ಕಚೇರಿಯಲ್ಲಿ ಕಠಿಣ ಪರಿಶ್ರಮಕ್ಕೆ ಮನ್ನಣೆ ಪಡೆಯುತ್ತಿಲ್ವಾ: ಉದ್ಯೋಗಸ್ಥ ಮಹಿಳೆಯರೇ ಈ ವಿಚಾರಗಳನ್ನು ತಿಳಿದುಕೊಳ್ಳಿ
ಕಚೇರಿಯಲ್ಲಿ ದುಡಿಯುವ ಮಹಿಳೆ ನೀವಾಗಿದ್ದೀರಾ?ಕಚೇರಿಯಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದು, ಬೇರೊಬ್ಬರು ಚಪ್ಪಾಳೆ ತೆಗೆದುಕೊಳ್ಳುತ್ತಾರೆಯೇ. ಈ ಸಮಸ್ಯೆಯನ್ನು ಪ್ರಪಂಚದಾದ್ಯಂತದ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿದ್ದಾರೆ. ನಿಮ್ಮ ಕಠಿಣ ಪರಿಶ್ರಮದ ಕ್ರೆಡಿಟ್ ತೆಗೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಲಹೆ:
ಇಂದು ಮಹಿಳೆಯರು ಪುರುಷರಿಗಿಂತ ಯಾವುದಕ್ಕೂ ಕಮ್ಮಿ ಇಲ್ಲ. ಮನೆಕೆಲಸ, ಮಕ್ಕಳಿದ್ದರೆ ಆ ಕೆಲಸವನ್ನೆಲ್ಲಾ ಮಾಡಿ ಮಹಿಳೆಯರು ಕಚೇರಿಗೆ ಹೋಗಿ ದುಡಿಯುತ್ತಿದ್ದಾರೆ. ಹಾಗೆಯೇ ಕಚೇರಿಯಲ್ಲೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ. ಆದರೆ, ಕೆಲವೊಮ್ಮೆ ಕಚೇರಿಯಲ್ಲಿ ಕೆಲಸ ಮಾಡುವಾಗ ಮಹಿಳೆಯರು ನೀಡುವ ಎಲ್ಲಾ ಸಲಹೆಗಳಿಗೂ ಆದ್ಯತೆ ನೀಡಲಾಗುತ್ತದೆ ಎಂದು ನಿಮಗನಿಸುತ್ತಾ? ಅಥವಾ ಪುರುಷ ಸಹೋದ್ಯೋಗಿ ಹೇಳುವ ಅದೇ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದಾಗ ನಿಮ್ಮ ಸಲಹೆಯನ್ನು ನಿರ್ಲಕ್ಷಿಸಲಾಗುತ್ತದೆಯೇ? ಹಾಗಿದ್ದರೆ, ನಿಮಗೆ ದೊರೆಯಬೇಕಾದ ಚಪ್ಪಾಳೆ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡಬೇಕಾಗಿದೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ,ಪುರುಷರೊಂದಿಗೆ ಗುಂಪಿನಲ್ಲಿ ಕೆಲಸ ಮಾಡುವಾಗ ಮಹಿಳೆಯರು ಪುರುಷರಿಗಿಂತ ಕಡಿಮೆ ಮನ್ನಣೆ ಪಡೆಯುತ್ತಾರೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಅಧ್ಯಯನವೊಂದರ ಪ್ರಕಾರ, ಪುರುಷ ಕಾರ್ಮಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ಕೆಲಸದ ಸ್ಥಳದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಮನ್ನಣೆ ಪಡೆಯುತ್ತಾರೆ ಎಂಬುದಾಗಿ ತಿಳಿಸಲಾಗಿದೆ. ಅಂದರೆ, ಒಬ್ಬ ಪುರುಷನು ತನ್ನ ತಂಡವನ್ನು ಸುಧಾರಿಸಲು ತನ್ನ ಸಲಹೆಗಳನ್ನು ನೀಡಿದಾಗ, ಅವನು ಮಹಿಳಾ ಸಹೋದ್ಯೋಗಿಗಿಂತ ಹೆಚ್ಚಿನ ಗಮನವನ್ನು ಪಡೆಯುತ್ತಾನೆ. ಸರಳವಾಗಿ ಹೇಳುವುದಾದರೆ, ಮಹಿಳೆಯನ್ನು ನಾಯಕತ್ವಕ್ಕೆ ಸೂಕ್ತ ಆಯ್ಕೆಯಾಗಿ ನೋಡುವುದು ಕಷ್ಟ. ಇಲ್ಲಿ ಸಮಸ್ಯೆ ಇರುವುದು ಕೆಲಸದ ವಿಷಯವಲ್ಲ. ಆದರೆ, ಚಿಂತನೆಯ ವಿಷಯ. ಉದ್ಯೋಗಸ್ಥ ಮಹಿಳೆಯರಿಗೆ ಇಂತಹ ಅವಕಾಶಗಳು ಸಿಗಬೇಕಾಗಿದೆ. ಇದು ಪುರುಷ ಸಹೋದ್ಯೋಗಿಗಳೊಂದಿಗೆ ಅವರ ಸಮಾನ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುತ್ತದೆ. ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಶಲ್ಯಗಳನ್ನು ಮತ್ತೆ ಮತ್ತೆ ಸಾಬೀತುಪಡಿಸಬೇಕು. ನಿಮ್ಮ ಕಠಿಣ ಪರಿಶ್ರಮವು ಮೇಲಾಧಿಕಾರಿ ಕಣ್ಣಿಗೆ ಕಾಣದಿದ್ದಲೂ, ನೀವು ಆ ದಿಕ್ಕಿನತ್ತ ವಿಶೇಷ ಪ್ರಯತ್ನ ಮಾಡಬೇಕಾಗುತ್ತದೆ.
ಕೆಲಸದಲ್ಲಿ ಸಕ್ರಿಯವಾಗಿರಿ
ನೀವು ಮಾಡುವ ಕೆಲಸ ನಿಮ್ಮ ಕೆಲಸದೆ ಮೇಲಿನ ಆಸಕ್ತಿ, ಶ್ರದ್ಧೆಯನ್ನು ತೋರಿಸುತ್ತದೆ. ಆದರೆ, ಸುಮ್ಮನೆ ಕೆಲಸ ಮಾಡಿದರೆ ಸಾಲದು. ಕಾಲಕಾಲಕ್ಕೆ ನಿಮ್ಮ ಕೆಲಸವನ್ನು ವ್ಯಕ್ತಪಡಿಸುವುದು ಸಹ ಬಹಳ ಮುಖ್ಯ. ನೀವು ಏನು, ಎಷ್ಟು, ಹೇಗೆ ಮಾಡಿದ್ದೀರಿ ಎಂಬುದರ ಬಗ್ಗೆ ಎಂಬುದನ್ನು ತಿಳಿಯಬಹುದು. ಇಡೀ ತಂಡದ ಮುಂದೆ ನಿಮ್ಮ ಕೆಲಸವನ್ನು ಚರ್ಚಿಸುವ ಬದಲು, ನೀವು ಬಾಸ್ ಅನ್ನು ಏಕಾಂಗಿಯಾಗಿ ಭೇಟಿ ಮಾಡಬಹುದು. ಅವರಿಗೆ ನಿಮ್ಮ ಕೆಲಸದ ಬಗ್ಗೆ ವಿವರವಾಗಿ ಹೇಳಬಹುದು. ಅಥವಾ ನೀವು ನಿಮ್ಮ ಕೆಲಸದ ವೇಗವನ್ನು ಎಲ್ಲರ ಮುಂದೆ ಅಥವಾ ನಿಮ್ಮ ಬಾಸ್ ಮುಂದೆ ಪರೋಕ್ಷವಾಗಿ ಚರ್ಚಿಸಬಹುದು. ಒಟ್ಟಿನಲ್ಲಿ ಸಕ್ರಿಯವಾಗಿರುವುದು ಬಹಳ ಮುಖ್ಯ.
ಹೊಗಳುವಿಕೆ ಮುಖ್ಯ
ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಮನ್ನಣೆ ಪಡೆಯಲು ಬಯಸಿದರೆ, ಇತರರಿಗೆ ಮನ್ನಣೆ ನೀಡಲು ಕಲಿಯಿರಿ. ನಾವು ನಮ್ಮನ್ನು ಹೇಗೆ ನಡೆಸಿಕೊಳ್ಳಲು ಇಷ್ಟಪಡುತ್ತೇವೋ ಅದೇ ರೀತಿ ಇತರರನ್ನು ನಡೆಸಿಕೊಳ್ಳುವುದು ಮುಖ್ಯ. ಈ ಸೂತ್ರವನ್ನು ಪಾಲಿಸುವುದರಿಂದ ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬಹುದು. ನೀವು ಜನರನ್ನು ಹೊಗಳಿದರೆ, ಕಾಲಕಾಲಕ್ಕೆ ಅವರ ಕೆಲಸಕ್ಕೆ ಮನ್ನಣೆ ನೀಡಿದರೆ, ಖಂಡಿತವಾಗಿಯೂ ಇತರ ಜನರು ಸಹ ನಿಮ್ಮ ಕೆಲಸದ ವೈಖರಿಯನ್ನು ಗುಣಗಾನ ಮಾಡಬಹುದು.
ಟಿಪ್ಪಣಿಗಳನ್ನು ಮಾಡಿ
ಶಾಲಾ-ಕಾಲೇಜುಗಳಲ್ಲಿ ಬಹುಮುಖ್ಯವಾದ ಉತ್ತರಗಳನ್ನು ಟಿಪ್ಪಣಿ ಮಾಡಿಟ್ಟುಕೊಳ್ಳುವುದು ಸಾಮಾನ್ಯ. ಇದೇ ರೀತಿ ಕಚೇರಿಯಲ್ಲಿ ಮಾಡುವ ಟಿಪ್ಪಣಿಗಳು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಈ ಟಿಪ್ಪಣಿಗಳು ನಿಮ್ಮ ಕೆಲಸಕ್ಕೆ ಸ್ವಂತಿಕೆಯನ್ನು ನೀಡುತ್ತವೆ
ಈ ವಿಷಯಗಳ ಬಗ್ಗೆಯೂ ಗಮನ ಹರಿಸಿ
- ಎಲ್ಲದರಲ್ಲೂ ಅಥವಾ ಪ್ರತಿಯೊಂದು ಕೆಲಸಕ್ಕೂ ನಿಮ್ಮನ್ನು ಹೊಗಳಲಾಗುವುದಿಲ್ಲ ಅಥವಾ ಪ್ರಶಂಸಿಸಲಾಗುವುದಿಲ್ಲ ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಆದ್ದರಿಂದ, ಅತಿಯಾದ ನಿರೀಕ್ಷೆಗಳಿಂದ ದೂರವಿರಿ.
- ನಿಮ್ಮ ಸಹೋದ್ಯೋಗಿ ನಿಮ್ಮ ಕಠಿಣ ಪರಿಶ್ರಮದ ಕ್ರೆಡಿಟ್ ಅನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ, ಅವರನ್ನು ದೂಷಿಸುವ ಬದಲು ಅವರನ್ನು ಪ್ರಶ್ನಿಸಿ. ನೀವು ಹಾಗೆ ಮಾಡುವುದರಿಂದ ನಿಮ್ಮ ಸಹೋದ್ಯೋಗಿಯ ಮೇಲೆ ಪುರಾವೆಗಳ ಹೊರೆ ಬೀಳುತ್ತದೆ. ಅಲ್ಲದೆ, ಸಾಧ್ಯವಾದರೆ, ನಿಮ್ಮ ಸಹೋದ್ಯೋಗಿ ನಿಜವಾಗಿಯೂ ಇದನ್ನು ಏಕೆ ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ.
- ಯಾವುದೇ ವಿಷಯ ಮತ್ತು ಸಮಸ್ಯೆಗೆ ತಕ್ಷಣ ಪ್ರತಿಕ್ರಿಯಿಸದಿರಿ. ಪ್ರತಿಯೊಂದು ಅಂಶಗಳು, ಸಾಧಕ-ಬಾಧಕಗಳಿಗೆ ಚಿಂತನಶೀಲವಾಗಿ ಪ್ರತಿಕ್ರಿಯಿಸಿ.
- ನಿಮ್ಮ ಕಠಿಣ ಪರಿಶ್ರಮದ ಮೇಲೆ ಯಾವುದೇ ಹಕ್ಕು ಸಾಧಿಸದಿರಲು, ನೀವು ಕೆಲಸ ಮಾಡಲು ಪ್ರಾರಂಭಿಸುವ ಮೊದಲು ನಿಮ್ಮ ಜವಾಬ್ದಾರಿಗಳು ಮತ್ತು ಬಾಧ್ಯತೆಗಳ ಬಗ್ಗೆ ಗಡಿಗಳನ್ನು ನಿಗದಿಪಡಿಸುವುದು ಉತ್ತಮ.
ವಿಭಾಗ