Rava Dosa Recipe: ರವಾ ಮತ್ತು ಈರುಳ್ಳಿ ಹಾಕಿ ಈ ದೋಸೆ ಮಾಡಿ, ಸಿಂಪಲ್ ಆದ ಚಟ್ನಿ ಜೊತೆ ತಿಂದರೂ ಇದು ಟೇಸ್ಟಿಯಾಗಿರುತ್ತೆ
Recipe: ನೀವು ನಿನ್ನೆ ರಾತ್ರಿ ಅಕ್ಕಿ ನೆನೆಹಾಕಲು ಮರೆತಿದ್ದರೆ ಇಂದು ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ದೋಸೆ ತಯಾರಿಸಬಹುದು. ರೈಸ್ ಐಟಮ್ ತಿನ್ನಲು ಮನಸಿಲ್ಲದಿದ್ದರೆ ಇದನ್ನೊಮ್ಮೆ ಮಾಡಿಕೊಳ್ಳಿ. ತಿನ್ನಲು ತುಂಬಾ ರುಚಿಯಾಗಿ ಮತ್ತು ಗರಿಗರಿಯಾಗಿರುತ್ತದೆ. ನೀವೂ ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ.
ನೀವು ಬೆಳಿಗ್ಗೆ ಎದ್ದ ತಕ್ಷಣ ಪ್ರತಿದಿನವೂ ಇಂದು ತಿಂಡಿಗೆ ಏನ್ ಮಾಡ್ಲಿ ಎಂಬ ಗೊಂದಲದಲ್ಲೇ ಇರುತ್ತೀರಾ ಎಂದಾದರೆ ಇಂದು ಏನ್ ಮಾಡ್ಲಿ ಎಂದು ನೀವು ಹುಡುಕುತ್ತಾ ಇರುತ್ತೀರಾ. ನಾವು ಹೇಳಿದ ರೀತಿಯಲ್ಲಿಂದು ರವಾ ದೋಸಾ ಮಾಡಿ ನೋಡಿ. ನೀವು ಈ ದೋಸೆಯನ್ನು ಮಾಡಲು ಹಿಂದಿನ ದಿನವೇ ಹಿಟ್ಟು ರುಬ್ಬಿಕೊಳ್ಳಬೇಕು ಎಂದೇನೂ ಇಲ್ಲ. ಹಾಗೆ ಅಕ್ಕಿ ನೆನೆ ಹಾಕಬೇಕಾದ ಅವಶ್ಯಕತೆಯೂ ಇಲ್ಲ. ನೀವು ದಿಡೀರನೆ ಈ ದೋಸೆಯನ್ನು ಮಾಡಬಹುದು. ತುಂಬಾ ಈಸಿಯಾಗಿ ದೋಸೆಯನ್ನ ತಯಾರಿಸಿ ತಿನ್ನಬಹುದು. ಗರಿಗರಿಯಾದ ರುಚಿಕರವಾದ ದೋಸೆಯನ್ನ ನಿಮ್ಮ ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ.
ರವಾ ಹಾಗೂ ಈರುಳ್ಳಿ ದೋಸೆ ಮಾಡಿದರೆ ನಿಮ್ಮ ಮಕ್ಕಳಿಗೆ ಇನ್ನಷ್ಟು ಇಷ್ಟವಾಗುತ್ತದೆ. ಒಂದು ಸಿಂಪಲ್ ಆಗಿರುವ ಚಟ್ನಿ ಜೊತೆ ಬೇಕಾದರೂ ಇದನ್ನು ತಿನ್ನಬಹುದು. ಇದನ್ನು ಮಾಡಲು ಬೇಕಾಗುವ ಪದಾರ್ಥಗಳ ವಿವರ ಇಲ್ಲಿದೆ.
ರವೆ
ಅಕ್ಕಿ ಹಿಟ್ಟು,
ಗೋಧಿ ಹಿಟ್ಟು
ಈರುಳ್ಳಿ,
ಶುಂಠಿ,
ಕೊತ್ತಂಬರಿ ಸೊಪ್ಪು,
ಸಾಸಿವೆ, ಜೀರಿಗೆ
ಮೆಣಸು
ಉಪ್ಪು
ಇದನ್ನೂ ಓದಿ: ಉಪ್ಪಿನಕಾಯಿ ಇಲ್ಲದಿದ್ದರೆ ರುಚಿಸದು ಊಟ: ಅನ್ನದ ಜತೆ ಸವಿಯಿರಿ ಈ ಟೇಸ್ಟಿ ಹುಣಸೆಹಣ್ಣಿನ ಉಪ್ಪಿನಕಾಯಿ, ರೆಸಿಪಿ ತುಂಬಾನೇ ಸಿಂಪಲ್
ಈ ದೋಸೆಯನ್ನು ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ರವೆ ಅಕ್ಕಿ ಮತ್ತು ಗೋಧಿ ಎಲ್ಲವನ್ನು ಹಾಕಿಕೊಳ್ಳಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹೆಚ್ಚಿಕೊಂಡ ಈರುಳ್ಳಿಯನ್ನು ಇದಕ್ಕೆ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ. ನಂತರ ಇದಕ್ಕೆ ಉಪ್ಪನ್ನು ಬೆರೆಸಿ. ಸಣ್ಣ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಅದು ಕಾದ ಬಳಿಕ ಸಾಸಿವೆ ಹಾಕಿ, ಜೀರಿಗೆ ಹಾಕಿ ಮಧ್ಯಮ ಉರಿಯಲ್ಲಿ ಅದನ್ನು ಬೇಯಿಸಿ ಹುರಿಯಿರಿ. ನಂತರ ಸ್ವಲ್ಪ ಕರಿಬೇವಿನ ಎಲೆ ಅಕ್ಕಿ ಹಿಟ್ಟಿಗೆ ಒಗ್ಗರಣೆ ಕೊಡಿ.
ನಂತರ ರವಾ, ನೀರು, ಅಕ್ಕಿ ಹಾಗೂ ಗೋಧಿ ಹಿಟ್ಟಿನ ಮಿಶ್ರಣಕ್ಕೆ ನೀವು ಸ್ವಲ್ಪ ಮೊಸರನ್ನು ಸೇರಿಸಿಕೊಳ್ಳಿ. ಸ್ವಲ್ಪ ತೆಳ್ಳಗಿನ ಮಿಶ್ರಣ ತಯಾರು ಮಾಡಿ. ಇದನ್ನು ತವಾದ ಮೇಲೆ ಹಾಕಿ. ಸ್ವಲ್ಪ ಹೊತ್ತು ಬಿಡಿ. ಹೀಗೆ ಮಾಡಿದರೆ ಗರಿಗರಿಯಾದ ರವಾ ದೋಸಾ ರೆಡಿಯಾಗುತ್ತದೆ. ನೀವೂ ಕೂಡ ಇದನ್ನು ಮನೆಯಲ್ಲಿ ಮಾಡಿ.