ದ್ವಿತೀಯ ಪಿಯುಸಿ ನಂತರ ಇಂಜಿನಿಯರಿಂಗ್‌ ಮಾಡಬೇಕೆಂದರೆ ಮುಂದಿನ ಹಂತ ಕೆಸಿಇಟಿ 2025; ಅಂತಿಮ ಹಂತದ ಸಿದ್ಧತೆಗೆ ಇಲ್ಲಿದೆ ಸೂಪರ್ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ದ್ವಿತೀಯ ಪಿಯುಸಿ ನಂತರ ಇಂಜಿನಿಯರಿಂಗ್‌ ಮಾಡಬೇಕೆಂದರೆ ಮುಂದಿನ ಹಂತ ಕೆಸಿಇಟಿ 2025; ಅಂತಿಮ ಹಂತದ ಸಿದ್ಧತೆಗೆ ಇಲ್ಲಿದೆ ಸೂಪರ್ ಟಿಪ್ಸ್

ದ್ವಿತೀಯ ಪಿಯುಸಿ ನಂತರ ಇಂಜಿನಿಯರಿಂಗ್‌ ಮಾಡಬೇಕೆಂದರೆ ಮುಂದಿನ ಹಂತ ಕೆಸಿಇಟಿ 2025; ಅಂತಿಮ ಹಂತದ ಸಿದ್ಧತೆಗೆ ಇಲ್ಲಿದೆ ಸೂಪರ್ ಟಿಪ್ಸ್

KCET 2025 Exam: ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ. ವಿಜ್ಞಾನ ವಿಭಾಗದಲ್ಲಿ ಪಾಸಾದ ಅಭ್ಯರ್ಥಿಗಳು ಕೆಸಿಇಟಿ 2025 ಪರೀಕ್ಷಾ ಸಿದ್ಧತೆಗಳತ್ತ ಗಮನ ಹರಿಸಬೇಕು. ಏಪ್ರಿಲ್‌ 16 ಹಾಗೂ 17 ರಂದು ನಡೆಯಲಿರುವ ಪರೀಕ್ಷೆಗೆ ಹೇಗೆ ತಯಾರಿ ಮಾಡಬೇಕು? ಇಲ್ಲಿದೆ ಸಂಪೂರ್ಣ ವಿವರ. (ಬರಹ: ಅರ್ಚನಾ ವಿ.ಭಟ್)

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (PC: HT File Photo)

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು (ಕೆಎಸ್ಇಎಬಿ) ಪಿಯುಸಿ 2025ನೇ ಸಾಲಿನ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು ನೋಂದಣಿ ಸಂಖ್ಯೆಯ ಮೂಲಕ ಪರೀಕ್ಷಿಸಬಹುದಾಗಿದೆ. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು karresults.nic.in ಅಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಪಾಸಾದ ಅಭ್ಯರ್ಥಿಗಳು ಇಂಜಿನಿಯರಿಂಗ್‌ ಮಾಡುವುದಿದ್ದರೆ, ಮುಂದಿನ ಹಂತದ ತಯಾರಿ ಕರ್ನಾಟಕ ಸಿಇಟಿ (KCET 2025) ಪರೀಕ್ಷೆಯಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವು ಕೆಸಿಇಟಿಯ ಪ್ರವೇಶ ಕಾರ್ಡ್‌ನ ಡೌನ್‌ಲೋಡ್‌ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್‌ ಮೂಲಕ ಡೌನ್‌ಲೊಡ್‌ ಲಿಂಕ್‌ ಅನ್ನು ಪ್ರವೇಶಿಸಬಹುದು. ಪರೀಕ್ಷಾ ದಿನದಂದು, ಅಭ್ಯರ್ಥಿಗಳು ತಮ್ಮ ಕೆಸಿಇಟಿ ಹಾಲ್‌ ಟಿಕೆಟ್‌ ಜೊತೆಗೆ ಮಾನ್ಯತೆಯಿರುವ ಒಂದು ಪೋಟೋ ಐಡಿ ಪುರಾವೆಯನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸಿಇಟಿ 2025 ಪರೀಕ್ಷೆಯನ್ನು ಏಪ್ರಿಲ್‌ 16 ಹಾಗೂ 17 ರಂದು ನಡೆಸಲು ನಿರ್ಧರಿಸಿದೆ. ಕೆಇಎ ಏ‍ಪ್ರಿಲ್‌ 15 ರಂದು ಕೆಸಿಇಟಿ ಕನ್ನಡ ಭಾಷಾ ಪರೀಕ್ಷೆ 2025 ಅನ್ನು ನಡೆಸಲಿದೆ. ಅದು ಪರೀಕ್ಷೆಯನ್ನು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಆಫ್‌ಲೈನ್‌ ಪೆನ್‌ ಹಾಗೂ ಪೇಪರ್‌ ಮೋಡ್‌ನಲ್ಲಿ ನಡೆಸಲಾಗುತ್ತದೆ.

ಕೆಸಿಇಟಿ ಪ್ರವೇಶ ಕಾರ್ಡ್‌ 2025 ಹೇಗೆ ಡೌನ್‌ಲೋಡ್‌ ಮಾಡಿಕೊಳ್ಳುವುದು?

1. ಮೊದಲು ಕೆಸಿಇಟಿಯ ಅಧಿಕೃತ ವೆಬ್‌ಸೈಟ್‌ cetonline.karnataka.gov.in 2025 ಗೆ ಭೇಟಿ ನೀಡಿ.

2. ಮುಖಪುಟದಲ್ಲಿರುವ ಕೆಸಿಇಟಿ ಪ್ರವೇಶ ಪತ್ರ ಡೌನ್‌ಲೋಡ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

3. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್‌ ಅನ್ನು ನಮೂದಿಸಿ.

4. ಕೆಇಎ ಪ್ರವೇಶ ಪತ್ರದಲ್ಲಿ ನಮೂದಿಸಲಾದ ಎಲ್ಲಾ ವಿವರಗಳನ್ನು ಸರಿಯಾಗಿ ಪರೀಕ್ಷಿಸಿ.

5. ಭವಿಷ್ಯದ ಉಲ್ಲೇಖಕ್ಕಾಗಿ ಕೆಸಿಇಟಿ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿ.

ಕರ್ನಾಟಕ ಸಿಇಟಿ 2025 ಪರೀಕ್ಷೆ ತಯಾರಿ ಹೇಗೆ?

1. ಕರ್ನಾಟಕ ಸಿಇಟಿ 2025 ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷೆ ತಯಾರಿಗಾಗಿ ಹಿಂದಿನ ವರ್ಷದ ಕೆಸಿಇಟಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಸೂಚನೆ ನೀಡಲಾಗಿದೆ.

2. ಅರ್ಜಿದಾರರು ಕೆಸಿಇಟಿ ಮಾದರಿ ಪತ್ರಿಕೆಗಳ ಮೂಲಕ ಮಹತ್ವದ ವಿಷಯಗಳು ಹಾಗೂ ಅಧ್ಯಾಯಗಳನ್ನು ಪರಿಶೀಲಿಸಬಹುದಾಗಿದೆ.

3. ಪರೀಕ್ಷೆ ಸಮೀಪವಿರುವಾಗ ಯಾವುದೇ ಹೊಸ ವಿಷಯಗಳನ್ನು ಓದಬಾರದು. ಹಿಂದೆ ಓದಿರುವ ವಿಷಯಗಳನ್ನು ಪುನರಾವರ್ತಿಸಬೇಕು.

4. ಪರೀಕ್ಷೆಯ ಮಾದರಿ ಹಾಗೂ ಯೋಜನೆಯನ್ನು ಅರ್ಥಮಾಡಿಕೊಳ್ಳಲು ಅಭ್ಯರ್ಥಿಗಳು ಕೆಸಿಇಟಿ ಪರೀಕ್ಷಾ ಮಾದರಿ 2025 ಅನ್ನು ಪರಿಶೀಲಿಸಬಹುದಾಗಿದೆ.

5. ಸಂಪೂರ್ಣ ಪಠ್ಯವನ್ನು ಸರಿಯಾಗಿ ಓದುವುದು ಯಶಸ್ಸಿನ ಕೀಲಿಯಾಗಿದೆ.

6. ಉತ್ತಮ ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪಠ್ಯಕ್ರಮವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

Priyanka Gowda

eMail
Whats_app_banner