ಆಧಾರ್ ಮತ್ತು ಪಾನ್ ಕಾರ್ಡ್ ಡೌನ್‌ಲೋಡ್ ಇನ್ನಷ್ಟು ಸುಲಭ; ವಾಟ್ಸ್​ಆ್ಯಪ್​ನಲ್ಲೂ ಹೇಗೆ ಮಾಡೋದು ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆಧಾರ್ ಮತ್ತು ಪಾನ್ ಕಾರ್ಡ್ ಡೌನ್‌ಲೋಡ್ ಇನ್ನಷ್ಟು ಸುಲಭ; ವಾಟ್ಸ್​ಆ್ಯಪ್​ನಲ್ಲೂ ಹೇಗೆ ಮಾಡೋದು ತಿಳಿದುಕೊಳ್ಳಿ

ಆಧಾರ್ ಮತ್ತು ಪಾನ್ ಕಾರ್ಡ್ ಡೌನ್‌ಲೋಡ್ ಇನ್ನಷ್ಟು ಸುಲಭ; ವಾಟ್ಸ್​ಆ್ಯಪ್​ನಲ್ಲೂ ಹೇಗೆ ಮಾಡೋದು ತಿಳಿದುಕೊಳ್ಳಿ

Technology Tips: ವೈಯಕ್ತಿಕ ಗುರುತಿಗೆ ಆಧಾರ್ ಕಾರ್ಡ್‌ನಂತೆ, ಹಣಕಾಸು ಮತ್ತು ವಿತ್ತೀಯ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಪಾನ್ ಕಾರ್ಡ್, ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಮತ್ತು ತಿದ್ದುಪಡಿ ಮಾಡಲು ಸರ್ಕಾರಿ ವೆಬ್‌ಸೈಟ್‌ಗಳಿವೆ. ಆದರೆ, ಇನ್ನಷ್ಟು ಸುಲಭವಾಗಿ ನೀವು ವಾಟ್ಸ್​ಆ್ಯಪ್ ಮೂಲಕ ಡೌನ್‌ಲೋಡ್ ಮಾಡಬಹುದು.

ವಾಟ್ಸ್​ಆ್ಯಪ್
ವಾಟ್ಸ್​ಆ್ಯಪ್

Technology Tips: ಆಧಾರ್ ಕಾರ್ಡ್ ಭಾರತೀಯರ ಪ್ರಮುಖ ಗುರುತಿನ ಚೀಟಿಯಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಆಧಾರ್ ಕಾರ್ಡ್ ಹೊಂದಿರಬೇಕು. ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರೆಗೆ ಆಧಾರ್ ಕಾರ್ಡ್ ಕಡ್ಡಾಯ. ಇದರ ಜೊತೆಗೆ ಮತ್ತೊಂದು ಪ್ರಮುಖ ದಾಖಲೆ ಪಾನ್ ಕಾರ್ಡ್ ಆಗಿದೆ. ನೀವು ಪಾನ್ ಕಾರ್ಡ್ ಹೊಂದಿಲ್ಲದಿದ್ದರೆ, ಯಾವುದೇ ಬ್ಯಾಂಕಿಂಗ್ ಸಂಬಂಧಿತ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

ವೈಯಕ್ತಿಕ ಗುರುತಿಗೆ ಆಧಾರ್ ಕಾರ್ಡ್‌ನಂತೆ, ಹಣಕಾಸು ಮತ್ತು ವಿತ್ತೀಯ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಪಾನ್ ಕಾರ್ಡ್, ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಮತ್ತು ತಿದ್ದುಪಡಿ ಮಾಡಲು ಸರ್ಕಾರಿ ವೆಬ್‌ಸೈಟ್‌ಗಳಿವೆ. ಅವುಗಳ ಮೂಲಕ ನೀವು ಡೌನ್‌ಲೋಡ್ ಕೂಡ ಮಾಡಬಹುದು. ಆದರೆ, ಇನ್ನಷ್ಟು ಸುಲಭವಾಗಿ ನೀವು ವಾಟ್ಸ್​ಆ್ಯಪ್ ಮೂಲಕ ಆಧಾರ್ ಮತ್ತು ಪಾನ್ ಕಾರ್ಡ್ ಡೌನ್‌ಲೋಡ್ ಮಾಡಬಹುದು ಎಂಬುದು ನಿಮಗೆ ಗೊತ್ತೇ?

ವಾಟ್ಸ್​ಆ್ಯಪ್​ನಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

ವಾಟ್ಸ್​ಆ್ಯಪ್​ನಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಡೌನ್​ಲೋಡ್ ಮಾಡುವ ಮೊದಲು ನೀವು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ "My Gov" ವಾಟ್ಸ್​ಆ್ಯಪ್ ಸಹಾಯವಾಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು. ಅದರಂತೆ, ನಿಮ್ಮ ಮೊಬೈಲ್ ಫೋನ್‌ನಲ್ಲಿ 9013151515 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು.

ನಂತರ ಈ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್​ಆ್ಯಪ್​ನಲ್ಲಿ ಹಾಯ್ ಎಂದು ಸಂದೇಶ ಕಳುಹಿಸಿ. ನಿಮ್ಮ ಸಂದೇಶವನ್ನು ಸ್ವೀಕರಿಸಿದ ನಂತರ, ನಿಮಗೆ ಸ್ವಯಂಚಾಲಿತ ಮೆಸೇಜ್ ಕಳುಹಿಸಲಾಗುತ್ತದೆ. ಆ ಸಂದೇಶದ ಕೊನೆಯಲ್ಲಿ ನಿಮಗೆ ಎರಡು ಸೇವೆಗಳನ್ನು ನೀಡಲಾಗುತ್ತದೆ. ಅದರಲ್ಲಿ ನೀವು ಡಿಜಿಲಾಕರ್ ಸೇವೆಯನ್ನು ಕ್ಲಿಕ್ ಮಾಡಬೇಕು.

ಇದಾದ ನಂತರ ಮೊಬೈಲ್ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿ ಕೇಳಲಾಗುತ್ತದೆ. ಅವುಗಳನ್ನು ನೋಂದಾಯಿಸಿ ಮತ್ತು ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಆ ಒಟಿಪಿ ಅನ್ನು ನೋಂದಾಯಿಸಿದ ನಂತರ, ನಿಮ್ಮ ಡಿಜಿಲಾಕರ್‌ನಲ್ಲಿ ಸಂಗ್ರಹವಾಗಿರುವ ಆಧಾರ್ ಅಥವಾ ಪಾನ್ ಕಾರ್ಡ್ ಅನ್ನು ನೀವು ಡೌನ್‌ಲೋಡ್ ಮಾಡಬಹುದು.

ಕೆಲವು ಇತರ ವಿಶೇಷ ಲಕ್ಷಣಗಳು

ಈ ವಿಧಾನವನ್ನು ಅನುಸರಿಸುವ ಮೂಲಕ ನೀವು ಆಧಾರ್, ಪಾನ್ ಮಾತ್ರವಲ್ಲದೆ ಪ್ರಮಾಣಪತ್ರ, ಚಾಲಕರ ಪರವಾನಗಿ ಇತ್ಯಾದಿ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು. ಡಿಜಿಲಾಕರ್ ಸರ್ಕಾರದ ನಿಯಂತ್ರಣದಲ್ಲಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಆದ್ದರಿಂದ ಭದ್ರತಾ ವೈಶಿಷ್ಟ್ಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

Whats_app_banner