ಕನ್ನಡ ಸುದ್ದಿ  /  Lifestyle  /  How To Prepare Carrot Pickle Recipe Or Grandmas Pickle Recipe Check It Here

Grandma's Carrot Pickle Recipe: ಮನೆಯಲ್ಲಿ ಅಜ್ಜಿಯರು ಮಾಡುವ ಗಜ್ಜರಿ ಉಪ್ಪಿನಕಾಯಿ ಈ ಚಳಿಗಾಲಕ್ಕೆ ಆರೋಗ್ಯಕ್ಕೂ ಒಳ್ಳೆಯದು..

ಮನೆಯಲ್ಲಿ ಅಜ್ಜಿಯರು ಇದ್ದರೆ, ಅಲ್ಲಿ ಬಗೆಬಗೆ ಉಪ್ಪಿನಕಾಯಿಗಳಿಗೇನು ಕೊರತೆ ಇಲ್ಲ. ಇದೀಗ ಅಜ್ಜಿಯರು ಈ ಚಳಿಗಾಲಕ್ಕೆಂದೇ ಮಾಡುವ ಗಜ್ಜರಿ/ ಕ್ಯಾರೆಟ್‌ ಉಪ್ಪಿನಕಾಯಿ ತುಂಬ ರುಚಿಕಟ್ಟು.

ಮನೆಯಲ್ಲಿ ಅಜ್ಜಿಯರು ಮಾಡುವ ಗಜ್ಜರಿ ಉಪ್ಪಿನಕಾಯಿ ಈ ಚಳಿಗಾಲಕ್ಕೆ ಆರೋಗ್ಯಕ್ಕೂ ಒಳ್ಳೆಯದು..
ಮನೆಯಲ್ಲಿ ಅಜ್ಜಿಯರು ಮಾಡುವ ಗಜ್ಜರಿ ಉಪ್ಪಿನಕಾಯಿ ಈ ಚಳಿಗಾಲಕ್ಕೆ ಆರೋಗ್ಯಕ್ಕೂ ಒಳ್ಳೆಯದು..

ಉಪ್ಪಿನಕಾಯಿ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಮಾವಿನ ಕಾಯಿ ಮತ್ತು ನಿಂಬೆ ಹಣ್ಣಿನ ಉಪ್ಪಿನಕಾಯಿ. ಅದರ ಜತೆಗೆ ಮೆಣನಸಿನಕಾಯಿ, ಮೂಲಂಗಿ, ಸೌತೆಕಾಯಿ, ಬೆಳ್ಳುಳ್ಳಿ, ಶುಂಠಿಯಿಂದಲೂ ಉಪ್ಪಿನಕಾಯಿ ಮಾಡಲಾಗುತ್ತದೆ. ಅದರಲ್ಲೂ ಮನೆಯಲ್ಲಿ ಅಜ್ಜಿಯರು ಇದ್ದರೆ, ಅಲ್ಲಿ ಬಗೆಬಗೆ ಉಪ್ಪಿನಕಾಯಿಗಳಿಗೇನು ಕೊರತೆ ಇಲ್ಲ. ಇದೀಗ ಅಜ್ಜಿಯರು ಈ ಚಳಿಗಾಲಕ್ಕೆಂದೇ ಮಾಡುವ ಗಜ್ಜರಿ/ ಕ್ಯಾರೆಟ್‌ ಉಪ್ಪಿನಕಾಯಿ ತುಂಬ ರುಚಿಕಟ್ಟು. ನಾಲಿಗೆಗೂ ಅಷ್ಟೇ ಟೇಸ್ಟ್‌ ಕೊಡುತ್ತದೆ. ಹಾಗಾದರೆ, ಅದನ್ನು ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ..

ಕ್ಯಾರೆಟ್ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿಗಳು..

ಕ್ಯಾರೆಟ್ - 1 ಕೆಜಿ

ಸೋಂಪು- 2 ಟೀ ಚಮಚ

ಮೆಂತ್ಯ ಕಾಳು - 1 ಟೀ ಚಮಚ

ಸಾಸಿವೆ ಕಾಳು- 1 ಟೀ ಚಮಚ

ಅರಿಶಿನ ಪುಡಿ - 1 1 ಟೀ ಚಮಚ

ಕೆಂಪು ಮೆಣಸಿನ ಪುಡಿ - 2 1 ಟೀ ಚಮಚ

ಜೀರಿಗೆ - 2 1 ಟೀ ಚಮಚ

ಆಮ್ಚೂರ್ - 1 1 ಟೀ ಚಮಚ

ಎಣ್ಣೆ - 300 ಗ್ರಾಂ (ಅಗತ್ಯವಿರುವಷ್ಟು)

ಉಪ್ಪು - 1 ಬೌಲ್ (ರುಚಿಗೆ ತಕ್ಕಂತೆ)

ಕ್ಯಾರೆಟ್ ಉಪ್ಪಿನಕಾಯಿ ಮಾಡುವುದು ಹೇಗೆ

ಕ್ಯಾರೆಟ್ ಉಪ್ಪಿನಕಾಯಿ ಮಾಡಲು, ಮೊದಲು ಕ್ಯಾರೆಟ್ ಅನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಬಳಿಕ ಮೇಲಿನ ಸಿಪ್ಪೆ ತೆಗೆದು ಉದ್ದನೆಯ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಆ ತುಂಡುಗಳಿಗೆ, ಅರಿಶಿನ ಪುಡಿ, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಗ್ಯಾಸ್‌ ಮೇಲೆ ಬಾಣಲೆ ಇಟ್ಟು, ಕಡಿಮೆ ಉರಿಯಲ್ಲಿ ಸಾಸಿವೆ, ಜೀರಿಗೆ, ಮೆಂತ್ಯ ಕಾಳು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಈ ಮಸಾಲೆಗಳನ್ನು 1 ನಿಮಿಷ ಹುರಿದ ನಂತರ, ಗ್ಯಾಸ್ ಆಫ್ ಮಾಡಿ ಮಿಕ್ಸರ್‌ನಲ್ಲಿ ಒರಟಾಗಿ ಪೌಡರ್‌ ಮಾಡಿಕೊಳ್ಳಿ,

ಒರಟಾದ ಮಸಾಲೆ ಮಿಶ್ರಣವನ್ನು ಕ್ಯಾರೆಟ್‌ಗೆ ಸೇರಿಸಿ ಮಿಶ್ರಣ ಮಾಡಿ. ಇದರ ನಂತರ, ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಬಿಸಿಯಾದಾಗ, ಗ್ಯಾಸ್ ಆಫ್ ಮಾಡಿ, ಎಣ್ಣೆಯನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಕ್ಯಾರೆಟ್‌ಗೆ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣವಾದ ಮೇಲೆ ಉಪ್ಪಿನಕಾಯಿಯನ್ನು ಗಾಜಿನ ಜಾರ್‌ನಲ್ಲಿ ತುಂಬಿಸಿಡಿ. ಬಿಸಿ ಬಿಸಿ ಅನ್ನದ ಜತೆಗೆ ಇದು ನಿಮ್ಮ ನಾಲಿಗೆಯ ಜತೆಗೆ ಆರೋಗ್ಯಕ್ಕೂ ಒಳ್ಳೆಯದು.

ವಿಭಾಗ