Baby Names: ನಿಮ್ಮ ಪುಟ್ಟ ಕಂದನಿಗೆ ಯಾವ ಹೆಸರು ಇಡಬೇಕೆಂದು ಯೋಚಿಸುತ್ತಿದ್ದೀರಾ? ಸೂರ್ಯನ ಈ ಸುಂದರ ಹೆಸರುಗಳನ್ನು ಪ್ರಯತ್ನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Baby Names: ನಿಮ್ಮ ಪುಟ್ಟ ಕಂದನಿಗೆ ಯಾವ ಹೆಸರು ಇಡಬೇಕೆಂದು ಯೋಚಿಸುತ್ತಿದ್ದೀರಾ? ಸೂರ್ಯನ ಈ ಸುಂದರ ಹೆಸರುಗಳನ್ನು ಪ್ರಯತ್ನಿಸಿ

Baby Names: ನಿಮ್ಮ ಪುಟ್ಟ ಕಂದನಿಗೆ ಯಾವ ಹೆಸರು ಇಡಬೇಕೆಂದು ಯೋಚಿಸುತ್ತಿದ್ದೀರಾ? ಸೂರ್ಯನ ಈ ಸುಂದರ ಹೆಸರುಗಳನ್ನು ಪ್ರಯತ್ನಿಸಿ

ಮಗುವಿನ ಸೂರ್ಯ ಹೆಸರುಗಳು: ಈ ಮಗುವಿನ ಹೆಸರಿನ ಪಟ್ಟಿಯಲ್ಲಿ ನೀಡಲಾದ ಪ್ರತಿಯೊಂದು ಹೆಸರು ತುಂಬಾ ಸುಂದರವಾಗಿವೆ. ಕೇಳೋದಿಕ್ಕೂ ಚೆನ್ನಾಗಿವೆ. ಇಷ್ಟು ಮಾತ್ರವಲ್ಲ, ಇಲ್ಲಿ ನೀಡಲಾದ ಎಲ್ಲಾ ಹೆಸರುಗಳು ಒಂದು ರೀತಿಯಲ್ಲಿ ಸೂರ್ಯ ದೇವರೊಂದಿಗೆ ಸಂಬಂಧ ಹೊಂದಿವೆ, ಹೆಸರುಗಳು ಮತ್ತು ಅವುಗಳ ಅರ್ಥವನ್ನು ತಿಳಿಯೋಣ.

ನಿಮ್ಮ ಪುಟ್ಟ ಕಂದನಿಗೆ ಇಡಬಹುದಾದ ಸೂರ್ಯನ ಹೆಸರುಗಳ ಪಟ್ಟಿ ಇಲ್ಲಿದೆ
ನಿಮ್ಮ ಪುಟ್ಟ ಕಂದನಿಗೆ ಇಡಬಹುದಾದ ಸೂರ್ಯನ ಹೆಸರುಗಳ ಪಟ್ಟಿ ಇಲ್ಲಿದೆ

ಮನೆಯಲ್ಲಿ ಮಗುವಿನ ಜನನವಾಗಿದ್ದರೆ ಇಡೀ ಕುಟುಂಬದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಇಂಥ ಕುಷಿಯಲ್ಲೇ ಮಗುವಿನ ತಂದೆ, ತಾಯಿ ಮಾತ್ರವಲ್ಲದೇ, ಇಡೀ ಕುಟುಂಬ ಮಗುವಿನ ಯಾವ ಹೆಸರನ್ನು ಇಡಬೇಕೆಂಬುದರ ಬಗ್ಗೆ ಯೋಚನೆ ಮಾಡುತ್ತಾರೆ. ಕೆಲವು ಹೆಣ್ಣು ಮಗುವಾದರೆ ಯಾವ ಹೆಸರು ಇಡಬೇಕು, ಗಂಡು ಮಗುವಾದರೆ ಯಾವ ಹೆಸರನ್ನು ಇಡಬೇಕೆಂದು ಮೊದಲೇ ಪ್ಲಾನ್ ಮಾಡಿಕೊಂಡಿರುತ್ತಾರೆ. ಕೆಲವರು ಮಗುವಿಗೆ ಯಾವ ಹೆಸರನ್ನು ಇಡಬೇಕು ಎಂಬುದರ ಬಗ್ಗೆ ತುಂಬಾ ಗೊಂದಲ ಮಾಡಿಕೊಳ್ಳುತ್ತಾರೆ. ಏಕೆಂದರೆ ಹಿಂದೂ ಧರ್ಮದಲ್ಲಿ ಮಗುವಿಗೆ ನೀಡಿದ ಹೆಸರು ಅವನ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಒಂದು ವೇಳೆ ನೀವೇನಾದರೂ ನಿಮ್ಮ ಗಂಡು ಮಗುವಿನ ಒಂದೆೊಳ್ಳ ಹೆಸರು ಇಡಬೇಕೆಂದು ಯೋಚಿಸುತ್ತಿದ್ದರೆ, ನಿಮಗಾಗಿ ಸೂರ್ಯ ದೇವರ ಹೆಸರುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಸೂರ್ಯ ದೇವರ ವೈಭವ ಮತ್ತು ಖ್ಯಾತಿಯನ್ನು ನೋಡಲು ನೀವು ಬಯಸಿದರೆ, ನಿಮ್ಮ ಪುಟ್ಟ ಕಂದನಿಗೆ ಈ ಸುಂದರವಾದ ಹೆಸರನ್ನು ಇಡಬಹುದು. ಈ ಪಟ್ಟಿಯಲ್ಲಿ ನೀಡಲಾದ ಪ್ರತಿಯೊಂದು ಹೆಸರು ತುಂಬಾ ಸುಂದರವಾಗಿದೆ ಮತ್ತು ಕೇಳಲು ಅನನ್ಯವಾಗಿದೆ. ಇದು ಮಾತ್ರವಲ್ಲ, ಇಲ್ಲಿ ನೀಡಲಾದ ಎಲ್ಲಾ ಹೆಸರುಗಳು ಒಂದು ರೀತಿಯಲ್ಲಿ ಸೂರ್ಯ ದೇವರೊಂದಿಗೆ ಸಂಬಂಧ ಹೊಂದಿವೆ, ಹೆಸರುಗಳು ಮತ್ತು ಅವುಗಳ ಅರ್ಥವನ್ನು ಇಲ್ಲಿ ನೀಡಲಾಗಿದೆ.

ಗಂಡು ಮಗುವಿಗೆ ಬಳಸುವ ಹೆಸರು ಸಾಂಪ್ರದಾಯಿಕ ಲೇಟೆಸ್ಟ್ ಎನಿಸಬೇಕೆಂದು ಬಹುತೇಕರು ನಿರೀಕ್ಷಿಸುತ್ತಾರೆ. ಇಲ್ಲಿ ನೀಡಲಾಗಿರುವ ಹೆಸರುಗಳು ನಿಮ್ಮ ಮಗುವಿಗೆ ಸೂಕ್ತವಾಗಬಹುದು.

ಅನ್ಶುಲ್

ಅನ್ಶುಲ್ ಎಂಬ ಹೆಸರಿನ ಅರ್ಥ ಪ್ರಕಾಶ ಮತ್ತು ಬೆಳಕು

ಚಿತ್ರತ್

ಸೂರ್ಯನ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಯನ್ನು ಚಿತ್ರತ್ ಎಂದು ಕರೆಯಲಾಗುತ್ತದೆ

ದಿವಾಕರ್

ಸೂರ್ಯ ದೇವರನ್ನು ದಿವಾಕರ್ ಎಂದೂ ಕರೆಯುತ್ತಾರೆ

ಮಿಹಿರ್

ನಿಮ್ಮ ಪುಟ್ಟ ಕಂದನಿಗೆ ಮಿಹಿರ್ ಬಹಳ ಒಳ್ಳೆಯ ಹೆಸರು. ಇದರರ್ಥ ಸೂರ್ಯ

ರವಿ

ಸೂರ್ಯ ದೇವರ ಅತ್ಯಂತ ಪ್ರಸಿದ್ಧ ಹೆಸರು. ರವಿ ಎಂಬ ಹೆಸರಿನ ಅರ್ಥ ಸೂರ್ಯ ದೇವರು

ರೇಯಾನ್ಶ್

ರೇಯಾನ್ಶ್ ಎಂಬ ಹೆಸರಿನ ಅರ್ಥವು ಸೂರ್ಯನ ಭಾಗವಾಗಿದೆ

ಸುನೀಶ್

ಸೂರ್ಯನನ್ನು ಸನೀಶ್ ಎಂದೂ ಕರೆಯುತ್ತಾರೆ

ಇವಾನ್

ಇವಾನ್ ಎಂಬ ಹೆಸರಿನ ಅರ್ಥ ದೇವರ ಮಹಿಮೆ, ದೇವರ ಕೊಡುಗೆಯನ್ನು, ಸೂರ್ಯನನ್ನು ಪಡೆಯುವವನು

ಅರುಣ್

ಅರುಣ್ ಎಂಬ ಹೆಸರಿನ ಅರ್ಥ ಉದಯಿಸುವ ಸೂರ್ಯನನ್ನು ಉಲ್ಲೇಖಿಸುತ್ತದೆ

ದಿಪ್ತಾನ್ಶು

ದಿಪ್ತಾನ್ಶು ಎಂಬ ಹೆಸರಿನ ಅರ್ಥ ಹೊಳೆಯುವ ಮತ್ತು ಪ್ರಕಾಶಮಾನವಾದ ಸೂರ್ಯ

ದಿವ್ಯಾಂಶು

ದಿವ್ಯಾಂಶು ಎಂಬ ಹೆಸರಿನ ಅರ್ಥ ಸೂರ್ಯನ ದೈವಿಕ ಕಿರಣಗಳು.

ಈ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ನಿಮ್ಮ ಮಗುವಿಗೆ ಯಾವುದು ಹೊಂದಾಣಿಕೆಯಾಗುತ್ತೆ ಎಂಬುದನ್ನು ನಿರ್ಧರಿಸಿ.

Whats_app_banner