ಬಾನು ಮುಷ್ತಾಕ್ ಅವರ ಎದೆಯ ಹಣತೆ ಕಥೆ ಓದಬೇಕು ಅಂತ ಅನ್ನಿಸ್ತಿದೆಯಾ, ಇಲ್ಲಿದೆ ಅದರ ನೇರ ಲಿಂಕ್
ಕನ್ನಡ ಸುದ್ದಿ  /  ಜೀವನಶೈಲಿ  /  ಬಾನು ಮುಷ್ತಾಕ್ ಅವರ ಎದೆಯ ಹಣತೆ ಕಥೆ ಓದಬೇಕು ಅಂತ ಅನ್ನಿಸ್ತಿದೆಯಾ, ಇಲ್ಲಿದೆ ಅದರ ನೇರ ಲಿಂಕ್

ಬಾನು ಮುಷ್ತಾಕ್ ಅವರ ಎದೆಯ ಹಣತೆ ಕಥೆ ಓದಬೇಕು ಅಂತ ಅನ್ನಿಸ್ತಿದೆಯಾ, ಇಲ್ಲಿದೆ ಅದರ ನೇರ ಲಿಂಕ್

ಕನ್ನಡದ ಹಿರಿಯ ಕಥೆಗಾರ್ತಿ ಬಾನು ಮುಷ್ತಾಕ್‌ ಅವರ ಸಣ್ಣ ಕಥೆಗಳ ಸಂಕಲನ ‘ಹಾರ್ಟ್‌ ಲ್ಯಾಂಪ್‌’ಗೆ ‘ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ’ ಒಲಿದ ಸಂದರ್ಭ ಇದು. ಇದರಲ್ಲಿ ಎದೆಯ ಹಣತೆ ಸಣ್ಣ ಕಥೆ ಓದಬೇಕು ಅಂತ ಅನ್ನಿಸ್ತಿದೆಯಾ, ಹಾಗಾದರೆ ಅದರ ನೇರ ಲಿಂಕ್ ಮತ್ತು ವಿವರ ಇಲ್ಲಿದೆ.

ಹಾರ್ಟ್ ಲ್ಯಾಂಪ್ ಕೃತಿಯ ಮೂಲ ಕಥೆ ಎದೆಯ ಹಣತೆ ಮತ್ತು ಹಾರ್ಟ್ ಲ್ಯಾಂಪ್ ಕೃತಿಯ ಮುಖಪುಟ.
ಹಾರ್ಟ್ ಲ್ಯಾಂಪ್ ಕೃತಿಯ ಮೂಲ ಕಥೆ ಎದೆಯ ಹಣತೆ ಮತ್ತು ಹಾರ್ಟ್ ಲ್ಯಾಂಪ್ ಕೃತಿಯ ಮುಖಪುಟ.

ಹಿರಿಯ ಕಥೆಗಾರ್ತಿ ಬಾನು ಮುಷ್ತಾಕ್‌ ಅವರ ಸಣ್ಣ ಕಥೆಗಳ ಸಂಕಲನ ‘ಹಾರ್ಟ್‌ ಲ್ಯಾಂಪ್‌’ಗೆ ‘ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ’ ಒಲಿದ ಸಂದರ್ಭ ಇದು. ಕನ್ನಡಕ್ಕೆ ಬಂದ ಮೊದಲ ‘ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ’ ಇದು. ಕಥಾ ಸಂಕಲನಕ್ಕೆ ಈ ಗೌರವ ಲಭಿಸುತ್ತಿರುವುದೂ ಇದೇ ಮೊದಲು. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಅನುವಾದಕಿ ಎಂಬ ಹಿರಿಮೆ ಕೂಡ ಕನ್ನಡಿಗರದ್ದೇ. ಹೌದು ದೀಪಾ ಭಾಸ್ತಿ ಅವರು ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ “ಹಾರ್ಟ್ ಲ್ಯಾಂಪ್‌” ಕೃತಿ ಹೊರತರಲು ನೆರವಾದವರು. ಕರುನಾಡು, ಕನ್ನಡಿಗರು ಸಂಭ್ರಮ ಪಡುವ ಹೊತ್ತು ಇದು.

ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಘೋಷಣೆಯಾದ ಕೂಡಲೇ, ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಇಬ್ಬರೂ ಪರಸ್ಪರ ಆಲಿಂಗಿಸಿಕೊಂಡರು. ‘ವೈವಿಧ್ಯಕ್ಕೆ ಸಂದ ಗೌರವವಿದು’ ಎಂದು ಬಾನು ಮುಷ್ತಾಕ್ ಅವರು ಭಾವುಕರಾಗಿ ಹೇಳಿದರೆ, ‘ನನ್ನ ಭಾಷೆಗೆ ಸಂದಿರುವ ಸುಂದರ ಗೆಲುವು ಈ ಪ್ರಶಸ್ತಿ’ ಎಂದು ಅನುವಾದಕಿ ದೀಪಾ ಭಾಸ್ತಿ ಪ್ರತಿಕ್ರಿಯಿಸಿದ್ದರು.

ಬಾನು ಮುಷ್ತಾಕ್ ಅವರ “ಎದೆಯ ದೀಪ” ಎಂಬ ಸಣ್ಣ ಕಥೆಯನ್ನು ಓದಬೇಕು ಎಂಬ ಹಂಬಲ ಅನೇಕರದ್ದು. ಎಲ್ಲಿ ಸಿಗುತ್ತೆ ಅಂತ ಹುಡುಕಾಡುತ್ತಿರುವುದು ಸಹಜ. ಆ ವಿವರ ಇಲ್ಲಿದೆ ಗಮನಿಸಿ.

ಬಾನು ಮುಷ್ತಾಕ್ ಅವರ ಎದೆಯ ಹಣತೆ ಸಣ್ಣ ಕಥೆ ಓದಬೇಕು ಅಂತ ಅನ್ನಿಸ್ತಿದೆಯಾ, ಇಲ್ಲಿದೆ ಅದರ ನೇರ ಲಿಂಕ್

ಬಾನು ಮುಷ್ತಾಕ್ ಅವರ ಎದೆಯ ಹಣತೆ ಸಣ್ಣ ಕಥೆ 2000ನೇ ಇಸವಿಯ ಏಪ್ರಿಲ್ ತಿಂಗಳ ಭಾವನಾ ಎಂಬ ಕನ್ನಡದ ಮಾಸಿಕದಲ್ಲಿ ಪ್ರಕಟವಾಗಿತ್ತು. ವಿಜಯ ಸಂಕೇಶ್ವರ ಅವರ ಪ್ರಕಾಶನದ ಭಾವನಾ ಮಾಸ ಪತ್ರಿಕೆಗೆ ಜಯಂತ ಕಾಯ್ಕಿಣಿ ಸಂಪಾದಕರಾಗಿದ್ದರು. ಈ ನಿಯತಕಾಲಿಕೆಯನ್ನು ಇಂಟರ್‌ನೆಟ್ ಆರ್ಕೈವ್ಸ್‌ನಲ್ಲಿ ಲಭ್ಯವಿದೆ. ಇದು https://bhavana.sanchaya.net ನಲ್ಲಿ ಕೂಡ ಇದ್ದು, ಸಂಚಯ ಹಾಗೂ ಸಂಚಿ ಫೌಂಡೇಶನ್ ಪ್ರಯತ್ನದಿಂದ ಸದಾ ಕಾಲ ಓದುಗರಿಗೆ ಲಭ್ಯ ಇರುವುದು ಸಾಧ್ಯವಾಗಿದೆ.

ಬಾನು ಮುಷ್ತಾಕ್ ಅವರ ಎದೆಯ ಹಣತೆ ಸಣ್ಣ ಕಥೆ ಓದಬೇಕು ಅಂತ ಅನ್ನಿಸ್ತಿದೆಯಾ, ಇಲ್ಲಿದೆ ಅದರ ನೇರ ಲಿಂಕ್ ಕ್ಲಿಕ್ ಮಾಡಿ

https://archive.org/details/bhaavanaapril2000000unse/page/116/mode/2up

ಬೂಕರ್ ಬಹುಮಾನ ಗೆದ್ದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಂಚಿ ಫೌಂಡೇಶಷನ್‌ ಶುಭ ಹಾರೈಸಿದ್ದು, ಎದೆಯ ಹಣತೆ ಕತೆ ಓದುವುದಕ್ಕೆ ಎಲ್ಲಿ ಲಭ್ಯವಿದೆ ಎಂಬ ಮಾಹಿತಿಯನ್ನೂ ಹಂಚಿಕೊಂಡಿದೆ.

ಜಯಂತ ಕಾಯ್ಕಿಣಿ ಅವರ ಸಂಪಾದಕತ್ವದ ಕನ್ನಡದ ಅತ್ಯುತ್ತಮ ಸಾಹಿತ್ಯಕ ಮ್ಯಾಗಜೀನ್‌ಗಳಲ್ಲಿ ಒಂದಾದ ಭಾವನ ಪತ್ರಿಕೆಯ, (ಏಪ್ರಿಲ್ 2000) ಸಂಚಿಕೆಯಲ್ಲಿ ಬಾನು ಮುಷ್ತಾಕ್ ಅವರ ಜನಪ್ರಿಯ ಕಥೆ "ಎದೆಯ ಹಣತೆ" ಪ್ರಕಟವಾಗಿತ್ತು. ಈ ಕಥೆ 2004ರಲ್ಲಿ ಪ್ರಕಟವಾದ ಅವರ ಕಥಾಸಂಕಲನಕ್ಕೂ ಶೀರ್ಷಿಕೆಯಾಗಿತ್ತು. ಭಾವನ ಸಂಚಿಕೆಗಳನ್ನು ಸಂಚಿಯ ಸಹಭಾಗಿತ್ವದಲ್ಲಿ ServantsOfKnowledge ಅಡಿ ಡಿಜಿಟಲೀಕರಿಸಲಾಗಿದೆ ಎಂದು ಸಂಚಿ ಫೌಂಡೇಶನ್ ತಿಳಿಸಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.