ಪ್ರವಾಸಕ್ಕೆ ತೆರಳಿದಾಗ ಆರೋಗ್ಯಕರ ಸ್ನ್ಯಾಕ್ಸ್​ಗೆ ಏನು ಮಾಡುವುದೆಂಬ ಯೋಚನೆಯೇ: 2 ವಾರ ಕಳೆದ್ರೂ ಕೆಡದಂತಾ ಅವಲಕ್ಕಿ ತಿನಿಸು ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರವಾಸಕ್ಕೆ ತೆರಳಿದಾಗ ಆರೋಗ್ಯಕರ ಸ್ನ್ಯಾಕ್ಸ್​ಗೆ ಏನು ಮಾಡುವುದೆಂಬ ಯೋಚನೆಯೇ: 2 ವಾರ ಕಳೆದ್ರೂ ಕೆಡದಂತಾ ಅವಲಕ್ಕಿ ತಿನಿಸು ಇಲ್ಲಿದೆ

ಪ್ರವಾಸಕ್ಕೆ ತೆರಳಿದಾಗ ಆರೋಗ್ಯಕರ ಸ್ನ್ಯಾಕ್ಸ್​ಗೆ ಏನು ಮಾಡುವುದೆಂಬ ಯೋಚನೆಯೇ: 2 ವಾರ ಕಳೆದ್ರೂ ಕೆಡದಂತಾ ಅವಲಕ್ಕಿ ತಿನಿಸು ಇಲ್ಲಿದೆ

ಈ ಅವಲಕ್ಕಿ ಮಿಶ್ರಣವನ್ನು ಒಮ್ಮೆ ತಯಾರಿಸಿದ ನಂತರ ಬಹಳ ಸಮಯದವರೆಗೆ ಬಳಸಬಹುದು. ಕನಿಷ್ಠ ಎರಡು ವಾರಗಳವರೆಗೆ ಕೆಡದಂತೆ ಇಡುವ ಈ ಅವಲಕ್ಕಿ ಖಾದ್ಯವನ್ನು ಮಾಡುವುದು ತುಂಬಾನೇ ಸರಳ. ಹೇಗೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕನಿಷ್ಠ ಎರಡು ವಾರಗಳವರೆಗೆ ಕೆಡದಂತೆ ಇಡುವ ಈ ಅವಲಕ್ಕಿ ಖಾದ್ಯವನ್ನು ಮಾಡುವುದು ತುಂಬಾನೇ ಸರಳ.
ಕನಿಷ್ಠ ಎರಡು ವಾರಗಳವರೆಗೆ ಕೆಡದಂತೆ ಇಡುವ ಈ ಅವಲಕ್ಕಿ ಖಾದ್ಯವನ್ನು ಮಾಡುವುದು ತುಂಬಾನೇ ಸರಳ. (PC: Canva)

ಪ್ರವಾಸಕ್ಕೆ ತೆರಳಿದಾಗ ಅಥವಾ ದೂರ ಪ್ರಯಾಣ ಕೈಗೊಂಡಾಗ ತ್ವರಿತವಾಗಿ ಮತ್ತು ಅನುಕೂಲಕರ ಆಹಾರ ಬೇಕು ಎಂದೆನಿಸುವುದು ಸಹಜ. ಇದಕ್ಕಾಗಿ ತ್ವರಿತವಾಗಿ ತಯಾರಿಸಬಹುದಾದ ಅವಲಕ್ಕಿಯಿಂದ ತಯಾರಿಸಲಾಗುವ ಭಕ್ಷ್ಯವನ್ನು ಒಯ್ಯಬಹುದು. ಇದೊಂದು ಜನಪ್ರಿಯ ಭಾರತೀಯ ಭಕ್ಷ್ಯವಾಗಿದ್ದು, ಇದು ರುಚಿಕರ ಮಾತ್ರವಲ್ಲದೆ ತಯಾರಿಸುವುದು ಕೂಡ ತುಂಬಾನೇ ಸಿಂಪಲ್. ಅವಲಕ್ಕಿ ಖಾದ್ಯವನ್ನು ತಯಾರಿಸುವುದು ತುಂಬಾನೇ ಸಿಂಪಲ್. ದೂರದೂರಿಗೆ ಪ್ರಯಾಣ ಮಾಡುವಾಗಲೂ ಈ ರುಚಿಕರವಾದ ಖಾದ್ಯವನ್ನು ತಯಾರಿಸಿ ಒಯ್ಯಬಹುದು. ಈ ಮೂಲಕ ಮನೆಯ ಅಡುಗೆ ರುಚಿಯನ್ನು ಆನಂದಿಸಬಹುದು. ಇಲ್ಲಿ ತಿಳಿಸಿರುವ ಅವಲಕ್ಕಿ ಮಿಶ್ರಣವನ್ನು ಒಮ್ಮೆ ತಯಾರಿಸಿದ ನಂತರ ಬಹಳ ಸಮಯದವರೆಗೆ ಬಳಸಬಹುದು. ಕನಿಷ್ಠ ಎರಡು ವಾರಗಳವರೆಗೆ ಕೆಡದಂತೆ ಇಡುವ ಈ ಅವಲಕ್ಕಿ ಖಾದ್ಯವನ್ನು ಮಾಡುವುದು ತುಂಬಾನೇ ಸರಳ. ಹೇಗೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಬೇಕಾಗುವ ಸಾಮಗ್ರಿಗಳು: ಅವಲಕ್ಕಿ- 2 ಕಪ್, ಈರುಳ್ಳಿ- 1 (ತೆಳುವಾಗಿ ಕತ್ತರಿಸಿ), ಶುಂಠಿಯ ಇಂಚಿನ ತುಂಡು, ಹಸಿರು ಮೆಣಸಿನಕಾಯಿ- 3, ಅಡುಗೆ ಎಣ್ಣೆ- 2 ಚಮಚ, ಕಡಲೆಕಾಯಿ- ಕಾಲು ಕಪ್, ಸಾಸಿವೆ- ಅರ್ಧ ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಕರಿಮೆಣಸು- 2, ಉಪ್ಪು ರುಚಿಗೆ ತಕ್ಕಷ್ಟು, ಕರಿಬೇವಿನ ಎಲೆ- 7 ರಿಂದ 8, ಗೋಡಂಬಿ- 4, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಸ್ವಲ್ಪ, ಅರಿಶಿನ- ಅರ್ಧ ಟೀ ಚಮಚ, ಇಂಗು- ಸ್ವಲ್ಪ.

ಮಾಡುವ ವಿಧಾನ: ಮೊದಲು ಕಡಾಯಿಯಲ್ಲಿ ಈರುಳ್ಳಿ, ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ. ಅವುಗಳನ್ನು ಎಣ್ಣೆ ಇಲ್ಲದೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಈರುಳ್ಳಿಯಲ್ಲಿನ ಎಲ್ಲಾ ತೇವಾಂಶವು ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ. ನಂತರ ತಟ್ಟೆಗೆ ವರ್ಗಾಯಿಸಿ. ಅದೇ ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಮೆಣಸು, ಕಡಲೆಕಾಯಿ, ಇಂಗು, ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಗೋಡಂಬಿ ಹಾಕಿ ಹುರಿಯಿರಿ. ನಂತರ ಅದಕ್ಕೆ ಹುರಿದಿಟ್ಟಿರುವ ಈರುಳ್ಳಿ ಮಿಶ್ರಣವನ್ನು ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ ಸೇರಿಸಿ ಮಿಶ್ರಣ ಮಾಡಿ.

ಒಂದೆರಡು ನಿಮಿಷ ಫ್ರೈ ಮಾಡಿದರೆ ಈರುಳ್ಳಿ ಮೃದುವಾಗುತ್ತದೆ. ಇದಕ್ಕೆ ಅವಲಕ್ಕಿಯನ್ನು ಸೇರಿಸಿ (ಅವಲಕ್ಕಿಯನ್ನು ಬೇಕಿದ್ದರೆ ಫ್ರೈ ಮಾಡಿ ಕೂಡ ಮಿಶ್ರಣ ಮಾಡಬಹುದು). ಕಡಿಮೆ ಉರಿಯಲ್ಲಿ ಐದು ನಿಮಿಷ ಚೆನ್ನಾಗಿ ಫ್ರೈ ಮಾಡಿ, ಸ್ಟವ್ ಅನ್ನು ಮುಚ್ಚಿ. ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ರುಚಿಕರವಾದ ಅವಲಕ್ಕಿ ಖಾದ್ಯ ಸವಿಯಲು ಸಿದ್ಧ.

Whats_app_banner