Instant Poha Dosa Recipe: ನೆನೆಸಿದ ಅವಲಕ್ಕಿಯಿಂದ ಹೀಗೂ ಮಾಡಬಹುದು ಗರಿ ಗರಿ ದೋಸೆ!; ಕಡಿಮೆ ಸಮಯ, ಹೆಚ್ಚು ಟೇಸ್ಟ್.. ರೆಸಿಪಿ ಇಲ್ಲಿದೆ..
ದೋಸೆಯನ್ನು ಸುಲಭವಾಗಿ, ಕೇವಲ 10 ನಿಮಿಷದಲ್ಲಿ ಮಾಡುಬಹುದು! ಅದ್ಹೇಗೆ ಅಂತೀರಾ. ಇಲ್ಲಿದೆ ನೋಡಿ ಫಟಾಫಟ್ ಅಂತ ಕೆಲವೇ ನಿಮಿಷಗಳಲ್ಲಿ ಮಾಡಬಹುದಾದ ಅವಲಕ್ಕಿ ದೋಸೆ ರೆಸಿಪಿ.
Instant Poha Dosa Recipe: ದೋಸೆ ಆಗಲಿ ಇಡ್ಲಿ ಆಗಲಿ.. ಇವೆಲ್ಲವನ್ನು ಮಾಡಲು ಒಂದು ದಿನ ಮುಂಚಿತವಾಗಿ ಅಕ್ಕಿಯನ್ನು ನೆನೆಹಾಕಿ, ರುಬ್ಬಿ ಮರುದಿನ ಬೆಳಗ್ಗೆ ತಯಾರಿಸಬೇಕು. ಅದು ಕೊಂಚ ಕಷ್ಟದ ಕೆಲಸ. ಆದರೆ, ಅದೇ ದೋಸೆಯನ್ನು ಸುಲಭವಾಗಿ, ಕೇವಲ 10 ನಿಮಿಷದಲ್ಲಿ ಮಾಡುಬಹುದಾದರೆ ಹೇಗಿರುತ್ತದೆ. ಹಾಗಾದರೆ, ಫಟಾಫಟ್ ಅಂತ ಕೆಲವೇ ನಿಮಿಷಗಳಲ್ಲಿ ಈ ಅವಲಕ್ಕಿ ದೋಸೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ..
ಅವಲಕ್ಕಿಯ ದೋಸೆ ಮಾಡಲು ಬೇಕಾಗುವ ಸಾಮಾಗ್ರಿ
ನೆನೆಸಿದ ಅವಲಕ್ಕಿ - 3 ರಿಂದ 4 ಕಪ್
ಸೂಜಿ ರವೆ (ಬಾಂಬೆ ರವೆ ಅಥವಾ ಚಿರೋಟಿ ರವೆ)- 1 ಕಪ್
ಮೊಸರು 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಸೋಡಾ ಅಗತ್ಯಕ್ಕೆ ತಕ್ಕಷ್ಟು..
ಅವಲಕ್ಕಿಯ ದೋಸೆ ಮಾಡುವ ವಿಧಾನ..
ಮೊದಲಿಗೆ 3ರಿಂದ 4 ಕಪ್ ಅವಲಕ್ಕಿಯನ್ನು ತೆಗೆದುಕೊಂಡು, ನೀರಿನಲ್ಲಿ ಚೆನ್ನಾಗಿ ನೆನೆಸಿಡಿ.
ಹಾಗೆ ನೆನಸಿದ ಅವಲಕ್ಕಿಯನ್ನು ಚೆನ್ನಾಗಿ ಹಿಂಡಿ ಒಂದು ಬೌಲ್‌ಗೆ ತೆಗೆದಿಟ್ಟುಕೊಳ್ಳಿ
ಆ ನೆನೆಸಿದ ಅವಲಕ್ಕಿಗೆ 1 ಕಪ್ ಸೂಜಿ ರವೆ (ಬಾಂಬೆ ರವೆ/ ಚಿರೋಟಿ ರವೆ) ಹಾಕಿ
ಗಟ್ಟಿ ಮೊಸರನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ ಹಾಕಿ ಮತ್ತೆ ಮಿಶ್ರಣ ಮಾಡಿ.
ಹೀಗೆ ರೆಡಿಯಾದ ಮಿಶ್ರಣವನ್ನು 15 ನಿಮಿಷಗಳ ಕಾಲ ಹಾಗೇ ಇಡಿ.
15 ನಿಮಿಷಗಳ ಬಳಿಕ ಕಾದ ಕಾವಲಿ ಮೇಲೆ ದೋಸೆ ಹಾಕಿ..
ಒಳ್ಳೆ ಕೊಬ್ಬರಿ ಚಟ್ನಿ ಅಥವಾ ನಿಮ್ಮಿಷ್ಟ ಚಟ್ನಿಯೊಂದಿಗೆ ಬ್ಯಾಟಿಂಗ್ ಮಾಡಿ...
ಇನ್ನೂ ಕೆಲವು ರೆಸಿಪಿಗಳು ಇಲ್ಲಿವೆ ಟ್ರೈ ಮಾಡಿ..
Masala Chai Recipe: ನಿಮ್ಮ ಮನೆ ಟೀ ರುಚಿಸುತ್ತಿಲ್ಲವೇ? ನಾರ್ಮಲ್ ಚಹಾವನ್ನು ಮತ್ತಷ್ಟು ಸ್ವಾದಿಷ್ಟಗೊಳಿಸುವುದು ಹೇಗೆ? ಇಲ್ಲಿದೆ ನೋಡಿ
ಕೆಲವೊಬ್ಬರ ಮನೆಯಲ್ಲಿ ಎಷ್ಟೇ ಟೀ ಬ್ರಾಂಡ್ ಬದಲಾವಣೆ ಮಾಡಿದರೂ, ಚಹಾದ ರುಚಿಯೇ ಘಮಿಸುವುದಿಲ್ಲ. ಎಷ್ಟೇ ಹಾಲು ಸುರಿದರೂ ಸ್ವಾದ ನಾಲಿಗೆಗೆ ಇಷ್ಟವಾಗುವುದಿಲ್ಲ. ಬೇರೆಯವರ ಮನೆಯಲ್ಲಿನ ಚಹಾದ ಘಮ ಇಷ್ಟವಾದಂತೆ, ತಮ್ಮ ಮನೆಯ ಚಹಾ ಇಷ್ಟವಾಗುವುದಿಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ, ನಾವಿಲ್ಲಿ ನಿಮ್ಮ ಮನೆಯ ಚಹಾದ ಘಮ ಹೆಚ್ಚಿಸುವ ಪೌಡರ್ ರೆಸಿಪಿ ಜತೆ ಆಗಮಿಸಿದ್ದೇವೆ. ಇದು ಕೇವಲ ಚಹಾದ ರುಚಿಯನ್ನಷ್ಟೇ ಅಲ್ಲ, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ನೋಡಿ..
Row Banana Bonda Recipe: ಬಾಳೆಕಾಯಿ ಬೋಂಡಾ.. ಇದು ಬೆಳಗಿನ ನಾಷ್ಟಾ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಹೇಳಿ ಮಾಡಿಸಿದ ರೆಸಿಪಿ..
ಕೆಲವೊಂದಿಷ್ಟು ರೆಸಿಪಿಗಳು ಸಂಜೆಗೂ ಸೈ ಬೆಳಗಿನ ಉಪಹಾರಕ್ಕೂ ಟೇಸ್ಟಿ. ಇದೀಗ ಅಂಥ ರೆಸಿಪಿಯೊಂದರ ಪರಿಚಯ ಇಲ್ಲಿದೆ. ಬಾಳೆಕಾಯಿಯಿಂದ ತುಂಬ ಸುಲಭವಾಗಿ ಮಾಡಬಹುದಾದ ಬೋಂಡಾ ಇದು. ನೋಡಲು ಚೆಂದ, ಮಾಡುವುದೂ ತುಂಬ ಸರಳ. ಹಾಗಾದರೆ, ಈ ರೆಸಿಪಿ ಮಾಡುವ ಬಗೆ ಹೇಗೆ.. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ನೋಡಿ..
Home Made Masala Powder: ಅಂಗಡಿ ಮಸಾಲಾ ಬಳಸುತ್ತೀರಾ? ಇನ್ಮೇಲೆ ಮನೆಯಲ್ಲಿಯೇ ರೆಡಿ ಮಾಡಿಟ್ಟುಕೊಳ್ಳಿ ಹೋಮ್‌ಮೇಡ್ ಮಸಾಲೆ..
ಮಸಾಲೆ ಇಲ್ಲದೆ ಅಡುಗೆಯೇ ಇಲ್ಲ. ಈಗಂತೂ ಮಾರುಕಟ್ಟೆಯಲ್ಲಿ ಬಗೆಬಗೆ ಬ್ರಾಂಡ್‌ನ ಮಸಾಲೆಗಳಿಗೇನು ಕಮ್ಮಿ ಇಲ್ಲ. ಸಾಂಬಾರ್, ಚಿಕನ್, ಮಟನ್, ಕುಷ್ಕಾ, ಬಿರಿಯಾನಿ ರೈಸ್, ಪುಳಿಯೊಗರೆ, ರಸಂ ಹೀಗೆ ಎಲ್ಲದಕ್ಕೂ ಮಸಾಲಾಗಳು ಅಂಗಡಿಯಲ್ಲಿ ಸಿಕ್ಕಿ ಬಿಡುತ್ತವೆ. ಆದರೆ, ಆ ಮಸಾಲಾ ಪೌಡರ್ ಮಾಡುವ ವಿಧಾನ ಹೇಗಿರುತ್ತೋ, ಏನೆಲ್ಲ ಪದಾರ್ಥಗಳನ್ನು ಹಾಕಿರುತ್ತಾರೋ ಯಾರಿಗೆ ಗೊತ್ತು. ಹಾಗಾದರೆ, ನೀವೇ ಏಕೆ ಮನೆಯಲ್ಲಿಯೇ ಉತ್ಕೃಷ್ಟ ಗುಣಮಟ್ಟದ ಮಸಾಲೆ ಪುಡಿಯನ್ನು ಸಿದ್ಧಪಡಿಸಿಕೊಳ್ಳಬಾರದು. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ನೋಡಿ..