Nail Shape: ಉಗುರಿನ ಮೂಲಕವೂ ನಿಮ್ಮ ವ್ಯಕ್ತಿತ್ವದ ಪರೀಕ್ಷೆ; ಇತರರಿಂದ ನೀವು ಹೇಗೆ ಭಿನ್ನ ಎಂದು ಉಗುರು ಹೇಳುತ್ತದೆ
ಕನ್ನಡ ಸುದ್ದಿ  /  ಜೀವನಶೈಲಿ  /  Nail Shape: ಉಗುರಿನ ಮೂಲಕವೂ ನಿಮ್ಮ ವ್ಯಕ್ತಿತ್ವದ ಪರೀಕ್ಷೆ; ಇತರರಿಂದ ನೀವು ಹೇಗೆ ಭಿನ್ನ ಎಂದು ಉಗುರು ಹೇಳುತ್ತದೆ

Nail Shape: ಉಗುರಿನ ಮೂಲಕವೂ ನಿಮ್ಮ ವ್ಯಕ್ತಿತ್ವದ ಪರೀಕ್ಷೆ; ಇತರರಿಂದ ನೀವು ಹೇಗೆ ಭಿನ್ನ ಎಂದು ಉಗುರು ಹೇಳುತ್ತದೆ

ಉಗುರಿನ ಮೂಲಕ ವ್ಯಕ್ತಿತ್ವದ ಪರೀಕ್ಷೆಯನ್ನೂ ಮಾಡಬಹುದು. ನೀವು ಸಾಮಾನ್ಯ ಜನರಿಗಿಂತ ಹೆಚ್ಚು ಸೃಜನಶೀಲರಾಗಿದ್ದೀರಿ ಎಂಬುದನ್ನು ನಿಮ್ಮ ಉಗುರು ಹೇಳುತ್ತದೆ. ಅಂದರೆ ಒಬ್ಬರ ಉಗುರು, ಇನ್ನೊಬ್ಬರ ಉಗುರುಗಿಂತ ಭಿನ್ನವಾಗಿರುತ್ತದೆ. ಅದರಿಂದ ಹೇಗೆ ವ್ಯಕ್ತಿತ್ವ ಪತ್ತೆಯಾಗುತ್ತದೆ ಎಂದು ಹೇಗೆ ಎಂದು ತಿಳಿಯೋಣ.

ಉಗುರಿನ ಮೂಲಕ ವ್ಯಕ್ತಿತ್ವದ ಪರೀಕ್ಷೆಯನ್ನೂ ಮಾಡಬಹುದು
ಉಗುರಿನ ಮೂಲಕ ವ್ಯಕ್ತಿತ್ವದ ಪರೀಕ್ಷೆಯನ್ನೂ ಮಾಡಬಹುದು (Pxabay)

ನಮ್ಮ ಪ್ರತಿಯೊಂದು ಕೈಬೆರಳುಗಳು ಹೇಗೆ ಭಿನ್ನವಾಗಿದೆಯೋ ಹಾಗೆಯೇ ಉಗುರಿನ ಆಕಾರವೂ ಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿದೆ. ನೀವೆಂದಾದರೂ ನಿಮ್ಮ ಉಗುರುಗಳ ಬುಡದಲ್ಲಿ ಸಣ್ಣದಾದ, ಬಿಳಿಯಾದ, ಅರ್ಧಚಂದ್ರಾಕಾರದ ಗುರುತನ್ನು ಗಮನಿಸಿದ್ದೀರಾ? ಇದನ್ನು "ಲುನುಲಾ" ಎಂದು ಕರೆಯಲಾಗುತ್ತದೆ. ಅವು ನಿಮ್ಮ ವ್ಯಕ್ತಿತ್ವದ ಬಗ್ಗೆ ಕೆಲವೊಂದು ಮಹತ್ತರ ಮಾಹಿತಿಯನ್ನು ಬಹಿರಂಗಪಡಿಸಬಹುದು ಎಂದು ನಿಮಗೆ ಗೊತ್ತಿತ್ತೇ?

ದೊಡ್ಡ ಮತ್ತು ಸ್ಪಷ್ಟವಾಗಿ ಕಾಣಿಸುವ ಲುನುಲಾಗಳು

ನಿಮ್ಮ ಉಗುರಿನ ಬುಡದಲ್ಲಿರುವ ಈ ಅರ್ಧ ಚಂದ್ರನಾಕೃತಿಯ ಲುನುಲಾಗಳು ದೊಡ್ಡದಾಗಿ, ಸ್ಪಷ್ಟವಾಗಿ ಕಾಣಿಸುತ್ತಿದ್ದರೆ, ನೀವು ರಚನಾತ್ಮಕ ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎನ್ನಲಾಗುತ್ತದೆ. ಸ್ಪಷ್ಟ ಲುನುಲಾಗಳನ್ನು ಹೊಂದಿರುವ ಜನರು ಹೆಚ್ಚಾಗಿ ಶಕ್ತಿಯುತರಾಗಿರುತ್ತಾರೆ, ಗುರಿ ಆಧಾರಿತರು ಮತ್ತು ಶಿಸ್ತುಬದ್ಧರಾಗಿರುತ್ತಾರೆ. ನೀವು ಅದ್ಭುತ ಆಲೋಚನೆಗಳನ್ನು ಹೊಂದಿರುವುದಷ್ಟೇ ಅಲ್ಲದೆ, ಅವುಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ವಾಸ್ತುಶಿಲ್ಪ, ಎಂಜಿನಿಯರಿಂಗ್ ಅಥವಾ ವ್ಯವಹಾರ ತಂತ್ರದಂತಹ ನಾವೀನ್ಯತೆ ಮತ್ತು ಕಾರ್ಯಗತಗೊಳಿಸುವ ಅಗತ್ಯವಿರುವ ಕ್ಷೇತ್ರಗಳಲ್ಲಿ ನಿಮ್ಮ ಸೃಜನಶೀಲತೆ ಹೆಚ್ಚು ಕಾರ್ಯರೂಪಕ್ಕೆ ಬರುತ್ತದೆ.

ದೊಡ್ಡ ಲುನುಲಾಗಳನ್ನು ಹೊಂದಿರುವ ಜನರ ವ್ಯಕ್ತಿತ್ವವು ಹಗಲುಗನಸಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಒಂದು ಅದ್ಭುತ ಆಲೋಚನೆಗಳನ್ನು ನಿಜವಾದ ಫಲಿತಾಂಶವಾಗಿ ಪರಿವರ್ತಿಸುವಲ್ಲಿ ಅವರು ಮೊದಲಿಗರಾಗಿರುತ್ತಾರೆ. ಅವರ ರಚನಾತ್ಮಕ ವಿಧಾನವು ಸೃಜನಶೀಲತೆಯನ್ನು ಪ್ರಾಯೋಗಿಕತೆಯೊಂದಿಗೆ ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಡುತ್ತದೆ. ಅವರು ಮಾಡುವ ಯಾವುದೇ ಕೆಲಸದಲ್ಲಿ ಅವರನ್ನು ಹೆಚ್ಚು ಉತ್ಪಾದಕರನ್ನಾಗಿ ಮಾಡುತ್ತದೆ.

ಸಣ್ಣ ಅಥವಾ ಮಸುಕಾಗಿ ಕಾಣಿಸುವ ಲುನುಲಾಗಳು

ನಿಮ್ಮ ಲುನುಲಾಗಳು ಮಸುಕಾಗಿ ಕಾಣಿಸುತ್ತಿದ್ದರೆ ಅಥವಾ ತುಂಬಾ ಚಿಕ್ಕದಾಗಿದ್ದರೆ, ನಿಮ್ಮ ಸೃಜನಶೀಲತೆಯು ಭಾವನಾತ್ಮಕತೆಯ ಕಡೆಗೆ ಹೆಚ್ಚು ಒಲವನ್ನು ತೋರುತ್ತದೆ. ನೀವು ನಿಮ್ಮ ಯೋಚನೆಗಳನ್ನು ಹೆಚ್ಚಾಗಿ ಆತ್ಮಾವಲೋಕನ ಅಥವಾ ವೈಯಕ್ತಿಕ ಯೋಜನೆಗಳ ಮೂಲಕ ವ್ಯಕ್ತಪಡಿಸುತ್ತೀರಿ. ಕಲಾವಿದರು, ಬರಹಗಾರರು ಮತ್ತು ಸಂಗೀತಗಾರರು ಹೆಚ್ಚಾಗಿ ಈ ವರ್ಗಕ್ಕೆ ಸೇರುತ್ತಾರೆ, ಏಕೆಂದರೆ ಅವರು ಸೃಜನಶೀಲತೆಯನ್ನು ಅರ್ಥಪೂರ್ಣ ಮತ್ತು ವೈಯಕ್ತಿಕ ಕೆಲಸವಾಗಿ ತೋರಿಸುತ್ತಾರೆ.

ನಿಮ್ಮ ಉಗುರಿನಲ್ಲಿ ಲುನುಲಾಗಳು ಇರದಿದ್ದರೆ

ನಿಮ್ಮ ಉಗುರುಗಳ ಮೇಲೆ ಲುನುಲಾಗಳು ಕಾಣಿಸದಿದ್ದರೆ ಚಿಂತಿಸಬೇಡಿ, ಇದರರ್ಥ ನಿಮಗೆ ಸೃಜನಶೀಲತೆಯ ಕೊರತೆಯಿದೆ ಎಂದಲ್ಲ. ಉಗುರಿನಲ್ಲಿ ಲುನುಲಾಗಳನ್ನು ಹೊಂದಿರದೇ ಇರುವ ಜನರು ಗುಪ್ತ ಅಥವಾ ಸುಪ್ತವಾದ ಸೃಜನಶೀಲತೆಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಅವರ ಕಾಲ್ಪನಿಕ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅವರಿಗೆ ಸ್ಫೂರ್ತಿ ಅಥವಾ ಪ್ರೇರಣೆ ಬೇಕಾಗಬಹುದು.

ಈ ರೀತಿಯ ಜನಗಳಲ್ಲಿ ಅದ್ಭುತ ಆಲೋಚನೆಗಳು ಆಗಾಗ್ಗೆ ಅನಿರೀಕ್ಷಿತವಾಗಿ ಹೊರಹೊಮ್ಮುತ್ತದೆ. ಸರಿಯಾದ ಪರಿಸರ ಅಥವಾ ಪ್ರೇರಣೆ ಸಿಕ್ಕಾಗ, ಇವರು ತಮ್ಮ ಅಸಾಧಾರಣ ಪ್ರತಿಭೆಯಿಂದ ತಮ್ಮ ಸುತ್ತಮುತ್ತಲಿನವರನ್ನು ಆಶ್ಚರ್ಯಗೊಳಿಸಬಹುದು. ಸಮಸ್ಯೆಯನ್ನು ಪರಿಹರಿಸುವುದು, ಹಾಸ್ಯ ಅಥವಾ ಸ್ವಯಂಪ್ರೇರಿತ ಕಲಾತ್ಮಕ ಅಭಿವ್ಯಕ್ತಿಗಳು ಇವರ ಸಾಮರ್ಥ್ಯಗಳು ಮತ್ತು ವಿಶಿಷ್ಟ ಲಕ್ಷಣಗಳಾಗಿವೆ.

ಲುನುಲಾಗಳು ಮತ್ತು ಸೃಜನಶೀಲತೆಯ ಬಗ್ಗೆ ಸತ್ಯಾಸತ್ಯತೆ

ನಮ್ಮ ಉಗುರುಗಳು ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎಂಬುದು ತಮಾಷೆಯ ವಿಚಾರವಾಗಿರಬಹುದು. ಲುನುಲಾಗಳು ವೈಜ್ಞಾನಿಕವಾಗಿ ಸೃಜನಶೀಲತೆಯನ್ನು ನಿರ್ಧರಿಸುವುದಿಲ್ಲ. ನಮ್ಮ ವ್ಯಕ್ತಿತ್ವವು ಅನುಭವಗಳು ಮತ್ತು ವೈಯಕ್ತಿಕ ಆಸಕ್ತಿಯಿಂದ ರೂಪುಗೊಳ್ಳುತ್ತದೆ. ನಮ್ಮ ಉಗುರುಗಳ ಆಕಾರದಿಂದಲ್ಲ. ಆದರೂ, ಈ ಪರೀಕ್ಷೆಯು ನಿಮ್ಮ ಬಗ್ಗೆ ಇನ್ನಷ್ಟು ಹೆಚ್ಚು ಅನ್ವೇಷಿಸಲು ನಿಮಗೆ ಸ್ಫೂರ್ತಿ ನೀಡಬಹುದು. ನಿಮ್ಮೊಳಗೆ ಅಡಗಿರುವ ಯೋಚನೆ, ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಿಮಗೆ ಪ್ರೇರಣೆ ನೀಡಬಹುದು.

Whats_app_banner