Chapati Lachcha Paratha: ಚಪಾತಿಯನ್ನೇ ಗರಿಗರಿ ಪರೋಟ ಮಾಡಿದ್ರೆ, ಇನ್ನೆರಡು ಹೆಚ್ಚೇ ಹೊಟ್ಟೆಗಿಳಿಯುತ್ತೆ; ಸಿಂಪಲ್ ಟ್ರಿಕ್ಸ್ ಸರಳ ರೆಸಿಪಿ
ಇದು ಮೈದಾ ಹಿಟ್ಟು ಬಳಸಿ ಮಾಡುವ ಪರೋಟ ಅಲ್ಲ. ಬದಲಿಗೆ ಎಂದಿನಂತೆ ಚಪಾತಿ ಮಾಡಲು ಬಳಸುವ ಗೋದಿ ಹಿಟ್ಟಿನ ಚಪಾತಿ ಲಚ್ಚಾ ಪರೋಟ. ಒಮ್ಮೆ ಮಾಡಿ ನೋಡಿ.
ಚಪಾತಿ ತಿಂದು ಬೇಸತ್ತಿದ್ದೀರಾ, ಅಥವಾ ಚಪಾತಿ ಮಾಡುವ ಗೋಧಿ ಹಿಟ್ಟಿನಲ್ಲಿಯೇ ಹೊಸ ರೆಸಿಪಿ ಟ್ರೈ ಮಾಡಬೇಕು ಅಂದುಕೊಂಡಿದ್ದರೆ, ಇಲ್ಲೊಂದು ಸರಳ ಪಾಕವಿಧಾನವಿದೆ. ಮಾಡುವುದೂ ಈಸಿ, ರುಚಿಯೂ ನಿಮಗಿಷ್ಟವಾಗಬಹುದು. ಹಾಗಂತ ಇದು ಮೈದಾ ಹಿಟ್ಟು ಬಳಸಿ ಮಾಡುವ ಪರೋಟ ಅಲ್ಲ. ಬದಲಿಗೆ ಎಂದಿನಂತೆ ಚಪಾತಿ ಮಾಡಲು ಬಳಸುವ ಗೋದಿ ಹಿಟ್ಟಿನ ಚಪಾತಿ ಲಚ್ಚಾ ಪರೋಟ. ಹಾಗಾದರೆ, ಈ ರೆಸಿಪಿ ಮಾಡುವುದು ಹೇಗೆ, ಇದಕ್ಕೆ ಬೇಕಿರುವ ಸಾಮಗ್ರಿಗಳೇನು? ಇಲ್ಲಿದೆ ನೋಡಿ, ಮಾಡಿ ಮತ್ತು ಸವಿಯಿರಿ..
ಚಪಾತಿ ಲಚ್ಚಾ ಪರೋಟಕ್ಕೆ ಬೇಕಾಗುವ ಸಾಮಗ್ರಿಗಳು..
- ಜೀರಿಗೆ ಒಂದು ಟೀ ಚಮಚ
- ಆರೇಳು ಎಸಳು ಬೆಳ್ಳುಳ್ಳಿ
- ನಾಲ್ಕೈದು ಹಸಿ ಮೆಣಸಿನಕಾಯಿ
- ಎಣ್ಣೆ
- ಉಪ್ಪು
- ನಿಂಬೆ ರಸ
ಚಪಾತಿ ಲಚ್ಚಾ ಪರೋಟ ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ಎರಡು ಟೀ ಚಮಚ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಕಾಯಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈ ಮಿಶ್ರಣ ಫ್ರೈ ಆದ ಬಳಿಕ ಅದನ್ನು ಮಿಕ್ಸರ್‌ಗೆ ಅಥವಾ ಕಲ್ಲಿನ ಸಹಾಯದಿಂದ ಒರಟಾಗಿ ಅರೆದುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಹಾಕಿ ಜಜ್ಜಿಕೊಳ್ಳಿ.
ಇದೀಗ ಲಟ್ಟಿಸಿದ ಚಪಾತಿಗೆ ಎಣ್ಣೆ ಸವರಿ, ಚೂರು ಹಿಟ್ಟು ಹಾಕಿ ಒರಟಾದ ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಮಿಶ್ರಣ ಸುರಿದು, ಚಮಚದಿಂದ ಚಪಾತಿಗೆ ಅಂಟಿಸಿ.
ಬಳಿಕ ಪರೋಟ ರೀತಿ ಚಪಾತಿಯನ್ನು ಮಡಿಕೆ ಮಾಡುತ್ತ ಸುರುಳಿ ಆಕಾರದಲ್ಲಿ ಸುತ್ತಿ. ಮತ್ತೆ ಲಟ್ಟಿಸಿ ತವೆ ಮೇಲೆ ಚೆನ್ನಾಗಿ ಪ್ರೈ ಮಾಡಿ. ಎಣ್ಣೆಯನ್ನೂ ಚೆನ್ನಾಗಿ ಸವರಿ ಬ್ಯಾಟಿಂಗ್ ಆರಂಭಿಸಿ. ಈ ಚಪಾತಿಗೆ ಕೆಂಪು ಮೆಣಸಿನ ಖಾರದ ಚಟ್ನಿ ಅಥವಾ ಕೊಬ್ಬರಿ ಚಟ್ನಿಯನ್ನೂ ಬಳಸಿ ಸವಿಯಬಹುದು.