ನೀರಿನ ಟ್ಯಾಂಕ್ ಬೇಗನೆ ಪಾಚಿ ಹಿಡಿಯದಂತೆ ತಡೆಯಲು ಈ ಸಣ್ಣ ಕೆಲಸ ಮಾಡಿ: ತುಂಬಾ ದಿನಗಳವರೆಗೆ ನೀರು ಶುದ್ಧವಾಗಿರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ನೀರಿನ ಟ್ಯಾಂಕ್ ಬೇಗನೆ ಪಾಚಿ ಹಿಡಿಯದಂತೆ ತಡೆಯಲು ಈ ಸಣ್ಣ ಕೆಲಸ ಮಾಡಿ: ತುಂಬಾ ದಿನಗಳವರೆಗೆ ನೀರು ಶುದ್ಧವಾಗಿರುತ್ತೆ

ನೀರಿನ ಟ್ಯಾಂಕ್ ಬೇಗನೆ ಪಾಚಿ ಹಿಡಿಯದಂತೆ ತಡೆಯಲು ಈ ಸಣ್ಣ ಕೆಲಸ ಮಾಡಿ: ತುಂಬಾ ದಿನಗಳವರೆಗೆ ನೀರು ಶುದ್ಧವಾಗಿರುತ್ತೆ

ಕುಡಿಯುವ ನೀರಿನಿಂದ ಹಿಡಿದು ಅಡುಗೆ ಮಾಡಲು,ಸ್ನಾನ ಮಾಡಲು,ಬಟ್ಟೆ ಒಗೆಯಲು ಮತ್ತು ಮನೆಯನ್ನು ಸ್ವಚ್ಛಗೊಳಿಸಲು ಪ್ರತಿ ಹಂತದಲ್ಲೂ ನೀರು ಬೇಕೇ ಬೇಕು. ಇದಕ್ಕಾಗಿ ಪ್ರತಿ ಮನೆಗಳ ಮೇಲೆ ನೀರಿನ ಟ್ಯಾಂಕ್ ಕಂಡುಬರುತ್ತದೆ. ಈ ನೀರಿನ ಟ್ಯಾಂಕ್ ಸ್ವಚ್ಛವಾಗಿಲ್ಲದಿದ್ದರೆ ನೀರು ಬಹುಬೇಗ ಕಲುಷಿತವಾಗುತ್ತದೆ. ನೀರಿನ ತೊಟ್ಟಿ ಪಾಚಿಯಾಗದಂತೆ ತಡೆಗಟ್ಟಲು ಇಲ್ಲಿದೆ ಸಲಹೆ.

ನೀರಿನ ಟ್ಯಾಂಕ್ ಬೇಗನೆ ಪಾಚಿಯಾಗದಂತೆ ತಡೆಯಲು ಈ ಸಣ್ಣ ಕೆಲಸ ಮಾಡಿ: ತುಂಬಾ ದಿನಗಳವರೆಗೆ ನೀರು ಶುದ್ಧವಾಗಿರುತ್ತೆ
ನೀರಿನ ಟ್ಯಾಂಕ್ ಬೇಗನೆ ಪಾಚಿಯಾಗದಂತೆ ತಡೆಯಲು ಈ ಸಣ್ಣ ಕೆಲಸ ಮಾಡಿ: ತುಂಬಾ ದಿನಗಳವರೆಗೆ ನೀರು ಶುದ್ಧವಾಗಿರುತ್ತೆ (PC: Canva)

ಭೂಮಿಯ ಮೇಲೆ ಜೀವನ ಮಾಡುವುದಕ್ಕೆ ನೀರು ಅತ್ಯಂತ ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ನೀರು ಸಸ್ಯ, ಪ್ರಾಣಿ-ಪಕ್ಷಿ, ಮನುಕುಲದ ಜೀವಾಳವಾಗಿದೆ. ಆದರೆ, ಈಗ ನೀರು ಬೇಗನೆ ಕಲುಷಿತವಾಗುತ್ತಿದೆ. ಬಾಯಾರಿದಾಗ ಕುಡಿಯುವ ನೀರಿನಿಂದ ಹಿಡಿದು ಅಡುಗೆ ಮಾಡಲು, ಸ್ನಾನ ಮಾಡಲು, ಬಟ್ಟೆ ಒಗೆಯಲು ಮತ್ತು ಮನೆಯನ್ನು ಸ್ವಚ್ಛಗೊಳಿಸಲು ಪ್ರತಿ ಹಂತದಲ್ಲೂ ನೀರು ಬೇಕೇ ಬೇಕು. ಮನೆಯಲ್ಲಿ ನೀರನ್ನು ಸಂಗ್ರಹಿಸಲು ಪ್ರತಿ ಮನೆ ಅಥವಾ ಅಪಾರ್ಟ್ಮೆಂಟ್ ಮೇಲೆ ನೀರಿನ ಟ್ಯಾಂಕ್ ಕಂಡುಬರುತ್ತದೆ. ಈ ನೀರಿನ ಟ್ಯಾಂಕ್ ಸ್ವಚ್ಛವಾಗಿಲ್ಲದಿದ್ದರೆ ನೀರು ಬಹುಬೇಗ ಕಲುಷಿತವಾಗುತ್ತದೆ. ಇದರಿಂದ ಅನೇಕ ರೋಗಗಳು ಹರಡುತ್ತವೆ.

ನೀರಿನ ತೊಟ್ಟಿ (ಟ್ಯಾಂಕ್) ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಪಾಚಿ ಮತ್ತು ಬ್ಯಾಕ್ಟೀರಿಯಾಗಳು ಅದರಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ. ಆದರೆ, ಅದನ್ನು ಸ್ವಚ್ಛಗೊಳಿಸುವುದು ಬಹಳ ತೊಂದರೆದಾಯಕ ಕೆಲಸವೆಂದು ಪರಿಗಣಿಸಲಾಗಿದೆ. ಎಷ್ಟು ಬಾರಿ ತೊಟ್ಟಿಯನ್ನು ಸ್ವಚ್ಛಗೊಳಿಸಿದರೂ ಕೊಳೆ ಹೆಚ್ಚಾಗಿ ಸಂಗ್ರಹವಾಗುತ್ತದೆ. ಇದರಿಂದ ನೀರು ಕೂಡ ಕೊಳೆಯಾಗುತ್ತದೆ. ಆದರೆ, ನೀರಿನ ತೊಟ್ಟಿ ಪಾಚಿಯಾಗದಂತೆ ಒಂದು ಸಣ್ಣ ಮರದ ತುಂಡಿನಿಂದ ಪ್ರಯೋಜನ ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.

ತೊಟ್ಟಿಯಲ್ಲಿನ ನೀರು ಸ್ವಚ್ಛವಾಗಿಡಲು ಸಹಕಾರಿ ಏಪ್ರಿಕಾಟ್ ಕಾಂಡ

ತೊಟ್ಟಿಯಲ್ಲಿನ ನೀರನ್ನು ಸ್ವಚ್ಛವಾಗಿಡಲು, ಏಪ್ರಿಕಾಟ್ ಮರದ ತುಂಡನ್ನು ಅದರಲ್ಲಿ ಹಾಕಬೇಕು. ಈ ಮರಗಳು ಹಲವೆಡೆ ಬೆಳೆಯುತ್ತವೆ. ಇದನ್ನು ಬಳಸುವುದು ತುಂಬಾನೇ ಸರಳವಾಗಿದೆ. ತೊಟ್ಟಿಯ ನೀರನ್ನು ಸ್ವಚ್ಛವಾಗಿಡುವ ಈ ಟ್ರಿಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಪ್ರಿಕಾಟ್ ಮರವು ತುಂಬಾ ಪ್ರಬಲವಾಗಿದೆ. ಅದು ಎಂದಿಗೂ ಕೊಳೆಯುವುದಿಲ್ಲ. ಅದರ ತುಂಡನ್ನು ನೀರಿನ ತೊಟ್ಟಿಯಲ್ಲಿ ಹಾಕುವುದರಿಂದ ಹಲವಾರು ಪ್ರಯೋಜನಗಳಿವೆ.

ಏಪ್ರಿಕಾಟ್ ಮರವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ನೀರಿನ ತೊಟ್ಟಿಯಲ್ಲಿ ಈ ಮರವನ್ನು ಹಾಕುವುದರಿಂದ ನೀರಿನಲ್ಲಿರುವ ಎಲ್ಲಾ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗಲು ಪ್ರಾರಂಭಿಸುತ್ತವೆ. ನೀರಿನಲ್ಲಿ ಬೆಳೆಯುವ ಶಿಲೀಂಧ್ರಗಳು ಸಹ ಸಾಯುತ್ತವೆ. ಅಲ್ಲದೆ, ಇದರ ಮರದಲ್ಲಿ ಕಂಡುಬರುವ ಫೈಟೊಕೆಮಿಕಲ್ಸ್ ನೀರಿನಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ನಾಶಮಾಡಲು ಕೆಲಸ ಮಾಡುತ್ತದೆ.

ನೀರಿನ ತೊಟ್ಟಿಯನ್ನು ದೀರ್ಘಕಾಲದವರೆಗೆ ಸ್ವಚ್ಛಗೊಳಿಸದಿದ್ದಾಗ, ನಿಂತ ನೀರಿನಿಂದ ಕೊಳಕು ಮತ್ತು ಪಾಚಿಗಳು ಅದರಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದು ನೀರಿನ ಗುಣಮಟ್ಟ ಕ್ಷೀಣಿಸಲು ಕಾರಣವಾಗುತ್ತದೆ. ಈ ಉದ್ದೇಶಕ್ಕಾಗಿ ನೀರಿನ ತೊಟ್ಟಿಗೆ ಈ ಮರದ ತುಂಡನ್ನು ಹಾಕಿದರೆ ಹಸಿರು ಪಾಚಿ ಅಥವಾ ಕೊಳಕು ನಾಶವಾಗುತ್ತದೆ. ತೊಟ್ಟಿಯಲ್ಲಿನ ನೀರು ದೀರ್ಘಕಾಲ ಸ್ವಚ್ಛಗೊಳಿಸದಿದ್ದರೂ ಶುದ್ಧವಾಗಿರುತ್ತದೆ.

ನೀರಿನ ತೊಟ್ಟಿಯಲ್ಲಿ ಈ ಮರವನ್ನು ಇಡುವುದರ ಇನ್ನೊಂದು ಪ್ರಯೋಜನವೆಂದರೆ ಅದು ಟ್ಯಾಂಕ್ ನೀರನ್ನು ದೀರ್ಘಕಾಲ ಕೆಡದಂತೆ ರಕ್ಷಿಸುತ್ತದೆ. ತಾಜಾತನವನ್ನು ಕಾಪಾಡುತ್ತದೆ. ಸಾಮಾನ್ಯವಾಗಿ ತೊಟ್ಟಿಯಲ್ಲಿ ದೀರ್ಘಕಾಲ ನೀರು ಶೇಖರಣೆಗೊಂಡಾಗ ಬ್ಯಾಕ್ಟೀರಿಯಾಗಳ ಬೆಳವಣಿಗೆಯಿಂದ ನೀರಿನ ಗುಣಮಟ್ಟ ಹದಗೆಡುತ್ತದೆ ಮತ್ತು ದುರ್ವಾಸನೆಯೂ ಬರಲಾರಂಭಿಸುತ್ತದೆ.

ಏಪ್ರಿಕಾಟ್ ಮರದಲ್ಲಿ ಹಲವು ಬಗೆಯ ಖನಿಜಗಳು ಮತ್ತು ಪೋಷಕಾಂಶಗಳಿವೆ. ಇದರ ತುಂಡನ್ನು ನೀರಿನ ತೊಟ್ಟಿಯಲ್ಲಿ ಇರಿಸುವುದರಿಂದ, ನೀರು ಹೆಚ್ಚುವರಿ ಖನಿಜಗಳನ್ನು ಪಡೆಯುತ್ತದೆ. ಇದು ನೀರಿನ ಟಿಡಿಎಸ್ ಸಮತೋಲನವನ್ನು ಕಾಪಾಡುತ್ತದೆ. ಈ ಹಿಂದೆ ಎಆರ್‌ವಿಯಂತಹ ಸೌಲಭ್ಯಗಳು ಇಲ್ಲದಿದ್ದಾಗ ನೀರಿನ ಕುಂಡ, ಬಾವಿ ಇತ್ಯಾದಿಗಳಲ್ಲಿ ಈ ರೀತಿ ಮರದ ತುಂಡನ್ನು ಹಾಕುತ್ತಿದ್ದರು. ಇದರಿಂದಾಗಿ ನಮ್ಮ ಹಿರಿಯರಿಗೆ ಕುಡಿಯಲು ಶುದ್ಧ ನೀರು ದೊರೆಯುತ್ತಿತ್ತು.

Whats_app_banner