ಕನ್ನಡ ಸುದ್ದಿ  /  Lifestyle  /  How To Get Rid Of Specs Marks

Home remedy for Specs Marks: ಕನ್ನಡಕದ ಕಲೆಗಳಿಂದ ನಿಮಗೂ ಸಮಸ್ಯೆ ಆಗಿದ್ಯಾ...ಹಾಗಿದ್ರೆ ಈ ಮನೆಮದ್ದುಗಳನ್ನು ಬಳಸಿ

ಕನ್ನಡಕ ಹಾಕುವುದರಿಂದ ಉಂಟಾಗುವ ಕಪ್ಪು ಕಲೆಗಳನ್ನು ನಿವಾರಿಸಲು ಜೇನುತುಪ್ಪ ಕೂಡಾ ಬಹಳ ಪರಿಣಾಮಕಾರಿಯಾಗಿದೆ. ಒಂದು ಬಟ್ಟಲಿನಲ್ಲಿ ಹಾಲು, ಜೇನುತುಪ್ಪ ಮತ್ತು ಓಟ್ಸ್ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪ್ರತಿದಿನ ಈ ಮಿಶ್ರಣದಿಂದ ಕಲೆಗಳನ್ನು ನಿಧಾನವಾಗಿ ಮಸಾಜ್ ಮಾಡಿ.

ಕನ್ನಡಕದ ಕಲೆ ಹೋಗಲಾಡಿಸಲು ಮನೆ ಮದ್ದು
ಕನ್ನಡಕದ ಕಲೆ ಹೋಗಲಾಡಿಸಲು ಮನೆ ಮದ್ದು (Pc: Freepik)

ತಲೆ ನೋವು, ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅನೇಕ ಜನರು ಕನ್ನಡಕ ಬಳಸುತ್ತಾರೆ. ಆದರೆ ಸದಾ ಕಾಲ ಕನ್ನಡಕ ಹಾಕುವುದರಿಂದ ಕನ್ನಡಕದ ಕಲೆಗಳು ಶಾಶ್ವತವಾಗಿ ಉಳಿದುಬಿಡುತ್ತವೆ. ಮುಂದಿನ ದಿನಗಳಲ್ಲಿ ನೀವು ಕನ್ನಡಕ ಹಾಕುವುದನ್ನು ಬಿಟ್ಟರೂ ಆ ಕಲೆಗಳು ಮಾತ್ರ ನೀವು ಕನ್ನಡಕ ಧರಿಸುತ್ತಿದ್ದಿರಿ ಎಂದು ಹೇಳಿಬಿಡುತ್ತವೆ. ಮನೆಯಲ್ಲೇ ದೊರೆಯುವ ಕೆಲವೊಂದು ಪದಾರ್ಥಗಳಿಂದ ಈ ಕಲೆಗಳನ್ನು ಹೋಗಲಾಡಿಸಬಹುದು.

ಕಣ್ಣುಗಳಿಗೆ ವಿಶ್ರಾಂತಿ ನೀಡಲು ಮತ್ತು ತಂಪಾಗಿಸಲು, ನಾವು ಕಣ್ಣುಗಳ ಮೇಲೆ ಸೌತೆಕಾಯಿ ತುಂಡುಗಳನ್ನು ಇಡುತ್ತೇವೆ. ಆದರೆ ಈ ಸೌತೆಕಾಯಿಂದ ಕನ್ನಡಕದ ಕಲೆಗಳನ್ನು ಕೂಡಾ ತೆಗೆಯಬಹುದು. ಪ್ರತಿದಿನ ನೀವು ಸುಮಾರು 5 ನಿಮಿಷಗಳ ಕಾಲ ಸೌತೆಕಾಯಿ ತುಂಡುಗಳಿಂದ ಕಲೆಗಳ ಮೇಲೆ ಮಸಾಜ್‌ ಮಾಡಿದರೆ ಕ್ರಮೇಣ ಈ ಕಲೆಗಳು ಕಡಿಮೆಯಾಗುತ್ತವೆ. ಅಥವಾ ಆಲೂಗಡ್ಡೆ ಹಾಗೂ ಟೊಮ್ಯಾಟೋ ರಸವನ್ನು ಮಿಕ್ಸ್‌ ಮಾಡಿ ಕೂಡಾ ಅದನ್ನು ಕಲೆಗಳಿಗೆ ಹಚ್ಚಬಹುದು.

ಬಹುತೇಕ ಎಲ್ಲರ ಮನೆಯ ತೋಟದಲ್ಲೂ ಲೋಳೆಸರ (ಅಲೋವೆರಾ) ಇದ್ದೇ ಇರುತ್ತದೆ. ಇದನ್ನು ಹಚ್ಚಿದರೆ ಕೂಡಾ ಕಲೆಗಳು ಮಾಯವಾಗುತ್ತವೆ. ಸ್ವಲ್ಪ ನಿಂಬೆ ರಸಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ. ಇವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ಕಲೆಗಳಿರುವ ಜಾಗಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಪ್ರತಿದಿನ ಹೀಗೆ ಮಾಡಿದರೆ ಆದಷ್ಟು ಬೇಗ ಕಪ್ಪು ಕಲೆಗಳು ಮಾಯವಾಗುತ್ತವೆ. ನಿಂಬೆರಸದ ಬದಲಿಗೆ ಸ್ವಲ್ಪ ರೋಸ್ ವಾಟರ್‌ಗೆ ವಿನೆಗರ್ ಬೆರೆಸಿ ಮತ್ತು ಈ ಮಿಶ್ರಣದಿಂದ ಕನ್ನಡಕದ ಗುರುತಿಗೆ ಹಚ್ಚಬಹುದು.

ಕನ್ನಡಕ ಹಾಕುವುದರಿಂದ ಉಂಟಾಗುವ ಕಪ್ಪು ಕಲೆಗಳನ್ನು ನಿವಾರಿಸಲು ಜೇನುತುಪ್ಪ ಕೂಡಾ ಬಹಳ ಪರಿಣಾಮಕಾರಿಯಾಗಿದೆ. ಒಂದು ಬಟ್ಟಲಿನಲ್ಲಿ ಹಾಲು, ಜೇನುತುಪ್ಪ ಮತ್ತು ಓಟ್ಸ್ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪ್ರತಿದಿನ ಈ ಮಿಶ್ರಣದಿಂದ ಕಲೆಗಳನ್ನು ನಿಧಾನವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಕಲೆಗಳು ಬೇಗ ಕಡಿಮೆಯಾಗುತ್ತದೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಬಾದಾಮಿ ಎಣ್ಣೆಯಿಂದ ಕಲೆಗಳನ್ನು ಮಸಾಜ್ ಮಾಡುತ್ತಿದ್ದರೆ ಶೀಘ್ರದಲ್ಲೇ ಸಮಸ್ಯೆ ದೂರಾಗುತ್ತದೆ.

ಇವೆಲ್ಲದರ ಜೊತೆಗೆ ನೀವು ಗಮನಿಸಬೇಕಾದ ಇನ್ನೂ ಕೆಲವು ಪ್ರಮುಖ ಅಂಶಗಳಿವೆ. ಆಂಟಿಬ್ಯಾಕ್ಟೀರಿಯಲ್ ಸೋಪಿನಿಂದ ಪ್ರತಿದಿನ ಕನ್ನಡಕವನ್ನು ತೊಳೆಯಿರಿ. ಇಲ್ಲದಿದ್ದರೆ, ಕನ್ನಡಕದಲ್ಲಿನ ಬ್ಯಾಕ್ಟೀರಿಯಾವು ಕಣ್ಣುಗಳನ್ನು ಕೆಂಪಾಗಿಸಬಹುದು ಹಾಗೂ ಕಣ್ಣುಗಳ ಸುತ್ತಲಿನ ಚರ್ಮವನ್ನು ಕಪ್ಪಾಗಿಸಬಹುದು. ಪ್ರತಿದಿನ ಕನಿಷ್ಠ 6-8 ಲೋಟ ನೀರು ಕುಡಿಯಿರಿ.ಕನ್ನಡಕವನ್ನು ಖರೀದಿಸುವಾಗ, ತೂಕ ಕಡಿಮೆ (ಲೈಟ್‌ ವೇಯ್ಟ್‌) ಇರುವ ಲೆನ್ಸ್ ಮತ್ತು ಫ್ರೇಮ್ ತೆಗೆದುಕೊಳ್ಳಿ. ಇದರಿಂದ ಕನ್ನಡಕಗಳು ಹಗುರ ಎನಿಸುತ್ತದೆ, ಮತ್ತು ಇವು ಮೂಗಿಗೆ ಅಂಟಿಕೊಳ್ಳುವುದಿಲ್ಲ. ಇದರಿಂದ ಕಲೆ ಉಂಟಾಗುವುದನ್ನು ತಡೆಯುತ್ತದೆ.

ವಿಭಾಗ