Sabudana Kheer: ಒಂದು ವರ್ಷದೊಳಗಿನ ಮಕ್ಕಳಿಗೆ ತಿನ್ನಿಸುವಂತೆ ಮಾಡಬಹುದಾದ ಸಾಬೂದಾನ ಖೀರ್ ರೆಸಿಪಿ ಇಲ್ಲಿದೆ
Sabudana Kheer: ಶಿಶುಗಳು ಮತ್ತು ಅಂಬೆಗಾಲಿಡಲು ಆರಂಭಿಸಿದ ಮಕ್ಕಳಿಗೆ ಈ ರೀತಿ ಸಾಬೂದಾನ ಖೀರ್ ಮಾಡಿಕೊಡಿ. ಒಂದು ವರ್ಷದೊಳಗಿನ ಮಕ್ಕಳಿಗೆ ತಿನ್ನಿಸುವಂತೆ ಮಾಡಬಹುದಾದ ಸಾಬೂದಾನ ಖೀರ್ ರೆಸಿಪಿ ಇಲ್ಲಿದೆ.
ಶಿಶುಗಳು ಮತ್ತು ಅಂಬೆಗಾಲಿಡಲು ಆರಂಭಿಸಿದ ಮಕ್ಕಳಿಗೆ ಏನು ತಿನ್ನಿಸೋದು ಎಂದು ಅಮ್ಮಂದಿರಿಗೆ ಯೋಚನೆ ಆಗುತ್ತದೆ. ಅಂತಹ ಯೋಚನೆಯಲ್ಲಿ ಮುಳುಗಿದ ಅಮ್ಮಂದಿರಿಗೆ ಇಲ್ಲಿದೆ ನೋಡಿ ಒಂದು ರೆಸಿಪಿ. ನಿಮ್ಮ ಮಕ್ಕಳಿಗೆ ಬೇರೆ ಬೇರೆ ರುಚಿಯನ್ನು ಸವಿಯಲು ಕೊಡಬೇಕು. ಅವರು ಆರೋಗ್ಯವಾಗಿರಬೇಕು ಎಂದು ನೀವು ಬಯಸುತ್ತಾ ಇರುವ ಈ ವೇಳೆಯಲ್ಲಿ ಸಾಬೂದಾನಾದಿಂದ ಸಿಂಪಲ್ ಖೀರ್ ಮಾಡಿಕೊಡಿ.
ಖೀರ್ ಮಾಡಲು ಬೇಕಾಗುವ ಸಾಮಗ್ರಿಗಳು
ಸಾಬೂದಾನ - 100 ಗ್ರಾಂ
ಕೆನೆ ತೆಗೆದ ಹಾಲು - ಲೀಟರ್
ಸಕ್ಕರೆ - 150 ಗ್ರಾಂ
ಬಾದಾಮಿ - 5
ಪಿಸ್ತಾ - 4
ಏಲಕ್ಕಿ ಪುಡಿ - ಚಿಟಿಕೆ
ಒಣದ್ರಾಕ್ಷಿ - 5
ಗೋಡಂಬಿ- 3
ಮಾಡುವ ವಿಧಾನ
ಮೊದಲು ನೀವು ಸಾಬೂದಾನ ತೆಗೆದುಕೊಂಡು ಅದನ್ನು ನೆನೆಸಿಡಿ. ನಂತರ ಅದು ನೆನೆದ ಮೇಲೆ ಬೇಯಿಸಿಕೊಳ್ಳಿ. ಬೆಂದ ನಂತರದಲ್ಲಿ ಅದಕ್ಕೆ ಹಾಲು ಹಾಗೂ ಸಕ್ಕರೆ ಮಿಕ್ಸ್ ಮಾಡಿ. ಇಲ್ಲವಾದರೆ ಒಂದು ಕಡೆ ಹಾಲನ್ನು ಕಾಯಿಸಲು ಇಡಿ. ಅದಕ್ಕೆ ಬಾದಾಮಿ ಪುಡಿ ಹಾಗೂ ಸಕ್ಕರೆಯನ್ನು ಮಿಕ್ಸ್ ಮಾಡಿ. ನಂತರದಲ್ಲಿ ಅದಕ್ಕೆ ಸಕ್ಕರೆ ಸೇರಿಸಿ. ಹಾಲು ಕುದಿಯುತ್ತಿರುವಾಗ, ನೆನೆಸಿದ ಸಾಬೂದಾನ ಹಾಕಿ.
ಕಡಿಮೆ ಉರಿಯಲ್ಲಿ ಕುದಿಸುವುದರಿಂದ ಸ್ವಲ್ಪ ಸಮಯದ ನಂತರ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ನಿಮಗೆ ಎಷ್ಟು ಅಗತ್ಯ ಇದೆಯೋ ಅದಕ್ಕಿಂತ ಸ್ವಲ್ಪ ಜಾಸ್ತಿ ಹಾಲನ್ನು ಹಾಕಿ. ಮಕ್ಕಳಿಗೆ ತಿನ್ನಲು ಈಸಿ ಆಗ್ಬೇಕು ಅಂದ್ರೆ ನೀವು ಸ್ವಲ್ಪ ಹೆಚ್ಚಿನ ಸಮಯ ಬೇಯಿಸಲೇಬೇಕಾಗುತ್ತದೆ. ನಂತರ ಇದಕ್ಕೆ ಬಾದಾಮಿ, ಪಿಸ್ತಾ, ಒಣದ್ರಾಕ್ಷಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.
ಸಕ್ಕರೆ ಅಥವಾ ಬೆಲ್ಲ: ಸಕ್ಕರೆ ಇಷ್ಟವಿಲ್ಲದವರು ಬೆಲ್ಲ ಸೇರಿಸಿ. ಇನ್ನು ಆರೋಗ್ಯದ ದೃಷ್ಟಿಯಲ್ಲಿ ಬೆಲ್ಲ ಒಳ್ಳೆಯದು. ನಿಮ್ಮ ಮಕ್ಕಳಿಗೆ ಯಾವುದನ್ನು ಕೊಡಬೇಕು ಎಂದು ನೀವೇ ನಿರ್ಧರಿಸಿ. ಮಕ್ಕಳು ಮಾತ್ರವಲ್ಲ ಇದನ್ನು ನೀವೂ ಕೂಡ ತುಂಬಾ ಇಷ್ಟಪಟ್ಟು ತಿನ್ನುವುದರಲ್ಲಿ ಅನುಮಾನವೇ ಇಲ್ಲ.
ಪ್ರಯೋಜನ: ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ನಿತ್ಯವೂ ಇದನ್ನು ಸೇವನೆ ಮಾಡುವುದರಿಂದ ಮೆದುಳು ತುಂಬಾ ಆರೋಗ್ಯಕರವಾಗಿರುತ್ತದೆ. ಗರ್ಭಿಣಿಯರು ಸಹ ಇದನ್ನು ತಿನ್ನಬಹುದು. ಸಿಹಿ ತಿನ್ನಬೇಕು ಎಂಬ ಕಡು ಬಯಕೆ ನಿಮಗಾದರೆ ನೀವು ಇದನ್ನು ತಿನ್ನಬಹುದು.
ರಕ್ತಹೀನತೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಇದನ್ನು ತಿನ್ನಬೇಕು. ಅದರಲ್ಲಿರುವ ಕಬ್ಬಿಣಾಂಶವು ದೇಹದಲ್ಲಿ ನಿಮಗೆ ಬಲ ತುಂಬುತ್ತದೆ. ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮೂಳೆ ಸಮಸ್ಯೆಗಳನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ.
ವಿಭಾಗ