ಹಾಲು ಆರೋಗ್ಯಕ್ಕೆ ಉತ್ತಮ, ಆದರೆ ಈ ಸಮಯದಲ್ಲಿ ಸೇವಿಸಿದರೆ ದೇಹಕ್ಕೆ ಅಮೃತವಲ್ಲ, ವಿಷವಾಗಲಿದೆ ಎಚ್ಚರ!
Health Tips: ಹಾಲು ಆರೋಗ್ಯಕ್ಕೆ ಬಹಳ ಒಳ್ಳೆಯದು, ಹಾಲಿನಲ್ಲಿ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿವೆ. ಆದರೆ ಹಾಲನ್ನು ಇಷ್ಟ ಬಂದ ಸಮಯಕ್ಕೆ, ಇಷ್ಟ ಬಂದ ರೀತಿ ಸೇವಿಸಿದರೆ ಅದು ದೇಹಕ್ಕೆ ಅಮೃತ ಆಗುವ ಬದಲಿಗೆ ವಿಷವಾಗುತ್ತದೆ.
ಆರೋಗ್ಯವಾಗಿರಲು ಪ್ರತಿದಿನ ಒಂದು ಲೋಟ ಹಾಲು ಕುಡಿಯಬೇಕು ಎಂಬ ಮಾತನ್ನು ನಾವು ಬಾಲ್ಯದಿಂದಲೂ ಕೇಳುತ್ತಾ ಬಂದಿದ್ದೇವೆ. ಏಕೆಂದರೆ ಹಾಲು ಸಂಪೂರ್ಣ ಆರೋಗ್ಯಕರ ಪಾನೀಯವಾಗಿದೆ. ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳು ಹಾಲಿನಲ್ಲಿ ಲಭ್ಯವಿವೆ. ಹಾಗೆಂದ ಮಾತ್ರಕ್ಕೆ ಹಾಲನ್ನು ಹೇಗೆ ಬೇಕಾದರೆ ಹಾಗೆ, ಯಾವ ಸಮಯಕ್ಕೆ ಬೇಕೋ ಆ ಸಮಯಕ್ಕೆ ಕುಡಿಯಬಾರದು.
ಹಾಲು ಸೇರಿದಂತೆ ಯಾವುದೇ ಆಹಾರವಾಗಲಿ ಸರಿಯಾದ ರೀತಿ ಮತ್ತು ಸರಿಯಾದ ಸಮಯದಲ್ಲಿ ಕುಡಿಯುವುದು ಬಹಳ ಮುಖ್ಯ. ಇಲ್ಲವಾದರೆ ನಿಮ್ಮ ಆರೋಗ್ಯ ಸುಧಾರಿಸುವ ಬದಲಿಗೆ ಉಲ್ಬಣವಾಗುತ್ತದೆ.
ಹಾಲನ್ನು ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸುವುದು ಉತ್ತಮ. ಆದರೆ ರಾತ್ರಿ ಊಟ ಸೇವಿಸುತ್ತಿದ್ದಂತೆ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಲಿನ ಸಂಪೂರ್ಣ ಪ್ರಯೋಜನಗಳು ನಿಮಗೆ ದೊರೆಯಬೇಕು ಎಂದು ನೀವು ಬಯಸಿದರೆ, ನೀವು ಅದನ್ನು ಕುಡಿಯುವ ವಿಧಾನವೂ ಅಷ್ಟೇ ಮುಖ್ಯವಾಗಿದೆ. ಅದರಲ್ಲೂ ಆಹಾರ ತಿಂದ ತಕ್ಷಣ ಹಾಲು ಕುಡಿಯುವುದು ತುಂಬಾ ಅಪಾಯಕಾರಿ ಅಭ್ಯಾಸ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆಹಾರ ಮತ್ತು ಹಾಲಿನ ನಡುವಿನ ಅಂತರ ಹೇಗಿರಬೇಕು?
ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಬಹಳ ಒಳ್ಳೆಯದು ಎಂದು ಆಯುರ್ವೇದ ಕೂಡಾ ಹೇಳುತ್ತದೆ. ಆದರೆ ಊಟ ತಿಂದ ತಕ್ಷಣ ಹಾಲು ಕುಡಿಯುವುದನ್ನು ನಿಲ್ಲಿಸಬೇಕು. ಆಹಾರ ಸೇವಿಸುತ್ತಿದ್ದಂತೆ ಹಾಲು ಕುಡಿದರೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ನಾವು ಆಹಾರ ಸೇವಿಸಿದಾಗ, ಅದು ನಮ್ಮ ಹೊಟ್ಟೆಯಲ್ಲಿ ಒಂದು ಗಂಟೆ ಇರುತ್ತದೆ. ಆಹಾರ ಜೀರ್ಣಕ್ರಿಯೆ ಪ್ರಕ್ರಿಯೆಯು ಈ ಸಮಯದಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ಹಾಲು ಕುಡಿಯುವುದರಿಂದ, ಹಾಲು ಆಹಾರದಲ್ಲಿ ಹೀರಲ್ಪಡುತ್ತದೆ. ಹಾಗಾಗಿ ಊಟ ಮಾಡಿದ ನಂತರ ಕನಿಷ್ಠ ಒಂದು ಗಂಟೆಯಿಂದ ಒಂದೂವರೆ ಗಂಟೆ ಸಮಯದ ನಂತರವೇ ಹಾಲು ಕುಡಿಯಬೇಕು. ಒಂದು ವೇಳೆ ತಡವಾಗಿ ಆಹಾರ ಸೇವಿಸಿದರೆ ಹಾಲು ಕುಡಿಯದಿರುವುದು ಒಳ್ಳೆಯದು.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವಿಸುವುದರ ಪ್ರಯೋಜನಗಳು
ಈ ವಿಚಾರಗಳನ್ನು ಗಮನದಲ್ಲಿಡಿ
- ಆಯುರ್ವೇದದ ಪ್ರಕಾರ ಹಾಲು ಮತ್ತು ಉಪ್ಪು ಆಹಾರ ವಿರೋಧಿ. ಇವುಗಳನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಹಾಲು ಮತ್ತು ಉಪ್ಪನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
- ವ್ಯಾಯಾಮದ ನಂತರ ಹಾಲು ಕುಡಿಯುವುದು ಗ್ಯಾಸ್ ಸಮಸ್ಯೆ ಮತ್ತು ವಾಂತಿಗೆ ಕಾರಣವಾಗಬಹುದು. ದೇಹದಲ್ಲಿ ಬೇಗನೆ ಜೀರ್ಣವಾಗುವುದರಿಂದ ವ್ಯಾಯಾಮದ ಮೊದಲು ಅಥವಾ ನಂತರ ಹಾಲು ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ.
- ಕಾರ್ನ್, ಕೆಂಪು ಮಾಂಸ ಅಥವಾ ತರಕಾರಿಗಳೊಂದಿಗೆ ಹಾಲು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಆಹಾರದ ಜೀರ್ಣಕ್ರಿಯೆಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
- ಹಾಲಿನೊಂದಿಗೆ ಚಾಕೊಲೇಟ್ ಅಥವಾ ಮಿಠಾಯಿಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು, ಇದು ಮಧುಮೇಹ, ಹೃದ್ರೋಗ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಪರಿಸ್ಥಿತಿಗಳಲ್ಲಿ ಹಾಲು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು, ಗ್ಯಾಸ್, ಅಜೀರ್ಣ ಅಥವಾ ದೇಹಕ್ಕೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
- ಯಾವಾಗಲೂ ಹಾಲನ್ನು ಸ್ವಲ್ಪ ಬಿಸಿ ಮಾಡಿದ ನಂತರವೇ ಕುಡಿಯಬೇಕು. ತಣ್ಣನೆಯ ಹಾಲು ಅಥವಾ ತುಂಬಾ ಬಿಸಿಯಾದ ಹಾಲು ಕುಡಿಯುವುದು ಒಳ್ಳೆಯದಲ್ಲ.
ಇದನ್ನೂ ಓದಿ: ನೀರಲ್ಲದೆ ದೇಹವನ್ನು ಹೈಡ್ರೇಟ್ ಮಾಡುವ ಇತರೆ ವಿಧಾನಗಳು