Chicken Popcorn Recipe: ಮನೆಯಲ್ಲೇ ಮಾಡಿ ಕೆಎಫ್‌ಸಿ ಸ್ಟೈಲ್‌ ಚಿಕನ್‌ ಪಾಪ್‌ಕಾರ್ನ್‌...ಇಲ್ಲಿದೆ ಸುಲಭ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  Chicken Popcorn Recipe: ಮನೆಯಲ್ಲೇ ಮಾಡಿ ಕೆಎಫ್‌ಸಿ ಸ್ಟೈಲ್‌ ಚಿಕನ್‌ ಪಾಪ್‌ಕಾರ್ನ್‌...ಇಲ್ಲಿದೆ ಸುಲಭ ರೆಸಿಪಿ

Chicken Popcorn Recipe: ಮನೆಯಲ್ಲೇ ಮಾಡಿ ಕೆಎಫ್‌ಸಿ ಸ್ಟೈಲ್‌ ಚಿಕನ್‌ ಪಾಪ್‌ಕಾರ್ನ್‌...ಇಲ್ಲಿದೆ ಸುಲಭ ರೆಸಿಪಿ

ಕೆಎಫ್‌ಸಿ ಚಿಕನ್‌ನಂತೆ ನೀವು ಮನೆಯಲ್ಲಿ ಕೂಡಾ ತಯಾರಿಸಬಹುದು. ಕೆಎಫ್‌ಸಿ ಶೈಲಿಯ ಚಿಕನ್‌ ಪಾಪ್‌ಕಾರ್ನ್‌ ತಯಾರಿಸಿ ನೀವು ನಿಮ್ಮವರನ್ನು ಇಂಪ್ರೆಸ್‌ ಮಾಡಬಹುದು. ಸರಿಯಾದ ಸಾಮಗ್ರಿಗಳಿದ್ದರೆ ಅದೇನು ಕಷ್ಟದ ಕೆಲಸವಲ್ಲ.

ಕೆಎಫ್‌ಸಿ ಸ್ಟೈಲ್‌ ಚಿಕನ್‌ ಪಾಪ್‌ಕಾರ್ನ್‌ ರೆಸಿಪಿ
ಕೆಎಫ್‌ಸಿ ಸ್ಟೈಲ್‌ ಚಿಕನ್‌ ಪಾಪ್‌ಕಾರ್ನ್‌ ರೆಸಿಪಿ (PC: Freepik)

ಬಹುತೇಕ ಎಲ್ಲಾ ನಾನ್‌ ವೆಜಿಟೆರಿಯನ್‌ಗಳು ಕೆಎಫ್‌ಸಿ ಚಿಕನ್‌ ಟೇಸ್ಟ್‌ ಮಾಡಿರುತ್ತಾರೆ. ಹೊರಗಡೆ ಕ್ರಂಚಿ, ಒಳಗಡೆ ಸ್ಪೂತ್‌ ಆದ ಚಿಕನ್‌ ತಿನ್ನುತ್ತಿದ್ದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಸ್ಮೋಕಿ ಚಿಕನ್‌, ಚಿಕನ್‌ ಪಾಪ್‌ಕಾರ್ನ್‌, ಚಿಕನ್‌ ವಿಂಗ್ಸ್‌ ಹೀಗೆ ಅಲ್ಲಿ ದೊರೆಯುವ ವೆರೈಟಿ ಚಿಕನ್‌ಗಳು ಚಿಕನ್‌ ಪ್ರಿಯರಿಗೆ ಬಹಳ ಅಚ್ಚುಮೆಚ್ಚು.

ಕೆಎಫ್‌ಸಿ ಚಿಕನ್‌ನಂತೆ ನೀವು ಮನೆಯಲ್ಲಿ ಕೂಡಾ ತಯಾರಿಸಬಹುದು. ಕೆಎಫ್‌ಸಿ ಶೈಲಿಯ ಚಿಕನ್‌ ಪಾಪ್‌ಕಾರ್ನ್‌ ತಯಾರಿಸಿ ನೀವು ನಿಮ್ಮವರನ್ನು ಇಂಪ್ರೆಸ್‌ ಮಾಡಬಹುದು. ಸರಿಯಾದ ಸಾಮಗ್ರಿಗಳಿದ್ದರೆ ಅದೇನು ಕಷ್ಟದ ಕೆಲಸವಲ್ಲ. ಚಿಕನ್‌ ಪಾಪ್‌ಕಾರ್ಸ್‌ ತಯಾರಿಸಲು ಬೇಕಾದ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.

ಬೇಕಾಗುವ ಸಾಮಗ್ರಿಗಳು

ಚಿಕನ್‌ ಬ್ರೆಸ್ಟ್‌ 250 ಗ್ರಾಂ

ಬೆಳ್ಳುಳ್ಳಿ ಪುಡಿ- 2 ಸ್ಪೂನ್‌

ನಿಂಬೆರಸ - 1 ಟೇಬಲ್‌ ಸ್ಪೂನ್‌

ಆರಿಗಾನೋ - 1 ಟೀ ಸ್ಪೂನ್‌

ರೋಸ್ಮೆರಿ - 1 ಟೀ ಸ್ಪೂನ್‌

ಮೈದಾಹಿಟ್ಟು - 1/2 ಕಪ್‌

ಅಚ್ಚ ಖಾರದ ಪುಡಿ- 1 ಟೀ ಸ್ಪೂನ್‌

ಕಾರ್ನ್‌ಫ್ಲೋರ್‌ - 1/4 ಕಪ್‌

ಮೊಟ್ಟೆ - 1

ಹಾಲು - ಟೇಬಲ್‌ ಸ್ಪೂನ್‌

ಎಣ್ಣೆ - ಕರಿಯಲು

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಚಿಕನ್ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಒಮ್ಮೆ ತೊಳೆದು ನೀರು ಸೋರಲು ಬಿಡಿ.

ಒಂದು ಬೌಲ್‌ಗೆ ಚಿಕನ್‌, ಉಪ್ಪು, ರೆಡ್‌ ಚಿಲ್ಲಿ ಪೌಡರ್‌, ಬೆಳ್ಳುಳ್ಳಿ ಪುಡಿ, ನಿಂಬೆರಸ, ಹಾಲು ಸೇರಿಸಿ ಮಿಕ್ಸ್‌ ಮಾಡಿ

ಒಂದು ಕ್ಲಿಂಗ್‌ ರಾಪ್‌ ಅಥವಾ ಪ್ಲೇಟ್‌ ಮುಚ್ಚಿ 1 ಗಂಟೆ ಕಾಲ ಮ್ಯಾರಿನೇಟ್‌ ಆಗಲು ಬಿಡಿ

ಒಂದು ಬೌಲ್‌ಗೆ ಮೈದಾಹಿಟ್ಟು, ಕಾರ್ನ್‌ಫ್ಲೋರ್‌, ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ.

ಮ್ಯಾರಿನೇಟ್‌ ಮಾಡಿದ್ದ ಚಿಕನ್‌ ಒಮ್ಮೆ ಸ್ಪೂನ್‌ ಸಹಾಯದಿಂದ ಮಿಕ್ಸ್‌ ಮಾಡಿ

ಬೇರೊಂದು ಬೌಲ್‌ಗೆ ಮೊಟ್ಟೆಗಳನ್ನು ಒಡೆದು ಬೀಟ್‌ ಮಾಡಿಕೊಳ್ಳಿ

ಚಿಕನ್‌ ಮಿಶ್ರಣವನ್ನು ಒಂದೊಂದಾಗಿ ಮೈದಾಹಿಟ್ಟಿನ ಮಿಶ್ರಣದೊಳಗೆ ಸೇರಿಸಿ ಚೆನ್ನಾಗಿ ಕೋಟ್‌ ಮಾಡಿ

ಇದನ್ನು ಮೊಟ್ಟೆ ಮಿಶ್ರಣಕ್ಕೆ ಅದ್ದಿ ಮತ್ತೆ ಅದನ್ನು ಮೈದಾಹಿಟ್ಟಿನಿಂದ ಕೋಟ್‌ ಮಾಡಿ

ಇದೇ ರೀತಿ 2-3 ಬಾರಿ ರಿಪೀಟ್‌ ಮಾಡಿ ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಕರಿಯಿರಿ.

ಟೊಮ್ಯಾಟೋ ಸಾಸ್‌ ಅಥವಾ ನಿಮಗಿಷ್ಟದ ಡಿಪ್‌ ಜೊತೆಗೆ ಕ್ರಂಚಿ ಚಿಕನ್‌ ಪಾಪ್‌ಕಾರ್ನ್‌ ಎಂಜಾಯ್‌ ಮಾಡಿ

ಗಮನಿಸಿ: ಬೆಳ್ಳುಳ್ಳಿ ಪುಡಿ ಇಲ್ಲದಿದ್ದರೆ ಬೆಳ್ಳುಳ್ಳಿ ಪೇಸ್ಟ್‌ ಬಳಸಬಹುದು.

ರೋಸ್ಮೆರಿ, ಆರಿಗಾನೋ ಸೂಪರ್‌ ಮಾರ್ಕೆಟ್‌ಗಳಲ್ಲಿ ದೊರೆಯುತ್ತದೆ, ಒಂದು ವೇಳೆ ನಿಮಗೆ ಲಭ್ಯವಿಲ್ಲದಿದ್ದರೂ ಅದರನ್ನು ಬಳಸದೆ ಕೂಡಾ ಚಿಕನ್‌ ಪಾಪ್‌ಕಾರ್ನ್‌ ತಯಾರಿಸಬಹುದು.

Whats_app_banner