ಮಳೆಗಾಲದಲ್ಲಿ ಅನಾರೋಗ್ಯ ನಿಮ್ಮನ್ನು ಕಾಡುತ್ತಿದ್ದರೆ ಈ ರೀತಿ ತುಳಸಿ ಟೀ ಮಾಡಿ ಕುಡಿಯಿರಿ
ಮಳೆಗಾಲದಲ್ಲಿ ಶಾಲೆಗೆ ಮಳೆಯಲ್ಲಿ ನೆನದುಕೊಂಡು ಹೋಗುವ ಮಕ್ಕಳಿಂದ ಹಿಡಿದು ಕಚೇರಿ ಕೆಲಸಕ್ಕೆ ಹೋಗುವ ಎಲ್ಲರಿಗೂ ಶೀತ ಹಾಗೂ ನೆಗಡಿ ಸಾಮಾನ್ಯ. ಇಂತಹ ಸಂದರ್ಭದಲ್ಲಿ ನೀವು ಈ ರೀತಿ ತುಳಸಿ ಟೀ ಮಾಡಿ ಕುಡಿದರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಿ
ಮಳೆಗಾಲದಲ್ಲಿ ಸಾಮಾನ್ಯವಾಗಿ ಶೀತ, ನೆಗಡಿ, ಕೆಮ್ಮ ಇವುಗಳು ಎಲ್ಲರನ್ನೂ ಕಾಡುತ್ತದೆ. ಮಳೆಯಲಿ ನೆನೆದ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಶೀತ ಸದಾಕಾಲ ಉಳಿದುಕೊಂಡುಬಿಡುತ್ತದೆ. ವಾರ, ತಿಂಗಳುಗಳಾದರು ಹಾಗೆ ಉಳಿದು ಕಿರಿಕಿರಿ ಆಗುತ್ತಾ ಇರುತ್ತದೆ. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಮಕ್ಕಳಿಗೆ ಅಥವಾ ಮನೆಯಲ್ಲಿನ ಹಿರಿಯರಿಗೆ ಯಾರೇ ಅನಾರೋಗ್ಯದಲ್ಲಿದ್ದರೂ ಅವರಿಗೆ ತುಳಸಿ ಕಷಾಯವನ್ನು ಮಾಡಿಕೊಡಬೇಕು. ತುಳಸಿ ಕಷಾಯವೆಂದರೆ ಹಾಲು ಮಿಶ್ರಿತ ಪಾನೀಯ. ತುಳಸಿ ಟೀ ಎಂದರೆ ಹಾಲು ಮಿಶ್ರಿತವಲ್ಲದ ಪಾನೀಯ. ತುಳಸಿ ಟೀ ಶೀತ, ನೆಗಡಿ ಮತ್ತು ಕೆಮ್ಮನ್ನು ಉಪಶಮನ ಮಾಡುತ್ತದೆ.
ತುಳಸಿ ಟೀ ಮಾಡುವ ವಿಧಾನ
ಆದಷ್ಟು ಬೇಗ ಶೀತವನ್ನು ಕಡಿಮೆ ಮಾಡುತ್ತದೆ. ಇದನ್ನು ಮಾಡುವ ವಿಧಾನ ಮೊದಲಿಗೆ ನೀವು ತುಳಸಿ ದಳ ಅಂದರೆ ತುಳಸಿ ಎಲೆಗಳನ್ನು ಕೊಯ್ದುಕೊಳ್ಳಬೇಕು. ನಂತರ ಆ ಎಲೆಗಳನ್ನು ಸ್ವಚ್ಛವಾಗಿ ಬಿಡಿಸಿಕೊಳ್ಳಬೇಕು. ಇಲ್ಲವೆಂದರೆ ಒಣಗಿಸಿದ ತುಳಸಿಯ ಎಲೆಗಳ ಪುಡಿ ಇದ್ದರೂ ಆಗುತ್ತದೆ. ಅವುಗಳನ್ನು ಸಹ ಬಳಸಿ ತುಳಸಿ ಟೀ ಮಾಡಬಹುದು. ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಲು ಇಡಿ. ನಂತರ ನೀರು ಬಿಸಿಯಾದ ಮೇಲೆ ಅದಕ್ಕೆ ಈ ತುಳಸಿ ಎಲೆಗಳನ್ನು ಹಾಕಿ. ತುಳಸಿ ಎಲೆಗಳು ಚೆನ್ನಾಗಿ ಕಾದ ನಂತರ ತಿಳಿಹಸಿರು ಬಣ್ಣ ಬಿಡುತ್ತದೆ.
ಮನೆ ಮದ್ದು
ಆ ಬಣ್ಣ ಬಂದಾಗ ನೀವು ಸ್ಟವ್ ಆಫ್ ಮಾಡಿ. ಆಫ್ ಮಾಡಿದ ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಗೂ ಲಿಂಬು ರಸ ಬೆರೆಸಿ. ಹೀಗೆ ಮಾಡುವುದರಿಂದ ತುಳಸಿ ಟೀ ರುಚಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಇನ್ನಷ್ಟು ಆರೋಗ್ಯಕರ ಅಂಶಗಳು ಅದರಲ್ಲಿ ಸೇರುತ್ತದೆ. ನಂತರ ಎಲೆಗಳು ತೇಲುತ್ತಾ ಇರುವುದರಿಂದ ಅದನ್ನು ಕುಡಿಯಲು ಕಷ್ಟವಾಗಬಹುದು, ಇಂತಹ ಸಂದರ್ಭದಲ್ಲಿ ನೀವು ಅದನ್ನು ಸೋಸಿಕೊಂಡು, ಎಲೆಗಳನ್ನು ಬೇರ್ಪಡಿಸಿಕೊಂಡು ರಸವನ್ನು ಮಾತ್ರ ಕುಡಿಯಿರಿ. ಇದು ಬಿಸಿ ಇದ್ದಾಗಲೇ ಕುಡಿದರೆ ಉತ್ತಮ. ಅಥವಾ ಇದನ್ನು ಮಾಡಿಟ್ಟುಕೊಂಡು ಆಗಾಗ ಬಿಸಿ ಮಾಡಿ ಕುಡಿದರು ಆಗುತ್ತದೆ. ಇದು ತುಂಬಾ ಪರಿಣಾಮಕಾರಿಯಾಗಿದೆ. ಮಳೆಗಾಲ್ಲಂತೂ ಮಾಡಲೇಬೇಕಾದ ಮನೆಮದ್ದು ಎಂದೇ ಹೇಳಬಹುದು.
ತುಳಸಿ ಕಷಾಯ
ಇನ್ನು ನೀವು ತುಳಸಿ ಕಷಾಯವನ್ನು ಮಾಡುತ್ತೀರಾ ಎಂದಾದರೆ ಇದೇ ವಿಧಾನವನ್ನು ಅನುಸರಿಸಿ. ಆದರೆ ಕೊನೆಯಲ್ಲಿ ಇದು ಸ್ವಲ್ಪ ಬಿಸಿ ಇರುವಾಗಲೇ ಹಾಲನ್ನು ಸೇರಿಸಬೇಕು. ಹೀಗೆ ಮಾಡಿ ಕುಡಿಯುವುದು ಕೂಡ ಉತ್ತಮವೇ ಆಗಿರುತ್ತದೆ.