ಇಲಿಗಳ ಕಾಟಕ್ಕೆ ನೊಂದಿದ್ದರೆ ಇಲ್ಲಿದೆ ಪರಿಹಾರ: ಈ ಟಿಪ್ಸ್ ಅನುಸರಿಸಿದರೆ ಸಮಸ್ಯೆಗೆ ಸಿಗುತ್ತದೆ ಮುಕ್ತಿ
ಹಳ್ಳಿಗಳಲ್ಲಿ ಮಾತ್ರವಲ್ಲ ನಗರ ಪ್ರದೇಶಗಳಲ್ಲಿಯೂ ಇಲಿಗಳ ಕಾಟದಿಂದ ಜನರು ನೊಂದಿದ್ದಾರೆ. ಒಮ್ಮೆ ಮನೆಗೆ ಇಲಿ ಪ್ರವೇಶಿಸಿತೆಂದರೆ ಮತ್ತೆ ಅದನ್ನು ಹೊರಹಾಕುವುದು ತುಂಬಾ ಕಷ್ಟ ಎಂದು ಬಹುತೇಕರು ಹೇಳುವ ಮಾತು. ಹೀಗಾಗಿ ಇಲಿಗಳ ಕಾಟಕ್ಕೆ ಪರಿಹಾರ ಇಲ್ಲಿದೆ.ಇಲಿಗಳನ್ನು ಶಾಶ್ವತವಾಗಿ ತೊಡೆದುಹಾಕುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಇಲಿಗಳು ಮನೆಗೆ ನುಗ್ಗುವ ಸಮಸ್ಯೆಯೂ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ನಗರಭಾಗದಲ್ಲಿಯೂ ಈ ಸಮಸ್ಯೆ ಹೆಚ್ಚಿದೆ. ಹೊರಗಿನ ಚರಂಡಿಗಳಿಂದ ಹೊರಬರುವ ಇಲಿಗಳು ಮನೆಯೊಳಗೆ ನುಗ್ಗಿ ಭಯವನ್ನು ಹುಟ್ಟಿಸುತ್ತವೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಇಲಿಗಳು ಒಳಗೆ ನುಗ್ಗುತ್ತವೆ. ಅಷ್ಟೇ ಅಲ್ಲ ಮರಿಗಳಿಗೆ ಜನ್ಮ ನೀಡಿ, ಮನೆ ತುಂಬಾ ಇಲಿಗಳಾಗುತ್ತವೆ. ಇಲಿಗಳು ವಸ್ತುಗಳನ್ನು ಮತ್ತು ಬಟ್ಟೆಗಳನ್ನು ಕಡಿಯುತ್ತವೆ. ಅಲ್ಲದೆ, ಅಕ್ಕಿಮೂಟೆ ಸೇರಿದಂತೆ ಆಹಾರಗಳನ್ನು ಹಾಳುಮಾಡುತ್ತವೆ. ಇಲಿಗಳು ಹೆಚ್ಚಾಗಿ ರಾತ್ರಿ ವೇಳೆ ಮನೆಗೆ ಪ್ರವೇಶಿಸುತ್ತವೆ. ಇಲಿಗಳ ಕಾಟದಿಂದ ಬೇಸತ್ತಿದ್ದರೆ, ಈ ಮಾತ್ರೆಯನ್ನು ಮನೆಯ ಮೂಲೆ ಮತ್ತು ಬಾಗಿಲುಗಳಲ್ಲಿಡಬಹುದು. ಮಕ್ಕಳಿರುವ ಮನೆಯಾದರೆ ಬಹಳ ಜಾಗ್ರತೆ ವಹಿಸುವುದು ಮುಖ್ಯ. ಈ ರೀತಿ ಮಾಡುವುದರಿಂದ ಇಲಿಗಳ ಕಾಟ ತಪ್ಪುತ್ತದೆ. ಈ ಮಾತ್ರೆಗಳನ್ನು ತಯಾರಿಸುವುದು ತುಂಬಾನೇ ಸಿಂಪಲ್. ಈ ಬಗ್ಗೆ ಇಲ್ಲಿದೆ ಮಾಹಿತಿ.
ಇಲಿ ನಿವಾರಕ ಮಾತ್ರೆ
ಒಂದು ಬಟ್ಟಲಿನಲ್ಲಿ ಎರಡರಿಂದ ಮೂರು ಚಮಚ ಹಿಟ್ಟು ತೆಗೆದುಕೊಳ್ಳಿ. ಅದರಲ್ಲಿ ಎರಡರಿಂದ ಮೂರು ಚಮಚ ಬೆಲ್ಲ ಅಥವಾ ಸಕ್ಕರೆಯನ್ನು ಬೆರೆಸಿ. ಒಂದು ಚಮಚ ಉಪ್ಪು, ಒಂದು ಚಮಚ ಅಡುಗೆ ಸೋಡಾ ಸೇರಿಸಿ ನೀರು ಬೆರೆಸಿ ಹಿಟ್ಟನ್ನು ತಯಾರಿಸಿಕೊಳ್ಳಿ. ಹಳೆಯ ಸೆಲ್ ಅಥವಾ ಬ್ಯಾಟರಿಯನ್ನು ತೆಗೆದುಕೊಂಡು ಅದನ್ನು ಬಿರುಕುಗೊಳಿಸಿ. ಕಪ್ಪು ಪುಡಿಯನ್ನು ಕಾಗದದ ಮೇಲೆ ಇರಿಸಿ. ಈಗ ತಯಾರಿಸಿದ ಹಿಟ್ಟಿನ ಸಣ್ಣ ಉಂಡೆಯನ್ನು ತೆಗೆದುಕೊಂಡು ಅದರಲ್ಲಿ ಈ ಕಪ್ಪು ಪುಡಿಯನ್ನು ಸೇರಿಸಿ. ಮಾತ್ರೆಯಂತೆ ಮಾಡಿ. ಎಲ್ಲಾ ಮಾತ್ರೆಗಳನ್ನು ಒಂದೇ ರೀತಿಯಲ್ಲಿ ಮಾಡಿ. ಇಲಿಗಳು ಬರುವ ಜಾಗಗಳು, ಮೂಲೆಗಳಲ್ಲಿ ಈ ಮಾತ್ರೆಗಳನ್ನು ಇರಿಸಿ. ಇದನ್ನು ಇಲಿಗಳು ತಿಂದ ತಕ್ಷಣ ಮನೆಯಿಂದ ಓಡಿ ಹೋಗುತ್ತವೆ.
ಈ ಹಿಟ್ಟಿನ ಮಾತ್ರೆಗಳನ್ನು ಯಾವುದೇ ಪಾತ್ರೆಯಲ್ಲಿ ಮಾಡಬೇಡಿ. ಅವುಗಳನ್ನು ಮಕ್ಕಳಿಗೆ ಸಿಗದಂತೆ ದೂರವಿಡಿ. ಇವುಗಳನ್ನು ಆಹಾರ ಮತ್ತು ಪಾನೀಯಗಳಲ್ಲಿ ಬೆರೆಸದಂತೆ ಎಚ್ಚರಿಕೆ ವಹಿಸಿ.
ಪುದೀನಾ ಎಣ್ಣೆಯನ್ನೂ ಬಳಸಬಹುದು
ಇಲಿಗಳನ್ನು ಹಿಮ್ಮೆಟ್ಟಿಸಲು ಪುದೀನಾ ಎಣ್ಣೆಯನ್ನು ಬಳಸಬಹುದು. ಇಲಿಗಳು ಅದರಿಂದ ಬರುವ ಕಟುವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಸಣ್ಣ ಹತ್ತಿ ಉಂಡೆಗಳನ್ನು ಪುದೀನಾ ಎಣ್ಣೆಯಲ್ಲಿ ಅದ್ದಿ ಅಡುಗೆಮನೆಯಲ್ಲಿ ಇಡಬೇಕು. ಇಲಿಗಳು ಓಡಾಡುವ ಕಡೆಯೂ ಇಡಬೇಕು. ಅಥವಾ ಆ ಪುದೀನಾ ಎಣ್ಣೆಯನ್ನು ಸ್ಪ್ರೇ ಮಾಡುವುದರಿಂದಲೂ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಇಲಿಗಳು ಬೆಳ್ಳುಳ್ಳಿಯ ವಾಸನೆಯನ್ನು ಸಹ ಇಷ್ಟಪಡುವುದಿಲ್ಲ. ಅವುಗಳಿಂದ ಬರುವ ವಾಸನೆಯಿಂದ ದೂರ ಹೋಗುತ್ತವೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ಮ್ಯಾಶ್ ಮಾಡಿ ಮತ್ತು ಅದನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಗೆ ಹಾಕಿ. ಆ ನೀರನ್ನು ಮನೆಯ ಮೂಲೆಗಳಲ್ಲಿ ಚಿಮುಕಿಸಬೇಕು. ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿ ಎಸಳುಗಳನ್ನು ಅಗಿಯದಿದ್ದರೆ ಯಾವುದೇ ಪ್ರಯೋಜನವಿಲ್ಲ.
ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ಯಾವುದೇ ರೀತಿಯ ಹುಳು, ಕ್ರಿಮಿ, ಕೀಟಗಳು ಮನೆಗೆ ಬರುವುದಿಲ್ಲ. ಹೀಗಾಗಿ ಮೊದಲಿಗೆ ಮನೆಯಲ್ಲಿರುವ ಕಸವನ್ನು ತೊಡೆದುಹಾಕಿ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಇದನ್ನೂ ಓದಿ: ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ
ವಿಭಾಗ