Cleaning Tips: ನಿಮ್ಮ ಮನೆಯ ಡೈನಿಂಗ್‌ ಟೇಬಲ್ ಕ್ಲೀನ್‌ ಇರಬೇಕು ಎಂದಾದರೆ ನೀವು ಈ ತಪ್ಪುಗಳನ್ನು ಮಾಡಬಾರದು-how to maintain cleanliness in the dining table here are some ways to keep your dining table clean smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Cleaning Tips: ನಿಮ್ಮ ಮನೆಯ ಡೈನಿಂಗ್‌ ಟೇಬಲ್ ಕ್ಲೀನ್‌ ಇರಬೇಕು ಎಂದಾದರೆ ನೀವು ಈ ತಪ್ಪುಗಳನ್ನು ಮಾಡಬಾರದು

Cleaning Tips: ನಿಮ್ಮ ಮನೆಯ ಡೈನಿಂಗ್‌ ಟೇಬಲ್ ಕ್ಲೀನ್‌ ಇರಬೇಕು ಎಂದಾದರೆ ನೀವು ಈ ತಪ್ಪುಗಳನ್ನು ಮಾಡಬಾರದು

Dining Table Cleaning: ನೀವು ಊಟ ಮಾಡುವ ಸ್ಥಳ ಸ್ವಚ್ಛವಾಗಿದ್ದಷ್ಟು ನಿಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿ ಇರುತ್ತದೆ. ಈ ಅಂಶವನ್ನು ನೀವು ಸದಾಕಾಲ ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಮನೆಯಲ್ಲಿ ನೀವು ಡೈನಿಂಗ್‌ ಟೇಬಲ್ ಬಳಸುತ್ತಿದ್ದರೆ ಈ ಸಂಗತಿ ಗಮನದಲ್ಲಿರಲಿ. ನಿಮ್ಮ ಮನೆಯ ಡೈನಿಂಗ್‌ ಟೇಬಲ್ ಕ್ಲೀನ್‌ ಇರಬೇಕು ಎಂದಾದರೆ ನೀವು ಈ ತಪ್ಪುಗಳನ್ನು ಮಾಡಬಾರದು.

ಡೈನಿಂಗ್ ಟೇಬಲ್
ಡೈನಿಂಗ್ ಟೇಬಲ್

ನೀವು ಊಟವನ್ನು ಡೈನಿಂಗ್ ಟೇಬಲ್ ಮೇಲೆ ಮಾಡುತ್ತಿದ್ದರೆ ಅದನ್ನು ತುಂಬಾ ಕ್ಲೀನಾಗಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ನಿಮಗೆ ಯಾವುದಾದರು ಕಾಯಿಲೆಗಳು ಬರಬಹುದು. ಡೈನಿಂಗ್ ಟೇಬಲ್ ಕೊಳೆಯಾಗಿದ್ದರೆ ಅಡುಗೆ ಮನೆಯ ಅಂದಕೂಡ ಹಾಳಾಗುತ್ತದೆ. ಹಾಗಾಗಿ ನೀವು ಕೆಲವು ಮುನ್ನೆಚ್ಚರಿಕೆಗಳನ್ನ ವಹಿಸಿ ಡೈನಿಂಗ್ ಟೇಬಲ್‌ಅನ್ನು ಅಂದವಾಗಿ ಇಟ್ಟುಕೊಳ್ಳಬೇಕು.

ತರಕಾರಿ ಕಟ್ ಮಾಡಬೇಡಿ

ಡೈನಿಂಗ್ ಟೇಬಲ್ ಮೇಲೆ ಕಟರ್ ಅಥವಾ ಚಾಪರ್ ಇಟ್ಟುಕೊಂಡು ತರಕಾರಿ ಕಟ್ ಮಾಡುವುದನ್ನು ಈಗಲೇ ನಿಲ್ಲಿಸಿ. ಇಲ್ಲವಾದರೆ ಅದರ ಕಲೆಗಳು ಡೈನಿಂಗ್ ಟೇಬಲ್ ಗೆ ಅಂಟಿಕೊಳ್ಳುತ್ತದೆ. ಉದಾಹರಣೆಗೆ: ಟೊಮೇಟೊ ರಸ ಲಿಂಬುರಸ ಈ ರೀತಿಯ ಸಿಟ್ರಿಕ್ ಆಮ್ಲಗಳು ಡೈನಿಂಗ್ ಟೇಬಲ್ ಮೇಲೆ ಬಿದ್ದರೆ ಕಲೆಯಾಗಿ ಯಾವಾಗಲೂ ಉಳಿದುಕೊಂಡು ಬಿಡುತ್ತವೆ.

ಬಿಸಿ ಪಾತ್ರೆ ಇಡಬೇಡಿ
ಆಹಾರವನ್ನು ಬೇಯಸಿದ ನಂತರ ಬಿಸಿ ಬಿಸಿಯಾದ ಪಾತ್ರೆಯನ್ನು ತಂದು ಡೈನಿಂಗ್ ಟೇಬಲ್ ಮೇಲೆ ಇಡುವುದು ತುಂಬಾ ತಪ್ಪು. ಈ ರೀತಿ ನೀವು ಡೈನಿಂಗ್ ಟೇಬಲ್ ಮೇಲೆ ಇಟ್ಟರೆ ಡೈನಿಂಗ್ ಟೇಬಲ್ ಸುಟ್ಟು ಹಾಳಾಗುತ್ತದೆ. ಅಲ್ಲಿ ಬಣ್ಣ ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ ಹಾಗಾಗಿ ಈ ರೀತಿ ಮಾಡಬಾರದು.

ಹೆಚ್ಚು ದಿನ ಇಡಬೇಡಿ

ಯಾವಾಗಲೂ ಒಂದೇ ಜಾಗದಲ್ಲಿ ಉಪ್ಪಿನಕಾಯಿ ಅಥವಾ ಉಪ್ಪನ್ನು ಇಟ್ಟರೆ ಆ ಜಾಗ ಹಾಳಾಗುತ್ತಾ ಬರುತ್ತದೆ. ಎಣ್ಣೆ ಅಂಶವನ್ನು ಡೈನಿಂಗ್ ಟೇಬಲ್ ಹೀರಿಕೊಳ್ಳುತ್ತದೆ. ಹಾಗಾಗಿ ಪ್ರತಿನಿತ್ಯ ಡೈನಿಂಗ್ ಟೇಬಲ್ ಮೇಲಿನ ವಸ್ತುಗಳನ್ನು ಕ್ಲೀನ್ ಮಾಡುವ ರೂಢಿ ಇಟ್ಟುಕೊಳ್ಳಿ. ಊಟ ಆದ ನಂತರ ಪ್ರತಿನಿತ್ಯ ಅದನ್ನು ವರೆಸಿ ಅಥವಾ ತೊಳೆಯಿರಿ. ವಾರಕ್ಕೊಮ್ಮೆಯಾದರೂ ನೀವು ಸೋಪ್ ಹಾಕಿ ಅಥವಾ ಸೋಪಿನ ಪುಡಿಯನ್ನು ಹಾಕಿ ಸ್ವಚ್ಛಗೊಳಿಸಬೇಕು.

ಹಣ್ಣಿನ ಬುಟ್ಟಿ

ನೀವು ನಿಮ್ಮ ಡೈನಿಂಗ್ ಟೇಬಲ್ ಮೇಲೆ ಹಣ್ಣಿನ ಬುಟ್ಟಿಯನ್ನು ಇಟ್ಟಿದ್ದರೆ ಅದರಲ್ಲಿನ ಹಣ್ಣುಗಳನ್ನು ಆಯ್ಕೆ ಮಾಡಿ ಯಾವುದು ಕೊಳೆಯುತ್ತಾ ಬಂದಿದೆಯೋ ಅದನ್ನು ಮೊದಲು ತೆಗೆದು ಹಾಕಿ. ಇಲ್ಲವಾದರೆ ಅದು ಕೊಳೆತು ಅದರಿಂದ ನೀರು ಹೊರಬರುತ್ತದೆ. ಆಗ ಡೈನಿಂಗ್ ಟೇಬಲ್ ದುರ್ವಾಸನೆಯಾಗುತ್ತದೆ. ಈ ರೀತಿ ಆದರೆ ಊಟಕ್ಕೆ ಕೂರುವ ಸ್ಥಳ ಯೋಗ್ಯವಾಗಿರುವುದಿಲ್ಲ, ಹಾಗಾಗಿ ಮೊದಲು ಹಣ್ಣುಗಳನ್ನು ಸರಿಯಾಗಿ ಇಡಿ.

ಬಣ್ಣದ ಕವರ್‌ ಬಳಸಿ

ಆದಷ್ಟು ಯಾವಾಗಲೂ ಸ್ವಚ್ಛತೆಯನ್ನು ಕಾಪಾಡಲು ಪ್ರಯತ್ನ ಮಾಡಿ. ಇಲ್ಲವಾದರೆ ಬೇಗ ಬೇಗ ನೀವು ಡೈನಿಂಗ್ ಟೇಬಲ್ ಬದಲಿಸಬೇಕಾಗಿ ಬರಬಹುದು. ಆ ಕಾರಣದಿಂದಾಗಿ ಈ ಎಲ್ಲಾ ಮುಂಜಾಗ್ರತೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿನಿತ್ಯ ಅಡುಗೆಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ. ನಿಮ್ಮ ಡೈನಿಂಗ್ ಟೇಬಲ್ ಡಿಸೈನ್ ಬದಲಿಸಬೇಕು ಅಥವಾ ಅದರ ಮೇಲಿನ ಶೀಟ್ ಬದಲಿಸಬೇಕು ಎಂದಾದರೆ ನೀವು ಅದಕ್ಕೆ ಬೇರೆ ಬೇರೆ ಬಣ್ಣದ ಕವರ್‌ಗಳನ್ನು ಬಳಸಬಹುದು ಈ ರೀತಿ ಮಾಡುವುದರಿಂದ ಕೂಡ ಡೈನಿಂಗ್ ಟೇಬಲ್ ತುಂಬಾ ಕ್ಲೀನಾಗಿರುತ್ತದೆ.

mysore-dasara_Entry_Point