Sweet: ಬೂಂದಿಕಾಳು ಮಾಡದೆ ಮೋತಿಚೂರು ಲಡ್ಡು ತಯಾರಿಸೋದು ಹೇಗೆ...ನೈವೇದ್ಯಕ್ಕಿಟ್ಟು ವರಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಿ-how to make motichur laddu for varamahalaskhmi festival ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Sweet: ಬೂಂದಿಕಾಳು ಮಾಡದೆ ಮೋತಿಚೂರು ಲಡ್ಡು ತಯಾರಿಸೋದು ಹೇಗೆ...ನೈವೇದ್ಯಕ್ಕಿಟ್ಟು ವರಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಿ

Sweet: ಬೂಂದಿಕಾಳು ಮಾಡದೆ ಮೋತಿಚೂರು ಲಡ್ಡು ತಯಾರಿಸೋದು ಹೇಗೆ...ನೈವೇದ್ಯಕ್ಕಿಟ್ಟು ವರಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಿ

ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಮಾನ್ಯವಾಗಿ ಒಬ್ಬಟ್ಟು, ಪುಳಿಯೋಗರೆ, ಚಕ್ಲಿ ಹಾಗೂ ಇನ್ನಿತರ ತಿಂಡಿಗಳನ್ನು ತಯಾರಿಸಿ ನೈವೇದ್ಯಕ್ಕೆ ಇರಿಸಲಾಗುತ್ತದೆ. ಈ ಹಬ್ಬಕ್ಕೆ ತಯಾರಿಸುವ ಸಿಹಿಗಳಲ್ಲಿ ಲಡ್ಡು ಕೂಡಾ ಒಂದು. ಲಡ್ಡುವಿನಲ್ಲಿ ಮೋತಿ ಚೂರ್ ಲಡ್ಡು ಎಲ್ಲರಿಗೂ ಇಷ್ಟವಾಗುತ್ತದೆ.

<p>ವರಮಹಾಲಕ್ಷ್ಮಿ ಸ್ಪೆಷಲ್ ಮೋತಿ ಚೂರು ಲಡ್ಡು</p>
<p>ವರಮಹಾಲಕ್ಷ್ಮಿ ಸ್ಪೆಷಲ್ ಮೋತಿ ಚೂರು ಲಡ್ಡು</p>

ನಾಳೆ ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಕೂಡಾ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಇನ್ನು ವರಮಹಾಲಕ್ಷ್ಮಿ ಹಬ್ಬ ಎಂದರೆ ಮಹಾಲಕ್ಷ್ಮಿಗೆ ಸೀರ ಉಡಿಸುವುದು, ಅಲಂಕಾರ ಮಾಡುವುದು, ಸಿಹಿ ತಯಾರಿಸುವ ಕೆಲಸಗಳು ಇದ್ದೇ ಇರುತ್ತದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಮಾನ್ಯವಾಗಿ ಒಬ್ಬಟ್ಟು, ಪುಳಿಯೋಗರೆ, ಚಕ್ಲಿ ಹಾಗೂ ಇನ್ನಿತರ ತಿಂಡಿಗಳನ್ನು ತಯಾರಿಸಿ ನೈವೇದ್ಯಕ್ಕೆ ಇರಿಸಲಾಗುತ್ತದೆ. ಈ ಹಬ್ಬಕ್ಕೆ ತಯಾರಿಸುವ ಸಿಹಿಗಳಲ್ಲಿ ಲಡ್ಡು ಕೂಡಾ ಒಂದು. ಲಡ್ಡುವಿನಲ್ಲಿ ಮೋತಿ ಚೂರ್ ಲಡ್ಡು ಎಲ್ಲರಿಗೂ ಇಷ್ಟವಾಗುತ್ತದೆ. ಬೂಂದಿ ಕಾಳು ಮಾಡಿಕೊಳ್ಳದೆ ನೀವು ಮೋತಿ ಚೂರು ಲಡ್ಡು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ಕಡ್ಲೆ ಬೇಳೆ - 2 ಕಪ್

ಸಕ್ಕರೆ - 2 ಕಪ್

ತುಪ್ಪ - 1/2 ಕಪ್

ದ್ರಾಕ್ಷಿ - 1 ಟೇಬಲ್ ಸ್ಪೂನ್

ಗೋಡಂಬಿ - 1 ಟೇಬಲ್ ಸ್ಪೂನ್

ಕರಬೂಜ ಬೀಜಗಳು - 1 ಟೇಬಲ್ ಸ್ಪೂನ್

ಏಲಕ್ಕಿ ಪುಡಿ - 1/2 ಟೀ ಸ್ಪೂನ್

ಆರೆಂಜ್ ಫುಡ್ ಕಲರ್​ - 2 ಹನಿಗಳು

ತಯಾರಿಸುವ ವಿಧಾನ

ಕಡ್ಲೆ ಬೇಳೆಯನ್ನು 2-3 ಬಾರಿ ತೊಳೆದು ಮತ್ತೆ ನೀರು ಸೇರಿಸಿ 4 ಗಂಟೆಗಳ ಕಾಲ ನೆನೆಯಲು ಬಿಡಿ

4 ಗಂಟೆಗಳ ನಂತರ ನೀರು ಶೋಧಿಸಿ ಮತ್ತೊಮ್ಮೆ ಕಡ್ಲೆಬೇಳೆ ತೊಳೆದು ಆ ನೀರನ್ನು ಕೂಡಾ ಶೋಧಿಸಿ.

ಕಡ್ಲೆಬೇಳೆಯಿಂದ ನೀರು ಸಂಪೂರ್ಣ ಸೋರಿದ ನಂತರ ಒಂದು ಮಿಕ್ಸಿ ಜಾರ್​​​​ನಲ್ಲಿ (ನೀರು ಸೇರಿಸಬೇಡಿ) ತರಿಯಾಗಿ ಗ್ರೈಂಡ್ ಮಾಡಿಕೊಳ್ಳಿ.

ತುಪ್ಪ ಕರಗಿಸಿಕೊಂಡು ಕಡಿಮೆ ಉರಿಯಲ್ಲಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ಪಕ್ಕಕ್ಕೆ ತೆಗೆದಿರಿಸಿ

ಈ ಕಡ್ಲೆಬೇಳೆ ಮಿಶ್ರಣವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ಮಾಡಿ ಬಿಸಿ ಎಣ್ಣೆಯಲ್ಲಿ ಕರಿಯಿರಿ, ಆದರೆ ಇದನ್ನು ವಡೆ ರೀತಿ ಕರಿಯಬಾರದು, 1-2 ನಿಮಿಷ ಕರಿದರೆ ಸಾಕು.

ಕರಿದ ಮಿಶ್ರಣ ತಣ್ಣಾಗಾದಾಗ ಮತ್ತೆ ಮಿಕ್ಸಿ ಜಾರ್​​ಗೆ ಸೇರಿಸಿ ತರಿಯಾಗಿ (ಪಲ್ಸ್​​) ರುಬ್ಬಿಕೊಳ್ಳಿ

2 ಕಪ್ ಸಕ್ಕರೆಗೆ 1/2 ಕಪ್ ನೀರು ಸೇರಿಸಿ ಸ್ಟೋವ್ ಮೇಲೆ ಇಟ್ಟು ಕರಗಿಸಿ

ಸಕ್ಕರೆ ಕರಗಿದ ನಂತರ ಫುಡ್ ಕಲರ್ ಸೇರಿಸಿ, ಪಾಕ ಒಂದೆಳೆ ಪಾಕ ಬಂದ ಕೂಡಲೇ ಸ್ಟೋಫ್ ಆಫ್ ಮಾಡಿ

ಪುಡಿ ಮಾಡಿಕೊಂಡ ಕಡ್ಲೆಬೇಳೆ ಮಿಶ್ರಣವನ್ನು ಸಕ್ಕರೆ ಪಾಕಕ್ಕೆ ಸೇರಿಸಿ

ಇದರೊಂದಿಗೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ಕರಬೂಜ ಬೀಜಗಳು, ಸ್ವಲ್ಪ ತುಪ್ಪ ಸೇರಿಸಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ತಣ್ಣಗಾಗಲು ಬಿಡಿ

ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿದರೆ ಮೋಚಿ ಚೂರು ಲಡ್ಡು ರೆಡಿ

ಸರಳವಾಗಿ, ಕಡಿಮೆ ಪದಾರ್ಥಗಳನ್ನು ಬಳಸಿ ಮೊತಿಚೂರು ಲಡ್ಡು ಮಾಡಬಹುದು. ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಸಿಹಿ ತಯಾರಿಸಿ ಲಕ್ಷ್ಮಿ ಕೃಪೆಗೆ ಪಾತ್ರರಾಗಿ.

mysore-dasara_Entry_Point