ಮನೆ ಮುಂದೆ ತೆಂಗಿನ ಗಿಡ ಬೆಳೆಸುವ ಆಸೆ ಇದೆಯಾ? ಏನೆಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆ ಮುಂದೆ ತೆಂಗಿನ ಗಿಡ ಬೆಳೆಸುವ ಆಸೆ ಇದೆಯಾ? ಏನೆಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ನೋಡಿ

ಮನೆ ಮುಂದೆ ತೆಂಗಿನ ಗಿಡ ಬೆಳೆಸುವ ಆಸೆ ಇದೆಯಾ? ಏನೆಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ನೋಡಿ

Coconut Tree Planting Guide: ಎಳನೀರು ಬೆಲೆ ಏರುತ್ತಿರುವುದನ್ನು ನೋಡಿದರೆ ನಾವೇ ಯಾಕೆ ಮುಂದೆ ಒಂದು ತೆಂಗಿನ ಗಿಡ ಬೆಳೆಸಬಾರದು ಎಂಬ ಆಲೋಚನೆ ಬಾರದೆ ಇರುವುದಿಲ್ಲ. ಒಂದು ವೇಳೆ ಮನೆ ಮುಂದೆ ತೆಂಗಿನ ಗಿಡ ಬೆಳೆಸುವ ಆಸೆ ನಿಮಗಿದ್ದರೆ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಮನೆ ಮುಂದೆ ತೆಂಗಿನ ಸಸಿಯನ್ನು ಬೆಳೆಸಬೇಕಾದರೆ ಯಾವೆಲ್ಲಾ ವಿಚಾರಗಳು ಗೊತ್ತಿರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮನೆ ಮುಂದೆ ತೆಂಗಿನ ಸಸಿಯನ್ನು ಬೆಳೆಸಬೇಕಾದರೆ ಯಾವೆಲ್ಲಾ ವಿಚಾರಗಳು ಗೊತ್ತಿರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Coconut Tree Planting Guide: ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಹಿಂದಷ್ಟೇ 30 ರಿಂದ 40 ರೂಪಾಯಿ ಇದ್ದ ಎಳನೀರಿನ ಬೆಲೆ ಇದೀಗ 50 ರಿಂದ 60 ರೂಪಾಯಿಗೆ ತಲುಪಿದೆ. ನಗರದ ಕೆಲವು ಪ್ರಮುಖ ಪ್ರದೇಶಗಳಲ್ಲಿ ಈ ಬೆಲೆ 100 ರೂಪಾಯಿಗೆ ಸನಿಹಕ್ಕೆ ಬಂದಿರುವುದನ್ನು ಕೇಳಿದ್ದೇವೆ. ಹೆಚ್ಚು ಹಣವನ್ನು ಕೊಟ್ಟು ಎಳನೀರು ಖರೀದಿಸಿದಾಗ ನಾವೇ ಯಾಕೆ ಒಂದು ತೆಂಗಿನ ಮರವನ್ನು ಬೆಳೆಸಬಾರದೆಂಬ ಆಲೋಚನೆ ಹಲವರಿಗೆ ಬಂದಿರುತ್ತದೆ. ಆದರೆ, ಎಲ್ಲಿಂದ ಸಸಿಯನ್ನು ತರಬೇಕು, ಹೇಗೆ ನೆಡಬೇಕು, ಅದರ ನಿರ್ವಹಣೆ ಹೇಗೆ ಈ ರೀತಿಯ ಪ್ರಶ್ನೆಗಳನ್ನು ಎದುರಾಗಿ ಸುಮ್ಮನಾಗಿರುತ್ತಾರೆ.

ಮನೆ ಮುಂದೆ ತೆಂಗಿನ ಗಿಡವನ್ನು ನೆಟ್ಟು ಅದನ್ನು ಬೆಳೆಸಲೇಬೇಕೆಂದು ಆಸಕ್ತಿ, ಛಲ ನಿಮ್ಮಲ್ಲಿ ಇದ್ದರೆ ಖಂಡಿತವಾಗಿಯೂ ಈ ಕಾರ್ಯದಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದಕ್ಕೆ ಕೆಲವೊಂದು ಅಂಶಗಳನ್ನು ಗಮನಿಸಬೇಕು. ಅದು ನಗರ ಪ್ರದೇಶವಿರಲಿ ಅಥವಾ ಗ್ರಾಮೀಣ ಭಾಗವಾಗಿರಲಿ. ತೆಂಗಿನ ಸಸಿ ನೆಟ್ಟು ಬೆಳಸುವುದಕ್ಕ ಅಗತ್ಯವಾದ ಸ್ಥಳಬೇಕು. ಒಂದು ವೇಳೆ ನಿಮ್ಮಲ್ಲಿ ತೆಂಗಿನ ಮರ ಬೆಳೆಸುವಷ್ಟು ಜಾಗ ಇದ್ದರೆ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ತೆಂಗಿನ ಸಸಿ ನೆಟ್ಟು ಬೆಳೆಸುತ್ತೀರಾದರೆ ಈ 5 ಅಂಶಗಳನ್ನು ಗಮನಿಸಿ

  • ತೆಂಗಿನ ಸಸಿಯನ್ನು ನೆಟ್ಟು ಬೆಳೆಸಲು ನೀವು ಮೊದಲು ಸಸಿಯನ್ನು ತಯಾರಿಸಬೇಕೇ ಅಥವಾ ಈಗಾಗಲೇ ಬೆಳೆಸಿ ನೆಡಲು ಸಿದ್ಧವಾಗಿರುವ ಸಸಿಯನ್ನು ತೋಟಗಾರಿಕೆ ಅಥವಾ ರೈತರ ತೋಟಗಳಿಂದ ಖರೀದಿಸಿ ತರಬೇಕೇ ಎಂಬುದನ್ನು ನಿರ್ಧಾರ ಮಾಡಿಕೊಳ್ಳಿ.
  • ಒಂದು ವೇಳೆ ನೀವೇ ತೆಂಗಿನ ಕಾಯಿ ಮೊಳಕೆ ಬರಿಸಿ ಸಸಿಯನ್ನು ತಯಾರಿಸಿ ಆ ನಂತರ ಅದನ್ನು ನೆಟ್ಟು ಬೆಳೆಸುವ ಯೋಚನೆ ಮಾಡುತ್ತಿದ್ದರೆ, ಮೊದಲು ಚೆನ್ನಾಗಿ ಹಣ್ಣಾಗಿರುವ ತೆಂಗಿನ ಕಾಯಿಯನ್ನು ತೆಗೆದುಕೊಳ್ಳಿ. ಫಲವತ್ತಾದ ತೆಂಗಿನ ಕಾಯಿಯ ಆಯ್ಕೆ ನಂತರ ಅದನ್ನು ಕನಿಷ್ಠ ಮೂರು ದಿನಗಳ ಕಾಲ ನೀರಿನಲ್ಲಿ ನೆನೆಸಿಡಿ

ಇದನ್ನೂ ಓದಿ: ಬೆಂಗಳೂರಲ್ಲಿ ಎಳನೀರು ದರ 100 ರೂಪಾಯಿ ಸನಿಹ; ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಇಷ್ಟೆ, ಆದರೂ ಖುಷಿಯಲ್ಲಿದ್ದಾರೆ ಅವರು

  • ಸ್ವಲ್ಪ ಮಣ್ಣು ಅಥವಾ ವರ್ಮಿಕ್ಯುಲೈಟ್ ಮಿಶ್ರಣವನ್ನು ತೆಗೆದುಕೊಂಡು ಒಂದು ದೊಡ್ಡ ಪಾಟ್ ಗೆ ತುಂಬಿ. ನಂತರ 3 ದಿನ ನೆನೆಸಿಟ್ಟಿದ್ದ ತೆಂಗಿನ ಕಾಯಿಯನ್ನು ತೆಗೆದುಕೊಂಡು ಅದರಲ್ಲಿ ನೆಟ್ಟು ಮಣ್ಣಿನೊಂದಿಗೆ ಮುಚ್ಚಿ. ಯಾವುದೇ ಕಾರಣಕ್ಕೂ ಗಾಳಿ ಹೋಗದಂತೆ ನೋಡಿಕೊಳ್ಳಬೇಕು.
  • ಎರಡ್ಮೂರು ದಿನಗಳಿಗೊಮ್ಮೆ ನೀರು ಹಾಕಿ. ಹೆಚ್ಚು ತೇವವಾಗಲು ಬಿಡಬೇಡಿ. ಮೂರರಿಂದ ಆರು ತಿಂಗಳಲ್ಲಿ ಮೊಳಕೆ ಹೊರ ಬರುತ್ತದೆ.
  • ಕರ್ನಾಟಕದಲ್ಲಾದರೆ ಮೇ ಮತ್ತು ಜೂನ್ ತಿಂಗಳಲ್ಲಿ ತೆಂಗಿನ ಸಸಿಗಳನ್ನು ನೆಡಬೇಕು. ಆ ನಂತರ ಮೂರ್ನಾಲ್ಕು ದಿನಗಳಿಗೊಮ್ಮೆ ಸಸಿಗೆ ನೀರು ಹಾಕಿ. ತಳಿಯ ಆಧಾರದ ಮೇಲೆ ನಿಗದಿತ ಅವಧಿ ನಂತರ ಸಸಿ ಮರವಾಗಿ ತೆಂಗಿನಕಾಯಿ ಫಸಲು ಬರುತ್ತದೆ.

ಇದನ್ನೂ ಓದಿ: ಜೀವಕುಲಕ್ಕೆ ಕಲ್ಪವೃಕ್ಷ ದೇವರು ಕೊಟ್ಟ ಉಡುಗೊರೆ

ನೇರವಾಗಿ ತೆಂಗಿನ ಸಸಿಯನ್ನು ತಂದು ಬೆಳೆಸುವಾಗ ಗಮನಿಸಬೇಕಾದ ಅಂಶಗಳು

  • ಒಂದು ವೇಳೆ ಇದು ತುಂಬಾ ದೀರ್ಘಕಾಲದ ಪ್ರಕ್ರಿಯೆ ಎನಿಸಿದರೆ ತೋಟಗಾರಿಕೆ ಅಥವಾ ರೈತರ ನರ್ಸರಿಗಳಿಗೆ ತೆರಳಿ ತೆಂಗಿನ ಸಸಿಯನ್ನು ತಂದು ನೆಡಬಹುದು.
  • ನೆಟ್ಟ ತೆಂಗಿನ ಸಸಿಗಳಿಗೆ ಯಾವುದೇ ರೀತಿಯ ರೋಗಗಳು ಬಾರದಂತೆ ಕಾಲಕಾಲಕ್ಕೆ ಔಷಧ ಮತ್ತು ನೀರು ಕೊಡಬೇಕಾಗುತ್ತೆ
  • ತೆಂಗಿನ ಸಸ್ಯ ಸಮೃದ್ಧವಾಗಿ ಬೆಳೆಯಬೇಕಾದರೆ ಅದಕ್ಕೆ ಪೋಷಕಾಂಶಗಳ ಅಗತ್ಯ ಇರುತ್ತದೆ. ರಸಗೊಬ್ಬರಗಳನ್ನು ನೀಡಬೇಕಾಗುತ್ತದೆ. ಸಾವಯವ ರಸಗೊಬ್ಬರು ನೀಡುವುದು ಉತ್ತಮ

ಇದನ್ನೂ ಓದಿ: ದಾಹ ನೀಗಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತೆ ಎಳನೀರು, ಇದ್ರಿಂದ ತ್ವಚೆಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

  • ಆಗಾಗ ತೆಂಗಿನ ಸಸಿಯ ಗರಿಗಳನ್ನು ಪರಿಶೀಲಿಸುತ್ತಿರಬೇಕು. ಕೀಟಗಳು ಅಥವಾ ಶಿಲೀಂಧ್ರಗಳು ದಾಳಿ ಮಾಡಿದ್ದರೆ ತ್ವರಿತವಾಗಿ ಔಷಧಿ ಸಿಂಪಡಣೆಯಂತಹ ಕ್ರಮ ಕೈಗೊಳ್ಳಬೇಕು
  • ನೀವು ತೆಂಗಿನ ಸಸಿಯನ್ನು ಹೊರಗಿನ ಪ್ರದೇಶದ ಅಂದರೆ ಮನೆಯ ಮುಂಭಾಗದ ವಿಶಾಲವಾದ ಪ್ರದೇಶದಲ್ಲಿ ನೆಡುವುದಾದರೆ ಗುಳಿಯನ್ನು ತೆಗೆದು ರಸಗೊಬ್ಬರಗಳ ಮಿಶ್ರಣವನ್ನು ಹಾಕಿ ಆ ನಂತರ ಸಸಿಯನ್ನು ನೆಡಬಹುದು.

Whats_app_banner