ಬಟ್ಟೆ, ತಲೆ ಕೂದಲಿಗೆ ಅಂಟಿಕೊಂಡಿರುವ ಚೂಯಿಂಗ್ ಗಮ್ ತೆಗೆಯುವುದು ಹೇಗೆ? ಈ ಸುಲಭ ವಿಧಾನ ಅನುಸರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಟ್ಟೆ, ತಲೆ ಕೂದಲಿಗೆ ಅಂಟಿಕೊಂಡಿರುವ ಚೂಯಿಂಗ್ ಗಮ್ ತೆಗೆಯುವುದು ಹೇಗೆ? ಈ ಸುಲಭ ವಿಧಾನ ಅನುಸರಿಸಿ

ಬಟ್ಟೆ, ತಲೆ ಕೂದಲಿಗೆ ಅಂಟಿಕೊಂಡಿರುವ ಚೂಯಿಂಗ್ ಗಮ್ ತೆಗೆಯುವುದು ಹೇಗೆ? ಈ ಸುಲಭ ವಿಧಾನ ಅನುಸರಿಸಿ

ಚೂಯಿಂಗ್ ಗಮ್ ಬಟ್ಟೆ ಅಥವಾ ಕೂದಲಿಗೆ ಅಂಟಿಕೊಂಡರೆ ಭಯಪಡುವ ಅಗತ್ಯವಿಲ್ಲ, ಇಲ್ಲಿ ನೀಡಲಾಗಿರುವ ಈ ಸುಲಭ ವಿಧಾನವನ್ನು ಅನುಸರಿಸಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಅಂಟಿಕೊಂಡಿರುವ ಚೂಯಿಂಗ್ ಗಮ್ ತೆಗೆಯಬಹುದು.

ಬಟ್ಟೆಗೆ ಅಂಟಿಕೊಂಡಿರುವ ಚೂಯಿಂಗ್ ಗಮ್ ಅನ್ನು ಸರಳವಾಗಿ ತೆಗೆಯುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿಯಿರಿ.
ಬಟ್ಟೆಗೆ ಅಂಟಿಕೊಂಡಿರುವ ಚೂಯಿಂಗ್ ಗಮ್ ಅನ್ನು ಸರಳವಾಗಿ ತೆಗೆಯುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿಯಿರಿ.

ಬೆಂಗಳೂರು: ಸಾಮಾನ್ಯವಾಗಿ ಸಾಕಷ್ಟು ಮಂದಿ ಟೈಮ್ ಪಾಸ್‌ಗಾಗಿ ಚೂಯಿಂಗ್ ಗಮ್ ತಿನ್ನುತ್ತಾರೆ. ಮಕ್ಕಳು ಕೂಡ ಪೋಷಕರಿಗೆ ಗೊತ್ತಾಗದಂತೆ ಚೂಯಿಂಗ್ ಗಮ್ ತಿನ್ನೋದನ್ನ ನೋಡಿದ್ದೇವೆ. ಆದರೆ ಎಷ್ಟೋ ಮಂದಿಗೆ ಚೂಯಿಂಗ್ ಗಮ್ ಜಗಿದ ನಂತರ ಅದನ್ನು ಹೇಗೆ ಎಸೆಯಬೇಕು ಅನ್ನೋದು ಗೊತ್ತಿರೋದಿಲ್ಲ. ಇದರಿಂದ ಹಲವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚೂಯಿಂಗ್ ಗಮ್ ಜಗಿದ ನಂತರ ಎಲ್ಲೆಂದರಲ್ಲಿ ಎಸೆದಾಗ ಗೊತ್ತಿಲ್ಲದೆ ಅದರ ಕೂಳಿತುಕೊಂಡಿರುವ ಅನುಭವ ಕೆಲವರಿಗೆ ಆಗಿರುತ್ತದೆ. ಇನ್ನೂ ಕೆಲವರ ಕೂದಲಿಗೆ ಚೂಯಿಂಗ್ ಗಮ್ ಅಂಟಿಕೊಂಡು ಪರದಾಡಿರುವ ಘಟನೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಬಟ್ಟೆ ಅಥವಾ ತಲೆಯ ಕೂದಲಿಗೆ ಚೂಯಿಂಗ್ ಗಮ್ ಅಂಟಿಕೊಂಡು ಒಣಗಿದ್ದರೆ ಅದನ್ನು ತೆಗೆಯುವುದು ಕಷ್ಟದ ಕೆಲಸ. ಆದರೆ ಈ ವಿಧಾನವನ್ನು ಅನುಸರಿಸಿದರೆ ಸುಲಭವಾಗಿ ತೆಗೆಯಬಹುದು.

ಬಟ್ಟೆಗೆ ಅಂಟಿಕೊಂಡಿರುವ ಚೂಯಿಂಗ್ ಗಮ್ ಅವನ್ನು ಸುಲಭವಾಗಿ ತೆಗೆಯುವುದು ಹೇಗೆ?

ಒಂದು ವೇಳೆ ನಿಮ್ಮ ಬಟ್ಟೆಗೆ ಚೂಯಿಂಗ್ ಗಮ್ ಅಂಟಿಕೊಂಡಿದ್ದರೆ ಅದನ್ನು ಸುಲಭವಾಗಿ ತೆಗೆಯಲು ಮೊದಲಿಗೆ ಒಂದು ಐಸ್‌ ಕ್ಯೂಬ್ ಅನ್ನು ತೆಗೆದುಕೊಂಡು ಗಮ್ ಅಂಟಿಕೊಂಡಿರುವ ಭಾಗಕ್ಕೆ ಚೆನ್ನಾಗಿ ಉಜ್ಜಿ. ಬಟ್ಟೆ ಮತ್ತು ಚೂಯಿಂಗ್ ಗಮ್ ಸ್ವಲ್ಪ ತಣ್ಣಗಾಗುವವ ವರೆಗೆ ಹೀಗೆ ಉಜ್ಜುತ್ತಲೇ ಇರಿ. ಬಳಿಕ ಚೂಯಿಂಗ್ ಗಮ್ ಐಸ್‌ನಿಂದ ತಣ್ಣಗಾದ ಬಳಿಕ ಅದನ್ನು ಕೈಯಿಂದ ತೆಗೆದು ಹಾಕಿ. ಹೀಗೆ ಮಾಡಿದರೆ ಗಟ್ಟಿಯಾಗಿ ಅಂಟಿಕೊಂಡಿರುವ ಚೂಯಿಂಗ್ ಗಮ್ ಅನ್ನು ಸುಲಭವಾಗಿ ತೆಗೆದುಹಾಕಬಹುದು.

ನೇಲ್ ಕಟ್ಟರ್‌ನಿಂದ ಚೂಯಿಂಗ್ ಗಮ್ ತೆಗೆಯಬಹುದಾ?

ಬಟ್ಟೆಗೆ ಅಂಟಿಕೊಂಡ ಚೂಯಿಂಗ್ ಗಮ್ ಅನ್ನು ಉಗುರು ಕಟ್ ಮಾಡುವ ಯಂತ್ರ (Nail Cutter) ದಿಂದಲೂ ತೆಗೆಯಬಹುದು. ಗಮ್ ಅಂಟಿಕೊಂಡಿರುವ ಭಾಗದಲ್ಲಿ ಈ ಕಟರ್ ಅನ್ನು ಇಟ್ಟು ಉಗುರು ಕಟ್ ಮಾಡುವ ರೀತಿಯಲ್ಲೇ ಚೂಯಿಂಗ್ ಗಮ್ ಅನ್ನು ಸ್ವಲ್ಪ ಸ್ವಲ್ಪವೇ ಕಟ್ ಮಾಡಿ ಹೊರ ತೆಗೆಯಬಹುದು.

ಕೂದಲಿಗೆ ಅಂಟಿಕೊಂಡ ಚೂಯಿಂಗ್ ಗಮ್ ತೆಗೆಯುವುದು ಹೇಗೆ?

ಬಟ್ಟೆಗೆ ಚೂಯಿಂಗ್ ಗಮ್ ಅಂಟಿಕೊಂಡರೆ ಸಹಿಸೋಕೆ ಅಗಲ್ಲ ಅಂತಹದಲ್ಲಿ ಕೂದಲಿಗೆ ಅಂಟಿಕೊಂಡರೆ ಭಾರಿ ಕಿರಿಕಿರಿಯಾಗುತ್ತದೆ. ಕೂದಲಿಗೆ ಅಂಟಿಕೊಂಡಾಗ ಹೇಗೆ ತೆಗೆಯುವುದು ಅನ್ನೋದರ ಚಿಂತನೆ ಬಿಡಿ. ಇದರಿಂದ ಕೂದಲನ್ನು ಕತ್ತರಿಸುವ ಅಗತ್ಯವಿಲ್ಲ. ಬದಲಿಗೆ ಎರಡು ಪೀಸ್ ಬಟ್ಟೆಗಳನ್ನು ತೆಗೆದುಕೊಂಡು ಅದರಲ್ಲಿ ಮಂಜುಗಟ್ಟೆಯನ್ನು ಸುತ್ತಿಕೊಳ್ಳಿ. ಬಳಿಕ ಚೂಯಿಂಗ್ ಗಮ್ ಇರುವ ಕೂದಲಿನ ಮೇಲೆ ಕೆಳಗೆ ಈ ಎರಡು ಮಂಜುಗಟ್ಟೆಯ ಬಟ್ಟೆಗಳನ್ನು ಚೆನ್ನಾಗಿ ಉಜ್ಜಿ. ಹೀಗೆ ಉಜ್ಜಿದಾಗ ಕೂದಲು ತಣ್ಣಗಾಗುತ್ತದೆ. ಆಗ ಚೂಯಿಂಗ್ ಗಮ್ ಅನ್ನು ನಿಧಾನವಾಗಿ ತೆಗದುಹಾಕಿ. ಕೂದಲಿನಲ್ಲಿರುವ ಚೂಯಿಂಗ್ ಗಮ್ ತೆಗೆಯಲು ಹೇರ್ ಸ್ಪ್ರೈ ಕೂಡ ಬಳಸಬಹುದು.

ಎಷ್ಟೋ ಮಂದಿಗೆ ಚೂಯಿಂಗ್ ಗಮ್ ಜಗಿದ ನಂತರ ಅದನ್ನು ಹೇಗೆ ಎಸೆಯಬೇಕು ಎಂದು ಗೊತ್ತಿಲ್ಲ. ಚೂಯಿಂಗ್ ಗಮ್ ತಿನ್ನುವ ಮುನ್ನ ಅದರಲ್ಲಿನ ಪೇಪರ್ ಅಥವಾ ಕವರ್ ಅನ್ನು ಬಿಚ್ಚಿದ ಕೂಡಲೇ ಎಸೆಯಬಾರದು. ಅದನ್ನು ಹಾಗೆ ಇಟ್ಟುಕೊಂಡು ಕೊನೆಯಲ್ಲಿ ಅಂದರೆ ಚೂಯಿಂಗ್ ಗಮ್ ಜಗಿದ ನಂತರ ಪೇಪರ್‌ನಲ್ಲಿ ಸುತ್ತಿ ಕಸದ ಬುಟ್ಟಿಗೆ ಎಸೆಯಬೇಕು.

Whats_app_banner