Pongal Recipe: ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಗಂಜಿ ಬದಲು ಖಾರ ಪೊಂಗಲ್ ನೀಡಿ, ಏನೂ ಸೇರದವರೂ ಇದನ್ನು ತಿಂತಾರೆ-how to make khara pongal at home cooking tips easy recipe make this those recovering from illness smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Pongal Recipe: ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಗಂಜಿ ಬದಲು ಖಾರ ಪೊಂಗಲ್ ನೀಡಿ, ಏನೂ ಸೇರದವರೂ ಇದನ್ನು ತಿಂತಾರೆ

Pongal Recipe: ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಗಂಜಿ ಬದಲು ಖಾರ ಪೊಂಗಲ್ ನೀಡಿ, ಏನೂ ಸೇರದವರೂ ಇದನ್ನು ತಿಂತಾರೆ

Khara Pongal: ಅನಾರೋಗ್ಯದಿಂದ ಬಾಯಿ ರುಚಿ ಕೆಟ್ಟು ಏನೂ ಸೇರ್ತಾ ಇಲ್ವ? ಅಥವಾ ಏನು ತಿಂದರೂ ಜೀರ್ಣೀಸಿಕೊಳ್ಳಲು ಆಗ್ತಾ ಇಲ್ವ? ಈ ಸಮಸ್ಯೆ ನಿಮಗಿದ್ದರೆ ಖಾರ ಪೊಂಗಲ್ ಮಾಡಿಸಿಕೊಂಡು ತಿನ್ನಿ ಇದು ನಿಮಗೆ ಸೇರಬಹುದು. ಆದರೆ ಕಡಿಮೆ ಹಸಿಮೆಣಸು ಬಳಸಿ. ಇದನ್ನು ಮಾಡುವ ವಿಧಾನವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಇದಕ್ಕೆ ಬೇಕಾಗುವ ಪದಾರ್ಥಗಳ ವಿವರವೂ ಇದೆ.

ಖಾರ ಪೊಂಗಲ್
ಖಾರ ಪೊಂಗಲ್

ಅಕ್ಕಿಯಲ್ಲಿ ಮಾಡುವ ಖಾರ ಪೊಂಗಲ್‌ ಸಖತ್ ಟೇಸ್ಟಿ ಆಗಿರುತ್ತದೆ. ಹೆಚ್ಚಾಗಿ ಇದನ್ನು ತಮಿಳುನಾಡಿನಲ್ಲಿ ಮಾಡುತ್ತಾರೆ. ಅಲ್ಲಿ ಸ್ವೀಟ್ ಮತ್ತು ಖಾರಾ ಪೊಂಗಲ್ ಎರಡನ್ನೂ ಮಾಡಲಾಗುತ್ತದೆ. ನ್ನು ನೀವು ಬೆಳಗಿನ ತಿಂಡಿಗಾಗಿ ಏನಾದರೂ ಒಂದು ಬೇರೆ ರೀತಿಯ ತಿಂಡಿ ತಿನ್ನಬೇಕು ಎಂದುಕೊಂಡಿದ್ದರೆ ಖಾರಾ ಪೊಂಗಲ್ ಮಾಡಿಕೊಳ್ಳಿ. ಇದು ತುಂಬಾ ಟೇಸ್ಟಿಯಾಗಿರುತ್ತದೆ. ಇದನ್ನು ಮಾಡುವ ವಿಧಾನವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಇದಕ್ಕೆ ಬೇಕಾಗುವ ಪದಾರ್ಥಗಳನ್ನು ನಾವಿಲ್ಲಿ ನೀಡಿದ್ದೇವೆ.

ಬೇಕಾಗುವ ಪದಾರ್ಥಗಳು:

- 1 ಕಪ್ ಅಕ್ಕಿ

- 1/2 ಕಪ್ ಹೆಸರುಬೇಳೆ

- 4 ಕಪ್ ನೀರು

- 1 ಚಮಚ ತುಪ್ಪ ಅಥವಾ ಎಣ್ಣೆ

- 1 ಟೀಚಮಚ ಜೀರಿಗೆ

- 1 ಟೀಚಮಚ ಕಪ್ಪು ಮೆಣಸು

- 1/2 ಟೀಸ್ಪೂನ್ ಅರಿಶಿನ ಪುಡಿ

- ರುಚಿಗೆ ಉಪ್ಪು

- ಗೋಡಂಬಿ, ಬಾದಾಮಿ, ಅಥವಾ ತೆಂಗಿನಕಾಯಿ ಚೂರುಗಳು

- ಬಟಾಣಿ

-ಹಸಿಮೆಣಸು

ಮಾಡುವ ವಿಧಾನ:

1. ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ತೊಳೆಯಿರಿ. 30 ನಿಮಿಷಗಳ ಕಾಲ ನೆನೆಸಿ.

2. ದೊಡ್ಡ ಪಾತ್ರೆಯಲ್ಲಿ, ತುಪ್ಪ ಅಥವಾ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಜೀರಿಗೆ ಮತ್ತು ಕರಿಮೆಣಸು ಸೇರಿಸಿ. ಅವುಗಳನ್ನು ಕೆಲವು ಸೆಕೆಂಡುಗಳ ಕಾಲ ಹಾಗೇ ಬಿಡಿ. ಅವುಗಳು ಚೆನ್ನಾಗಿ ಸಿಡಿಯಬೇಕು.

3. ನೆನೆಸಿದ ಅಕ್ಕಿ ಮತ್ತು ದಾಲ್ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಬೆರೆಸಿ.

4. ನೀರು, ಅರಿಶಿನ ಪುಡಿ, ಮತ್ತು ಉಪ್ಪು ಸೇರಿಸಿ.

5. ಶಾಖವನ್ನು ಕಡಿಮೆ ಮಾಡಿ, ಮುಚ್ಚಿ ಮತ್ತು 20-25 ನಿಮಿಷಗಳ ಕಾಲ ಬೇಯಿಸಿ ಮಿಶ್ರಣವು ದಪ್ಪವಾಗುವವರೆಗೆ ಅವುಗಳೆಲ್ಲವನ್ನು ಚೆನ್ನಾಗಿ ಕುದಿಸಿ.

6. ಬಿಸಿಯಾಗಿ ಬಡಿಸಿ. ಬಡಿಸುವ ಮುನ್ನ ಕರಿಬೇವಿನ ಎಲೆಗಳು ಹಾಗೂ ಗೋಡಂಬಿಯನ್ನು ತುಪ್ಪದಲ್ಲಿ ಕರಿದು ಒಗ್ಗರಣೆ ಮಾಡಿ. ಕಾಯಿತುರಿಯನ್ನು ಮೇಲಿನಿಂದ ಉದುರಿಸಿ.

- ಹೆಚ್ಚುವರಿ ಪರಿಮಳಕ್ಕಾಗಿ ದಾಲ್ಚಿನ್ನಿ, ಏಲಕ್ಕಿ ಅಥವಾ ಲವಂಗಗಳಂತಹ ಇತರ ಮಸಾಲೆಗಳನ್ನು ಸೇರಿಸಬಹುದು. ನೋಡಿಕೊಂಡು ನೀರಿನ ಹದವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಿ. ಇದು ಆದಷ್ಟು ತೆಳ್ಳಗಿದ್ದರೆ ಒಳ್ಳೆಯದು. ತಿನ್ನಲು ಚೆನ್ನಾಗಿರುತ್ತದೆ. ಯಾರಿಗೆ ಅಗಿಯಲು ಸಮಸ್ಯೆ ಆಗುತ್ತದೆಯೋ ಅಂತವರಿಗೆ ಇದನ್ನು ನೀಡಿ. ಪೊಂಗಲ್ ಒಂದು ಪೌಷ್ಟಿಕಾಂಶ ಭರಿತ ತಿಂಡಿ ಆಗಿರುತ್ತದೆ. ಪದಾರ್ಥಗಳು ಮತ್ತು ಅಡುಗೆ ಪ್ರಕ್ರಿಯೆಯಿಂದಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪೊಂಗಲ್ ತಿನ್ನುವುದು ಜೀರ್ಣದ ಸಮಸ್ಯೆ ಇದ್ದವರಿಗೆ ಒಳ್ಳೆಯದು.

ಅನಾರೋಗ್ಯದಿಂದ ಚೇತರಿಸಿಕೊಳ್ಳುವವರಿಗೆ ಉತ್ತಮ ಆಯ್ಕೆ ಎಂದರೆ ಅದು ಖಾರಾ ಪೊಂಗಲ್. ನೀವೂ ಕೂಡ ಗಂಜಿ ಕುಡಿಯಲು ಸೇರುವುದಿಲ್ಲ ಎಂದಾದರೆ ನಿಮ್ಮ ಮನೆಯವರ ಹತ್ತಿರ ಹೇಳಳಿಕೊಂಡು ಖಾರಾ ಪೊಂಗಲ್ ಮಾಡಿಸಿಕೊಂಡು ತಿನ್ನಿ.

mysore-dasara_Entry_Point