ಮಕ್ಕಳೇ, ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಯನ್ನು ನೀವೇ ಅಲಂಕರಿಸಿ; ಆಗಸ್ಟ್‌ 15ಕ್ಕೆ ಸ್ಕೂಲ್‌ ಡೆಕೊರೇಷನ್‌ ಹೀಗಿರಲಿ-independence day 2024 independence day school decoration ideas how to decorate school on the day of independence rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳೇ, ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಯನ್ನು ನೀವೇ ಅಲಂಕರಿಸಿ; ಆಗಸ್ಟ್‌ 15ಕ್ಕೆ ಸ್ಕೂಲ್‌ ಡೆಕೊರೇಷನ್‌ ಹೀಗಿರಲಿ

ಮಕ್ಕಳೇ, ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಯನ್ನು ನೀವೇ ಅಲಂಕರಿಸಿ; ಆಗಸ್ಟ್‌ 15ಕ್ಕೆ ಸ್ಕೂಲ್‌ ಡೆಕೊರೇಷನ್‌ ಹೀಗಿರಲಿ

ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಶಾಲೆ ಹಾಗೂ ಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವದ ಸಡಗರ ಕೊಂಚ ಹೆಚ್ಚೇ ಎನ್ನಬಹುದು. ಈ ಬಾರಿ ಆಗಸ್ಟ್‌ 15 ರಂದು ನಿಮ್ಮ ಶಾಲೆಯನ್ನು ಭಿನ್ನವಾಗಿ ಡೆಕೊರೇಟ್‌ ಮಾಡಬೇಕು ಎಂದು ನೀವು ಯೋಚಿಸುತ್ತಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.

ಮಕ್ಕಳೇ, ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಯನ್ನು ನೀವೇ ಅಲಂಕರಿಸಿ; ಆಗಸ್ಟ್‌ 15ಕ್ಕೆ ಸ್ಕೂಲ್‌ ಡೆಕೊರೇಷನ್‌ ಹೀಗಿರಲಿ
ಮಕ್ಕಳೇ, ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಯನ್ನು ನೀವೇ ಅಲಂಕರಿಸಿ; ಆಗಸ್ಟ್‌ 15ಕ್ಕೆ ಸ್ಕೂಲ್‌ ಡೆಕೊರೇಷನ್‌ ಹೀಗಿರಲಿ

ಸ್ವಾತಂತ್ರ್ಯೋತ್ಸವ ಎಂದರೆ ಎಲ್ಲರಲ್ಲೂ ದೇಶಭಕ್ತಿಯ ಭಾವನೆ ಮೂಡುತ್ತದೆ. ಪ್ರತಿವರ್ಷ ಭಾರತದಲ್ಲಿ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಸ್ವಾತಂತ್ರ್ಯ ದಿನ ಎಂದರೆ ಶಾಲೆಗಳಲ್ಲಿ ಸಂಭ್ರಮ ಹೆಚ್ಚು. ವಾರವಿರುವಾಗಲೇ ಸಿದ್ಧತೆಗಳು ಆರಂಭವಾಗುತ್ತವೆ. ಈ ದಿನದಂದು ಶಾಲೆಯನ್ನು ವಿಭಿನ್ನವಾಗಿ ಸಿಂಗರಿಸಿ, ದೇಶಭಕ್ತಿ ಹೆಚ್ಚುವಂತೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಶಾಲೆಯನ್ನು ಮಕ್ಕಳೇ ಸಿಂಗರಿಸುತ್ತಾರೆ, ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ನಿಮ್ಮ ಶಾಲೆಯನ್ನು ಭಿನ್ನವಾಗಿ ಸಿಂಗರಿಸಬೇಕು ಎಂದು ನೀವು ಅಂದುಕೊಳ್ಳುತ್ತಿದ್ದರೆ ಈ ಐಡಿಯಾಗಳನ್ನೊಮ್ಮೆ ನೋಡಿ.

ತಿವರ್ಣದ ಬಲೂನ್‌ಗಳಿಂದ ಸಿಂಗಾರ

ಸ್ವಾತಂತ್ರ್ಯ ದಿನದಂದು ಕೇಸರಿ, ಬಿಳಿ, ಹಸಿರು ಬಣ್ಣಗಳ ಬಲೂನ್‌ನಿಂದ ಶಾಲೆಯನ್ನು ಸಿಂಗರಿಸಬಹುದು. ಶಾಲೆಯ ಗೇಟ್‌ನಿಂದ ಹಿಡಿದು ಪ್ರತಿ ತರಗತಿ ಕೋಣೆಯ ಬಾಗಿಲನ್ನು ತ್ರಿವರ್ಣ ಬಲೂನ್‌ನಿಂದ ಡೆಕೊರೇಟ್‌ ಮಾಡಬಹುದು. ಇದರೊಂದಿಗೆ ಬಾವುಟಗಳನ್ನೂ ಸೇರಿಸಿಕೊಳ್ಳಬಹುದು.

ಡು ಇಟ್‌ ಯುವರ್‌ಸೆಲ್ಫ್‌ ಪೇಪರ್‌ ಕ್ರಾಫ್ಟ್‌

ಮಕ್ಕಳ ಕೈಯಲ್ಲಿ ತ್ರಿವರ್ಣ ಪೇಪರ್‌ನಿಂದ ವಿವಿಧ ಕ್ರಾಫ್ಟ್‌ಗಳನ್ನು ಮಾಡಿಸಬಹುದು. ಇದು ಸ್ವಾತಂತ್ರ್ಯ ದಿನಕ್ಕೆ ಡಿಫ್ರೆಂಡ್‌ ಲುಕ್‌ ನೀಡುವಂತೆ ಮಾಡುತ್ತದೆ. ತ್ರಿವರ್ಣ ಕಾಗದವನ್ನು ಬಳಸಿಕೊಂಡು ನೀವು ಸುಂದರವಾದ ಕಾಗದದ ಹೂಮಾಲೆಗಳು, ಗೋಡೆಯ ಹ್ಯಾಂಗಿಂಗ್‌ಗಳು ಅಥವಾ ಟೇಬಲ್ ಸೆಂಟರ್‌ಪೀಸ್‌ಗಳನ್ನು ಸಹ ರಚಿಸಬಹುದು. ಈ ಕಾಗದದ ಕರಕುಶಲ ವಸ್ತುಗಳನ್ನು ತಯಾರಿಸಲು ಸುಲಭವಲ್ಲ ಆದರೆ ಬಜೆಟ್ ಸ್ನೇಹಿಯಾಗಿದೆ. ಇದು ಮಕ್ಕಳಿಗೂ ಇಷ್ಟವಾಗಬಹುದು.

ತ್ರಿವರ್ಣದ ಡ್ರೆಸ್‌

ಮಕ್ಕಳಿಗೆ ಕೇಸರಿ, ಬಿಳಿ, ಹಸಿರು ಹಾಗೂ ಅಶೋಕ ಚಕ್ರದ ನೀಲಿಬಟ್ಟೆಗಳನ್ನು ತೊಡಿಸಬಹುದು. ಶಾಲೆಯ ಗೋಡೆಯನ್ನು ಸಹ ತ್ರಿವರ್ಣದ ಬಟ್ಟೆಯಿಂದ ಸಿಂಗರಿಸಬಹುದು. ಮೇಜು, ಕುರ್ಚಿಗಳಿಗೂ ಹೀಗೆ ಕೇಸರಿ, ಬಿಳಿ, ಹಸಿರಿನ ಬಟ್ಟೆ ಹೊದಿಕೆಯಾಗಿ ಹಾಸಬಹುದು. ಇದು ನಿಮ್ಮ ಶಾಲೆಯ ಲುಕ್‌ ಅನ್ನೇ ಬದಲಿಸುವುದರಲ್ಲಿ ಸಂದೇಹವಿಲ್ಲ.

ಕ್ರಿಯಾತ್ಮಕ ಸ್ಟೇಜ್‌ ಡೆಕೊರೇಷನ್‌

ಸ್ವಾತಂತ್ರ್ಯೋತ್ಸವಕ್ಕಾಗಿ ವಿಶೇಷ ಸ್ಟೇಜ್‌ ಪ್ರೋಗ್ರಾಂ ಪ್ಲಾನ್‌ ಮಾಡಿದ್ದರೆ, ಅಲಂಕಾರವು ಗಮನ ಸೆಳೆಯುವ ಮತ್ತು ವಿಷಯಾಧಾರಿತವಾಗಿರಬೇಕು. ಸ್ವಾತಂತ್ರ್ಯ ಮತ್ತು ದೇಶಭಕ್ತಿಯ ಸಾರವನ್ನು ಪ್ರತಿನಿಧಿಸುವ ಹಿನ್ನೆಲೆಯನ್ನು ರಚಿಸಿ. ರಾಷ್ಟ್ರೀಯ ಲಾಂಛನದ ಕಟೌಟ್‌ಗಳು, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ಅಥವಾ ಪ್ರಸಿದ್ಧ ನಾಯಕರ ಉಲ್ಲೇಖಗಳಂತಹ ಅಂಶಗಳನ್ನು ಸೇರಿಸುವುದರಿಂದ ದೇಶಭಕ್ತಿಯ ಭಾವನೆಯನ್ನು ಹೆಚ್ಚಿಸಬಹುದು. ನಿಮ್ಮ ವೇದಿಕೆಯ ಅಲಂಕಾರದಲ್ಲಿ ರಾಷ್ಟ್ರಧ್ವಜವನ್ನು ಪ್ರಮುಖವಾಗಿ ಅಳವಡಿಸಲು ಮರೆಯಬೇಡಿ - ಇದು ನಿಮ್ಮ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುವ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದೆ.

ತ್ರಿವರ್ಣ ಬಣ್ಣದ ಕಾಗದಗಳು

ಬಣ್ಣದ ಕಾಗದಗಳ ಬಳಕೆ ಇತ್ತೀಚೆಗೆ ಕಡಿಮೆಯಾಗಿದ್ದರೂ ಇದು ನಿಮ್ಮ ಶಾಲೆಗೆ ಭಿನ್ನ ನೋಟ ನೀಡುವುದು ಸುಳ್ಳಲ್ಲ. ಕೇಸರಿ, ಬಿಳಿ, ಹಸಿರು ಬಣ್ಣದ ಕಾಗದಗಳಿಂದ ಶಾಲೆಯ ಹೊರಗೆ ಹಾಗೂ ಒಳಭಾಗವನ್ನು ಸಿಂಗರಿಸಿ. ಮಧ್ಯೆ ಮಧ್ಯೆ ರಾಷ್ಟ್ರಧ್ವಜವನ್ನು ಕಟ್ಟಿ.

ತ್ರಿವರ್ಣದ ಲೈಟಿಂಗ್‌

ಲೇಟೆಸ್ಟ್‌ ಟ್ರೆಂಡ್‌ ಹಾಗೂ ಸುಲಭದ ಮಾರ್ಗವಾಗಿ ನೀವು ಶಾಲೆಯನ್ನು ತ್ರಿವರ್ಣದ ಲೈಟ್‌ನಿಂದ ಅಲಂಕಾರ ಮಾಡಬಹುದು. ಶಾಲೆಯ ಮೇಲ್ಛಾವಣಿ ಹಾಗೂ ಗೋಡೆಗಳನ್ನು ಲೈಟ್‌ನಿಂದ ಅಲಂಕರಿಸಬಹುದು.

ಸಾಂಪ್ರದಾಯಿಕ ಟಚ್‌

ಸ್ವಾತಂತ್ರ್ಯ ದಿನದಂದು ಶಾಲೆಗೆ ಸಾಂಪ್ರದಾಯಿಕ ಟಚ್‌ ನೀಡಿ ಅಲಂಕಾರ ಮಾಡಬೇಕು ಎಂದರೆ ಬಣ್ಣದ ರಂಗೋಲಿ ಹಾಕಬಹುದು. ಹೂವಿನ ಪಕಳೆಗಳಿಂದ ರಂಗೋಲಿ ರಚಿಸಬಹುದು. ಅಲ್ಲದೇ ದೀಪಗಳಿಂದಲೂ ಅಲಂಕಾರ ಮಾಡಬಹುದು.

ಸ್ವಾತಂತ್ರ್ಯ ಹೋರಾಟಗಾರರ ಫೋಟೊಗಳು

ಸ್ವಾತಂತ್ರ್ಯೋತ್ಸವದಂದು ದೇಶಭಕ್ತಿ ಹರಡಲು ಶಾಲೆಯ ಗೋಡೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೊಗಳನ್ನು ಅಂಟಿಸಬಹುದು. ಇದರಿಂದ ಜೊತೆ ರಾಷ್ಟ್ರಧ್ವಜವನ್ನು ಅಂಟಿಸಿ ಸಿಂಗರಿಸಬಹುದು.