ದೀಪಾವಳಿ ಹಬ್ಬಕ್ಕೆ ಯಾವೆಲ್ಲಾ ರೀತಿಯಲ್ಲಿ ಸೀರೆ ಉಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಸಿಂಪಲ್ ಐಡಿಯಾಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿ ಹಬ್ಬಕ್ಕೆ ಯಾವೆಲ್ಲಾ ರೀತಿಯಲ್ಲಿ ಸೀರೆ ಉಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಸಿಂಪಲ್ ಐಡಿಯಾಗಳು

ದೀಪಾವಳಿ ಹಬ್ಬಕ್ಕೆ ಯಾವೆಲ್ಲಾ ರೀತಿಯಲ್ಲಿ ಸೀರೆ ಉಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಸಿಂಪಲ್ ಐಡಿಯಾಗಳು

ಹಬ್ಬಕ್ಕೆ ಅಂದ-ಚಂದದ ಸೀರೆಯನ್ನುಟ್ಟು ತುಂಬಾ ಚೆನ್ನಾಗಿಸಿದ್ಧಗೊಳ್ಳಲು ಮೊದಲೇ ಯೋಚಿಸುವ ಮಹಿಳೆಯರು, ಯಾವ ರೀತಿಯಾಗಿ ಸೀರೆಯುಟ್ಟು ಫೋಟೋ ತೆಗೆದುಕೊಳ್ಳಬಹುದು ಎಂದು ಯೋಚನೆ ಮಾಡುತ್ತಾರೆ. ಇದಕ್ಕಾಗಿ ಸಂಪೂರ್ಣ ಸಿದ್ಧಗೊಳ್ಳುವ ಮಹಿಳೆಯರು, ಉಡುಪು, ಆಭರಣಗಳು, ಮೇಕಪ್ ಹೀಗೆ ಎಲ್ಲವನ್ನೂ ಸಿದ್ಧಮಾಡಿಟ್ಟುಕೊಳ್ಳುತ್ತಾರೆ.

ದೀಪಾವಳಿ ಹಬ್ಬಕ್ಕೆ ಯಾವೆಲ್ಲಾ ರೀತಿ ಸೀರೆ ಉಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಸಿಂಪಲ್ ಐಡಿಯಾಗಳು
ದೀಪಾವಳಿ ಹಬ್ಬಕ್ಕೆ ಯಾವೆಲ್ಲಾ ರೀತಿ ಸೀರೆ ಉಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಸಿಂಪಲ್ ಐಡಿಯಾಗಳು

ಮೊನ್ನೆಯಷ್ಟೇ ದಸರಾ ಹಬ್ಬ ಮುಗಿದಿದೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಬೆಳಕಿನ ಹಬ್ಬ ದೀಪಾವಳಿ ಅಂದ್ರೆ ಹಬ್ಬದ ಸಂಭ್ರಮ ತುಸು ಹೆಚ್ಚೇ ಇರುತ್ತದೆ. ಪ್ರತಿಯೊಬ್ಬರೂ ಬಹಳ ಇಷ್ಟಪಡುವ ದೀಪಾವಳಿ ಹಬ್ಬಕ್ಕೆ ಮಹಿಳೆಯರಂತೂ ವಿಶೇಷವಾಗಿ ಸಿದ್ಧಗೊಳ್ಳುತ್ತಾರೆ. ಹಬ್ಬಕ್ಕೆ ಸಿಹಿ-ತಿಂಡಿಗಳು, ಬಗೆ-ಬಗೆಯ ಖಾದ್ಯಗಳನ್ನು ತಯಾರಿಸುವಲ್ಲಿ ಮಹಿಳೆಯರು ಬ್ಯುಸಿಯಾಗುತ್ತಾರೆ. ಅಷ್ಟೇ ಅಲ್ಲ ಹಬ್ಬಕ್ಕೆ ಅಂದ-ಚಂದದ ಸೀರೆಯನ್ನುಟ್ಟು ತುಂಬಾ ಚೆನ್ನಾಗಿ ಸಿದ್ಧಗೊಳ್ಳುತ್ತಾರೆ. ಮತ್ತೊಮ್ಮೆ ವಧುವಿನಂತೆ ಕಂಗೊಳಿಸುವ ಬಯಕೆಯಲ್ಲಿರುತ್ತಾರೆ ಹೆಂಗಳೆಯರು. ಇದಕ್ಕಾಗಿ ಸಂಪೂರ್ಣ ಸಿದ್ಧಗೊಳ್ಳುವ ಮಹಿಳೆಯರು, ಉಡುಪು, ಆಭರಣಗಳು, ಮೇಕಪ್ ಹೀಗೆ ಎಲ್ಲವನ್ನೂ ಸಿದ್ಧಮಾಡಿಟ್ಟುಕೊಳ್ಳುತ್ತಾರೆ. ಹಬ್ಬದ ಸಂಭ್ರಮದ ಜತೆ ಸೆಲ್ಫಿ, ಫೋಟೋ ಕ್ಲಿಕ್ಕಿಸುತ್ತಾ ಹಬ್ಬದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಾರೆ. ಸೀರೆಯೊಂದಿಗೆ ವಿಭಿನ್ನ ರೀತಿಯಲ್ಲಿ ಸ್ಟೈಲಿಷ್ಟ್ ಲೆಹೆಂಗಾ ದುಪ್ಪಟ್ಟಾವನ್ನು ಉಡಬಹುದು. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಹಬ್ಬಕ್ಕೆ ಹೀಗೆ ಸಿದ್ಧಗೊಳ್ಳಿ

- ನೀವು ಸೀರೆ ಉಟ್ಟಿದ್ದರೆ ಅದರೊಂದಿಗೆ ಲೆಹೆಂಗಾ ದುಪಟ್ಟಾವನ್ನು ವಿವಿಧ ರೀತಿಯಲ್ಲಿ ಸ್ಟೈಲ್ ಮಾಡಬಹುದು. ಇದಕ್ಕಾಗಿ, ಮೊದಲು ಸೀರೆಯನ್ನು ಧರಿಸಿ. ಆದರೆ ಪಲ್ಲುವನ್ನು ಭುಜಕ್ಕೆ ಹಾಕುವ ಬದಲು ಸೊಂಟದಲ್ಲಿ ನೆರಿಗೆಗಳಲ್ಲಿ ಸುತ್ತಿ. ನಂತರ ಲೆಹೆಂಗಾ ದುಪ್ಪಟ್ಟಾ ಅಥವಾ ಉಟ್ಟಿರುವ ಸೀರೆಗೆ ಹೊಂದಿಕೆಯಾಗುವ ಸೀರೆಯನ್ನು ತೆಗೆದುಕೊಂಡು ಪಲ್ಲು ಮಾಡಬಹುದು. ಇದನ್ನು ಭುಜಕ್ಕೆ ಹಾಕಿ, ಸೊಂಟ ಪಟ್ಟಿ ಹಾಕಿದ್ರೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇದು ಲೆಹೆಂಗಾ ದುಪಟ್ಟಾವನ್ನು ವಿನ್ಯಾಸಗೊಳಿಸುವ ವಿಶಿಷ್ಟ ವಿಧಾನವಾಗಿದೆ. ನೋಡಲು ಆಕರ್ಷಕವಾಗಿ ಕಾಣುತ್ತದೆ.

- ನೀವು ಲೆಹೆಂಗಾವನ್ನು ಧರಿಸುತ್ತಿದ್ದರೆ, ಈ ದುಪಟ್ಟಾವನ್ನು ಹಲವು ರೀತಿಯಲ್ಲಿ ಸ್ಟೈಲ್ ಮಾಡಬಹುದು. ತುಂಬಾ ಚೆನ್ನಾಗಿ ಕಾಣಲು, ಅಥವಾ ಸೀರೆಯುಟ್ಟಂತೆ ಕಾಣಲು ಲೆಹೆಂಗಾದ ದುಪಟ್ಟಾವನ್ನು ಗುಜರಾತಿ ಶೈಲಿಯಲ್ಲಿ ಉಡಬಹುದು. ದುಪ್ಪಟ್ಟಾವನ್ನು ತಲೆಯ ಮೇಲೆ ಹೊದ್ದುಕೊಂಡು, ಎಡಭಾಗದಲ್ಲಿ ನೆರಿಗೆಗಳನ್ನು ಮಾಡಿ ದುಪ್ಪಟ್ಟಾಗೆ ಪಿನ್ ಮಾಡಬಹುದು.

- ಲೆಹೆಂಗಾ ತೊಟ್ಟಿದ್ದರೆ, ದುಪ್ಪಟ್ಟಾವನ್ನು ಜಾಕೆಟ್ ರೀತಿ ಬಳಸಬಹುದು. ದುಪ್ಪಟ್ಟಾ ತುದಿಗಳನ್ನು ಹಿಂಭಾಗದಿಂದ ಮುಂಭಾಗಕ್ಕೆ ತಂದು ಪಿನ್ ಮಾಡಿ, ಜಾಕೆಟ್ ರೀತಿ ಧರಿಸಬಹುದು. ಇದೇ ರೀತಿ ಸೀರೆಯುಟ್ಟಾಗಲೂ ಮಾಡಬಹುದು. ಸೀರೆಯನ್ನು ಧರಿಸಿ, ಲೆಹೆಂಗಾ ದುಪ್ಪಟ್ಟಾವನ್ನು ತೆಗೆದುಕೊಂಡು ಇದೀ ರೀತಿ ಜಾಕೆಟ್ ಮಾಡಿ ಧರಿಸಬಹುದು. ನೋಡಲು ವಿಭಿನ್ನವಾಗಿ, ಸುಂದರವಾಗಿ ಕಾಣುತ್ತದೆ.

- ಸೀರೆಯನ್ನುಟ್ಟು ಅದಕ್ಕೊಪ್ಪುವ ಲೆಹೆಂಗಾ ದುಪ್ಪಟ್ಟಾ ಅಥವಾ ನಿಮಗಿಷ್ಟವಾದ ಸೀರೆಯನ್ನು ಒಂದು ಭುಜದ ಮೇಲೆ ದುಪ್ಪಟ್ಟಾ ರೀತಿ ಧರಿಸಬಹುದು. ತಿಳಿ ಬಣ್ಣದ ಸೀರೆಯಾಗಿದ್ದರೆ ಗಾಢ ಬಣ್ಣದ ದುಪ್ಪಟ್ಟಾ ಅಥವಾ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

- ವಿ ಆಕಾರದಲ್ಲಿ ದುಪ್ಪಟ್ಟಾವನ್ನು ಧರಿಸಬಹುದು. ಲೆಹಂಗಾ ತೊಟ್ಟೆದ್ದರೆ, ದುಪ್ಪಟ್ಟಾವನ್ನು ಪಲ್ಲು ಮಾಡಿ, ವಿ ಆಕಾರದಲ್ಲಿ ಎರಡೂ ಭುಜದ ಮೇಲೆ ಹಾಕಿ, ಪಿನ್ ಮಾಡಬೇಕು. ಅದೇ ಸೀರೆಯನ್ನುಟ್ಟಿದ್ದರೆ ನೆಟೆಡ್ ದುಪ್ಪಟ್ಟಾವನ್ನು ಇದೇ ರೀತಿ ಧರಿಸಬಹುದು.

- ಮದುವೆಯ ಸೀರೆಯಲ್ಲಿ ಕಂಗೊಳಿಸಬೇಕು ಎಂಬ ಆಸೆಯಿದ್ದರೆ, ಅದೇ ಸೀರೆಯನ್ನುಡಬಹುದು. ನೆಟೆಡ್ ದುಪ್ಪಟ್ಟಾವನ್ನು ತೆಗೆದುಕೊಂಡು ತಲೆ ಮೇಲಿಂದ ಹಾಕಿ, ಪಿನ್ ಮಾಡಬಹುದು.