ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ ಬಳಸದೆ ಗರ್ಭಧಾರಣೆ ಖಾತ್ರಿಪಡಿಸಿಕೊಳ್ಳುವುದು ಹೇಗೆ? ಮನೆಯಲ್ಲೇ ಇರುವ ಈ ವಸ್ತುಗಳನ್ನು ಬಳಸಿ ಚೆಕ್ ಮಾಡಿ-how to test if you are pregnant without using a pregnancy test kit check using these items at home smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ ಬಳಸದೆ ಗರ್ಭಧಾರಣೆ ಖಾತ್ರಿಪಡಿಸಿಕೊಳ್ಳುವುದು ಹೇಗೆ? ಮನೆಯಲ್ಲೇ ಇರುವ ಈ ವಸ್ತುಗಳನ್ನು ಬಳಸಿ ಚೆಕ್ ಮಾಡಿ

ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ ಬಳಸದೆ ಗರ್ಭಧಾರಣೆ ಖಾತ್ರಿಪಡಿಸಿಕೊಳ್ಳುವುದು ಹೇಗೆ? ಮನೆಯಲ್ಲೇ ಇರುವ ಈ ವಸ್ತುಗಳನ್ನು ಬಳಸಿ ಚೆಕ್ ಮಾಡಿ

ಗರ್ಭಧಾರಣೆ ಪರೀಕ್ಷೆಯ ಕಿಟ್‌ಗಳು ಲಭ್ಯವಿಲ್ಲದಿದ್ದಾಗ ಪರೀಕ್ಷೆ ಮಾಡುವುದು ಹೇಗೆ? ಪ್ರೆಗ್ನೆನ್ಸಿ ಕಿಟ್ ಇಲ್ಲದೇ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ನೈಸರ್ಗಿಕ ವಿಧಾನಗಳನ್ನು ಬಳಸಬಹುದಾಗಿದೆ.

ಕಿಟ್ ಇಲ್ಲದೇ ಪ್ರೆಗ್ನಿನ್ಸಿ ಟೆಸ್ಟ್
ಕಿಟ್ ಇಲ್ಲದೇ ಪ್ರೆಗ್ನಿನ್ಸಿ ಟೆಸ್ಟ್

ಗರ್ಭಾವಸ್ಥೆ ಅಥವಾ ಪ್ರೆಗ್ನೆನ್ಸಿಯ ಬಗ್ಗೆ ದಂಪತಿಗಳಿಗೆ ಎಲ್ಲಿಲ್ಲದ ಕುತೂಹಲ ಇರುವುದು ಸಹಜ. ಈ ಕುತೂಹಲವನ್ನು ತಣಿಸಿಕೊಳ್ಳಲು ದಂಪತಿಗಳ ನಡುವೆ ಪ್ರೆಗ್ನೆನ್ಸಿ ಪರೀಕ್ಷೆ ಮಾಡುವ ಕುರಿತು ಮಾತುಕತೆಗಳು ಸಂದರ್ಭಾನುಸಾರ ಬರದೇ ಇರದು. ಪ್ರೆಗ್ನೆನ್ಸಿ ಪರೀಕ್ಷಿಸಲು ಸಾಮಾನ್ಯವಾಗಿ ಕಿಟ್‌ಅನ್ನು ಬಳಕೆ ಮಾಡಲಾಗುತ್ತದೆ. ಆದ್ರೆ ಕಿಟ್ ಇಲ್ಲದೆಯೂ ಪ್ರೆಗ್ನೆನ್ಸಿಯನ್ನು ಪರೀಕ್ಷೆ ಮಾಡಲು ಹಲವು ವಿಧಾನಗಳಿವೆ. ಈ ಕುರಿತು ಹಲವರಿಗೆ ಮಾಹಿತಿಯ ಕೊರತೆಯಿದ್ದು, ನಿಮಗೆಂದೇ ಮಾಹಿತಿ ಇಲ್ಲಿದೆ.

ಮಕ್ಕಳನ್ನು ಪಡೆಯಬೇಕೆಂಬ ಹಂಬಲ ಇರುವ ದಂಪತಿಗೆ ಪ್ರೆಗ್ನೆನ್ಸಿ ಎಂಬುದು ಅತ್ಯಂತ ಕುತೂಹಲದ-ಬಯಕೆಯ ಜೀವನದ ಭಾಗವಾಗಿದೆ. ಮಕ್ಕಳನ್ನು ಪಡೆಯಬೇಕೆಂಬ ಆಸೆ ಹೊಂದಿ ದೈಹಿಕ ಸಂಪರ್ಕ ನಡೆಸಿದ ನಂತರ ಪ್ರೆಗ್ನೆನ್ಸಿ ಪರೀಕ್ಷೆಯನ್ನು ನಿರೀಕ್ಷೆಯ ಕಂಗಳಿಂದ ಮಾಡುವ ದಂಪತಿಗೆ ಸಹಾಯವಾಗುವ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ.

ಗರ್ಭಿಣಿಯಾಗಲು ಬಯಸುವವರಿಗೆ ಮತ್ತು ಮಕ್ಕಳನ್ನು ಪಡೆಯುವುದನ್ನು ಮುಂದೂಡಲು ಬಯಸುವವರಿಗೆ ಪ್ರೆಗ್ನೆನ್ಸಿ ಪರೀಕ್ಷೆ ಎಂಬುದು ಬಹಳ ದೊಡ್ಡ ವಿಷಯವಾಗಿದೆ. ಆದರೆ ಗರ್ಭಧಾರಣೆ ಪರೀಕ್ಷೆಯ ಕಿಟ್‌ಗಳು ಲಭ್ಯವಿಲ್ಲದಿದ್ದಾಗ ಪರೀಕ್ಷೆ ಮಾಡುವುದು ಹೇಗೆ? ಪ್ರೆಗ್ನೆನ್ಸಿ ಕಿಟ್ ಇಲ್ಲದೇ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ನೈಸರ್ಗಿಕ ವಿಧಾನಗಳನ್ನು ಬಳಸಬಹುದಾಗಿದೆ.

ನೈಸರ್ಗಿಕವಾಗಿ ಗರ್ಭಧಾರಣೆಯ ಪರೀಕ್ಷೆ ಮಾಡುವ ವಿಧಾನಗಳ ಇಲ್ಲಿವೆ.

1. ಸಕ್ಕರೆಯನ್ನು ಬಳಸಿ ಪ್ರೆಗ್ನೆನ್ಸಿ ಪರೀಕ್ಷೆ

ಹಿಂದಿನ ಕಾಲದಲ್ಲಿ ಗರ್ಭಾವಸ್ಥೆಯ ಪರೀಕ್ಷೆಯ ಕಿಟ್‌ಗಳು ಲಭ್ಯವಿಲ್ಲದ ಕಾರಣ ಪ್ರಾಚೀನ ಕಾಲದಿಂದಲೂ ಸಕ್ಕರೆಯನ್ನು ಬಳಸುತ್ತಿರುವ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಒಂದು ಬಟ್ಟಲಿನಲ್ಲಿ ಒಂದು ಚಮಚ ಸಕ್ಕರೆಯನ್ನು ತೆಗೆದುಕೊಂಡು ಅದನ್ನು ಮೂತ್ರದೊಂದಿಗೆ ಬೆರೆಸಿ. ಸಕ್ಕರೆ ಕರಗದೇ ಉಂಡೆಯಂತೆ ಬದಲಾದರೆ ಗರ್ಭಧಾರಣೆ ದೃಢೀಕರಣವಾಗಿದ್ದು ಪಕ್ಕಾ ಎಂದರ್ಥ. ಮೂತ್ರದಲ್ಲಿರುವ HCG ಹಾರ್ಮೋನ್ ಸಕ್ಕರೆಯನ್ನು ನೀರಿನಲ್ಲಿ ಸರಿಯಾಗಿ ಕರಗಿಸದೇ ಇರುವುದೇ ಇದಕ್ಕೆ ಕಾರಣ. ಸಕ್ಕರೆ ಬೇಗನೆ ಕರಗಿದರೆ ಗರ್ಭಧಾರಣೆ ಆಗಿಲ್ಲ ಎಂದು ಅರ್ಥ.

2. ಉಪ್ಪನ್ನು ಬಳಸಿ ಪ್ರೆಗ್ನೆನ್ಸಿ ಪರೀಕ್ಷೆ

ಈ ಪರೀಕ್ಷೆಯನ್ನು ಸಕ್ಕರೆ ಪರೀಕ್ಷೆಯ ರೀತಿಯಲ್ಲಿಯೇ ಮಾಡಬೇಕು. ಸಕ್ಕರೆಯ ಬದಲಿಗೆ ಉಪ್ಪನ್ನು ಬಳಸಿ. ಒಂದು ನಿಮಿಷದ ನಂತರ, ಉಪ್ಪು ಕರಗದೇ ಉಂಡೆಯಾದರೆ, ಗರ್ಭಧಾರಣೆ ಸಫಲವಾಗಿದೆ ಎಂದರ್ಥ. . ಉಪ್ಪು ಕರಗಿದರೆ ಗರ್ಭಧಾರಣೆ ಆಗಿಲ್ಲ ಎಂದರ್ಥ. ಆದರೆ ಈ ಪರೀಕ್ಷೆಯ ಬಗ್ಗೆ ಯಾವುದೇ ವೈಜ್ಞಾನಿಕ ದೃಢೀಕರಣ ನೀಡುವ ಅಧ್ಯಯನ ಹೊರಬಿದ್ದಿಲ್ಲ. ಇದು ಪ್ರಾಚೀನ ಕಾಲದಿಂದಲೂ ಅನುಸರಿಸುವ ವಿಧಾನಗಳಲ್ಲಿ ಒಂದಾಗಿದ್ದು ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಡೆದರೆ ಉತ್ತಮ.

3. ಯೋನಿಯ ಡಿಸ್ಚಾರ್ಜ್

ಗರ್ಭಧಾರಣೆಯ ನಿರ್ಣಯಕ್ಕಾಗಿ ಯೋನಿಯ ಡಿಸ್ಚಾರ್ಜ್ ಅನ್ನು ಗಮನಿಸಬಹುದು. ನೀವು ಗರ್ಭಿಣಿಯಾಗಿದ್ದರೆ, ಯೋನಿಯ ಡಿಸ್ಚಾರ್ಜ್ ಸಾಮಾನ್ಯಕ್ಕಿಂತ ದಪ್ಪವಾಗಿರುತ್ತದೆ. ಜೊತೆಗೆ ಕೆನೆಯ ರೂಪದಲ್ಲಿ ಇರುತ್ತದೆ. ಈ ಬದಲಾವಣೆಯು ಗರ್ಭಧಾರಣೆಯ ಕೆಲವು ದಿನಗಳ ನಂತರ ಕಂಡುಬರುತ್ತದೆ. ನಿಮ್ಮ ಮುಟ್ಟಿನ ಅವಧಿಯ ಅನಿಯಮಿತವಾಗಿದ್ದಾಗ ಈ ಲಕ್ಷಣವು ಹೆಚ್ಚು ಸ್ಪಷ್ಟವಾಗುತ್ತದೆ. ಈ ಪರೀಕ್ಷೆಯು ನಿಖರ ಫಲಿತಾಂಶ ನೀಡುವ ಸಾಧ್ಯತೆ ಹೆಚ್ಚಾಗಿದೆ.

4. ಅಡಿಗೆ ಸೋಡಾ

ಈ ವಿಧಾನದ ಮೂಲಕವೂ ಗರ್ಭಧಾರಣೆಯ ಪರೀಕ್ಷೆಯನ್ನು ಸುಲಭವಾಗಿ ನಡೆಸಬಹುದು. ಅಡಿಗೆ ಸೋಡಾ ಮತ್ತು ಮೂತ್ರವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಕೆಲವು ನಿಮಿಷಗಳ ಕಾಲ ತಾಳ್ಮೆಯಿಂದ ಕಾಯಿರಿ. ಮೂತ್ರದಲ್ಲಿ HCG ಹಾರ್ಮೋನ್ ಇದ್ದರೆ, ಅದು ಅಡುಗೆ ಸೋಡಾದೊಂದಿಗೆ ಪ್ರತಿಕ್ರಿಯಿಸುತ್ತದೆ. ಸೋಡಾದಲ್ಲಿ ಗುಳ್ಳೆಗಳು ಕಾಣಿಸಿಕೊಂಡರೆ ಗರ್ಭಧಾರಣೆ ಖಾತ್ರಿಯಾಗಿದೆ. ನೀವು ಅಪ್ಪ ಅಮ್ಮ ಆಗುತ್ತಿದ್ದೀರಿ ಎಂದರ್ಥ!

ಈ ಎಲ್ಲಾ ಪರೀಕ್ಷೆಗಳನ್ನು ಮಾಡಲು ತುಂಬಾ ಸುಲಭ. ಆದರೆ ಇದಕ್ಕೆಲ್ಲ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಈ ಯಾವ ಪರೀಕ್ಷೆಯ ನಂತರ ಸೂಕ್ತ ಪರಿಣಿತ ವೈದ್ಯರನ್ನು ಭೇಟಿಯಾಗಿ ಖಚಿತಪಡಿಸಿಕೊಳ್ಳುವುದು ಒಳಿತು.

mysore-dasara_Entry_Point