Chocolate Falooda Recipe: ಮನೆಯಲ್ಲಿಯೇ ಫಟಾ ಫಟ್‌ ಮಾಡಿ ಚಾಕೋಲೇಟ್‌ ಫಾಲೂದಾ.. ಕೇವಲ ನಾಲ್ಕೇ ಐಟಂ ಸಾಕು..
ಕನ್ನಡ ಸುದ್ದಿ  /  ಜೀವನಶೈಲಿ  /  Chocolate Falooda Recipe: ಮನೆಯಲ್ಲಿಯೇ ಫಟಾ ಫಟ್‌ ಮಾಡಿ ಚಾಕೋಲೇಟ್‌ ಫಾಲೂದಾ.. ಕೇವಲ ನಾಲ್ಕೇ ಐಟಂ ಸಾಕು..

Chocolate Falooda Recipe: ಮನೆಯಲ್ಲಿಯೇ ಫಟಾ ಫಟ್‌ ಮಾಡಿ ಚಾಕೋಲೇಟ್‌ ಫಾಲೂದಾ.. ಕೇವಲ ನಾಲ್ಕೇ ಐಟಂ ಸಾಕು..

ಐಸ್‌ಕ್ರೀಮ್‌ನಲ್ಲಿ ಏನಾದರೊಂದು ಹೊಸದನ್ನು ತಿನ್ನಬೇಕು ಎನಿಸಿದರೆ, ಚಾಕೋಲೇಟ್‌ ಫಾಲೂದಾ ಟ್ರೈ ಮಾಡಬಹುದು..

ಮನೆಯಲ್ಲಿಯೇ ಫಟಾ ಫಟ್‌ ಮಾಡಿ ಚಾಕೋಲೇಟ್‌ ಫಾಲೂದಾ.. ಕೇವಲ ನಾಲ್ಕೇ ಐಟಂ ಸಾಕು..
ಮನೆಯಲ್ಲಿಯೇ ಫಟಾ ಫಟ್‌ ಮಾಡಿ ಚಾಕೋಲೇಟ್‌ ಫಾಲೂದಾ.. ಕೇವಲ ನಾಲ್ಕೇ ಐಟಂ ಸಾಕು..

Chocolate Falooda Recipe: ಹೊರಗಡೆ ಚಳಿ ಇದ್ದರೂ, ಐಸ್‌ಕ್ರೀಮ್‌ ತಿನ್ನಲು ಮನಸ್ಸು ಯಾವತ್ತೂ ಇಲ್ಲ ಎನ್ನಲ್ಲ. ಅದರಲ್ಲೂ ಹೊರಗಡೆ ಹೋಗದೆನೇ ಮನೆಯಲ್ಲಿಯೇ ಐಸ್‌ಕ್ರೀಮ್‌ನಲ್ಲಿ ಏನಾದರೊಂದು ಹೊಸದನ್ನು ತಿನ್ನಬೇಕು ಎನಿಸಿದರೆ, ಚಾಕೋಲೇಟ್‌ ಫಾಲೂದಾ ಟ್ರೈ ಮಾಡಬಹುದು.. ಇಲ್ಲಿದೆ ನೋಡಿ ಈ ರೆಸಿಪಿ ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿ...

ಚಾಕೋಲೇಟ್‌ ಫಾಲೂದಾ ಮಾಡಲು ಬೇಕಾಗುವ ಸಾಮಗ್ರಿ...

ಫಾಲೂದಾ ಶಾವಿಗೆ (ಮಾರುಕಟ್ಟೆ ಸರಳವಾಗಿ ಇದು ಲಭ್ಯ)

1/4 ಕಪ್‌ ಹಾಲು

1 ಟೇಬಲ್‌ ಸ್ಪೂನ್‌ ಕಸ್ಟರ್ಡ್‌ ಪೌಡರ್‌

1 ಟೇಬಲ್‌ ಸ್ಪೂನ್‌ ಕೋಕೋ ಪೌಡರ್

4 ಟೇಬಲ್‌ ಸ್ಪೂನ್‌ ಸಕ್ಕರೆ

4 ಟೇಬಲ್‌ ಸ್ಪೂನ್‌ ಚಿಯಾ ಸೀಡ್ಸ್‌

ಚಾಕೋಲೇಟ್‌, ವೆನಿಲಾ ಐಸ್‌ಕ್ರೀಮ್‌

ಚಾಕೋಲೇಟ್‌ ಸಿರಪ್‌

ಮಾಡುವ ವಿಧಾನ

  • ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ಅದರೊಳಗೆ ಫಾಲೂದಾ ಶಾವಿಗೆ ಹಾಕಿ ಎರಡು ನಿಮಿಷ ಕುದಿಸಿ..
  • ಇತ್ತ ಈ ಫಾಲೂದಾ ಮಾಡುವುದಕ್ಕೂ ಮೊದಲು 4 ಟೇಬಲ್‌ ಸ್ಪೂನ್‌ ಚಿಯಾ ಬೀಜಗಳನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಿ.
  • ಬಳಿಕ ಒಂದು ಪಾತ್ರೆಗೆ 1/4 ಕಪ್‌ ಹಾಲಿಗೆ 1 ಟೇಬಲ್‌ ಸ್ಪೂನ್‌ ಕಸ್ಟರ್ಡ್‌ ಪೌಡರ್‌ ಮತ್ತು 1 ಟೇಬಲ್‌ ಸ್ಪೂನ್‌ ಕೋಕೋ ಪೌಡರ್ ಹಾಕಿ ಮಿಶ್ರಣ ಮಾಡಿ
  • ಇದಾದ ಬಳಿಕ ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್‌ ಹಾಲು ಹಾಕಿ, ಅದಕ್ಕೆ ಕಸ್ಟರ್ಡ್‌ ಪೌಡರ್‌, ಕೋಕೋ ಪೌಡರ್ ಹಾಲಿನ ಮಿಶ್ರಣವನ್ನು ಸೇರಿಸಿ.
  • ಇದಕ್ಕೆ ನಾಲ್ಕು ಚಮಚ ಸಕ್ಕರೆ ಸೇರಿಸಿ, ಸಕ್ಕರೆ ಕರಗುವ ವರೆಗೂ ಚೆನ್ನಾಗಿ ಮಿಶ್ರಣ ಮಾಡಿ.
  • ಬಳಿಕ ಒಂದು ಗಾಜಿನ ಗ್ಲಾಸ್‌ಗೆ ಚಾಕೋಲೇಟ್‌ ಸಿರಪ್‌ ಹಾಕಿಕೊಳ್ಳಿ. ಅದಕ್ಕೆ ನೆನೆಸಿದ ಚಿಯಾ ಸೀಡ್ಸ್‌ ಹಾಕಿ ಅದರ ಮೇಲೆ ಫಾಲೂದಾ ಶಾವಿಗೆ ಹಾಕಿ
  • ಆ ಮೇಲೆ ಚಾಕೋಲೇಟ್‌ ಹಾಲಿನ ಮಿಶ್ರಣವನ್ನು ಹಾಕಿ, ಅದರ ಮೇಲೆ ಚಾಕೋಲೇಟ್‌ ಐಸ್‌ಕ್ರೀಮ್ ಹಾಕಿ ಟೇಸ್ಟ್‌ ಮಾಡಿ.. ಈಗ ನೀವು ಇದನ್ನು ಸವಿಯಬಹುದು...

ವಿಡಿಯೋ ನೋಡಿ…

Whats_app_banner