ಇದು ಕಾಣೋಕೆ ಸೇಮ್ ಬಿಸಿಬೇಳೆ ಬಾತ್; ಆದ್ರೆ ನಾಲಿಗೆಗೆ ನೀಡೋ ರುಚಿನೇ ಬೇರೆ; ನೀವೂ ಟ್ರೈ ಮಾಡಿ ಪಾಲಕ್ ದಾಲ್ ಕಿಚಡಿ-how to make tasty palak dal khichdi at home kannada recipe easy cooking tips smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಇದು ಕಾಣೋಕೆ ಸೇಮ್ ಬಿಸಿಬೇಳೆ ಬಾತ್; ಆದ್ರೆ ನಾಲಿಗೆಗೆ ನೀಡೋ ರುಚಿನೇ ಬೇರೆ; ನೀವೂ ಟ್ರೈ ಮಾಡಿ ಪಾಲಕ್ ದಾಲ್ ಕಿಚಡಿ

ಇದು ಕಾಣೋಕೆ ಸೇಮ್ ಬಿಸಿಬೇಳೆ ಬಾತ್; ಆದ್ರೆ ನಾಲಿಗೆಗೆ ನೀಡೋ ರುಚಿನೇ ಬೇರೆ; ನೀವೂ ಟ್ರೈ ಮಾಡಿ ಪಾಲಕ್ ದಾಲ್ ಕಿಚಡಿ

ಪಾಲಕ್ ದಾಲ್ ಕಿಚಡಿ ರೆಸಿಪಿ: ನೀವು ದಾಲ್ ಕಿಚಡಿಯನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಬಿಸಿ ಇದ್ದಾಗಲೇ ತಿಂದರೆ ಚೆನ್ನ ಹಾಗಾಗಿ ನಿಮ್ಮ ಮಕ್ಕಳ ಅಥವಾ ಗಂಡನ ಲಂಚ್‌ಬಾಕ್ಸ್‌ಗೆ ಇದನ್ನು ಟ್ರೈ ಮಾಡಬೇಡಿ. ಎಲ್ಲರೂ ಇದ್ದಾಗ ಒಮ್ಮೆ ಮಾಡಿ. ಮಾಡುವ ವಿಧಾನ ಕೂಡ ತುಂಬಾ ಸರಳವಾಗಿದೆ.

ಪಾಲಕ್ ದಾಲ್ ಕಿಚಡಿ
ಪಾಲಕ್ ದಾಲ್ ಕಿಚಡಿ (Image: archanaskitchen)

ಪಾಲಕ್ ದಾಲ್ ಕಿಚಡಿ ರೆಸಿಪಿ ಇಲ್ಲಿದೆ. ಪಾಲಕ್ ದಾಲ್ ಕಿಚಡಿಯನ್ನು ಮಾಡಲು ನೀವು ಹಿಂದೆ ಎಂದು ಟ್ರೈ ಮಾಡಿರದಿದ್ದರೆ ಅದನ್ನು ಹೇಗೆ ಮಾಡುವುದು ಎಂಬ ರೆಸಿಪಿಯನ್ನು ನಾವಿಲ್ಲಿ ನೀಡಿದ್ದೇವೆ. ಯಾರಲ್ಲಿ ಐರನ್ ಪವರ್ ಕಡಿಮೆ ಇದೆಯೋ ಅಂದರೆ ಕಬ್ಬಿಣದ ಅಂಶ ಕಡಿಮೆಯಾಗಿದೆಯೋ ಅವರು ಇದನ್ನು ತಿಂದರೆ ಆರೋಗ್ಯ ಲಾಭಗಳನ್ನು ಪಡೆಯಬಹುದು. ತುಂಬಾ ಸುಲಭವಾಗಿ ಈ ರೆಸಿಪಿಯನ್ನು ನೀವು ಮನೆಯಲ್ಲೇ ಟ್ರೈ ಮಾಡಿ. ಬೇಕಾಗುವ ಸಾಮಗ್ರಿ ಕೂಡ ತುಂಬಾ ಕಡಿಮೆ ಇದೆ. ರುಚಿಯು ಬಿಸಿಬೇಳೆ ಬಾತಿನಂತೆ ಇದ್ದರೂ ಪಾಲಕ್ ಘಮ ಇನ್ನಷ್ಟು ಪರಿಮಳ ನೀಡುತ್ತದೆ.

ಪಾಲಕ್ ದಾಲ್ ಕಿಚಡಿ ಮಾಡಲು ಬೇಕಾಗುವ ಸಾಮಗ್ರಿಗಳು:

- 1 ಕಟ್ ಪಾಲಕ್ ಸೊಪ್ಪು

- 1 ಕಪ್ ಅಕ್ಕಿ

- 1 ಕಪ್ ಹೆಸರುಬೇಳೆ

- 1/2 ಕಪ್ ತೊಗರಿ ಬೇಳೆ

- 1/2 ಕಪ್ ಮಸೂರ್ ದಾಲ್

- 2 ಚಮಚ ಎಣ್ಣೆ

- ಅರಿಶಿನ ಪುಡಿ

- ಉಪ್ಪು

- ಶುಂಠಿ

- ಹಸಿಮೆಣಸು

- ಒಣ ಮೆಣಸು

ತಯಾರಿಸುವ ವಿಧಾನ:

1. ಪಾಲಕ್ ಸೊಪ್ಪನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.

2. ಸೊಪ್ಪನ್ನು ಕಟ್ ಮಾಡಿ.

3. ಮಿಕ್ಸಿಯಲ್ಲಿ ಸೊಪ್ಪು, ಶುಂಠಿ, ಹಸಿಮೆಣಸನ್ನು ರುಬ್ಬಿ.

4. ಅಕ್ಕಿ ಮತ್ತು ಬೇಳೆಗಳನ್ನು ತೊಳೆಯಿರಿ.

5. ಕುಕ್ಕರ್‌ನಲ್ಲಿ ಅಕ್ಕಿ ಮತ್ತು ಬೇಳೆಗಳನ್ನು ಹಾಕಿ.

6. ಚೂರು ಅರಿಶಿನ ಮತ್ತು ಉಪ್ಪನ್ನು ಹಾಕಿ.

7. ಕುಕ್ಕರ್‌ನಲ್ಲಿ ಒಂದು ವಿಷಲ್ ಹೊಡೆಸಿಕೊಳ್ಳಿ.

8. ಎಣ್ಣೆಯಲ್ಲಿ ಸಾಸಿವೆ, ಜೀರಿಗೆ ಹಾಕಿ ಮತ್ತು ರುಬ್ಬಿದ ಪೇಸ್ಟ್‌ ಹಾಕಿ

ಪಾಕಶೃಂಗಾರ ಫೇಸ್ಬುಕ್ ಪೋಸ್ಟ್‌ನಲ್ಲಿ ಈ ರೆಸಿಪಿಯ ವಿಡಿಯೋ ಶೇರ್ ಮಾಡಲಾಗಿದೆ. ಆ ವಿಡಿಯೋವನ್ನು ನಾವು ನಿಮಗಿಲ್ಲಿ ನೀಡಿದ್ದೇವೆ. ಸಾಂಪ್ರದಾಯಿಕ ರುಚಿ ಹಾಗೂ ಭಾರತೀಯ ಅಡುಗೆಗಳನ್ನು ತುಂಬಾ ಚೆನ್ನಾಗಿ ಮಾಡಿ ತೋರಿಸುತ್ತೀರಿ ಎಂದು ಹಲವರು ಈ ರೆಸಿಪಿ ಇಷ್ಟಪಟ್ಟು ಅಭಿಪ್ರಾಯವನ್ನು ಕಾಮೆಂಟ್ ಮಾಡಿದ್ದಾರೆ.



9. ಅದರ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.

10. ಇಷ್ಟು ಮಾಡಿದ ನಂತರದಲ್ಲಿ ನೀವು ಅದಕ್ಕೆ ಬೇಯಿಸಿಟ್ಟುಕೊಂಡ ಅನ್ನ ಹಾಗೂ ಬೇಳೆಗಳನ್ನು ಮಿಕ್ಸ್‌ ಮಾಡಿ. ಹಸಿ ವಾಸನೆ ಹೋಗಿ ಪರಿಮಳ ಬರುತ್ತದೆ ಆನಂತರ ಅದಕ್ಕೆ ಅಕ್ಕಿಯನ್ನು ಹಾಕಿ ಮ್ಯಾಶ್ ಮಾಡಿ ನಂತರ ಅದಕ್ಕೆ ಬೇಕಾದಷ್ಟು ಉಪ್ಪನ್ನು ಮತ್ತೆ ಸೇರಿಸಿಕೊಂಡು ಇನ್ನಷ್ಟು ಕಾಯಿಸಿ. ಇಲ್ಲವಾದರೆ ಹಸಿವಾಸನೆ ಹಾಗೆ ಉಳಿದುಬಿಡುತ್ತದೆ ಕೆಲವರಿಗೆ ಇದು ಇಷ್ಟ ಆಗುವುದಿಲ್ಲ.

mysore-dasara_Entry_Point