ಮನೆಗೆ ತುಂಬಾ ಜನ ಬರ್ತಿದ್ದಾರೆ ಎಂದರೆ ತಲೆಬಿಸಿ ಬೇಡ; ಈ ರೀತಿ ಮಸಾಲಾ ರೈಸ್ ಮಾಡಿ, ಯಾವ ಬಿರಿಯಾನಿಗೂ ಕಮ್ಮಿ ಇಲ್ಲ
ನೀವು ನಿಮ್ಮ ಮನೆಗೆ ನೆಂಟರು ಬಂದಾಗ ಮಾಡಬಹುದಾದ ಒಂದು ಮಸಾಲಾ ರೈಸ್ ರೆಸಿಪಿಯನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ. ಇದೇ ರೀತಿ ನೀವೂ ನಿಮ್ಮ ಮನೆಯಲ್ಲಿ ಮಾಡಿ ನೋಡಿ.
ಮನೆಗೆ ಯಾರೋ ತುಂಬಾ ಜನ ಒಂದೇ ಸಾರಿ ಬರ್ತಾ ಇದ್ದಾರೆ ಏನು ಅಡುಗೆ ಮಾಡೋದು ಎಂದು ನೀವು ತಲೆಕಡೆಸಿಕೊಂಡಿದ್ದರೆ ಇಲ್ಲಿ ನಾವು ನೀಡಿದ ರೆಸಿಪಿ ಟ್ರೈ ಮಾಡಿ. ಈಗ ಎಲ್ಲರೂ ಸಾಮಾನ್ಯವಾಗಿ ಅನ್ನ ಸಾರಿಗಿಂತ ಹೆಚ್ಚಾಗಿ ರೈಸ್ ಐಟಮ್‌ಗಳನ್ನು ಇಷ್ಟಪಡುತ್ತಾರೆ. ಆ ಕಾರಣಕ್ಕೆ ನೀವೂ ಕೂಡ ರೈಸ್ ಐಟಮ್ ಮಾಡಿ ಬಡಿಸಬಹುದು. ನಿಮಗೂ ಒಂದಷ್ಟು ಪದಾರ್ಥಗಳನ್ನು ಮಾಡುವುದು ತಪ್ಪುತ್ತದೆ. ಬಂದವರೂ ಇಷ್ಟಪಟ್ಟು ತಿನ್ನುತ್ತಾರೆ. ಹೀಗಿರುವಾಗ ನೀವು ಮಾಡಬೇಕಾದ ಈ ಮಸಾಲಾ ರೈಸ್‌ಗೆ ಏನೇನು ಬೇಕು ಎಂದು ನೋಡೋಣ ಬನ್ನಿ.
ಮಾಡಲು ಬೇಕಾಗುವ ಸಾಮಗ್ರಿಗಳು
ಮೂರು ಕಪ್ ಬಾಸ್ಮತಿ ರೈಸ್
ಖಾರದ ಪುಡಿ
ಮಸಾಲೆಗಳು
ಗರಂ ಮಸಾಲಾ
ಟೊಮೆಟೊ
ಈರುಳ್ಳಿ
ಬೆಳ್ಳುಳ್ಳಿ
ಕೊತ್ತಂಬರಿ ಪುಡಿ
ಪೆಪ್ಪರ್ ಕಾಳುಗಳು
ಉಪ್ಪು
ಸಕ್ಕರೆ
ಗೋಡಂಬಿ
ಮೊಸರು
ಪಲಾವ್ ಎಲೆ
ಇದನ್ನೂ ಓದಿ: Masala Omelette: ಒಂದೇ ರುಚಿಯ ಆಮ್ಲೆಟ್ ತಿಂದು ಬೇಸರ ಮೂಡಿದ್ರೆ, ಮಸಾಲಾ ಆಮ್ಲೆಟ್ ಟ್ರೈ ಮಾಡಿ, ಟೇಸ್ಟ್ ಸಖತ್ ಆಗಿರುತ್ತೆ
ಮಾಡುವ ವಿಧಾನ
ಅನ್ನವನ್ನು ಮೊದಲೇ ಮಾಡಿಕೊಂಡಿರಿ. ಅಗಲವಾದ ಪಾತ್ರೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ ಮತ್ತು ಎಲ್ಲಾ ತರದ ಮಸಾಲೆಗಳನ್ನು ಹಾಕಿ. ನಂತರ ಇದಕ್ಕೆ ಕೆಲವು ಮಸಾಲ ಹಾಕಬೇಕು ಜೀರಾ ಪೈಡರ್, ಗ್ಯಾಸ್‌ಅನ್ನು ಕಡಿಮೆ ಉರಿಯಲ್ಲಿ ಇಟ್ಟುಕೊಳ್ಳಿ. ಟೊಮ್ಯಾಟೋ ಹಾಕಿ ಅದು ಚೆನ್ನಾಗಿ ಸಾಪ್ಟ್ ಆಗಿ ತನ್ನಿಂದ ತಾನೇ ಸ್ಮಾಷ್ ಆಗಬೇಕು.
ಇದು ಉತ್ತಮ ರೀತಿಯಲ್ಲಿ ಮಿಕ್ಸ್ ಆಗಬೇಕು. ಈ ಸಮಯದಲ್ಲಿ ಒಂದು ಕಪ್‌ನಷ್ಟು ಮೊಸರನ್ನು ಹಾಕಿ. ಮೊಸರನ್ನು ಹಾಕುವ ಮೊದಲು ಸರಿಯಾಗಿ ಅದನ್ನು ಬ್ಲೆಂಡ್ ಮಾಡಿ. ನಂತರ ಇದಕ್ಕೆ ಕೊತ್ತಂಬರಿ ಪೌಡರ್ ಹಾಕಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ. ಈಗ ಬೇಯಿಸಿದ ಅನ್ನವನ್ನು ಹಾಕಿ. ಅನ್ನ ಉದುರಾಗಲು ನೀವು ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. ಸೈಡಿನಿಂದ ಮೆಲ್ಲಗೆ ಇದನ್ನು ಮಿಕ್ಸ್ ಮಾಡಿ. ಉಪ್ಪನ್ನು ನೋಡಿ ಸರಿಯಾಗಿ ಸಾಲದೇ ಇದ್ದರೆ ಮತ್ತೆ ಹಾಕಿಕೊಳ್ಳಿ.
ಇಷ್ಟು ಮಾಡಿದರೆ ಮಸಾಲಾ ರೈಸ್ ತಿನ್ನಲು ರೆಡಿ ಆಗುತ್ತದೆ. ಇದರ ಜೊತೆಗೆ ನೀವು ರಾಯ್ತಾ ಮಾಡಿಕೊಂಡು ತಿನ್ನಬಹುದು. ಅಥವಾ ಸಿಂಪಲ್ಲಾಗಿ ಮೊಸರನ್ನು ಹಾಕಿಯೂ ತಿನ್ನಬಹುದು.