ಕೈಬರಹ ಸುಂದರವಾಗಬೇಕು ಎಂದರೆ ನೀವು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು
ಪಾಲಕರು ತಮ್ಮ ಮಕ್ಕಳ ಅಕ್ಷರ ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಇನ್ನು ಶಾಲೆಯಲ್ಲಿ ಶಿಕ್ಷಕರೂ ಅಷ್ಟೇ ಮಕ್ಕಳ ಅಕ್ಷರ ಸುಂದರವಾಗಿದ್ದರೆ ಮಾತ್ರ ಹೆಚ್ಚಿನ ಅಂಕ ಸಿಗುತ್ತದೆ, ನೀವು ಸರಿಯಾಗಿ ಅಂದವಾಗಿ ಬರೆಯಿರಿ ಎನ್ನುತ್ತಾರೆ. ಹೀಗಿರುವಾಗ ನಿಮ್ಮ ಕೈಬರಹ ಸುಂದರವಾಗಿಸಿಕೊಳ್ಳಲು ನೀವು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ವಾರ್ಷಿಕ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದರೆ ಮನೆಯಲ್ಲಿ ತಂದೆ ತಾಯಿ ಬೈಯ್ಯುವಾಗ, ನಿನ್ನ ಅಕ್ಷರ ನೋಡಿಯೇ ಕಡಿಮೆ ಅಂಕ ಕೊಟ್ಟಿದ್ದಾರೆ ಎಂಬ ಮಾತು ಬಂದಿರಬಹುದು. ಆಗ ನಿಮಗೆ ಅನಿಸಿರಬಹುದು ನಾನು ಇನ್ನು ಮುಂದೆಯಾದರೂ ಅಕ್ಷರವನ್ನು ದುಂಡಗೆ ಬರೆಯಬೇಕು ಎಂದು. ಇಂಗ್ಲೀಷ್ ಆಗಲಿ ಕನ್ನಡವಾಗಲಿ ನಿಮ್ಮ ಅಕ್ಷಗಳು ಸುಂದರವಾಗಿದ್ದರೆ ಒಂದೆರಡು ಅಂಕ ಹೆಚ್ಚಿಗೆ ಸಿಗುವುದರಲ್ಲಿ ಅನುಮಾನವಿಲ್ಲ.
ಸರಿಯಾದ ಪೆನ್ ಬಳಸಿ: ಒಂದು ಉತ್ತಮ ಗುಣಮಟ್ಟದ ಪೆನ್ ಆಯ್ಕೆ ಮಾಡಿ, ಇದು ನಿಮ್ಮ ಬರವಣಿಗೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಮೆತ್ತಗಿನ ಪೇಪರ್ ಬಳಸಿ: ಮೆತ್ತಗಿನ ಪೇಪರ್ ಅನ್ನು ಬಳಸುವುದರಿಂದ ನಿಮ್ಮ ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತವೆ.
ಸೂಕ್ತವಾದ ಕುಳಿತುಕೊಳ್ಳುವ ಭಂಗಿಯನ್ನು ಆಯ್ಕೆ ಮಾಡಿ: ನಿಮ್ಮ ಬರವಣಿಗೆಯ ಗುಣಮಟ್ಟವನ್ನು ಸುಧಾರಿಸಲು ಸೂಕ್ತವಾದ ಕುಳಿತುಕೊಳ್ಳುವ ಭಂಗಿಯೂ ಮುಖ್ಯವಾಗುತ್ತದೆ.
ಅಭ್ಯಾಸ ಮಾಡಿ: ಪದೇ ಪದೇ ನೀವು ಅಕ್ಷರಗಳನ್ನು ಬರೆದು ರೂಢಿ ಇಟ್ಟುಕೊಳ್ಳಬೇಕು. ಬಹಳ ದಿನಗಳ ನಂತರ ಬರೆಯಲು ಪ್ರಯತ್ನಿಸಿದರೆ ಆಗದು. ಮೊದಲು ಉದ್ದನೆಯ ಗೆರೆ ಅಡ್ಡನೆಯ ಗೆರೆ ಹಾಗೂ ಗೋಲಗಳನ್ನು ಸುತ್ತಿ ಪ್ರಾಕ್ಟೀಸ್ ಮಾಡಿ.
ಗಾತ್ರ ಬದಲಾವಣೆ: ಬೇರೆ ಬೇರೆ ಗಾತ್ರದಲ್ಲಿ ಒಂದೇ ಅಕ್ಷರಗಳನ್ನು ಬರೆದು ನೋಡಿ. ಅಕ್ಷರಗಳು ಸುಂದರವಾಗುತ್ತಾ ಇದೆಯೇ ಅಥವಾ ಇಲ್ಲವೇ ಎಂದು ನೋಡಲು ನೀವು ಮೊದಲು ಬರೆದ ಅಕ್ಷರದ ಹಾಳೆಯನ್ನು ಗೋಡೆಗೆ ಅಂಟಿಸಿ ಇಟ್ಟುಕೊಳ್ಳಿ.
ಸಮಯ ನಿಗದಿಪಡಿಸಿ: ದಿನವೂ ನೀವು ಅಕ್ಷರವನ್ನು ಸುಂದರವಾಗಿಸಿಕೊಳ್ಳಲು ಸ್ವಲ್ಪ ಸಮಯ ನಿಗದಿ ಮಾಡಿ ಆ ಸಮಯದಲ್ಲಿ ಕೇವಲ ಅಕ್ಷರಗಳನ್ನು ಮಾತ್ರ ಬರೆಯಿರಿ. ಅಕ್ಷರ ಸುಂದರವಾಗಿಸಿಕೊಳ್ಳಲು ಒಂದೆರಡು ದಿನಗಳಲ್ಲಿ ಸಾಧ್ಯವಿಲ್ಲ. ಇದನ್ನು ಪ್ರಯತ್ನಿಸುತ್ತ ದಿನ ಕಳೆದಂತೆ ಸುಂದರವಾಗುತ್ತದೆ. ಆದರೆ ನಿಮ್ಮ ಪ್ರಯತ್ನ ನಿಲ್ಲಬಾರದು
ವಿಭಾಗ