Parenting Tips: ನಿಮ್ಮ ಮಕ್ಕಳೇ ನಿಮ್ಮನ್ನು ಇಷ್ಟಪಡ್ತಾ ಇಲ್ವ? ಹಾಗಾದ್ರೆ ಮೊದಲು ಮಕ್ಕಳ ಮುಂದೆ ಈ ರೀತಿ ಮಾತಾಡುವುದನ್ನು ನಿಲ್ಲಿಸಿ
Parenting Tips: ಒಂದು ಕಾಲದಲ್ಲಿ ನಿಮ್ಮನ್ನೇ ತುಂಬಾ ಹಚ್ಚಿಕೊಂಡು ನೀನಿಲ್ಲ ಎಂದರೆ ನಾನು ಇರಲು ಸಾಧ್ಯವೇ ಇಲ್ಲ ಎನ್ನುವ ಮಕ್ಕಳು ಈಗ ನೀನು ಬೇಡ ಎಂದು ಹೇಳುತ್ತಿದ್ದಾರಾ? ಹಾಗಾದರೆ ನೀವು ನಿಮ್ಮನ್ನು ತಿದ್ದಿಕೊಳ್ಳುವ ಸಮಯ ಬಂದಿದೆ ಎಂದರ್ಥ.
ತಂದೆ, ತಾಯಿಗಳು ತಮ್ಮ ಜಗತ್ತೇ ಮಕ್ಕಳು ಎಂದು ಭಾವಿಸುತ್ತಾರೆ. ಆದರೆ ಮಕ್ಕಳು ಮಾತ್ರ ದೊಡ್ಡವರಾದ ನಂತರ ತಮಗೆ ಯಾರೂ ಬೇಡ ಎಂಬ ವರ್ತನೆಯನ್ನು ಆರಂಭಿಸುತ್ತಾರೆ. ತಂದೆ, ತಾಯಿಗೆ ಯಾವಾಗಲೂ ತಮ್ಮ ಮಕ್ಕಳು ದೊಡ್ಡವರಾಗಿದ್ದಾರೆ ಎಂದು ಅನಿಸುವುದೇ ಇಲ್ಲ. ಬದಲಾಗಿ ಅವರು ಯಾವಾಗಲೂ ತಮ್ಮ ಮಕ್ಕಳನ್ನು ಚಿಕ್ಕವರಂತೆಯೇ ನೋಡುತ್ತಾರೆ. ನಿಮ್ಮ ಕನಸುಗಳು ಮತ್ತು ನಿಮ್ಮ ದೃಷ್ಟಿಕೋನವನ್ನು ಮಗುವಿನ ಮೇಲೆ ಹೇರುವುದು ಯಾವಾಗಲೂ ಈ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮಗುವಿಗೆ ಮಾರ್ಗದರ್ಶನ ನೀಡಿ
ಮಗುವಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಪೋಷಕರ ಪಾತ್ರವಾಗಿರುತ್ತದೆ. ಮಗು ಇಷ್ಟಪಡುವ ಮಾರ್ಗವನ್ನು ಆಯ್ಕೆ ಮಾಡಲು ಅವರಿಗೆ ಸಹಾಯ ಮಾಡಿ. ಪೋಷಕರು ಮಗುವಿನ ಆಸೆಗಳು ಮತ್ತು ಆಕಾಂಕ್ಷೆಗಳನ್ನು ಬಾಲಿಶವೆಂದು ನಿರ್ಲಕ್ಷಿಸಲು ಪ್ರಾರಂಭಿಸಿದಾಗ, ಅವರ ಆಲೋಚನೆಯನ್ನು ಅವರ ಮೇಲೆ ಹೇರಲು ಪ್ರಾರಂಭಿಸಿದಾಗ ಮಕ್ಕಳು ಪಾಲಕರಿಂದ ದೂರವಾಗಲು ಪ್ರಯತ್ನ ಮಾಡುತ್ತಾರೆ. ಅವರ ಅಭಿವ್ಯಕ್ತಿಗೆ ಪೂರಕವಾದ ಅಂಶ ಸಿಗದಿದ್ದಾಗ ಈ ರೀತಿ ಆಗುತ್ತದೆ.
ಅತಿಯಾದ ಪ್ರೀತಿ ಬೇಡ
ನಿಮ್ಮ ಮಕ್ಕಳಿಗೆ ಯಾವಾಗಲೂ ತಮ್ಮನ್ನು ಪಾಲಕರು ಗಮನಿಸುತ್ತಲೇ ಇರುತ್ತಾರೆ ಎಂದು ಅನಿಸಬಾರದು. ಇದು ಅವರ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ, ಆದರೆ ಈ ಅತಿಯಾದ ಪ್ರೀತಿಯು ಅತಿಯಾದ ರಕ್ಷಣೆಯಾಗಿ ಮಾರ್ಪಟ್ಟಾಗ, ಅವರ ಸ್ವಂತ ನಿರ್ಧಾರಕ್ಕೆ ಏನೂ ಬೆಲೆಯಿಲ್ಲ ಎಂದು ಅನಿಸಲು ಆರಂಭವಾಗುತ್ತದೆ. ಮಕ್ಕಳ ಬಗ್ಗೆ ಅತಿಯಾದ ಕಾಳಜಿ ವಹಿಸುವುದು, ಅವರನ್ನು ಎಲ್ಲಾ ಸಮಯದಲ್ಲೂ ರಕ್ಷಣೆ ಮಾಡುತ್ತ ಇರುವುದು ಮಕ್ಕಳಿಗೆ ಇಷ್ಟವಾಗುವುದಿಲ್ಲ.
ಯಾವಾಗಲೂ ತಿರಸ್ಕಾರ, ನಿರಾಶೆ, ಸವಾಲುಗಳು, ಅಸಮಾಧಾನದಂತಹ ಸಂದರ್ಭಗಳಿಂದ ಮಗುವನ್ನು ರಕ್ಷಿಸುವುದು ನಿಮ್ಮ ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ಆಗಲು ಸಾಧ್ಯವಾಗುವುದಿಲ್ಲ. ಮಕ್ಕಳು ತಿನ್ನುವುದು, ಕುಡಿಯುವುದು, ನಡೆಯುವುದು, ಆಟವಾಡುವುದು, ಎಲ್ಲದರಲ್ಲೂ ಅತಿಯಾದ ಹಸ್ತಕ್ಷೇಪವು ಅಸಮತೋಲನವನ್ನು ಸೃಷ್ಟಿಸುತ್ತದೆ.
ಅತಿಯಾದ ವಿಶ್ರಾಂತಿ
ಸಮಯ ಬದಲಾಗಿದೆ ಮಕ್ಕಳನ್ನು ಹೆಚ್ಚು ನಿರ್ಬಂಧಿಸಬಾರದು ಎಂಬುದು ಪೋಷಕರಿಗೆ ಅರ್ಥವಾಗಬೇಕಿದೆ. ಮಕ್ಕಳು ಹೆಚ್ಚಾಗಿ ಸ್ವಾತಂತ್ರ್ಯವನ್ನು ಬಯಸುತ್ತಾ ಇರುತ್ತಾರೆ. ನೀವೇ ಅವರನ್ನು ಆರೈಕೆ ಮಾಡುತ್ತಾ ಇದ್ದರೆ ಅವರಿಗೆ ಮುಂದೆ ತಮ್ಮ ಜೀವನವನ್ನು ನಿರ್ವಹಣೆ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಸಂವೇದನೆ ಕಡಿಮೆ ಆಗುತ್ತದೆ. ನೀವೆ ಅವರ ಜೀವನವನ್ನು ಕಷ್ಟಕ್ಕೆ ಒಗ್ಗಿದಂತೆ ಆಗುತ್ತದೆ.
ನೀವು ಅವರ ಮುಂದೆ ಆಡುವ ಮಾತಿನ ಮೇಲೆ ನಿಗಾ ಇರಲಿ
ನೀವು ನಿಮ್ಮ ಮಕ್ಕಳಿಗೆ ಅತಿಯಾಗಿ ಕಾಳಜಿ ಮಾತಾಡುವುದು
ಅವರಿಗೆ ಅದು ಬೇಡ ಇದು ಬೇಡ ಎಂದು ನಿರ್ಭದಂನೆ ಮಾಡುವುದು
ಅವರಿಗೆ ನೀನು ಹೀಗೆ ಮಾಡಬೇಕು, ಹಾಗೇ ಮಾಡಬೇಕು ಎಂದು ಹೇಳಬೇಡಿ
ಸಾಕಷ್ಟು ಸಮತೋಲನದ ಅಗತ್ಯವಿದೆ. ಮಕ್ಕಳನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯಲು ಅವರನ್ನು ಕಟ್ಟಿ ಹಾಕಬೇಡಿ. ನೀವೂ ಅವರ ಜೊತೆ ಹೆಜ್ಜೆಹಾಕಿ.
ಇಬ್ಬರ ನಿರ್ಧಾರವೂ ಒಂದೇ ಆಗಿರಲಿ
ನೀವು ಯಾವಾಗಲೂ ಸರಿ ಮತ್ತು ತಪ್ಪು ಯಾವುದು ಎಂದು ಅವರಿಗೆ ತಿಳಿಸಿಕ ಹೇಳುವ ಅಗತ್ಯವಿಲ್ಲ. ಪೋಷಕರಾಗಿ, ನೀವು ಸಹ ತಪ್ಪಾಗಿರಬಹುದು. ಮಗುವಿನೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ನಿಮ್ಮನ್ನು ಬದಲಾಯಿಸಿಕೊಳ್ಳಲು ಸಿದ್ಧರಾಗಿರಿ. ನಿಮ್ಮ ಮಗುವಿಗೆ ನೀವು ಯಾವ ರೀತಿಯ ಪಾಲನೆ ನೀಡಲು ಬಯಸುತ್ತೀರಿ ಎಂಬುದರ ಬಗ್ಗೆ ನೀವು ಮತ್ತು ನಿಮ್ಮ ಪತಿ ಒಂದೇ ರೀತಿಯ ಆಲೋಚನೆಯನ್ನು ಹೊಂದಿರಬೇಕು. ಈ ವಿಷಯದಲ್ಲಿ ನೀವಿಬ್ಬರೂ ಒಂದೇ ದೃಷ್ಟಿಕೋನವನ್ನು ಹೊಂದಿಲ್ಲದಿದ್ದರೆ, ಮಗು ಯಾವಾಗಲೂ ಗೊಂದಲಕ್ಕೊಳಗಾಗುತ್ತದೆ.
ವಿಭಾಗ