Women Health Tips: ತೂಕ ಇಳಿಸುವುದು ಹೇಗೆಂದು ಚಿಂತೆ ಬೇಡ; ಮನೆಯಲ್ಲೇ ಈ ಸರಳ ಟಿಪ್ಸ್ ಪ್ರಯತ್ನಿಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Women Health Tips: ತೂಕ ಇಳಿಸುವುದು ಹೇಗೆಂದು ಚಿಂತೆ ಬೇಡ; ಮನೆಯಲ್ಲೇ ಈ ಸರಳ ಟಿಪ್ಸ್ ಪ್ರಯತ್ನಿಸಿ ನೋಡಿ

Women Health Tips: ತೂಕ ಇಳಿಸುವುದು ಹೇಗೆಂದು ಚಿಂತೆ ಬೇಡ; ಮನೆಯಲ್ಲೇ ಈ ಸರಳ ಟಿಪ್ಸ್ ಪ್ರಯತ್ನಿಸಿ ನೋಡಿ

ದಪ್ಪಗಾಗಿರುವವರಿಗೆ ತೂಕ ಇಳಿಸುವುದು ಮತ್ತು ತೆಳ್ಳಗಾಗಿರುವವರಿಗೆ ತೂಕ ಏರಿಸುವುದು ಹೇಗೆ ಎನ್ನುವುದೇ ಒಂದು ದೊಡ್ಡ ಸವಾಲು. ಅವರು ವಿವಿಧ ಕಸರತ್ತು ಮಾಡಿ, ತೂಕವನ್ನು ಸರಿದೂಗಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಮನೆಯಲ್ಲೇ ಕೆಲವೊಂದು ಸರಳೀಕೃತ ಆಹಾರ ಪದ್ಧತಿ ಮತ್ತು ವ್ಯಾಯಾಮ ಮಾಡಿದರೆ ಬೆಸ್ಟ್ ರಿಸಲ್ಟ್ ದೊರೆಯುತ್ತದೆ.

ಮನೆಯಲ್ಲೇ ಈ ಸರಳ ಟಿಪ್ಸ್ ಪ್ರಯತ್ನಿಸಿ ನೋಡಿ
ಮನೆಯಲ್ಲೇ ಈ ಸರಳ ಟಿಪ್ಸ್ ಪ್ರಯತ್ನಿಸಿ ನೋಡಿ (Pixabay)

ಕಡಿಮೆ ತೂಕ ಹೊಂದಿರುವುದು ಮತ್ತು ಅತಿಯಾದ ದೇಹ ತೂಕ ಹೊಂದಿರುವುದು ಎರಡೂ ಕೂಡ ದೇಹಕ್ಕೆ ಒಳ್ಳೆಯದಲ್ಲ. ಅದನ್ನು ಸರಿದೂಗಿಸುವುದು ಮುಖ್ಯ. ಅದರಲ್ಲೂ ಮಹಿಳೆಯರು ತಮ್ಮ ದೇಹದ ತೂಕದ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುತ್ತಾರೆ. ತೂಕ ಇಳಿಸಲು ನೀವು ಈವರೆಗೆ ಹಲವು ತಂತ್ರಗಳ ಮೊರೆ ಹೋಗಿರಬಹುದು. ಒಟ್ಟಿನಲ್ಲಿ ತೂಕ ಇಳಿಸಲು ಕಷ್ಟಪಡುವುದರಿಂದ ಹಿಡಿದು ಅದನ್ನು ಕಾಪಾಡಿಕೊಳ್ಳುವವರೆಗೆ, ತೂಕ ಇಳಿಸುವುದು ಎಂದರೆ ಸವಾಲಿನ ಕೆಲಸ. ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಇಂದು ಹಲವು ರೀತಿಯ ತೂಕ ಇಳಿಕೆಯ ಟಿಪ್ಸ್ ನೋಡುತ್ತೇವೆ. ಆದರೆ ಎಲ್ಲವನ್ನೂ ಹಾಗೆ ಪ್ರಯತ್ನಿಸುವುದು ಸರಿಯಲ್ಲ, ಅದರ ಬದಲು, ಸೂಕ್ತ ಫಲಿತಾಂಶ ನೀಡುವ, ಸರಳ ಆಹಾರ ಕ್ರಮ ಮತ್ತು ವ್ಯಾಯಾಮವನ್ನು ಮನೆಯಲ್ಲಿಯೇ ಮಾಡುವ ಮೂಲಕ, ತೂಕ ಇಳಿಸಿಕೊಳ್ಳಬಹುದು.

30 ಕೆಜಿ ತೂಕ ಇಳಿಸಿಕೊಳ್ಳಲು ನಾನೇನು ಮಾಡಿದೆ ಮತ್ತು ಹೇಗೆ ಅದನ್ನು ಅನುಷ್ಠಾನಕ್ಕೆ ತಂದೆ ಎಂದು ರಾಚೆಲ್ ಸಸೆರ್ಡೋಟಿ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದು ಸರಳ ಟಿಪ್ಸ್ ಹಂಚಿಕೊಂಡಿದ್ದಾರೆ. ತನ್ನ 20 ಮತ್ತು 30 ರ ವಯಸ್ಸಿನಲ್ಲಿ ತಾನು ಹೇಗೆ ಫ್ಯಾಡ್ ಡಯಟ್‌ಗಳು, ಆಹಾರ ಕ್ರಮದ ಮೇಲೆ ತೀವ್ರ ನಿರ್ಬಂಧಗಳು ಮತ್ತು ಅತಿಯಾದ ವ್ಯಾಯಾಮದಿಂದ ಬಳಲಿಕೆಯಲ್ಲಿ ಸಿಲುಕಿಕೊಂಡೆನೆಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೊದಲು ಮಾಡಿದ ಯತ್ನಗಳಲ್ಲಿ ಕ್ಷಣಿಕ ಫಲಿತಾಂಶಗಳನ್ನು ಕಂಡರೂ, 40ರ ವಯಸ್ಸಿಗೆ ಬಂದ ಬಳಿಕ ತನ್ನ ಜೀವನಶೈಲಿಯನ್ನು ಸರಿಪಡಿಸಿದ ನಂತರ, ಅವರು 30 ಕೆಜಿ ತೂಕ ಇಳಿಸಿಕೊಂಡರು. ಅದಕ್ಕಾಗಿ ರಾಚೆಲ್, ಆರೋಗ್ಯಕರ ಮತ್ತು ಅತ್ಯಂತ ಸಬಲೀಕೃತ, ಸ್ವಯಂಪರಿಹಾರಗಳನ್ನು ಕೈಗೊಂಡಿದ್ದು, ಅವರು ಹಂಚಿಕೊಂಡ ಕೆಲವು ಅಮೂಲ್ಯ ಪಾಠಗಳು ಇಲ್ಲಿವೆ.

ಆಹಾರ ಪದ್ಧತಿ

ಆಹಾರ ಪದ್ಧತಿಯಲ್ಲಿ ತುಂಬಾ ಏರಿಳಿತಗಳಿರುವಾಗ, ಕೆಲವು ಅಗತ್ಯಗಳನ್ನು ತೆರವುಗೊಳಿಸುವುದು ಮುಖ್ಯ. ರಾಚೆಲ್ ಆಹಾರ ಪದ್ಧತಿಯ ಬಗ್ಗೆ ಹೇಳಿಕೊಂಡಿರುವ ಸರಳ ಟಿಪ್ಸ್ ಇಲ್ಲಿದೆ. ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳ ಮಹತ್ವವನ್ನು ರಾಚೆಲ್ ವಿವರಿಸಿದ್ದು, ಹೇಗೆ ಅವುಗಳ ಮಿತಿಯಾದ ಸೇವನೆ ಮತ್ತು ಹೊಂದಾಣಿಕೆಯಿಂದ ಜೀವನಶೈಲಿಯಲ್ಲಿ ಸುಧಾರಿಸಿತು ಎಂದು ತಿಳಿಸಿದ್ದಾರೆ. ಇದಲ್ಲದೆ, ಅವರು ಆಹಾರ ಪದ್ಧತಿಯಲ್ಲಿ ಪ್ರೋಟೀನ್‌ನ ಮಹತ್ವವನ್ನು ಎತ್ತಿ ತೋರಿಸಿದರು, ಪ್ರೋಟೀನ್ ನಿಮ್ಮ ಉತ್ತಮ ಸ್ನೇಹಿತ, ಅದು ನಿಮ್ಮನ್ನು ದೀರ್ಘಕಾಲದವರೆಗೆ ಪೂರ್ಣವಾಗಿರಿಸುತ್ತದೆ, ಸ್ನಾಯು ಚೇತರಿಕೆಯನ್ನು ಬೆಂಬಲಿಸುತ್ತದೆ ಮತ್ತು ಪ್ರಗತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ.

ಇದಲ್ಲದೆ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳು, ನಾರಿನ ಅಂಶಗಳು ಮತ್ತು ಕೊಬ್ಬಿನೊಂದಿಗೆ ತನ್ನ ಊಟವನ್ನು ಹೇಗೆ ಸಮತೋಲನಗೊಳಿಸಬೇಕೆಂದು ಅವರು ತಿಳಿಸಿದ್ದಾರೆ. ಆಹಾರ ಪದ್ಧತಿಯಲ್ಲಿ, ಕ್ಯಾಲೋರಿ ಕೊರತೆ ಮತ್ತು ತೂಕ ನಷ್ಟವಾಗಲು ಅದು ಸಹಕಾರಿಯಾಗಿದೆ ಎಂದು ರಾಚೆಲ್ ವಿವರಿಸಿದ್ದಾರೆ.

ವ್ಯಾಯಾಮ

ತೂಕ ಇಳಿಸಲು, ಮನೆಯಲ್ಲೇ ಮಾಡಿಕೊಳ್ಳುವ ಕೆಲವೊಂದು ಸರಳ ವ್ಯಾಯಾಮ ಬೆಸ್ಟ್. ರಾಚೆಲ್ ಪ್ರಕಾರ, ವ್ಯಾಯಾಮವು ಫಿಟ್‌ನೆಸ್ ಪ್ರಯಾಣದ ಎರಡನೇ ಅಂಶವಾಗಿದೆ.ತೂಕ ಇಳಿಸುವ ಪ್ರಯಾಣದಲ್ಲಿರುವ ಪ್ರತಿಯೊಬ್ಬರೂ ರೂಪಾಂತರದ ಮೊದಲು ಮತ್ತು ನಂತರದ ರೂಪಾಂತರವನ್ನು ದೃಶ್ಯೀಕರಿಸುತ್ತಾರೆ, ಆದರೆ ರಾಚೆಲ್ ಪ್ರಗತಿ ಸಾಧಿಸುವಲ್ಲಿ ತಾಳ್ಮೆಯ ಮಹತ್ವವನ್ನು ಒತ್ತಿ ಹೇಳುತ್ತಾರೆ. ಅವರು ಹೇಳುವಂತೆ, ಮುಖ್ಯವಾಗಿ, ನಾನು ತಾಳ್ಮೆಯಿಂದಲೇ ನನ್ನ ಆಹಾರ ಕ್ರಮ ಮತ್ತು ವ್ಯಾಯಾಮದ ಶಿಸ್ತನ್ನು ಪಾಲಿಸಿಕೊಂಡೆ ಮತ್ತು ಆ ನಿರಂತರ ಪ್ರಕ್ರಿಯೆಯ ಮೂಲಕ ನನ್ನನ್ನು ಪ್ರೀತಿಸಲು ಕಲಿತುಕೊಂಡೆ. ಇದರ ಪರಿಣಾಮ, ನಾನು ಬಯಸಿದಂತೆ, ದೇಹ ತೂಕ ಇಳಿಕೆಯಾಗಿ, ಆರೋಗ್ಯಕರ ತೂಕ ನನ್ನದಾಯಿತು. ಮೊದಲಿಗಿಂತ ಹೆಚ್ಚು ಫಿಟ್, ಆರೋಗ್ಯವಾಗಿರಲು ಸಹಕಾರಿಯಾಯಿತು ಎಂದು ರಾಚೆಲ್ ಹೇಳಿದ್ದಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner