Corn Cutlet: ಸಾಯಂಕಾಲಕ್ಕೆ ಟೀ ಜೊತೆ ಇದೇ ರೀತಿ ಕಾರ್ನ್ ಕಟ್ಲೆಟ್ ಮಾಡಿ, ತುಂಬಾ ರುಚಿಯಾಗಿರುತ್ತೆ ಇಂದೇ ಟ್ರೈ ಮಾಡಿ
Corn Cutlet: ನೀವು ಮನೆಯಲ್ಲೇ ರುಚಿಕರವಾದ ಮತ್ತು ಎಲ್ಲರಿಗೂ ಇಷ್ಟವಾಗುವ ಒಂದು ರೆಸಿಪಿ ಕಾರ್ನ್ ಕಟ್ಲೆಟ್‌ಅನ್ನು ಒಮ್ಮೆ ಟ್ರೈ ಮಾಡಿ. ಇದನ್ನು ಮಾಡುವ ವಿಧಾನ ಹಾಗೂ ಬೇಕಾಗುವ ಪದಾರ್ಥಗಳ ಪಟ್ಟಿ ಇಲ್ಲೇ ಇದೆ ಗಮನಿಸಿ.
ಈಗ ಜೋಳದ ಸೀಸನ ಆರಂಭವಾಗಿದೆ. ಬೇಬಿ ಕಾರ್ನ್‌ನಿಂದ ಹಿಡಿದು, ಸ್ವೀಟ್ ಕಾರ್ನ್‌ವರೆಗೆ ಎಲ್ಲವನ್ನೂ ಜನರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇನ್ನು ಹೊಟೆಲ್‌ಗಳಲ್ಲಂತೂ ಇದನ್ನು ಭಾರಿ ಪ್ರಮಾಣದಲ್ಲಿ ಬಳಕೆ ಮಾಡಿ ತಿಂಡಿ ತಯಾರಿಸುತ್ತಾರೆ. ನೀವೂ ಕೂಡ ಕಾರ್ನ್ ಪ್ರಿಯರಾಗಿದ್ದರೆ ನಾವು ನೀಡಿದ ಈ ರೆಸಿಪಿಯನ್ನು ನಿಮ್ಮ ಮನೆಯಲ್ಲಿ ಟ್ರೈ ಮಾಡಿ. ಇದು ತುಂಬಾ ಟೇಸ್ಟಿಯಾಗಿರುತ್ತದೆ. ಆಗಾಗ ಸಾಯಂಕಾಲಕ್ಕೆ ಮಾಡಿಕೊಂಡು ತಿಂದರೆ ಇನ್ನೂ ಚೆನ್ನಾಗಿರುತ್ತದೆ. ಇನ್ನು ಜೋಳವನ್ನು ಉಪ್ಪು ಖಾರ ಹಾಕಿಕೊಂಡು ಬರಿದಾಗಿ ತಿಂದು ಅದರ ರುಚಿಯನ್ನು ಆಸ್ವಾಧಿಸುವವರೂ ಇದ್ದಾರೆ. ಆದರೆ ಸುಮ್ಮನೆ ತಿನ್ನಲು ಬೇಜಾರಾಗುತ್ತಿದ್ದರೆ ಈ ರೆಸಿಪಿ ಟ್ರೈ ಮಾಡಿ. ಈ ರೀತಿಯ ಕಾರ್ನ್ ಕಟ್ಲೆಟ್‌ಗಳನ್ನು ಮಾಡಿ ನೋಡಿ. ಆಲೂಗಡ್ಡೆ ಮತ್ತು ಜೋಳವನ್ನು ಬಳಸಿ ನೀವು ಈ ರುಚಿಯಾದ ಕಟ್ಲೆಟ್ ಮಾಡಬಹುದು.
ಅವುಗಳ ತಯಾರಿಕೆಗೆ ಬೇಕಾದ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ.
ಕಾರ್ನ್ ಕಟ್ಲೆಟ್ ಮಾಡಲು ಬೇಕಾಗುವ ಸಾಮಾಗ್ರಿಗಳು:
1 ಕಪ್ ಸ್ವೀಟ್ ಕಾರ್ನ್ ಅಥವಾ ಸಾಮಾನ್ಯ ಜೋಳ
2 ಬೇಯಿಸಿದ ಆಲೂಗಡ್ಡೆ, ಮಧ್ಯಮ ಗಾತ್ರದ್ದಾಗಿರಲಿ
2 ಚಮಚ ಕ್ಯಾರೆಟ್ ಅನ್ನು ತುರಿ ರೆಡಿ ಇಟ್ಟುಕೊಳ್ಳಿ
ಸ್ವಲ್ಪ ಕ್ಯಾಪ್ಸಿಕಂ ಚೂರುಗಳು
1 ಈರುಳ್ಳಿ, ಚಿಕ್ಕದಾಗಿ ಕತ್ತರಿಸಿ
ಕೊತ್ತಂಬರಿ ಸೊಪ್ಪು
ಅರಿಶಿನ ಕಾಲು ಟೀ ಚಮಚ
ಮೆಣಸಿನಕಾಯಿ ಪುಡಿ ಅರ್ಧ ಚಮಚ
ಕೊತ್ತಂಬರಿ ಪುಡಿ ಅರ್ಧ ಚಮಚ
ಅರ್ಧ ಚಮಚ ಜೀರಿಗೆ ಪುಡಿ
ಉಪ್ಪು ಅರ್ಧ ಚಮಚ
ಕಾಲು ಕಪ್ ಬ್ರೆಡ್ ತುಂಡುಗಳು
2 ಟೇಬಲ್ಸ್ಪೂನ್ ಕಾರ್ನ್ ಹಿಟ್ಟು (ಜೋಳದ ಹಿಟ್ಟು)
ಕರಿಯಲು ಸ್ವಲ್ಪ ಎಣ್ಣೆ
ಕಾರ್ನ್ ಕಟ್ಲೆಟ್ ಮಾಡುವ ವಿಧಾನ
ಮೊದಲು ಜೋಳದ ಕಾಳುಗಳನ್ನು ಮಿಕ್ಸಿಗೆ ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದನ್ನು ನಯವಾಗಿ ರುಬ್ಬಿಕೊಳ್ಳಬೇಕಿಲ್ಲ. ಅಲ್ಲಲ್ಲಿ ಅದು ಬಾಯಿಗೆ ತರಿ ತರಿಯಾಗಿ ಸಿಗುವ ಹಾಗಿದ್ದರೆ ಚೆನ್ನ. ಈ ಮಿಶ್ರಣವನ್ನು ದೊಡ್ಡ ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಕ್ಯಾರೆಟ್ ತುರಿ, ಕ್ಯಾಪ್ಸಿಕಂ ತುಂಡುಗಳು, ಈರುಳ್ಳಿ ತುಂಡುಗಳು, ಕೊತ್ತಂಬರಿ ಸೊಪ್ಪು ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಅದರಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ . ಕೊನೆಯಲ್ಲಿ ಜೋಳದ ಹಿಟ್ಟು ಮತ್ತು ಬ್ರೆಡ್ ತುಂಡುಗಳನ್ನು ಸೇರಿಸಿ ಮತ್ತು ದಪ್ಪ ಪೇಸ್ಟ್ಗೆ ಮಿಶ್ರಣ ಮಾಡಿ. ಈಗ ನಿಮ್ಮ ಕೈಗಳಿಗೆ ಎಣ್ಣೆ ಹಾಕಿ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ಕಟ್ಲೆಟ್ ಆಕಾರದಲ್ಲಿ ತಟ್ಟಿಕೊಳ್ಳಿ. ಅಂದರೆ ಚಿಕ್ಕದಾದ ದಪ್ಪನೆಯ ವೃತ್ತವನ್ನು ನಿಮ್ಮ ಕೈಯ್ಯಲ್ಲೇ ತಟ್ಟಿ.
ಕಡಾಯಿಗೆ ಎಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆಯಲ್ಲಿ ಹಾಕಿ ಈ ಕಟ್ಲೆಟ್‌ಗಳನ್ನು ಡೀಪ್ ಫ್ರೈ ಮಾಡಿ. ಮೊದಲು ಎಣ್ಣೆ ಸರಿಯಾಗಿ ಕಾದಿದೆಯಾ? ಅಥವಾ ಇಲ್ಲವಾ? ಎಂದು ಚೆಕ್ ಮಾಡಲು ನ ಎರಡೂ ಕಡೆ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ. ಇದು ಗರಿಗರಿಯಾಗಿ ಇರುತ್ತದೆ. ಇವುಗಳನ್ನು ಯಾವುದೇ ಚಟ್ನಿ ಅಥವಾ ಟೊಮೆಟೊ ಸಾಸ್‌ನೊಂದಿಗೆ ಬಡಿಸಿ.
ವಿಭಾಗ