ನೀವು ಸದಾ ಪಾಸಿಟಿವ್ ಆಗಿರ್ಬೇಕಾ? ಹಾಗಾದ್ರೆ ಹೀಗೆ ಮಾಡಿ, ಖುಷಿಯೇನು ಸಕ್ಸಸ್ ಕೂಡ ನಿಮ್ಮದಾಗುತ್ತೆ!
Positive thinking: ನೀವು ನಿಮ್ಮ ದಿನವನ್ನು ಸ್ಪೂರ್ತಿದಾಯವಾಗಿ ಇಟ್ಟುಕೊಳ್ಳಬೇಕು ಎಂದರೆ ನಕಾರಾತ್ಮಕ ಚಿಂತೆಯನ್ನು ಬಿಡಬೇಕು. ಸಕಾರಾತ್ಮಕ ಆಲೋಚನೆಯನ್ನು ಮಾಡಬೇಕು. ಹೀಗೆ ಮಾಡಿದರೆ ಯಶಸ್ವಿ ಬದುಕು ನಿಮ್ಮದಾಗುತ್ತದೆ.
ಮಾನವ ಜನ್ಮವು ಅಳುವುದರೊಂದಿಗೆ ಪ್ರಾರಂಭವಾಗುತ್ತದೆ. ಸಾವು ಕೂಡ ಅಳುವುದರಲ್ಲಿ ಕೊನೆಗೊಳ್ಳುತ್ತದೆ. ಮಧ್ಯದಲ್ಲಿ ಬರುವ ಸಣ್ಣಪುಟ್ಟ ಕಷ್ಟಗಳಿಗೆ ಮನಸೋತರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಧನಾತ್ಮಕ ಆಲೋಚನೆಗಳು ಅತ್ಯಗತ್ಯ. ನಮ್ಮ ಆಲೋಚನೆಗಳು ನಮ್ಮ ಜೀವನವನ್ನು ನಿರ್ಧರಿಸುತ್ತವೆ. ಎಲ್ಲವೂ ಚೆನ್ನಾಗಿರಬೇಕೆಂದು ನೀವು ಬಯಸಿದರೆ ಅದಕ್ಕೆ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮೊದಲು ನೀವು ನಕಾರಾತ್ಮಕ ಚಿಂತೆ ಮಾಡುವುದನ್ನು ಬಿಡಬೇಕಾಗುತ್ತದೆ.
ನಿಮ್ಮ ಆಲೋಚನೆಯೇ ಬದುಕು
ಎಲ್ಲವೂ ನಿಮಗೆ ಚೆನ್ನಾಗಿ ಇದ್ದರೂ ನಿಮ್ಮ ಆಲೋಚನೆಗಳಿಂದಲೇ ನೀಮಗೆ ಬೇಸರ ಆಗುತ್ತಾ ಇರುತ್ತದೆ. ನನ್ನ ಹತ್ತಿರ ಏನು ಮಾಡಲು ಸಾಧ್ಯವಿಲ್ಲ ಎನ್ನುವ ಮನೋಭವ ನಿಮಗೆ ಬಂದು ಬಿಡುತ್ತದೆ. ಈ ರೀತಿ ಆಹಬಾರದು. ನಿಮ್ಮ ಮನಸ್ಸು ನಕಾರಾತ್ಮಕ ಆಲೋಚನೆಗಳಿಂದ ತುಂಬಿದ್ದರೆ, ಯಾರೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ. ಅವರು ಯಾವಾಗಲೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾರೆ. ಸಕಾರಾತ್ಮಕ ಆಲೋಚನೆಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಮನಸ್ಥಿತಿಯನ್ನು ಸುಧಾರಿಸುತ್ತದೆ.
ಅಧಿಕ ರಕ್ತದೊತ್ತಡ, ಖಿನ್ನತೆ ಮತ್ತು ಒತ್ತಡದಂತಹ ಸಮಸ್ಯೆಗಳನ್ನು ನೀವು ಅನುಭವಿಸಬಾರದು ಎಂದಾದರೆ ನೀವು ಮೊದಲು ಎಲ್ಲ ನಕಾರಾತ್ಮಕ ಚಿಂತೆಗಳನ್ನು ಬಿಡಬೇಕಾಗುತ್ತದೆ.
ಈ ರೀತಿ ದಿನವನ್ನು ಪ್ರಾರಂಭಿಸಿ
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಧನಾತ್ಮಕ ಮತ್ತು ಸಂತೋಷವನ್ನು ನೆನಪಿಸಿಕೊಳ್ಳಿ. ಇಂದಿನಿಂದ ನನ್ನ ಜೀವನ ಚೆನ್ನಾಗಿರುತ್ತದೆ, ನಾನು ಇಂದು ಚೆನ್ನಾಗಿ ಕೆಲಸ ಮಾಡುತ್ತೇನೆ, ಇಂದು ನಾನು ಎಲ್ಲರಿಂದಲೂ ಮೆಚ್ಚಿಗೆ ಪಡೆಯುತ್ತೇನೆ ಎಂದು ಹಾಸಿಗೆಯಲ್ಲೇ ನಿಮಗೆ ನೀವು ಹೇಳಿಕೊಳ್ಳಿ.
ಕೃತಜ್ಞರಾಗಿರಿ
ಸಣ್ಣ ಸಹಾಯಕ್ಕಾಗಿಯೂ ಇತರರಿಗೆ ಕೃತಜ್ಞರಾಗಿರಿ. ಸಣ್ಣಪುಟ್ಟ ಸವಾಲುಗಳನ್ನೂ ದೊಡ್ಡದು ಎಂದು ನೀವು ಅಂದುಕೊಳ್ಳದೇ, ದೊಡ್ಡ ಸವಾಲೇ ಎದುರಾದರೂ ಅದು ಚಿಕ್ಕದು ಎಂದು ಭಾವಿಸಿಕೊಳ್ಳಿ. ನೀವು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರೆ ಟ್ರಾಫಿಕ್‌ಗೆ ಶಾಪ ಹಾಕುವ ಬದಲು ಒಳ್ಳೆಯ ಹಾಡುಗಳನ್ನು ಕೇಳಲು ಪ್ರಯತ್ನಿಸಿ. ಅದನ್ನೂ ಸದುಪಯೋಗ ಮಾಡಿ.
ನಗುತ್ತಿರಿ
ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಿ. ಹಾಸ್ಯ ನಗು ತರಿಸುತ್ತದೆ. ನಗು ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ನಿಮ್ಮನ್ನು ನಗಿಸುವ ಕಾರ್ಯಕ್ರಮಗಳನ್ನು ವೀಕ್ಷಿಸಿ. ಆದಷ್ಟು ಅಳುವುದನ್ನು ಅವಾಯ್ಡ್ ಮಾಡಿ. ನೀವು ಅತ್ತರೆ ನಿಮಗೆ ನಿಮ್ಮ ಮೇಲೆ ನಾನು ಸದೃಢವಾಗಿಲ್ಲ ಎಂದು ಅನಿಸಲು ಆರಂಭವಾಗುತ್ತದೆ.
ನೀವು ಸಕಾರಾತ್ಮಕ ಜನರೊಂದಿಗೆ ನಿಮ್ಮನ್ನು ಸುತ್ತುವರೆದಿರುವಿರೇ? ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸಹೋದ್ಯೋಗಿಗಳು ಸಹ ಧನಾತ್ಮಕವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನೀವು ಸಕಾರಾತ್ಮಕ ವ್ಯಕ್ತಿಗಳು, ಸಕಾರಾತ್ಮಕ ವರ್ತನೆಗಳು, ಸಕಾರಾತ್ಮಕ ಕಥೆಗಳೊಂದಿಗೆ ಮಾತ್ರ ನಿಮ್ಮನ್ನು ಸುತ್ತುವರೆದಿರಬೇಕು ಇದರಿಂದ ನಿಮ್ಮ ಜೀವನ ಸುಖಮಯವಾಗುತ್ತದೆ.
ವಿಭಾಗ