ಕನ್ನಡ ಸುದ್ದಿ / ಜೀವನಶೈಲಿ /
ನವರಾತ್ರಿ ಮುಗೀತು ದೇವರ ಕೋಣೆ ಸ್ವಚ್ಛ ಮಾಡುವುದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ಸಿಂಪಲ್ ಟಿಪ್ಸ್
ಹಬ್ಬದ ಪೂಜೆ ಮುಗಿದ ಬಳಿಕ ದೇವರ ಮನೆಯನ್ನು ಕ್ಲೀನ್ ಮಾಡುವುದು ಹೇಗೆ? ಸ್ವಚ್ಛ ಮಾಡುವ ಕಾರ್ಯದ ವೇಳೆ ಏನೆೆಲ್ಲಾ ನಿಯಮಗಳನ್ನು ಪಾಲಿಸಬೇಕು? ದೇವರ ಕೋಣೆ ಸ್ವಚ್ಛ ಮಾಡುವ ಸರಳ ವಿಧಾನವನ್ನುಇಲ್ಲಿ ನೀಡಲಾಗಿದೆ.

ಪೂಜೆ ಬಳಿಕ ದೇವರ ಮನೆ ಕ್ಲೀನ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
ನವರಾತ್ರಿ ಹಬ್ಬದ ಸಮಯದಲ್ಲಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಿದ ನಂತರ ಪೂಜೆ ಹಾಗೂ ಇತರೆ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಗಿರುತ್ತದೆ. ಆದರೆ ಹಬ್ಬ ಮುಗಿಯುಷ್ಟರಲ್ಲಿ ದೇವರ ಕೋಣೆಯಲ್ಲಿ ಒಣಗಿದ ಹೂವು, ಧೂಪದ ಪುಡಿ, ಅಗರ ಬತ್ತಿಯ ಪುಡಿ, ದೀಪದ ಎಣ್ಣೆ ಜಿಡ್ಡು ಸೇರಿದಂತೆ ಒಂದಷ್ಟು ತ್ಯಾಜ್ಯದ ರಾಶಿ ನಿರ್ಮಾಣವಾಗಿರುತ್ತದೆ. ಈ ತ್ಯಾಜ್ಯಗಳನ್ನು ಹೆಚ್ಚಿನ ದಿನಗಳವರೆಗೆ ದೇವರ ಕೋಣೆಯಲ್ಲಿ ಉಳಿಸುವುದು ಒಳ್ಳೆಯದಲ್ಲ. ಸಮಯಕ್ಕೆ ಸರಿಯಾಗಿ ಇವುಗಳನ್ನು ತೆರವು ಮಾಡಿ ದೇವರ ಕೋಣೆಯನ್ನು ಸ್ವಚ್ಛವಾಗಿ ಇಡಬೇಕು. ಹೀಗೆ ಮಾಡಿದಾಗ ಮಾತ್ರ ದೇವರ ಆಶೀರ್ವಾದ ದೊರೆಯುತ್ತದೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಕೆಲವರ ನಂಬಿಕೆಯಾಗಿದೆ. ಹೀಗಾಗಿ ನವರಾತ್ರಿ ಹಬ್ಬ ಮುಗಿದ ಬಳಿಕ ದೇವರ ಕೋಣೆಯನ್ನು ಹೇಗೆ ಸ್ವಚ್ಛ ಮಾಡಬೇಕು ಎಂಬುದರ ಬಗ್ಗೆ ಸಿಂಪಲ್ ಟಿಪ್ಸ್ ಇಲ್ಲಿ ನೀಡಲಾಗಿದೆ.
ದೇವರ ಕೋಣೆ ಸ್ವಚ್ಛ ಮಾಡುವ ವಿಧಾನ
- ಮೊದಲು ದೇವರ ಕೋಣೆಯಲ್ಲಿ ದೇವರ ಫೋಟೊ ಅಥವಾ ಮೂರ್ತಿಗಳಿಗೆ ಹಾಕಿರುವ ಒಣಗಿದ ಹೂವುಗಳನ್ನು ತೆಗೆಯಬೇಕು
- ದೇವರ ಪೋಟೊಗಳಿಂದ ತೆಗೆದ ಹೂವುಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ, ಗಿಡಗಳು ಅಥವಾ ಮರವಿದ್ದರೆ ಅದರ ಬುಡದಲ್ಲಿ ಹಾಕಬಹುದು
- ಇದಾದ ಬಳಿಕ ಪೂಜೆಗೆ ಬಳಸಲಾಗಿದ್ದ ಎಲ್ಲಾ ಬೆಳ್ಳಿ, ಹಿತ್ತಾಳೆ ಹಾಗೂ ತಾಮ್ರದ ಪಾತ್ರೆಗಳನ್ನು ಪಕ್ಕಕ್ಕೆ ತೆಗೆದಿಡಿ.
- ನಂತರ ಬಟ್ಟೆಯಿಂದ ದೇವರ ಫೋಟೊಗಳನ್ನು ಒರೆಸಿಕೊಳ್ಳಿ, ವಿಗ್ರಹಗಳಿದ್ದರೆ ಅವುಗಳನ್ನು ನೀರಿನಿಂದ ಸ್ವಚ್ಛಗೊಳಿಸಿ
- ದೇವರ ವಿಗ್ರಹಗಳನ್ನು ತೊಳೆದ ನೀರನ್ನು ಎಲ್ಲೆಂದರಲ್ಲಿ ಚೆಲ್ಲಬಾರದು. ಸಸ್ಯಗಳ ಬುಡಕ್ಕೆ ಹಾಕೋದು ಒಳ್ಳೆಯದು.
- ದೇವರ ಪೋಟೊಗಳನ್ನು ಪಕ್ಕಕ್ಕೆ ತೆಗೆದುಕೊಂಡ ನಂತರ ಕೋಣೆಯ ಗೋಡೆಗಳು, ಮಂಟಪವನ್ನು ಬಟ್ಟೆಯಿಂದ ಒರೆಸಿ, ಆ ಬಳಿಕ ದೇವರುಗಳನ್ನು ಜೋಡಿಸಿಕೊಳ್ಳಿ
- ನಂತರ ದೇವರ ಮನೆಯನ್ನು ಪ್ರತ್ಯೇಕ ಪೊರಕೆಯಿಂದ ಕ್ಲೀನ್ ಮಾಡಿ
- ಇದಾದ ಬಳಿಕ ಪ್ರತ್ಯೇಕ ತೇವದ ಬಟ್ಟೆಯಿಂದ ದೇವರ ಮನೆಯನ್ನು ಸಂಪೂರ್ಣವಾಗಿ ಒರೆಸಿಕೊಳ್ಳಿ
- ಮೂರ್ತಿಗಳಲ್ಲಿ ಜಿಡ್ಡು ಇದ್ದರೆ ಸ್ವಲ್ಪ ಹುಣಸೆ ಹಣ್ಣುನನ್ನು ನೀರಿನಲ್ಲಿ ನೆನೆಸಿ ಅದಕ್ಕೆ 1 ಚಮಚ ಉಪ್ಪು, 1 ಚಮಚ ಅಡುಗೆ ಸೋಡಾ ಮಿಶ್ರಣ ಮಾಡಿ. ಈ ಲಿಕ್ವಿಡ್ ನಿಂದ ಕ್ಲೀನ್ ಮಾಡಿದರೆ ಹಿತ್ತಾಳೆ, ಕಂಚಿನ ಪಾತ್ರೆಗಳಲ್ಲಿನ ಕಲೆಗಳು ಮಾಯವಾಗುತ್ತವೆ.
- ಇದಾದ ಬಳಿಕ ದೇವರ ಕೋಣೆಯಲ್ಲಿ ರಂಗೋಲಿ ಬಿಡಿಸಿ. ಪೋಟೊಗಳು, ವಿಗ್ರಹಗಳನ್ನು ಜೋಡಿಸಿದ ಬಳಿಕ ಹೊಸದಾಗಿ ತಂದಿರುವ ಹೂವುಗಳು ಇದ್ದರೆ ಹಾಕಿ. ನಂತರ ದೀಪವನ್ನು ಬೆಳಗಿಸಿ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.