Prawns Roast Fry Recipe: ಬಾಯಲ್ಲಿ ನೀರೂರಿಸುತ್ತೆ ಸಿಗಡಿ ರೋಸ್ಟ್‌ ಫ್ರೈ; ಹೀಗೂ ನೀವು ಈ ರೆಸಿಪಿ ಟ್ರೈ ಮಾಡಬಹುದು.. ಇಲ್ಲಿದೆ ಮಾಡುವ ವಿಧಾನ-how to prepare prawns roast fry check it here for step by step details ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Prawns Roast Fry Recipe: ಬಾಯಲ್ಲಿ ನೀರೂರಿಸುತ್ತೆ ಸಿಗಡಿ ರೋಸ್ಟ್‌ ಫ್ರೈ; ಹೀಗೂ ನೀವು ಈ ರೆಸಿಪಿ ಟ್ರೈ ಮಾಡಬಹುದು.. ಇಲ್ಲಿದೆ ಮಾಡುವ ವಿಧಾನ

Prawns Roast Fry Recipe: ಬಾಯಲ್ಲಿ ನೀರೂರಿಸುತ್ತೆ ಸಿಗಡಿ ರೋಸ್ಟ್‌ ಫ್ರೈ; ಹೀಗೂ ನೀವು ಈ ರೆಸಿಪಿ ಟ್ರೈ ಮಾಡಬಹುದು.. ಇಲ್ಲಿದೆ ಮಾಡುವ ವಿಧಾನ

ಸಿಗಡಿ ರೋಸ್ಟ್‌ ಫ್ರೈ ಈ ಸ್ವಾದಿಷ್ಟ ಖಾದ್ಯವನ್ನು ಮಾಡುವುದು ಹೇಗೆ? ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಈಗಲೇ ಟ್ರೈ ಮಾಡಿ.. ರುಚಿ ನೋಡಿ..

ಬಾಯಲ್ಲಿ ನೀರೂರಿಸುತ್ತೆ ಸಿಗಡಿ ರೋಸ್ಟ್‌ ಫ್ರೈ; ಹೀಗೂ ನೀವು ಈ ರೆಸಿಪಿ ಟ್ರೈ ಮಾಡಬಹುದು.. ಇಲ್ಲಿದೆ ಮಾಡುವ ವಿಧಾನ
ಬಾಯಲ್ಲಿ ನೀರೂರಿಸುತ್ತೆ ಸಿಗಡಿ ರೋಸ್ಟ್‌ ಫ್ರೈ; ಹೀಗೂ ನೀವು ಈ ರೆಸಿಪಿ ಟ್ರೈ ಮಾಡಬಹುದು.. ಇಲ್ಲಿದೆ ಮಾಡುವ ವಿಧಾನ

ಮೀನು ಪ್ರಿಯರಿಗೆ ಸಿಗಡಿಯಲ್ಲಿ ಹೀಗೊಂದು ರೋಸ್ಟ್‌ ಫ್ರೈ ಮಾಡಬಹುದು. ಈ ರೆಸಿಪಿ ಮಾಡುವುದೂ ಸರಳ, ಬೇಕಾಗುವ ಸಾಮಗ್ರಿಗಳು ಲಿಮಿಟೆಡ್.‌ ಹಾಗಾದರೆ, ಈ ಸ್ವಾದಿಷ್ಟ ಖಾದ್ಯವನ್ನು ಮಾಡುವುದು ಹೇಗೆ? ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಈಗಲೇ ಟ್ರೈ ಮಾಡಿ.. ರುಚಿ ನೋಡಿ..

ಸಿಗಡಿ ರೋಸ್ಟ್‌ ಫ್ರೈಗೆ ಬೇಕಾಗುವ ಸಾಮಾಗ್ರಿಗಳು...

1. 1 ಕಪ್‌ ಕರಿಬೇವಿನ ಎಲೆಗಳು (ಬಾಣಲೆಯಲ್ಲಿ ಹುರಿದು ಪುಡಿ ಮಾಡಿದ ಎಲೆಗಳು)

2. 50 ಗ್ರಾಂ ಎಣ್ಣೆ

3. ಏಲಕ್ಕಿ ಮತ್ತು ಲವಂಗದ 3 ಪಿಸಿಗಳು ಮತ್ತು 5 ಸೆಂ ದಾಲ್ಚಿನ್ನಿ ರೋಲ್.

4. ಈರುಳ್ಳಿ 150 ಗ್ರಾಂ. (ಪೇಸ್ಟ್‌)

5. ಟೊಮೆಟೊ 100 ಗ್ರಾಂ. (ಪೇಸ್ಟ್‌)

6. 1 ಟೀ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್

7. ಅಗತ್ಯವಿರುವಷ್ಟು ಉಪ್ಪು.

8. 1 ಟೀ ಚಮಚ ಅರಿಶಿನ ಪುಡಿ.

9. 1.5 ಟೀ ಚಮಚ ಕರಿ ಮೆಣಸಿನ ಪುಡಿ.

10. 1.5 ಕಪ್ ನೀರು.

11. ಸೀಗಡಿ ಮೀನು 500 ಗ್ರಾಂ. (ಶುಚಿಗೊಳಿಸಿದ ನಂತರ)

12. ಅರ್ಧ ಚಮಚ ಮೆಣಸು ಪುಡಿ.

ಮಾಡುವ ವಿಧಾನ

- ಮೊದಲಿಗೆ ಒಂದು ಪ್ಯಾನ್‌ನಲ್ಲಿ ಕರಿಬೇವಿ ಹಸಿ ಎಲೆಗಳನ್ನು ಹುರಿದುಕೊಂಡು, ಪುಡಿ ಮಾಡಿಟ್ಟುಕೊಳ್ಳಿ..

- ಅದರ ಜತೆಗೆ ಈರುಳ್ಳಿ ಮತ್ತು ಟೊಮೆಟೊ ಎರಡನ್ನೂ ಮಿಕ್ಸರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

- ಬಳಿಕ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಏಲಕ್ಕಿ ಹಾಕಿ, ಬಳಿಕ ಎಣ್ಣೆ ಕಾಯುತ್ತಿದ್ದಂತೆ, ರುಬ್ಬಿದ ಮಿಶ್ರಣವನ್ನು ಹಾಕಿ

- ಹಸಿ ವಾಸನೆ ಹೋಗುವವರೆಗೂ ಮಿಶ್ರಣವನ್ನು ಚೆನ್ನಾಗಿ ಚಮಚದಿಂದ ಬಾಡಿಸಿ, ಬಳಿಕ ಶುಂಠಿ- ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಬೇಯಿಸಿ

- ಬಳಿಕ ಚೆನ್ನಾಗಿ ತೊಳೆದ ಸಿಗಡಿ ಮತ್ತು ತುಸು ನೀರು ಹಾಕಿ ಮಿಶ್ರಣ ಮಾಡಿ. ಕೆಲ ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ

- ಈಗ ನೀರು ಕಡಿಮೆ ಆಗುತ್ತಿದ್ದಂತೆ, ಮತ್ತೆ ಚಮಚದಿಂದ ಬಾಡಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ.

- ಇದೇ ಮಿಶ್ರಣಕ್ಕೆ ಕರಿಮೆಣಸಿನ ಪುಡಿಯನ್ನು ಸೇರಿಸಿ, ಖಾರ ಬೇಕೆಂದರೆ, ಕೆಂಪು ಮೆಣಸಿನ ಖಾರವನ್ನೂ ಸೇರಿಸಿ ಬಾಡಿಸಿ.

- ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಳ ಮುಚ್ಚಿ, ನೀರು ಇಂಗುವವರೆಗೂ ಬೇಯಿಸಿ.

- ಹೀಗೆ ಮಿಶ್ರಣ ರೆಡಿ ಆಗ್ತಿದ್ದಂತೆ, ಹುರಿದು ಪುಡಿ ಮಾಡಿಟ್ಟುಕೊಂಡ ಕರಿಬೇವಿನ ಪುಡಿಯನ್ನು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ.

- ಈಗ ನಿಮ್ಮಿಷ್ಟದ ಸಿಗಡಿ ಫ್ರೈ ರೆಡಿ.

mysore-dasara_Entry_Point