ಒಣಮೆಣಸನ್ನು ಹಲವುದಿನಗಳವರೆಗೆ ಕೆಡದಂತೆ ಇಡಬೇಕಾ? ಹಾಗಾದ್ರೆ ಈ ಟ್ರಿಕ್ ಯೂಸ್‌ ಮಾಡಿ, ಖಂಡಿತ ನಿಮ್ಮ ಉಪಯೋಗಕ್ಕೆ ಬರುತ್ತೆ-how to store red chilly for long time is it possible in refrigerator kitchen hacks smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಒಣಮೆಣಸನ್ನು ಹಲವುದಿನಗಳವರೆಗೆ ಕೆಡದಂತೆ ಇಡಬೇಕಾ? ಹಾಗಾದ್ರೆ ಈ ಟ್ರಿಕ್ ಯೂಸ್‌ ಮಾಡಿ, ಖಂಡಿತ ನಿಮ್ಮ ಉಪಯೋಗಕ್ಕೆ ಬರುತ್ತೆ

ಒಣಮೆಣಸನ್ನು ಹಲವುದಿನಗಳವರೆಗೆ ಕೆಡದಂತೆ ಇಡಬೇಕಾ? ಹಾಗಾದ್ರೆ ಈ ಟ್ರಿಕ್ ಯೂಸ್‌ ಮಾಡಿ, ಖಂಡಿತ ನಿಮ್ಮ ಉಪಯೋಗಕ್ಕೆ ಬರುತ್ತೆ

Red Chilly: ಒಣಮೆಣಸನ್ನು ಹಲವುದಿನಗಳವರೆಗೆ ಕೆಡದಂತೆ ಇಡಬೇಕಾ? ಹಾಗಾದ್ರೆ ನಾವು ಇಲ್ಲಿ ತಿಳಿಸಿದಂತೆ ಮಾಡಿ. ಹಲವು ದಿನಗಳ ಕಾಲ ನಿಮ್ಮ ಮನೆಯಲ್ಲಿ ತಂದಿಟ್ಟ ಒಣ ಮೆಣಸು ತುಂಬಾ ಗರಿಗರಿಯಾಗಿ ಉಳಿದುಕೊಳ್ಳುತ್ತದೆ.

ಒಣಮೆಣಸು
ಒಣಮೆಣಸು

ನೀವು ನಿಮ್ಮ ಮನೆಯಲ್ಲಿ ಒಣಮೆಣಸನ್ನು ಒಂದೇ ಬಾರಿಗೆ ತಂದು, ತುಂಬಾ ದಿನಗಳ ವರೆಗೆ ಅದನ್ನು ಶೇಖರಣೆ ಮಾಡಿಡಲು ಬಯಸಿದರೆ. ಅಥವಾ ನಿಮ್ಮದೇ ಒಂದು ಸ್ವಂತ ವ್ಯಾಪಾರ ಅಥವಾ ಹೊಟೆಲ್ ಉಧ್ಯಮ ಇದ್ದರೆ ನಿಮಗೆ ನಾವು ಇಲ್ಲಿ ತಿಳಿಸುವ ಟ್ರಿಕ್ ತುಂಬಾ ಉಪಯುಕ್ತವಾಗುತ್ತದೆ. ನೀವು ಈ ಐಡಿಯಾ ಬಳಸಿಕೊಂಡು ನಿಮ್ಮ ಮನೆಯಲ್ಲೂ ಇದೇ ರೀತಿ ಒಣ ಮೆಣಸನ್ನು ಸರಿಯಾಗೆ ಶೇಖರಣೆ ಮಾಡಿ ಇಡಬಹುದಾಗಿದೆ. ಅದು ಯಾವ್ಯಾವ ರೀತಿ ಎಂಬ ಮಾಹಿತಿ ಇಲ್ಲಿದೆ ಗಮನಿಸಿ.

ಶೇಖರಣೆ ಮಾಡುವಾಗ ಗಮನಿಸಿ

ಗಾಳಿ, ಉಷ್ಣ, ಶೀತ ಇವುಗಳೆಲ್ಲದರಿಂದ ನೀವು ಒಣಮೆಣಸನ್ನು ಶೇಖರಣೆ ಮಾಡಿ ಇಡಬೇಕಾಗುತ್ತದೆ. ಇಲ್ಲವಾದರೆ ಒಣಮೆಣಸು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ನೀವು ಮಾಡಬೇಕಾಗಿರುವುದು ಏನೆಂದರೆ, ಗಾಳಿ ಆಡದಂತ ಡಬ್ಬಿಯಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ ಇಡಿ. ಪ್ಲಾಸ್ಟಿಕ್ ಡಬ್ಬವಾದರೂ ಆಗುತ್ತದೆ. ಮುಚ್ಚಳ ಮಾತ್ರ ಯಾವಾಗಲೂ ಭದ್ರವಾಗಿ ಮುಚ್ಚಿರಬೇಕು.

ತಂಪು ಅಥವಾ ಬಿಸಿ

ನೀವು ಒಣಮೆಣಸು ಇಡುವ ಜಾಗ ತುಂಬಾ ತಣ್ಣಗಿರಬೇಕು. ಅಥವಾ ಬಿಸಿಯಾಗಿರಬೇಕು. ಅಂದರೆ ನೀವು ಇದನ್ನು ಫ್ರಿಡ್ಜ್‌ನಲ್ಲಿ ಕೂಡ ಇಡಬಹುದು. ತುಂಬಾ ಕಟುವಾದ ಶಾಖ ಬೀಳದ ಹಾಗೆ ಇದನ್ನು ನೋಡಿಕೊಳ್ಳಬೇಕು. ಫ್ರಿಡ್ಜ್‌ನಲ್ಲಿ ಕೂಡ ನೀವು ಸ್ಟೋರ್ ಮಾಡಬಹುದು. ಹೀಗಿಟ್ಟರು ಹಲವು ದಿನಗಳ ಕಾಲ ಹಾಗೆ ಇರುತ್ತದೆ. ಹಾಳಾಗುತ್ತದೆ ಎಂಬ ಭಯ ಬೇಡ. ಇದು ಗರಿಗರಿಯಾಗಿ ಇರುತ್ತದೆ ಯಾವುದೇ ತೇವಾಂಶ ಇದಕ್ಕೆ ಸೇರಿಕೊಳ್ಳುವುದಿಲ್ಲ.

ಒಣಗಿಸಿಡಿ

ಇದನ್ನು ಶೇಖರಣೆ ಮಾಡಿರುವ ಮೊದಲು ಇದು ಸರಿಯಾಗಿ ಒಣಗಿದೆಯೇ? ಎಂಬುದನ್ನು ಚೆಕ್ ಮಾಡಿ. ಸರಿಯಾಗಿ ಒಣಗಿಲ್ಲ ಎಂದರೆ ಬೂಸ್ಟ್‌ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ತೊಳೆಯಬೇಡಿ

ಇದರಲ್ಲಿ ಬಣ್ಣವಿದೆ, ಕೆಮಿಕಲ್ ಇದೆ ಎಂದು ಅಂದುಕೊಂಡು ನೀವು ಅದನ್ನು ತೊಳೆಯಬೇಡಿ. ಒಣಮೆಣಸನ್ನು ತೊಳೆದರೆ ಅದು ಬೇಗ ಹಾಳಾಗುತ್ತದೆ. ತೊಳೆದು ನಂತರ ಒಣಗಿಸಿ ಬಟ್ಟೆಯಲ್ಲಿ ವರೆಸಿ ಹಾಕಿದರೆ ಚೆನ್ನಾಗಿರುತ್ತದೆ. ಅದರ ತೊಟ್ಟುಗಳನ್ನು ಮುರಿದು ಇಡುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಈ ರೀತಿ ಮಾಡಿದರೂ ತೊಂದರೆ ಆಗುತ್ತದೆ. ಬಹುಬೇಗ ಹಾಳಾಗುತ್ತದೆ.

ನಿಮಗೆ ಯಾವಾಗ ಬೇಕೋ ಅಂದರೆ ನೀವು ಬಳಸುವ ಸಂದರ್ಭದಲ್ಲಿ ಮಾತ್ರ ಅದರ ತೊಟ್ಟುಗಳನ್ನು ಮುರಿದುಕೊಂಡು ಬಳಸಿ. ಹೀಗೆ ಮಾಡಿದಲ್ಲಿ ಬೇಗ ಹಾಳಾಗುವುದನ್ನು ತಪ್ಪಿಸಬಹುದು.