ಮೆಟ್ರೊ ಸಿಟಿಯಲ್ಲಿ ಕಡಿಮೆ ಸ್ಥಳದಲ್ಲಿ ನೀವು ಕೂಡ ವೈಯಕ್ತಿಕ ಗಾರ್ಡನ್ ನಿರ್ಮಿಸಬಹುದು; ಇಲ್ಲಿದೆ ನೋಡಿ ಸರಳ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಮೆಟ್ರೊ ಸಿಟಿಯಲ್ಲಿ ಕಡಿಮೆ ಸ್ಥಳದಲ್ಲಿ ನೀವು ಕೂಡ ವೈಯಕ್ತಿಕ ಗಾರ್ಡನ್ ನಿರ್ಮಿಸಬಹುದು; ಇಲ್ಲಿದೆ ನೋಡಿ ಸರಳ ಟಿಪ್ಸ್

ಮೆಟ್ರೊ ಸಿಟಿಯಲ್ಲಿ ಕಡಿಮೆ ಸ್ಥಳದಲ್ಲಿ ನೀವು ಕೂಡ ವೈಯಕ್ತಿಕ ಗಾರ್ಡನ್ ನಿರ್ಮಿಸಬಹುದು; ಇಲ್ಲಿದೆ ನೋಡಿ ಸರಳ ಟಿಪ್ಸ್

ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತ ಸದಾ ಹಸಿರು ತುಂಬಿದ್ದರೆ, ಮನಸ್ಸು ಕೂಡ ಹಸಿರಾಗಿರುತ್ತದೆ. ಹಸಿರು ನೋಡಿ ಮನಸ್ಸು ಉಲ್ಲಾಸಗೊಳ್ಳುತ್ತದೆ, ಜತೆಗೆ ಆರೋಗ್ಯಕ್ಕೂ ಉತ್ತಮ. ಮನೆಯಲ್ಲೇ ನೀವು ಕಡಿಮೆ ಸ್ಥಳದಲ್ಲೇ ಪುಟ್ಟದಾದ ವೈಯಕ್ತಿಕ ಗಾರ್ಡನ್ ನಿರ್ಮಿಸಬಹುದು.

ಮನೆಯಲ್ಲೇ ನೀವು ಕಡಿಮೆ ಸ್ಥಳದಲ್ಲೇ ಪುಟ್ಟದಾದ ವೈಯಕ್ತಿಕ ಗಾರ್ಡನ್ ನಿರ್ಮಿಸಬಹುದು
ಮನೆಯಲ್ಲೇ ನೀವು ಕಡಿಮೆ ಸ್ಥಳದಲ್ಲೇ ಪುಟ್ಟದಾದ ವೈಯಕ್ತಿಕ ಗಾರ್ಡನ್ ನಿರ್ಮಿಸಬಹುದು (Pixabay)

ದೇಶದ ಜನನಿಬಿಡ ಪ್ರದೇಶಗಳಾದ ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಇದೀಗ ಮರಗಳು ಕಣ್ಮರೆಯಾಗಿ ಬೃಹತ್ ಕಟ್ಟಡಗಳಿಂದ ಕೂಡಿದ ಕಾಂಕ್ರೀಟ್ ಮತ್ತು ಉಕ್ಕಿನ ನಗರವಾಗಿ ಪರಿವರ್ತನೆಯಾಗಿದೆ. ಈ ಪ್ರದೇಶದ ಜನರು ಹಸಿರನ್ನು ಕಣ್ತುಂಬಿಕೊಳ್ಳಲು ಮನೆಯಲ್ಲೇ ಉದ್ಯಾನವನ ನಿರ್ಮಿಸುತ್ತಿರುವುದು ಇತ್ತೀಚೆಗೆ ಟ್ರೇಂಡ್ ಆಗಿದೆ. ಅದಾಗ್ಯೂ ತಮ್ಮ ಸುಸ್ಥಿರ ಜೀವನವನ್ನು ಸಾಗಿಸಲು ಮೇಲ್ಛಾವಣಿ, ಬಾಲ್ಕನಿ ಮತ್ತು ವರ್ಟಿಕಲ್ ಉದ್ಯಾನವನಗಳನ್ನಾಗಿ ತಮ್ಮಿಷ್ಟದಂತೆ ನಿರ್ಮಿಸುತ್ತಿರುವುದು ನಿಜಕ್ಕೂ ಸುಂದರ ಮತ್ತು ಪ್ರಶಂಸನೀಯ ಕಾರ್ಯವಾಗಿದೆ.

ಈ ಮೆಟ್ರೋ ಸಿಟಿಯಲ್ಲಿ ನೀವು ಕೂಡ ಉದ್ಯಾನವನ ನಿರ್ಮಿಸಲು ಇಲ್ಲಿದೆ 3 ವಿಧಾನ:

ಮೇಲ್ಛಾವಣಿ ಉದ್ಯಾನವನ:

ಗಾರ್ಡನ್ ಬೆಳೆಸಲು ಸ್ಥಳಾವಕಾಶವಿಲ್ಲದೇ ಕಟ್ಟಡಗಳ ನಿರ್ಮಾಣಕ್ಕೆ ಪ್ರೀಮಿಯಂ ಆಗಿರುವ ದೆಹಲಿಯಂತ ಪ್ರದೇಶಗಳಲ್ಲಿ ಈ ರೂಫ್‌ಟಾಪ್ ಗಾರ್ಡನ್ ಮನೆಮಾತಾಗಿದೆ. ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ತಮಗಿಷ್ಟವಾದ ಹೂ, ತರಕಾರಿ, ಶೋ ಗಿಡಗಳನ್ನು ಬೆಳೆಸಬಹುದಾಗಿದೆ. ಹಚ್ಚಹಸುರಿನ ಹುಲ್ಲಿನ ಹಾಸಿಗೆಯಿಂದ ಹಿಡಿದು ಅಗತ್ಯ ತರಕಾರಿ ಬೆಳೆಯುವ ತಾಣಗಳಾಗುತ್ತಿದೆ. ಇದು ಹೆಚ್ಚು ಬಿಸಿಲಿನ ತಾಪವನ್ನು ಕಡಿಮೆ ಮಾಡುವುದಲ್ಲದೇ, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಹಕರಿಸುತ್ತದೆ.

ಬಾಲ್ಕನಿ ಗಾರ್ಡನ್:

ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್ ನಿವಾಸಿಗಳು ಬಾಲ್ಕನಿಯಲ್ಲಿ ಮಿನಿ ಗಾರ್ಡನ್ ನಿರ್ಮಿಸುವ ಮೂಲಕ ಜೀವತುಂಬಿದ್ದಾರೆ. ವರ್ಣರಂಜಿತ ಹೂವುಗಳು, ಆರೋಮ್ಯಾಟಿಕ್ ಗಿಡಮೂಲಿಕೆಯಿಂದ ಅಲಂಕರಿಸಲ್ಪಟ್ಟ ಉದ್ದನೆಯ ಗಿಡಗಳು, ನೇತಾಡುವ ಬುಟ್ಟಿಗಳು ಹೀಗೆ ನೋಡುವುದಕ್ಕೆ ಪ್ರಕೃತಿಯನ್ನೇ ಮನೆಯ ಗಾರ್ಡನ್ ಏರಿಯಾದಲ್ಲಿ ತಂದೊಡ್ಡಿದಂತೆ ಭಾಸವಾಗುತ್ತದೆ. ಹಸಿರು ಗಿಡಗಳು, ಬಳ್ಳಿಗಳು, ಸುಂದರವಾದ ಹೂವಿನ ಗಿಡಗಳು, ಶೋ ಪುಷ್ಪ ಗಿಡಗಳು, ಅಡುಗೆಗೆ ಬೇಕಾದ ತರಕಾರಿಗಳನ್ನು ಓರಣವಾಗಿ ಜೋಡಿಸಿ ಆಕರ್ಷಕವಾಗಿ ಅಲಂಕರಿಸಿ. ಅಲ್ಲದೇ ನಗರದ ಹೃದಯಭಾಗದಲ್ಲಿಯೂ ಸಹ ಫಾರ್ಮ್ ಟು ಟೇಬಲ್ ಜೀವನಶೈಲಿಯನ್ನೇ ಅನುಸರಿಸುತ್ತಿದೆ.

ಲಂಬವಾದ (ವರ್ಟಿಕಲ್) ಉದ್ಯಾನವನ:

ಮನೆ ಅಥವಾ ಕಟ್ಟಡದ ಹೊರಾಂಗಣದಲ್ಲಿ ಕಾಂಪೌಂಡ್ ಸೇರಿದಂತೆ ಗೋಡೆಯಿದ್ದರೆ ಅದನ್ನು ಖಾಲಿ ಬಿಡದೇ ಟ್ರೇಲಿಗಳ ಮೂಲಕ ಹೂ ಬಿಡುವ ಬಳ್ಳಿಗಳನ್ನು ಹಬ್ಬಿಸಿದರೆ ವಿಷುವಲ್ ಅಪೀಲ್ ಹೆಚ್ಚಾಗುತ್ತದೆ. ಅದರಲ್ಲು ಈ ಕ್ಯಾಸ್ಕೇಡಿಂಗ್ ಎಲೆಗಳು ಮತ್ತು ಹೂವುಗಳಿಂದ ನಗರದಲ್ಲೇ ಒಂದು ಟ್ರೆಂಡ್ ಸೃಷ್ಟಿಮಾಡುತ್ತಿದೆ. ದೆಹಲಿಯ ವಾಣಿಜ್ಯ ಕೇಂದ್ರ ಮತ್ತು ಮುಂಬೈನ ಕಾರ್ಪೋರೇಟ್ ಕಟ್ಟಡಗಳಲ್ಲಿ ಈ ವರ್ಟಿಕಲ್ ಗಾರ್ಡನ್‌ಗಳು ಹೆಚ್ಚಾಗಿದ್ದು, ಇದರಿಂದ ನೈಸರ್ಗಿಕವಾಗಿ ಹೆಚ್ಚು ಲಾಭವಾಗಿದೆ ಹಾಗ ತಾಪಮಾನ ಮತ್ತು ಇಂಧನ ವೆಚ್ಚವನ್ನು ಕಡಿಮೆ ಮಾಡುತ್ತಿದೆ. ಸೌಂದರ್ಯವು ಹೆಚ್ಚುತ್ತಿದೆ.

ಗಾರ್ಡನ್ ಬೆಳೆಸಲು ಎದುರಾಗುವ ಸವಾಲು ಮತ್ತು ಸಲಹೆಗಳು:

ನಗರದಲ್ಲಿ ಟ್ರೆಂಡ್ ಆಗುತ್ತಿರುವ ಈ ತೋಟಗಾರಿಕೆ ಹೊರತಾಗಿಯು ಸೀಮಿತ ಸ್ಥಳಾವಕಾಶ, ನೀರಿನ ಕೊರತೆ ಮತ್ತು ಮಾಲಿನ್ಯಗಳನ್ನು ತಡೆಗಟ್ಟುವುದು ಮತ್ತು ಎದುರಿಸುವುದು ಸವಾಲಾಗಿದೆ. ಇದರ ಮಧ್ಯೆಯು ಹನಿ ನೀರಾವರಿ ವ್ಯವಸ್ಥೆ, ಹೈಡ್ರೋಪೋನಿಕ್ಸ್ ಮತ್ತು ಮರುಬಳಕೆಯ ವಸ್ತುಗಳ ಬಳಕೆಗೆ ನವೀನ ಮಾದರಿ ಕಲ್ಪಿಸಲು, ಇವುಗಳನ್ನು ಅಭಿವೃದ್ಧಿ ಮಾಡುತ್ತಿರುವ ನಗರ ತೋಟಗಾರರು ಹೆಚ್ಚು ಸಹಾಯ ಮಾಡುತ್ತಿರುವುದು ಪ್ರಶಂಸನೀಯ.

ಆಯಾ ನಗರದ ತೋಟಗಾರಿಕೆ ನಿವಾಸಿಗಳು ಸುಸ್ಥಿರ ತೋಟಗಾರಿಕೆ ಪದ್ದತಿಗಳ ಕುರಿತು ಸಮಾವೇಶ, ಕಾರ್ಯಾಗಾರ ನಡೆಸಿ ತಮ್ಮ ಮನೆ ಮೇಲ್ಛಾವಣಿಯಲ್ಲೇ ಸುಂದರ ಗಾರ್ಡನ್ ನಿರ್ಮಿಸಲು ಸಲಹೆಗಳನ್ನು ನೀಡುವ ಮೂಲಕ ನಗರಾಭಿವೃದ್ಧಿಯೊಂದಿಗೆ, ಸಬಲೀಕರಣಗೊಳಿಸುವಲ್ಲಿ ಹೆಚ್ಚು ಪಾತ್ರಧಾರಿಗಳಾಗಿದ್ದಾರೆ.

ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಜನರು ಕೇವಲ ಗಾರ್ಡನ್ ನಿರ್ಮಿಸುತ್ತಿಲ್ಲ ಬದಲಾಗಿ ಆಯಾ ನಗರದ ಸುಸ್ಥಿತ ಭವಿಷ್ಯವನ್ನು ಬೆಳೆಸುತ್ತಿದ್ದಾರೆ. ನೀವು ತೋಟಾಗಾರಿಕೆ ಬೆಳೆಸಲು ಅನುಭವಸ್ಥರಾಗಿರಿ ಅಥವಾ ಹೊಸಬರಾಗಿರಿ, ಪ್ರಕೃತಿಯ ನಿರ್ಮಾಣದಿಂದ ಮಾತ್ರ ದೇಶದ ಸಂಪತ್ತನ್ನು ಬೆಳೆಸಲು ಸಾಧ್ಯ ಎಂಬುದನ್ನು ಮರೆಯದಿರಿ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in