Sleeping Tips: ಹಾಸಿಗೆಯಲ್ಲಿ ಎಷ್ಟು ಹೊರಳಾಡಿದ್ರೂ ನಿದ್ರೆ ಬರ್ತಿಲ್ವ? ಹಾಗಾದ್ರೆ ಸುಖ ನಿದ್ರೆ ಬರಲು ಈ ಟಿಪ್ಸ್‌ ಫಾಲೋ ಮಾಡಿ-how to fall asleep fast here are some tips that may help so follow these tips to get good sleep smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Sleeping Tips: ಹಾಸಿಗೆಯಲ್ಲಿ ಎಷ್ಟು ಹೊರಳಾಡಿದ್ರೂ ನಿದ್ರೆ ಬರ್ತಿಲ್ವ? ಹಾಗಾದ್ರೆ ಸುಖ ನಿದ್ರೆ ಬರಲು ಈ ಟಿಪ್ಸ್‌ ಫಾಲೋ ಮಾಡಿ

Sleeping Tips: ಹಾಸಿಗೆಯಲ್ಲಿ ಎಷ್ಟು ಹೊರಳಾಡಿದ್ರೂ ನಿದ್ರೆ ಬರ್ತಿಲ್ವ? ಹಾಗಾದ್ರೆ ಸುಖ ನಿದ್ರೆ ಬರಲು ಈ ಟಿಪ್ಸ್‌ ಫಾಲೋ ಮಾಡಿ

ರಾತ್ರಿ ಹಾಸಿಗೆಯಲ್ಲಿ ಎಷ್ಟು ಹೊತ್ತು ಹೊರಳಾಡಿದ್ರು ನಿದ್ರೆ ಬರೋದಿಲ್ಲ ಎಂದು ಹೇಳುವವರೆಲ್ಲರೂ ಇದನ್ನೊಮ್ಮೆ ಓದಿ. ಮಲಗಲು ತೆರಳುವ ಮುನ್ನ ನಾವು ಇಲ್ಲಿ ನೀಡಿರುವ ಟಿಪ್ಸ್‌ ಫಾಲೋ ಮಾಡಿ. ಬಹಳ ಬೇಗ ನಿದ್ರೆ ಬರುತ್ತದೆ.

ನಿದ್ರೆ
ನಿದ್ರೆ

ನಿದ್ರಾಹೀನತೆಯು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುವುದಿಲ್ಲ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ . ಅವುಗಳನ್ನು ತಪ್ಪಿಸಲು ಕೆಲವು ಸಲಹೆಗಳನ್ನು ಅನುಸರಿಸಬೇಕು. ನಿದ್ದೆಯ ಕೊರತೆ ಹೀಗೆ ಮುಂದುವರಿದರೆ ಬಹಳ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಬೇಗ ನಿದ್ರೆ ಮಾಡಬೇಕು ಎಂದಾದರೆ ನಾವು ಈ ಕೆಳಗಡೆ ನೀಡಿದ ಕೆಲವು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಈ ರೀತಿ ಮಾಡಿದರೆ ನೀವು ಹಾಸಿಗೆಯ ಮೇಲೆ ಮಲಗಿದ ಸ್ವಲ್ಪ ಹೊತ್ತಿನಲ್ಲೇ ನಿದ್ರೆಗೆ ಜಾರಬಹುದಾಗಿದೆ. ಊಟ ಮಾಡಿದ ತಕ್ಷಣ ನಿದ್ರಿಸಲು ಪ್ರಯತ್ನಿಸಿದರೆ ಅದು ಆಗೋದಿಲ್ಲ.

ತಿಂದ ತಕ್ಷಣ ಮಲಗಬೇಡಿ

ಹಾಗಾಗಿ ನಿದ್ರೆ ಮಾಡುವ ಮುನ್ನ ಊಟ ಮಾಡಿ ಆ ನಂತರ ಸ್ವಲ್ಪ ಸಮಯ ಟೆರೆಸ್‌ ಮೇಲೆ ಅಥವ ನಿಮ್ಮ ಮನೆಯ ಮುಂಬಾಗದಲ್ಲಿ ವಾಕಿಂಗ್ ಮಾಡಿ. ಆ ನಂತರ ಮಲಗಲು ಪ್ರಯತ್ನಿಸಿ. ಹೀಗೆ ಮಾಡಿದರೆ ನಿದ್ರೆ ಬೇಗ ಬರುತ್ತದೆ. ಉತ್ತಮ ನಿದ್ರೆಗಾಗಿ, ನೀವು ಊಟದ ನಂತರ ಕನಿಷ್ಠ 2 ಗಂಟೆಗಳ ನಂತರ ಮಲಗಬೇಕು. ತಿಂದ ನಂತರ ನೇರವಾಗಿ ಮಲಗುವುದು ಗ್ಯಾಸ್ ಅಥವಾ ವಾಂತಿಗೆ ಕಾರಣವಾಗಬಹುದು. ಅದಕ್ಕಾಗಿಯೇ ನೀವು ತಿಂದ ತಕ್ಷಣ ಮಲಗಬಾರದು.

ಬಾದಾಮ್ ಮಿಲ್ಕ್‌

ರಾತ್ರಿ ಮಲಗಲು ತೊಂದರೆಯಾಗಿದ್ದರೆ ಮಲಗುವ ಮುನ್ನ ಬಾದಾಮ್ ಹಾಲು ಕುಡಿಯಿರಿ. ಏಕೆಂದರೆ ಇದು ಉತ್ತಮ ನಿದ್ರೆಯನ್ನು ಬೆಂಬಲಿಸುವ ಪೋಷಕಾಂಶಗಳನ್ನು ಒಳಗೊಂಡಿದೆ. ಆದ್ದರಿಂದ, ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ರಾತ್ರಿ ಊಟವಾದ ನಂತರ ಮಲಗುವ ಮೊದಲು ಬಾದಾಮಿ ಹಾಲನ್ನು ಸೇವನೆ ಮಾಡಿ.

ಚೆರ್ರಿ ಹಣ್ಣನ್ನು ತಿನ್ನಿ

ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಚೆರ್ರಿಗಳನ್ನು ಸೇರಿಸಿಕೊಳ್ಳಬಹುದು. ಏಕೆಂದರೆ ಚೆರ್ರಿಗಳಲ್ಲಿ ಮೆಲಟೋನಿನ್ ಎಂಬ ಅಂಶ ಇರುತ್ತದೆ. ಇದು ದೇಹವನ್ನು ವಿಶ್ರಾಂತ ಸ್ಥಿತಿಗೆ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ನಿದ್ರಿಸಲು ಸಹಾಯ ಮಾಡುತ್ತದೆ. ಮಲಗುವ ಸಮಯಕ್ಕೆ ಒಂದು ಗಂಟೆ ಮೊದಲು, ನೀವು ಚೆರ್ರಿ ರಸವನ್ನು ಕುಡಿಯಬಹುದು. ಈ ರೀತಿ ಮಾಡುವುದರಿಂದ ಉತ್ತಮ ನಿದ್ದೆ ಬರುತ್ತದೆ.

ಅರಶಿನದ ಹಾಲು

ನಿದ್ರೆ ಬರದಿದ್ದರೆ ಅರಿಶಿನದ ಹಾಲು ಕುಡಿಯಬಹುದು. ಈ ಹಾಲನ್ನು ಕುಡಿಯುವುದರಿಂದ ಆರೋಗ್ಯ ಸುಧಾರಿಸುವುದಲ್ಲದೆ ನಿದ್ದೆಯೂ ಬರುತ್ತದೆ. ಮಲಗುವ ಮುನ್ನ ಒಂದು ಲೋಟ ಅರಿಶಿನದ ಹಾಲನ್ನು ಕುಡಿಯುವುದರಿಂದ ಉತ್ತಮ ನಿದ್ದೆ ಬರುತ್ತದೆ. ಆದರೆ ಉಷ್ಣ ದೇಹ ಪ್ರಕೃತಿ ಇರುವವರು ಇದನ್ನು ಕುಡಿಯದೇ ಇರುವುದೇ ಉತ್ತಮ.

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರ ಇರಿ

ಮೊದಲು ನಿಮ್ಮ ಕೊಠಡಿಯಿಂದ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ದೂರ ಇರಿಸಿ. ಯಾಕೆಂದರೆ ನೀವು ಎಷ್ಟು ಸಮಯದವರೆಗೆ ಫೋನ್ ನೋಡುತ್ತೀರೋ ಆಗ ನಿಮಗೆ ನಿದ್ರೆ ಬಂದರೂ ಅದು ತಿಳಿಯುವುದಿಲ್ಲ. ದಿನವೂ ಇದೇ ರೂಢಿಯಾದರೆ ನೀವು ನಿದ್ರಾಹೀನತೆಯಿಂದ ಬಳಲಬೇಕಾಗುತ್ತದೆ.