ಎಣ್ಣೆಯಲ್ಲಿ ಕರಿದರೆ ಹೂವಿನಂತೆ ಅರಳುವ ಅಕ್ಕಿ ಹಪ್ಪಳವನ್ನು ಮನೆಯಲ್ಲೇ ಮಾಡಿ, ಇಲ್ಲಿದೆ ನೋಡಿ ಸೀಕ್ರೆಟ್ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಎಣ್ಣೆಯಲ್ಲಿ ಕರಿದರೆ ಹೂವಿನಂತೆ ಅರಳುವ ಅಕ್ಕಿ ಹಪ್ಪಳವನ್ನು ಮನೆಯಲ್ಲೇ ಮಾಡಿ, ಇಲ್ಲಿದೆ ನೋಡಿ ಸೀಕ್ರೆಟ್ ರೆಸಿಪಿ

ಎಣ್ಣೆಯಲ್ಲಿ ಕರಿದರೆ ಹೂವಿನಂತೆ ಅರಳುವ ಅಕ್ಕಿ ಹಪ್ಪಳವನ್ನು ಮನೆಯಲ್ಲೇ ಮಾಡಿ, ಇಲ್ಲಿದೆ ನೋಡಿ ಸೀಕ್ರೆಟ್ ರೆಸಿಪಿ

ಊಟಕ್ಕೆ ಕುಂತಾಗ ಹಪ್ಪಳ ಇರಲೇಬೇಕು ಎಂದು ಬಯಸುವವರು ನೀವಾಗಿದ್ದರೆ ಮನೆಯಲ್ಲೇ ಈ ರೀತಿ ಹಪ್ಪಳ ಮಾಡಬಹುದು. ಅಥವಾ ನೀವು ಸ್ವಂತ ಒಂದು ಗ್ರಹೋಧ್ಯಮ ಆರಂಭಿಸುತ್ತೀರಾ ಎಂದಾದರೂ ಸಹ ಇದನ್ನು ಮಾಡಬಹುದು. ಇಲ್ಲಿದೆ ನೋಡಿ ಅಕ್ಕಿ ಹಿಟ್ಟಿನ ಹಪ್ಪಳದ ರೆಸಿಪಿ.

ಅಕ್ಕಿ ಹಪ್ಪಳ
ಅಕ್ಕಿ ಹಪ್ಪಳ

ಮನೆಯಲ್ಲೇ ನೀವು ಹಪ್ಪಳ ಮಾಡಬೇಕು ಎಂದು ಬಯಸಿದರೆ, ಅಥವಾ ಹಪ್ಪಳ ಮಾಡಿ ಮಾರಾಟ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದರೆ ಇದೊಂದು ಉತ್ತಮ ಉಪಾಯ ಇದೆ ನೋಡಿ. ಮಳೆಗಾಲದಲ್ಲೂ ನೀವು ಇದನ್ನು ಮಾಡಬಹುದು. ಯಾಕೆಂದರೆ ಈ ಅಕ್ಕಿ ಮುದ್ದೆ ಹಪ್ಪಳವನ್ನು ನೆರಳಿನಲ್ಲೇ ಒಣಸಬೇಕು. ಹಾಗಾಗಿ ಬಿಸಿಲು ಬೇಕು ಎನ್ನುವ ಅನಿವಾರ್ಯತೆಯೇ ಇಲ್ಲ. ಆದರೆ ವಾತಾವರಣ ಸ್ವಲ್ಪ ಬಿಸಿಯಾಗಿದ್ದರೆ ಒಳ್ಳೆಯದು. ಒಮ್ಮೆ ಇದನ್ನು ಮಾಡಿ ನೋಡಿ. ಇದನ್ನು ಮಾಡುವ ವಿಧಾನವು ತುಂಬಾ ಸುಲಭವಾಗಿದೆ. ಇದನ್ನು ಮಾಡಲು ಬೇಕಾಗುವ ಪದಾರ್ಥಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೇವಲ ಈ 4 ಪದಾರ್ಥ ಇದ್ರೆ ಸಾಕು

ಅಕ್ಕಿ ಹಿಟ್ಟು
ಉಪ್ಪು
ಜೀರಿಗೆ
ನೀರು

ಮಾಡುವ ವಿಧಾನ

ಒಂದು ಕಡಾಯಿಯಲ್ಲಿ ನೀರನ್ನು ಬಿಸಿ ಮಾಡಿ. ಅದು ಕುದಿಯಲು ಆರಂಭವಾಗಬೇಕು. ಅದು ಕುದಿಯುತ್ತಿರುವ ಹೊತ್ತಿನಲ್ಲೇ ನೀವು ಅದಕ್ಕೆ ಅಕ್ಕಿ ಹಿಟ್ಟನ್ನು ಮಿಕ್ಸ್‌ ಮಾಡಿ. ಚೆನ್ನಾಗಿ ತಿರುವಿ. ಆ ಬಿಸಿ ನೀರಿನ ಆವಿಯಲ್ಲೇ ಆ ಹಿಟ್ಟು ತುಂಬಾ ಚೆನ್ನಾಗಿ ಬೇಯಬೇಕು ಆರೀತಿ ಮಾಡಿ. ಅದು ಬೆಂದಷ್ಟು ಹಪ್ಪಳ ಚೆನ್ನಾಗಿ ಆಗುತ್ತದೆ. ಆ ಕಾರಣಕ್ಕೆ ನೀವು ಪದೇ ಪದೇ ಅದನ್ನು ಮಿಕ್ಸ್‌ ಮಾಡಿ. ಮೇಲಿನಿಂದ ಮುಚ್ಚಳ ಮುಚ್ಚಿ. ಈ ರೀತಿ ಮಾಡಿದರೆ ಒಳಗಿನಿಂದಲೂ ಹಿಟ್ಟು ಚೆನ್ನಾಗಿ ಬೇಯುತ್ತದೆ.

ಇನ್ನು ಆ ಕುದಿಯಲಿಟ್ಟ ನೀರಿಗೆ ಅಕ್ಕಿ ಹಿಟ್ಟು ಹಾಕುವ ಮುನ್ನ ನೀವು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಜೀರಿಗೆಯನ್ನು ಸೇರಿಸಿಕೊಳ್ಳಬೇಕು. ಸೇರಿಸಿಕೊಂಡಾ ಅದರ ಸ್ವಾಧ ಹೆಚ್ಚುತ್ತದೆ. ಉಪ್ಪನ್ನು ಸ್ವಲ್ಪ ನೋಡಿಕೊಂಡು ಹಾಕಿ. ಯಾಕೆಂದರೆ ಒಣಗಿದ ಮೇಲೆ ಅದು ಹೆಚ್ಚು ಉಪ್ಪಾಗುವ ಸಾಧ್ಯತೆ ಇರುತ್ತದೆ.

ಉರಿಯನ್ನು ಕಡಿಮೆ ಮಾಡಿಕೊಳ್ಳಿ,ಈಗ ಚೆನ್ನಾಗಿ ಮತ್ತೆ ಮಿಕ್ಸ್‌ ಮಾಡಿಕೊಳ್ಳಿ. ನಂತರ ಅದು ದಪ್ಪವಾಗುತ್ತದೆ. ಮುದ್ದೆ ಆಗುತ್ತದೆ. ಮುದ್ದೆ ಆಗುವವರೆಗೂ ಅದನ್ನು ಕಲಸಿ. ಆ ಹಿಟ್ಟು ಬಿಸಿಗೆ ಬೇಯಬೇಕು. ನಡುವೆ ಸೀಳಬಾರದು ಎಂದರೆ ನೀವು ಇದನ್ನು ಚೆನ್ನಾಗಿ ಸಣ್ಣ ಉರಿಯಲ್ಲಿ ಬೇಯಿಸಿದರೆ ಮಾತ್ರ ಸಾಧ್ಯ.

ಸ್ವಲ್ಪ ಕೈಗೆ ಎಣ್ಣೆ ಅಥವಾ ನೀರು ಹಾಕಿ ಕೈಯ್ಯಿಂದಲೇ ನಾದಿ, ಇದು ತುಂಬಾ ಬಿಸಿ ಇರುತ್ತದೆ. ಈ ತರ ಐದು ನಿಮಿಷವಾದರೂ ನಾದವಬೇಕು. ಆಗ ನಡುವೆ ಸೀಳೋದಿಲ್ಲ. ಉಂಡೆಗಳನ್ನು ಮಾಡಿ ಇಟ್ಕೊಳ್ಳಿ. ಈಗ ಎಲ್ಲ ಉಂಡೆ ಮಾಡಿ ಇಟ್ಟುಕೊಂಡು ಆ ನಂತರ ಒಂದು ಒದ್ದೆ ಬಟ್ಟೆಯನ್ನು ಹಾಕಿ ಉಂಡೆ ಮೇಲೆ ಇಲ್ಲ ಅಂದ್ರೆ ಹಿಟ್ಟು ಒಣಗಲು ಆರಂಭವಾಗುತ್ತದೆ. ನಂತರ ಲಟ್ಟಿಸಿಕೊಳ್ಳಬೇಕು. ತುಂಬಾ ತೆಳುವಾಗಿ ಇದನ್ನು ಲಟ್ಟಿಸಿ ನಂತರ ನೆರಳಿನಲ್ಲೇ ಒಣಗಿಸಿ. ಹೀಗೆ ಮಾಡಿ ಅದು ಒಣಗಿದರೆ ಹಪ್ಪಳ ರೆಡಿ.

ನಂತರ ಇದನ್ನು ಎಣ್ಣೆಯಲ್ಲಿ ಕರಿದು ತಿನ್ನಿ. ಕರಿದಾಗ ಇದು ಹೂವಿನಂತೆ ಅರಳಿಕೊಳ್ಳುತ್ತದೆ. ರುಚಿಯಂತು ತುಂಬಾ ಚೆನ್ನಾಗಿರುತ್ತದೆ.

Whats_app_banner