ನಿಮ್ಮ ಸಂಗಾತಿಯನ್ನು ಖುಷಿಪಡಿಸಲು ಮಾತು ಈ ರೀತಿ ಇರಲಿ; ಚಿಟಿಕೆ ಲವ್ ಇದ್ರೂ ಹಿಮಾಲಯದಷ್ಟು ಎತ್ತರಕ್ಕೆ ಬೆಳೆಯುತ್ತೆ ಕಣ್ರೀ!
ನೀವು ನಿಮ್ಮ ಸಂಗಾತಿಯೊಡನೆ ದಿನವೂ ಜಗಳ ಮಾಡುತ್ತಿದ್ದು, ಆ ರೀತಿ ಆಗುವುದು ನಿಮಗೂ ಇಷ್ಟ ಎಂದಾದರೆ ನೀವು ಮೊದಲು ನಿಮ್ಮಿಬ್ಬರ ನಡುವೆ ಆಗುತ್ತಿರುವ ಸಮಸ್ಯೆ ಏನು ಎಂಬುದನ್ನು ಕಂಡುಕೊಳ್ಳಬೇಕು. ನಂತರ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ನಿಮ್ಮ ಸಂಬಂಧದಲ್ಲಿ ಖುಷಿಯೇ ಇರುವುದಿಲ್ಲ.
ನೀವು ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡುತ್ತಿದ್ದೀರಿ, ಆದರೆ ದೀರ್ಘಾವಧಿಯ ಸಂಬಂಧವನ್ನು ಹೊಂದಬೇಕು ಎಂಬ ಆಲೋಚನೆ ನಿಮ್ಮದಾಗಿದ್ದರೆ ನೀವು ಅವರೊಂದಿಗೆ ಹೆಚ್ಚು ಸಂತೋಷದಿಂದ ಇರಬೇಕು. ನೀವಿಬ್ಬರು ಖುಷಿಯಾಗಿದ್ದಾಗ ಮಾತ್ರ ನಿಮಗೆ ಇನ್ನೂ ಹೆಚ್ಚಿನ ದಿನ ಇವರೊಂದಿಗೆ ಇರಬೇಕು ಎಂದೆನಿಸಲು ಸಾಧ್ಯ. ಅಥವಾ ನೀವು ಈಗಾಗಲೇ ಮದುವೆಯಾಗಿದ್ದು, ನಿಮ್ಮ ನಡುವೆ ಇನ್ನು ಅನ್ಯೂನ್ಯತೆ ಹೆಚ್ಚಾಗಬೇಕು ಎಂದರೆ ನೀವೇನು ಮಾಡಬೇಕು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
1. ನಿಮ್ಮ ಸಂಗಾತಿ ಮನೆಗೆ ಬಂದ ತಕ್ಷಣ ನೆಗೆಟಿವ್ ಮಾತನಾಡಬೇಡಿ
ನೀವು ಏನೋ ಒಂದು ಆಸೆ ಇಟ್ಟುಕೊಂಡು ಮನೆಯಲ್ಲಿ ಇರುತ್ತೀರ. ಆದರೆ ಅದು ಏನು ಎಂದು ನಿಮ್ಮ ಸಂಗಾತಿಗೆ ಅರ್ಥ ಆಗಿರುವುದಿಲ್ಲ. ನಿಮ್ಮ ಸಂಗಾತಿಯ ಆಲೋಚನೆಗಳೇ ಬೇರೆ. ನಿಮ್ಮ ಆಲೋಚನೆಗಳೇ ಬೇರೆ ಆದಾಗ ಕೆಲವೊಮ್ಮೆ ಕಷ್ಟವಾಗುತ್ತದೆ. ನಿಮಗೂ ತೊಂದರೆ ಆಗುತ್ತದೆ. ಅವರಿಗೂ ತೊಂದರೆ ಆಗುತ್ತದೆ. ನೀವು ಒಂದು ಹೂವನ್ನು ತರಲು ಅಥವಾ ತಿಂಡಿ ತರಲು ಹೇಳಿರುತ್ತೀರಿ. ಆದರೆ ಅವರು ತಮ್ಮ ಕೆಲಸದ ಒತ್ತಡದ ನಡುವೆ ಅದನ್ನು ಮರೆತಿರುತ್ತಾರೆ. ಆಗ ನೀವು ಅವರು ಬಂದ ತಕ್ಷಣ ಮೊದಲು ಆ ವಿಚಾರವನ್ನು ಕೇಳಿ ಅವರಿಗೂ, ನಿಮಗೂ ಬೇಸರ ಮಾಡಿಕೊಳ್ಳುವುದು ಬಿಟ್ಟು ಅವರು ಬಂದ ತಕ್ಷಣ ವಿಚಾರಿಸಿಕೊಳ್ಳಿ. ನಿಮಗೇನು ಬೇಕು? ಇಂದಿನ ದಿನ ಹೇಗಿತ್ತು ಎಂದು ಕೇಳಿ.
2. ನಿಮ್ಮ ಉದ್ದೇಶ ಮತ್ತು ಮಾತನಾಡುವ ರೀತಿ ಸರಿ ಇರಲಿ
ನಾವು ಮಾತಿನಲ್ಲಿ ಬಳಸುವ ಪದಗಳು ಭರವಸೆ ತುಂಬುವಂತಿರಲಿ. ಮಾತಿನ ಭರದಲ್ಲಿ ಹಿಂದೆ ಮುಂದಿಲ್ಲದೇ ಯಾವುದೋ ಪದಗಳ ಬಳಕೆ ಬೇಡ. ನೀವು ಏನನ್ನು ಹೇಳಲು ಹೊರಟಿದ್ದೀರಿ ಎಂಬುದು ಮಾತಿನಲ್ಲಿ ಸ್ಪಷ್ಟವಾಗಿರಲಿ. ಅದನ್ನು ಪ್ರೆಸೆಂಟ್ ಮಾಡುವ ಅಥವಾ ಅಭಿವ್ಯಕ್ತಿಗೊಳಿಸುವ ರೀತಿಯೂ ಸರಳ, ಅಷ್ಟೇ ಉತ್ತಮ ರೀತಿಯದ್ದಾಗಿರಲಿ. ಹಾಗಿದ್ದರೆ ಸಂಬಂಧಗಳಲ್ಲಿ ಎಂತಹ ಕಡು ಕಷ್ಟದ, ನೋವಿನ ವಿಚಾರ ವಿನಿಮಯವೂ ಸರಳ ಸಾಧ್ಯವಾಗಬಹುದು.
3. ಭಾವನಾತ್ಮಕವಾಗಿ ಇತರರನ್ನು ಆಲಿಸಿ, ಅವರನ್ನು ಅರ್ಥಮಾಡಿಕೊಳ್ಳಿ
ನೀವು ಹೇಗೆ ಬೆಳೆದಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ಭಾವನಾತ್ಮಕ ಅರಿವು, ಬುದ್ಧಿವಂತಿಕೆ ಮತ್ತು ಅಭಿವ್ಯಕ್ತಿ ಬದಲಾಗುತ್ತದೆ. ಭಾವನಾತ್ಮಕವಾಗಿ ಪ್ರಬುದ್ಧ ವ್ಯಕ್ತಿಗಳು ಇತರರನ್ನು ಆಲಿಸುವ ಗುಣ ಬೆಳೆಸಿಕೊಂಡಿರುತ್ತಾರೆ. ಮತ್ತು ಅವರಲ್ಲಿ ಅರ್ಥಮಾಡಿಕೊಳ್ಳುವ ಗುಣ ಹೆಚ್ಚಾಗಿರುತ್ತದೆ.
4. ನಿಮ್ಮ ಸಂಬಂಧದ ಬಂಧ ಸುಧಾರಿಸುವದೇ ಒಟ್ಟಾರೆ ಗುರಿ, ಅದಕ್ಕೆ ಆದ್ಯತೆ ನೀಡಿ
ಅತ್ಯುತ್ತಮ ಸಂಬಂಧವೇ ನಿಮ್ಮ ಒಟ್ಟಾರೆ ಗುರಿ ಎಂದು ನೀವು ನೀವು ಮೊದಲು ಭಾವಿಸಿ. ಪರಸ್ಪರ ಅರ್ಥಮಾಡಿಕೊಳ್ಳುವುದೇ ನಿಮ್ಮ ಆದ್ಯತಾ ವಿಷಯ ಆಗಿರಬೇಕು. ನಿಮಗೆ ಇತರರನ್ನು ಆಲಿಸುವ ಜಾಣತನ ಬರದಿದ್ದಲ್ಲಿ ಮುಕ್ತವಾಗಿ ಕಲಿಯಲು ಆರಂಭಿಸಿ. ನಿಮ್ಮ ಸಂಬಂಧಕ್ಕೆ ಆದ್ಯತೆ ನೀಡುವುದು ಎಂದರೆ ನಿಮ್ಮ ಸಂಗಾತಿಯ ಅಗತ್ಯತೆಗಳನ್ನು ನೆರವೇರಿಸುವುದು. ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುವುದು. ನಿಮ್ಮ ಸಂಗಾತಿಗೆ ಏನು ಇಷ್ಟವೋ ಅದನ್ನು ಮಾಡುವುದು. ಇದರರ್ಥ ನಿಮ್ಮ ಕುಟುಂಬ, ನಿಮ್ಮ ಕೆಲಸ, ನಿಮ್ಮ ಹವ್ಯಾಸಗಳ ವಿಷಯದಲ್ಲಿ ನಿಮ್ಮ ಸಂಗಾತಿಯೇ ಮೊದಲ ಆದ್ಯತೆಯಾಗಿರುತ್ತಾರೆ. ಆದರೆ ಅಪರೂಪದಲ್ಲಿ ಅಪರೂಪ ಎಂಬಂತೆ ಸಂಗಾತಿಯನ್ನು ಆದ್ಯತೆಯನ್ನಾಗಿಸದ ಪರಿಸ್ಥಿತಿಯೂ ಬರಬಹುದು. ಚಿಂತೆ ಬೇಡ! ಆ ಪರಿಸ್ಥಿತಿಯ ಕುರಿತು ನಿಮ್ಮ ಸಂಗಾತಿಗೆ ಚೆನ್ನಾಗಿ ಅರ್ಥಮಾಡಿಸಿ ಸಾಕು! ಯಾವ ಸಮಸ್ಯೆಯೂ ಇರದು!
ವಿಭಾಗ