್ರತ್ಯುತ್ತರವನ್ನು ಸ್ವೀಕರಿಸುತ್ತೀರಿ.

ಗಮನಿಸಿ: ಕ್ರೆಡಿಟ್‌ ಕಾರ್ಡ್‌ ಬಳಸುವ ಮೊದಲು ಅದರ ಅವಗುಣಗಳನ್ನೂ ತಿಳಿದುಕೊಳ್ಳಿ. ಕ್ರೆಡಿಟ್‌  ಕಾರ್ಡ್‌ ಬಳಕೆ ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ. 

Whats_app_banner