Corn Rice: ಜೋಳ ಅಂದ್ರೆ ತುಂಬಾ ಇಷ್ಟಾನಾ? ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ಈ ರೀತಿ ಕಾರ್ನ್‌ ರೈಸ್ ಮಾಡಿ ಸವಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Corn Rice: ಜೋಳ ಅಂದ್ರೆ ತುಂಬಾ ಇಷ್ಟಾನಾ? ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ಈ ರೀತಿ ಕಾರ್ನ್‌ ರೈಸ್ ಮಾಡಿ ಸವಿಯಿರಿ

Corn Rice: ಜೋಳ ಅಂದ್ರೆ ತುಂಬಾ ಇಷ್ಟಾನಾ? ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ಈ ರೀತಿ ಕಾರ್ನ್‌ ರೈಸ್ ಮಾಡಿ ಸವಿಯಿರಿ

ಕಾರ್ನ್‌ ರೈಸ್‌ ರೆಸಿಪಿ: ನೀವು ತುಂಬಾ ಜೋಳದ ಪರಿಮಳವನ್ನು ಮತ್ತದರ ಸ್ವಾಧವನ್ನು ಇಷ್ಟಪಡುವವರಾಗಿದ್ದರೆ ಇದೊಂದು ರೈಸ್‌ ನೀವು ಖಂಡಿತ ಟ್ರೈ ಮಾಡಬೇಕು. ಇದನ್ನು ಮಾಡುವುದು ತುಂಬಾ ಕಷ್ಟವೇನಲ್ಲ. ಯಾವುದೇ ಮಸಾಲೆ ರುಬ್ಬಬೇಕಿಲ್ಲ. ಇಲ್ಲಿ ರೆಸಿಪಿ ನೀಡಿದ್ದೇವೆ ನೀವೂ ಒಮ್ಮೆ ಟ್ರೈ ಮಾಡಿ.

ಕಾರ್ನ್ ರೈಸ್‌ ಮಾಡಿ ತಿನ್ನಿ
ಕಾರ್ನ್ ರೈಸ್‌ ಮಾಡಿ ತಿನ್ನಿ

ಕಾರ್ನ್ ರೈಸ್ ಮಾಡುವುದು ತುಂಬಾ ಸುಲಭ. ಇದನ್ನು ತಯಾರಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈಗ ಮಾರ್ಕೆಟ್‌ನಲ್ಲಿ ಸುಲಭವಾಗಿ ಸಿಗುವ ಜೋಳದ ತಾಜಾ ಕಾಳುಗಳೊಂದಿಗೆ ಒಮ್ಮೆ ಈ ರೈಸ್‌ ರೆಸಿಪಿಯನ್ನು ಪ್ರಯತ್ನಿಸಿ. ರುಚಿ ತುಂಬಾ ಚೆನ್ನಾಗಿರುತ್ತದೆ.

ಕಾರ್ನ್ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು:

ಒಂದೂವರೆ ಕಪ್ ಜೋಳದ ಕಾಳುಗಳು

1 ಕಪ್ ಬಾಸ್ಮತಿ ಅಥವಾ ಇನ್ಯಾವುದೇ ಉತ್ತಮ ಅಕ್ಕಿ

1 ಈರುಳ್ಳಿ, ತೆಳುವಾಗಿ ಕತ್ತರಿಸಿ

1 ಟೊಮೆಟೊ

1 ಕ್ಯಾಪ್ಸಿಕಂ

3 ಚಮಚ ಎಣ್ಣೆ

1 ಬಿರಿಯಾನಿ ಎಲೆ

2 ಏಲಕ್ಕಿ

ದಾಲ್ಚಿನ್ನಿ

2 ಲವಂಗ

ಬೆಳ್ಳುಳ್ಳಿ

ಆರು ಲವಂಗ

2 ಹಸಿರು ಮೆಣಸಿನಕಾಯಿಗಳು

½ ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್

½ ಟೀಚಮಚ ಗರಂ ಮಸಾಲಾ

ಸಾಕಷ್ಟು ಉಪ್ಪು

ನಿಂಬೆ ರಸದ 1 ಚಮಚ

ಕೊತ್ತಂಬರಿ ಸೊಪ್ಪು

ಕಾರ್ನ್ ರೈಸ್ ಮಾಡುವ ವಿಧಾನ:

ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅದರಲ್ಲಿ ಎಲ್ಲಾ ಮಸಾಲೆಗಳನ್ನು ಒಂದೊಂದಾಗಿ ಹಾಕಿ.

ಬಿರಿಯಾನಿ ಎಲೆ, ಜೀರಿಗೆ, ಏಲಕ್ಕಿ, ದಾಲ್ಚಿನ್ನಿ ಮತ್ತು ಲವಂಗ ಸೇರಿಸಿ ಮತ್ತು ಪರಿಮಳ ಬರುವವರೆಗೆ ಫ್ರೈ ಮಾಡಿ.

ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಸೇರಿಸಿ ಮತ್ತು ಫ್ರೈ ಮಾಡಿ.

ಈಗ ಅದಕ್ಕೆ ಈರುಳ್ಳಿ ಚೂರುಗಳನ್ನು ಹಾಕಿ . ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಇದಕ್ಕೆ ಕ್ಯಾಪ್ಸಿಕಂ ಮತ್ತು ಟೊಮೆಟೊ ತುಂಡುಗಳನ್ನು ಹಾಕಿ ಚೆನ್ನಾಗಿ ಬೇಯಲು ಬಿಡಿ.

ಜೋಳದ ಕಾಳುಗಳನ್ನು ಹಾಕಿ ಮುಚ್ಚಿಡಿ.

ಉಪ್ಪು ಮತ್ತು ಗರಂ ಮಸಾಲ ಹಾಕಿ ಮುಚ್ಚಿಡಿ.

ನಂತರ ಎರಡು ಕಪ್ ನೀರು ಹಾಕಿ ಮತ್ತು ಕುದಿಯಲು ಬಿಡಿ.

ಇದಕ್ಕೆ ಅಕ್ಕಿ , ನಿಂಬೆರಸ ಸೇರಿಸಿ ಮುಚ್ಚಿಟ್ಟು ಬೇಯಿಸಿದರೆ ಅರ್ಧ ಗಂಟೆಯಲ್ಲಿ ಕಾರ್ನ್ ರೈಸ್ ರೆಡಿ. ಕೊತ್ತಂಬರಿ ಸೊಪ್ಪು ಉದುರಿಸಿದರೆ ಸಾಕು ಸಿಂಗಾರಗೊಂಡು ಪರಿಮಳಯುತವಾದ ಆಹಾರ ಸಿದ್ಧವಾಗುತ್ತದೆ. ಕಾರ್ನ್‌ ಪರಿಮಳಕ್ಕೆ ಮನಸೀತು ನೀವು ಬೇಗ ಬೇಗ ತಿಂದು ಮುಗಿಸಿಬಿಡುತ್ತೀರಾ.

Whats_app_banner