Raw Banana Bonda Recipe: ಬಾಳೆಕಾಯಿ ಬೋಂಡಾ.. ಇದು ಬೆಳಗಿನ ನಾಷ್ಟಾ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಹೇಳಿ ಮಾಡಿಸಿದ ರೆಸಿಪಿ..
ಬಾಳೆಕಾಯಿಯಿಂದ ತುಂಬ ಸುಲಭವಾಗಿ ಮಾಡಬಹುದಾದ ಬೋಂಡಾ ಇದು. ನೋಡಲು ಚೆಂದ, ಮಾಡುವುದೂ ತುಂಬ ಸರಳ. ಹಾಗಾದರೆ, ಈ ರೆಸಿಪಿ ಮಾಡುವ ಬಗೆ ಹೇಗೆ.. ಇಲ್ಲಿದೆ ನೋಡಿ..
Row Banana Bonda Recipe: ಕೆಲವೊಂದಿಷ್ಟು ರೆಸಿಪಿಗಳು ಸಂಜೆಗೂ ಸೈ ಬೆಳಗಿನ ಉಪಹಾರಕ್ಕೂ ಟೇಸ್ಟಿ. ಇದೀಗ ಅಂಥ ರೆಸಿಪಿಯೊಂದರ ಪರಿಚಯ ಇಲ್ಲಿದೆ. ಬಾಳೆಕಾಯಿಯಿಂದ ತುಂಬ ಸುಲಭವಾಗಿ ಮಾಡಬಹುದಾದ ಬೋಂಡಾ ಇದು. ನೋಡಲು ಚೆಂದ, ಮಾಡುವುದೂ ತುಂಬ ಸರಳ. ಹಾಗಾದರೆ, ಈ ರೆಸಿಪಿ ಮಾಡುವ ಬಗೆ ಹೇಗೆ.. ಇಲ್ಲಿದೆ ನೋಡಿ..
ಬಾಳೆಕಾಯಿ ಬೋಂಡಾ ಬೇಕಾಗುವ ಸಾಮಗ್ರಿ
1. ಬಾಳೆ ಕಾಯಿ 250 ಗ್ರಾಂ.
2. ಸಣ್ಣದಾಗಿ ಹೆಚ್ಚಿದ 150 ಗ್ರಾಂ ಈರುಳ್ಳಿ.
3. ಅರಿಶಿನ 1 ಟೀಸ್ಪೂನ್
4. ಕಾಶ್ಮೀರಿ ಮೆಣಸಿನ ಪುಡಿ 1 ಟೀಸ್ಪೂನ್
5. ಗರಂ ಮಸಾಲಾ 1 ಟೀಸ್ಪೂನ್
6. ಬ್ರೆಡ್ ಪೌಡರ್ 25 ಗ್ರಾಂ.
7. ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು 1/4 ಕಪ್.
8. ಅಗತ್ಯವಿರುವಷ್ಟು ಉಪ್ಪು.
9. ಕರಿಯಲು ಎಣ್ಣೆ..
10. 3 ಚಮಚ ಮೈದಾ
11. ನೀರು
ಮಾಡುವ ವಿಧಾನ..
1. ಮೊದಲಿಗೆ ಬಾಳೆ ಕಾಯಿಯನ್ನು ಎರಡು ಹೋಳು ಮಾಡಿ ಸ್ಟೀಮ್‌ನಲ್ಲಿ ಬೇಯಿಸಿಕೊಳ್ಳಿ
2. ಬೇಯಿಸಿದ ಬಾಳೆಕಾಯಿಯನ್ನು ಸುಲಿದು, ಅದಕ್ಕೆ ಈರುಳ್ಳಿ ಅರಿಶಿನ ಪುಡಿ, ಖಾರದ ಪುಡಿ ಸೇರಿಸಿ ಕಲಸಿ
3. ಬಳಿಕ ಗರಂ ಮಸಾಲಾ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ
4. ಇದೇ ಮಿಶ್ರಣಕ್ಕೆ ಬ್ರೆಡ್ ಪೌಡರ್ ಹಾಕಿ, ಚೂರು ನೀರು ಬೆರಸಿ ಹಿಟ್ಟಿನ ಹದಕ್ಕೆ ತಯಾರಿಸಿಟ್ಟುಕೊಳ್ಳಿ
5. ಇದೇ ಹಿಟ್ಟನ್ನು ಗೋಲಿ ಆಹಾರದಲ್ಲಿ ಮಾಡಿಟ್ಟುಕೊಳ್ಳಿ. ಇನ್ನೊಂದೆಡೆ ಮೈದಾ ಹಿಟ್ಟಿಗೆ ನೀರು ಬೆರೆಸಿ ಆ ಹಿಟ್ಟಿನ ಮಿಶ್ರಣದಲ್ಲಿ ಗೋಲಿಯನ್ನು ಹಾಕಿ.
6. ಹಿಟ್ಟಿನಲ್ಲಿ ಅದ್ದಿದ ಗೋಲಿಗಳನ್ನು ಬಳಿಕ ಬ್ರೆಡ್ ಪೌಡರ್‌ನಲ್ಲಿ ಅದ್ದಿ. ಹೀಗೆ ಎರಡು ಸಲ ಈ ಅದ್ದಿ ತೆಗೆದ ಮೇಲೆ ಎಣ್ಣೆಯಲ್ಲಿ ಕರಿಯಿರಿ.
7. ಕಂದು ಬಣ್ಣಕ್ಕೆ ಬರುವವರೆಗೂ ಎಣ್ಣೆಯಲ್ಲಿ ಕರಿಯಿರಿ. ಇದೆಲ್ಲ ಮುಗಿದ ಬಳಿಕ ಕೆಂಪು ಚಟ್ನಿ ಜತೆಗೆ ಬಾಳೆಕಾಯಿ ಬಜ್ಜಿ ಸವಿಯಿರಿ.